ಕನ್ನಡ ಸುದ್ದಿ  /  ಕ್ರಿಕೆಟ್  /  ಟೀಮ್ ಇಂಡಿಯಾಗೆ ಗುಡ್​ನ್ಯೂಸ್​; ಮತ್ತೆ ತಂಡಕ್ಕೆ ಮರಳಿದ ರವಿಚಂದ್ರನ್ ಅಶ್ವಿನ್, ರೋಹಿತ್ ಪಡೆಗೆ ಹೆಚ್ಚಿದ ಆತ್ಮವಿಶ್ವಾಸ

ಟೀಮ್ ಇಂಡಿಯಾಗೆ ಗುಡ್​ನ್ಯೂಸ್​; ಮತ್ತೆ ತಂಡಕ್ಕೆ ಮರಳಿದ ರವಿಚಂದ್ರನ್ ಅಶ್ವಿನ್, ರೋಹಿತ್ ಪಡೆಗೆ ಹೆಚ್ಚಿದ ಆತ್ಮವಿಶ್ವಾಸ

Prasanna Kumar P N HT Kannada

Feb 18, 2024 01:14 PM IST

ಟೀಮ್ ಇಂಡಿಯಾಗೆ ಗುಡ್​ನ್ಯೂಸ್​; ಮತ್ತೆ ತಂಡಕ್ಕೆ ಮರಳಿದ ರವಿಚಂದ್ರನ್ ಅಶ್ವಿನ್

    • Ravichandran Ashwin : ತಾಯಿ ಅನಾರೋಗ್ಯದಿಂದ ಚೆನ್ನೈಗೆ ಮರಳಿದ್ದ ರವಿಚಂದ್ರನ್ ಅಶ್ವಿ‌ನ್‌ ಮತ್ತೆ ಭಾರತ ತಂಡ ಸೇರಿದ್ದಾರೆ. ಈ ಬಗ್ಗೆ ಬಿಸಿಸಿಐ ಪ್ರಕಟಣೆ ಹೊರಡಿಸಿದೆ.
ಟೀಮ್ ಇಂಡಿಯಾಗೆ ಗುಡ್​ನ್ಯೂಸ್​; ಮತ್ತೆ ತಂಡಕ್ಕೆ ಮರಳಿದ ರವಿಚಂದ್ರನ್ ಅಶ್ವಿನ್
ಟೀಮ್ ಇಂಡಿಯಾಗೆ ಗುಡ್​ನ್ಯೂಸ್​; ಮತ್ತೆ ತಂಡಕ್ಕೆ ಮರಳಿದ ರವಿಚಂದ್ರನ್ ಅಶ್ವಿನ್ (PTI)

ಕೌಟುಂಬಿಕ ತುರ್ತು ಪರಿಸ್ಥಿತಿ ಕಾರಣದಿಂದ ಮೂರನೇ ಟೆಸ್ಟ್​ ಪಂದ್ಯದ 2ನೇ ದಿನದಿಂದ ಅಲಭ್ಯರಾಗಿದ್ದ ಭಾರತದ ಆಫ್​ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ನಾಲ್ಕನೇ ದಿನದಂದು ತಂಡಕ್ಕೆ ಮರಳಿದ್ದಾರೆ. ಇದರಿಂದ ದೊಡ್ಡ ಹೊಡೆತದಿಂದ ರೋಹಿತ್ ಪಡೆ ಪಾರಾಗಿದೆ. ತನ್ನ ತಾಯಿಯ ಅನಾರೋಗ್ಯದ ನಿಮಿತ್ತ ವೈದ್ಯಕೀಯ ತುರ್ತುಸ್ಥಿತಿಯ ಕಾರಣ ರಾಜ್​ಕೋಟ್​ ಟೆಸ್ಟ್‌ನಿಂದ ಹೊರಗುಳಿದಿದ್ದರು.

ಟ್ರೆಂಡಿಂಗ್​ ಸುದ್ದಿ

ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆಲ್ಲುವುದರ ಜತೆಗೆ ಈ ತಂಡಗಳೂ ಸೋಲಬೇಕು; ಹೀಗಾದಾಗ ಮಾತ್ರ ನಮ್ಮವರ ಪ್ಲೇಆಫ್ ಕನಸು ನನಸು!

ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಆರ್​ಸಿಬಿಗೆ 47 ರನ್​ಗಳ ಗೆಲುವು; ಸತತ 5ನೇ ಜಯದೊಂದಿಗೆ ಪ್ಲೇಆಫ್​ ಆಸೆ ಜೀವಂತ

ಸಿಎಸ್​ಕೆ ಪ್ಲೇಆಫ್​​ಗೆ ಬರಲೆಂದು ಸಹಾಯ ಮಾಡಿತೇ ರಾಜಸ್ಥಾನ್ ರಾಯಲ್ಸ್; ತನಿಖೆಗೆ ಆಗ್ರಹಿಸಿದ ನೆಟ್ಟಿಗರು

ರನೌಟ್​ ಆಗದಿದ್ದರೂ ಚೆಂಡಿನಿಂದ ಪೆಟ್ಟು ತಿಂದ ರವೀಂದ್ರ ಜಡೇಜಾ ಔಟಾಗಿದ್ದೇಕೆ; ಕ್ರಿಕೆಟ್ ನಿಯಮ ಹೇಳುವುದೇನು?

ರಾಜ್​ಕೋಟ್​ನ ನಿರಂಜನ್ ಶಾ ಕ್ರಿಕೆಟ್​​ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಿಂದ ಹಿಂದೆ ಸರಿದಿದ್ದ ಅಶ್ವಿನ್ ಬದಲಿಗೆ 3ನೇ ದಿನದಂದು ದೇವದತ್ ಪಡಿಕ್ಕಲ್ ಫೀಲ್ಡಿಂಗ್ ನಡೆಸಿದ್ದರು. ಈಗ 4ನೇ ದಿನದಾಟದ ವೇಳೆ ತಂಡಕ್ಕೆ ಸೇರಿರುವ ಆರ್​ ಅಶ್ವಿನ್, ಟೀಮ್ ಇಂಡಿಯಾದ 2ನೇ ಇನಿಂಗ್ಸ್ ಬೌಲಿಂಗ್ ಅವಧಿಯಲ್ಲಿ ಬೌಲಿಂಗ್ ನಡೆಸಲಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ.

ಬಿಸಿಸಿಐ ಪ್ರಕಟಣೆ

ಕೌಟುಂಬಿಕ ತುರ್ತುಪರಿಸ್ಥಿತಿಯ ಕಾರಣ ತಂಡದಿಂದ ಸ್ವಲ್ಪ ಸಮಯ ಹಿಂದೆ ಸರಿದಿದ್ದ ಆರ್ ಅಶ್ವಿನ್ ತಂಡಕ್ಕೆ ಮರಳುವುದನ್ನು ಘೋಷಿಸಲು ಸಂತೋಷವಾಗಿದೆ ಎಂದು ಬಿಸಿಸಿಐ ಹೇಳಿದೆ. ಅಶ್ವಿನ್, 3ನೇ ಟೆಸ್ಟ್‌ನ 2ನೇ ದಿನದ ನಂತರ ತಂಡದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದರು. ಈಗ ರಾಜ್‌ಕೋಟ್‌ ಟೆಸ್ಟ್​​ಗೆ ಮರಳಿ ಕೊಡುಗೆ ಮುಂದುವರಿಸುತ್ತಾರೆ ಎಂದು ಟೀಮ್ ಮ್ಯಾನೇಜ್ಮೆಂಟ್ ಖಚಿತಪಡಿಸಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಟೀಮ್ ಮ್ಯಾನೇಜ್​ಮೆಂಟ್, ಆಟಗಾರರು, ಮಾಧ್ಯಮಗಳು ಮತ್ತು ಅಭಿಮಾನಿಗಳು ಅಪಾರವಾದ ತಿಳುವಳಿಕೆ, ಸಹಾನುಭೂತಿಯನ್ನು ತೋರಿಸಿದ್ದಾರೆ. ಕುಟುಂಬದ ಪ್ರಾಮುಖ್ಯತೆಯನ್ನು ಆದ್ಯತೆಯಾಗಿ ಒಪ್ಪಿಕೊಂಡಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಇದೇ ವೇಳೆ ಅಶ್ವಿನ್ ಮತ್ತು ಅವರ ಕುಟುಂಬದ ಗೌಪ್ಯತೆ ಕಾಪಾಡಲು ವಿನಂತಿಸಿದೆ.

ಅಶ್ವಿನ್ ಆಗಮನ, ಹೆಚ್ಚಿದ ವಿಶ್ವಾಸ

ರವಿಚಂದ್ರನ್ ಅಶ್ವಿನ್ ಅವರು ನಾಲ್ಕನೇ ದಿನದಾಟದಂದು ತಂಡಕ್ಕೆ ಸೇರಿಕೊಂಡಿದ್ದು, ಭಾರತದ ಬಲ ಹೆಚ್ಚಿಸಿದೆ. 2ನೇ ಇನ್ನಿಂಗ್ಸ್​ನಲ್ಲಿ ಐವರು ಬೌಲರ್ಸ್ ಕಣಕ್ಕಿಳಿಯಲಿದ್ದಾರೆ. ಈಗಾಗಲೇ ಇಂಗ್ಲೆಂಡ್​ಗೆ ಭಾರತ ಬೃಹತ್ ಗುರಿ ನೀಡಿದ್ದು, ಅಶ್ವಿನ್​ ಬೌಲಿಂಗ್​ನಲ್ಲಿ ಮ್ಯಾಜಿಕ್ ನಡೆಸುವ ಸಾಧ್ಯತೆ ಇದೆ. ಆದರೆ ಅಶ್ವಿನ್ ತುರ್ತುಪರಿಸ್ಥಿತಿಯಿಂದ ತಂಡದಿಂದ ಹಿಂದೆ ಸರಿದ ಕಾರಣ ಉಳಿದ 2 ಪಂದ್ಯಗಳಿಗೂ ಅಲಭ್ಯರಾಗುತ್ತಾರೆ ಎನ್ನುವ ವರದಿಗಳಾಗಿದ್ದವು. ಆದರೆ ಆ ವರದಿಗಳು ಈಗ ಸುಳ್ಳಾಗಿವೆ.

500ನೇ ಟೆಸ್ಟ್​ ಪಡೆದ ಅಶ್ವಿನ್

ರಾಜ್​ಕೋಟ್​ ಟೆಸ್ಟ್​​ನ ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್​ನ ಆರಂಭಿಕ ಆಟಗಾರ ಜಾಕ್ ಕ್ರಾವ್ಲಿ ಅವರ ವಿಕೆಟ್​ ಪಡೆದ ಅಶ್ವಿನ್ ಟೆಸ್ಟ್ ಕ್ರಿಕೆಟ್​ನಲ್ಲಿ 500 ವಿಕೆಟ್​​ಗಳ ದಾಖಲೆ ಬರೆದರು. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ ಎರಡನೇ ಹಾಗೂ ವಿಶ್ವದ 9ನೇ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ ಕಡಿಮೆ ಟೆಸ್ಟ್ ಪಂದ್ಯಗಳಲ್ಲಿ 500 ವಿಕೆಟ್​ ಪಡೆದ ವಿಶ್ವದ 2ನೇ ಬೌಲರ್​ ಎನಿಸಿದ್ದಾರೆ.

ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 87 ಪಂದ್ಯಗಳಲ್ಲಿ 500 ವಿಕೆಟ್​ಗಳ ಗಡಿ ದಾಟಿದ್ದರೆ, ಅಶ್ವಿನ್ 98 ಟೆಸ್ಟ್​​ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಶೇನ್ ವಾರ್ನ್ 108, ಗ್ಲೆನ್ ಮೆಗ್ರಾಥ್ 110 ಟೆಸ್ಟ್​​ಗಳಲ್ಲಿ 500 ವಿಕೆಟ್ ಸಾಧನೆ ಮಾಡಿದ್ದರು. ಅತಿ ಕಡಿಮೆ ಎಸೆತಗಳಲ್ಲಿ 500 ವಿಕೆಟ್​ ಪಡೆದ ಬೌಲರ್​ಗಳ ಪೈಕಿ ಅಶ್ವಿನ್ ಎರಡನೇ ಸ್ಥಾನಕ್ಕೇರಿದ್ದಾರೆ.

ಆ ಮೂಲಕ ಜೇಮ್ಸ್​ ಆಂಡರ್ಸನ್ ಅವರನ್ನು 3ನೇ ಸ್ಥಾನಕ್ಕೆ ತಳ್ಳಿದ್ದಾರೆ. ಅಗ್ರಸ್ಥಾನದಲ್ಲಿರುವ ಗ್ಲೆನ್ ಮೆಗ್ರಾಥ್ 25528 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅಶ್ವಿನ್​ ಇಷ್ಟು ವಿಕೆಟ್ ತೆಗೆದುಕೊಳ್ಳಲು 25714 ಎಸೆತಗಳನ್ನು ಎಸೆದಿದ್ದಾರೆ. ಆಂಡರ್ಸನ್ 28150, ಸ್ಟುವರ್ಟ್ ಬ್ರಾಡ್ 28430, ಕರ್ಟ್ನಿ ವಾಲ್ಷ್ 28833 ಎಸೆತಗಳಲ್ಲಿ 500 ವಿಕೆಟ್ ಪಡೆದಿದ್ದಾರೆ.

ಟೆಸ್ಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ಗಳ ಪಟ್ಟಿ (ಟಾಪ್-10)

ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) - 800

ಶೇನ್ ವಾರ್ನ್ (ಆಸ್ಟ್ರೇಲಿಯಾ) - 708

ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್) - 696*

ಅನಿಲ್ ಕುಂಬ್ಳೆ (ಭಾರತ) - 619

ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್​) - 604

ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ) - 563

ಕರ್ಟ್ನಿ ವಾಲ್ಷ್ (ವೆಸ್ಟ್​ ಇಂಡೀಸ್)​ - 519

ನಾಥನ್ ಲಿಯಾನ್ (ಆಸ್ಟ್ರೇಲಿಯಾ) - 512*

ರವಿಚಂದ್ರನ್ ಅಶ್ವಿನ್ (ಭಾರತ) - 500*

ಡೇಲ್ ಸ್ಟೈನ್ (ದಕ್ಷಿಣ ಆಫ್ರಿಕಾ)- 439

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ