ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಟೋಯ್ನಿಸ್ ಸ್ಫೋಟಕ ಶತಕ, ಚೆಪಾಕ್‌ನಲ್ಲಿ ದಾಖಲೆಯ ಚೇಸಿಂಗ್; ಸಿಎಸ್‌ಕೆಯನ್ನು ಅದರದ್ದೇ ತವರಲ್ಲಿ ಮಣಿಸಿದ ಲಕ್ನೋ

ಸ್ಟೋಯ್ನಿಸ್ ಸ್ಫೋಟಕ ಶತಕ, ಚೆಪಾಕ್‌ನಲ್ಲಿ ದಾಖಲೆಯ ಚೇಸಿಂಗ್; ಸಿಎಸ್‌ಕೆಯನ್ನು ಅದರದ್ದೇ ತವರಲ್ಲಿ ಮಣಿಸಿದ ಲಕ್ನೋ

Jayaraj HT Kannada

Apr 23, 2024 11:48 PM IST

ಸ್ಟೋಯ್ನಿಸ್ ಸ್ಫೋಟಕ ಶತಕ, ಸಿಎಸ್‌ಕೆಯನ್ನು ಅದರದ್ದೇ ತವರಲ್ಲಿ ಮಣಿಸಿದ ಲಕ್ನೋ

    • ಐಪಿಎಲ್‌ 17ರ ಆವೃತ್ತಿಯ 39ನೇ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಲಕ್ನೋ ಸೂಪರ್ ಜೈಂಟ್ಸ್ ಮಣಿಸಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ದಾಖಲೆಯ ರನ್‌ ಚೇಸಿಂಗ್‌ ಮಾಡಿ ಎಲ್‌ಎಸ್‌ಜಿ ಗೆದ್ದು ಬೀಗಿದೆ.
ಸ್ಟೋಯ್ನಿಸ್ ಸ್ಫೋಟಕ ಶತಕ, ಸಿಎಸ್‌ಕೆಯನ್ನು ಅದರದ್ದೇ ತವರಲ್ಲಿ ಮಣಿಸಿದ ಲಕ್ನೋ
ಸ್ಟೋಯ್ನಿಸ್ ಸ್ಫೋಟಕ ಶತಕ, ಸಿಎಸ್‌ಕೆಯನ್ನು ಅದರದ್ದೇ ತವರಲ್ಲಿ ಮಣಿಸಿದ ಲಕ್ನೋ (AP)

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಅದರದ್ದೇ ತವರಿನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್ ರೋಚಕವಾಗಿ ಮಣಿಸಿದೆ. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಸಿಎಸ್‌ಕೆ ತಂಡ ತವರು ನೆಲದಲ್ಲಿ ಮೊದಲ ಸೋಲು ಕಂಡಿದೆ. ಮಾರ್ಕಸ್‌ ಸ್ಟೋಯ್ನಿಸ್ ಅಜೇಯ ಶತಕದ ನೆರವಿಂದ ಎಲ್‌ಎಸ್‌ಜಿ ತಂಡ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ತನ್ನದಾಗಿಸಿಕೊಂಡಿದೆ. ಚೆಪಾಕ್‌ ಮೈದಾನಲ್ಲಿ 211 ರನ್‌ ಚೇಸಿಂಗ್‌ ಮಾಡುವ ಮೂಲಕ ಲಕ್ನೋ ದಾಖಲೆ ನಿರ್ಮಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಲಕ್ನೋ ತಂಡ ಸಿಎಸ್‌ಕೆ ತಂಡವನ್ನು ಹಿಂದಿಕ್ಕಿದೆ.

ಟ್ರೆಂಡಿಂಗ್​ ಸುದ್ದಿ

ಮಹತ್ವದ ಪಂದ್ಯಕ್ಕೆ ಅಕ್ಷರ್ ಪಟೇಲ್ ನಾಯಕ, ರಿಷಭ್ ಪಂತ್ ಔಟ್; ಆರ್​ಸಿಬಿ ಕದನಕ್ಕೆ ಡೆಲ್ಲಿ ಸಂಭಾವ್ಯ ಪ್ಲೇಯಿಂಗ್ XI

KKR vs MI: ಮುಂಬೈ ಇಂಡಿಯನ್ಸ್ ಮಣಿಸಿ ಮೊದಲ ತಂಡವಾಗಿ ಪ್ಲೇಆಫ್​ ಪ್ರವೇಶಿಸಿದ ಕೋಲ್ಕತ್ತಾ ನೈಟ್ ರೈಡರ್ಸ್

ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೂ ಮುನ್ನ ಆರ್​​​ಸಿಬಿಗೆ ಹೆಚ್ಚಿದ ಆತಂಕ; ಪ್ಲೇಆಫ್​ ಕನಸಿಗೆ ವಿಲನ್ ಆಗುತ್ತಾ ಮಳೆ?

ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಅಹಂಕಾರದಿಂದ ಕೂಡಿದೆ; ಎಂಐ ನಾಯಕನನ್ನು ಟೀಕಿಸಿದ ಎಬಿ ಡಿವಿಲಿಯರ್ಸ್

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ, 210 ರನ್‌ ಪೇರಿಸಿತು. ಇದಕ್ಕೆ ಪ್ರತಿಯಯಾಗಿ ದಾಖಲೆಯ ಚೇಸಿಂಗ್‌ ಮಾಡಿದ ಎಲ್‌ಎಸ್‌ಜಿ, 19.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 213 ರನ್‌ ಗಳಿಸಿ ಗೆದ್ದು ಬೀಗಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ ಸೂಪರ್‌ ಕಿಂಗ್ಸ್‌, ಆರಂಭದಲ್ಲೇ ಅಜಿಂಕ್ಯಾ ರಹಾನೆ ಅವರನ್ನು ಅಗ್ಗಕ್ಕೆ ಕಳೆದುಕೊಂಡಿತು. ಕೇವಲ ಒಂದು ರನ್‌ ಗಳಿಸಿದ ರಹಾನೆ, ಮ್ಯಾಟ್‌ ಹೆನ್ರಿಗೆ ವಿಕೆಟ್‌ ಒಪ್ಪಿಸಿದರು. ಈ ವೇಳೆ ಡೇರಿಲ್‌ ಮಿಚೆಲ್ ಜೊತೆಗೂಡಿದ ನಾಯಕ ರುತುರಾಜ್‌ ಗಾಯಕ್ವಾಡ್ ತಾಳ್ಮೆಯಿಂದ ಆಟವಾಡಿದರು. ನಿಧಾನಗತಿಯಲ್ಲೇ ಬ್ಯಾಟ್‌ ಬೀಸಿ ಕೊನೆಯವರೆಗೂ ತಂಡದ ಇನ್ನಿಂಗ್ಸ್‌ ಮುನ್ನಡೆಸಿದರು. ಡೇರಿಲ್ ಮಿಚೆಲ್ ಅವರೊಂದಿಗೆ 45 ರನ್‌ಗಳ ಅಮೂಲ್ಯ ಜೊತೆಯಾಟವಾಡಿದ ಬಳಿಕ, ರವೀಂದ್ರ ಜಡೇಜಾ ಅವರೊಂದಿಗೆ ಅರ್ಧಶತಕದ ಜೊತೆಯಾಟವಾಡಿದರು. ಮಿಚೆಲ್‌ 11 ರನ್‌ ಗಳಿಸಿ ಔಟಾದರೆ, ಜಡೇಜಾ 16 ರನ್‌ ಗಳಿಸಿದ್ದಾಗ ಮೊಹ್ಸಿನ್‌ ಖಾನ್‌ ಎಸೆತದಲ್ಲಿ ಔಟಾದರು. ಈ ವೇಳೆ ಇನ್‌ ಫಾರ್ಮ್‌ ಬ್ಯಾಟರ್‌ ಶಿವಂ ದುಬೆ ಹಾಗೂ ಗಾಯಕ್ವಾಡ್‌ ಪ್ರಚಂಡ ಪ್ರದರ್ಶನ ನೀಡಿದರು.

ಇದನ್ನೂ ಓದಿ | ನೆನಪಿರಲಿ, ಸಿಎಸ್‌ಕೆ ಪ್ರತಿ ಬಾರಿಯೂ ಪ್ಲೇಆಫ್ ಪ್ರವೇಶಿಸಿಲ್ಲ; ರುತುರಾಜ್‌ ಗಾಯಕ್ವಾಡ್‌ ನಡೆಗೆ ವೀರೇಂದ್ರ ಸೆಹ್ವಾಗ್ ಅಸಮಾಧಾನ

ಇವರಿಬ್ಬರು ಸೇರಿಕೊಂಡು ಆಕರ್ಷಕ ಶತಕದ ಜೊತೆಯಾಟ ನೀಡಿದರು. ಕೇವಲ 27 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ ನೆರವಿಂದ ದುಬೆ 66 ರನ್‌ ಗಳಿಸಿದರು. ಭರ್ಜರಿ ಬ್ಯಾಟಿಂಗ್‌ ನಡೆಸಿದ ಗಾಯಕ್ವಾಡ್ 60 ಎಸೆತಗಳಲ್ಲಿ 12 ಫೋರ್‌ ಹಾಗೂ 3 ಸಿಕ್ಸರ್‌ ಸಹಿತ 108 ರನ್‌ ಗಳಿಸಿದರು. ಇದರೊದಿಗೆ ಐಪಿಎಲ್‌ನಲ್ಲಿ ಎರಡನೇ ಶತಕ ಸಾಧನೆ ಮಾಡಿದರು. ಅಲ್ಲದೆ, ಸಿಎಸ್‌ಕೆ ಪರ ಸೆಂಚುರಿ ಬಾರಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ರುತು ಪಾತ್ರರಾದರು. ಕೊನೆಯ ಒಂದು ಎಸೆತ ಎದುರಿಸಿದ ಎಂಎಸ್‌ ಧೋನಿ ಒಂದು ಬೌಂಡರಿ ಗಳಿಸಿದರು. ಅಂತಿಮವಾಗಿ ಆತಿಥೇಯ ತಂಡವು 4 ವಿಕೆಟ್‌ ಕಳೆದುಕೊಂಡು 210 ರನ್‌ ಪೇರಿಸಿತು.

ಚೆಪಾಕ್‌ ಅಂಗಣದಲ್ಲಿ ದಾಖಲೆಯ ಚೇಸಿಂಗ್

ಬೃಹತ್‌ ಮೊತ್ತದ ಚೇಸಿಂಗ್‌ಗಿಳಿಸಿದ ಲಕ್ನೋ, ಆರಂಭದಲ್ಲೇ ಕ್ವಿಂಟನ್‌ ಡಿಕಾಕ್‌ ವಿಕೆಟ್‌ ಕಳೆದುಕೊಂಡಿತು. ಖಾತೆ ತೆರೆಯದೆ ಡಿಕಾಕ್‌ ಚಹಾರ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. ನಾಯಕ ಕೆಎಲ್‌ ರಾಹುಲ್‌ 16 ರನ್‌ ಗಳಿಸಿ ಮುಸ್ತಫಿಜುರ್‌ ಎಸೆತದಲ್ಲಿ ಔಟಾದರು. ಕಳಪೆ ಫಾರ್ಮ್‌ನಿಂದಾಗಿ ತಂಡದಿಂದ ಹೊರಗುಳಿದು ಇಂಪ್ಯಾಕ್ಟ್‌ ಆಟಗಾರನಾಗಿ ಮರಳಿದ ದೇವದತ್‌ ಪಡಿಕಲ್‌, 13 ರನ್‌ ಗಳಿಸಿ ಪತಿರಾಣ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. ವೇಗದ ಆಟಕ್ಕೆ ಕೈಹಾಕಿದ ನಿಕೋಲಸ್‌ ಪೂರನ್‌ 34 ರನ್‌ ಸಿಡಿಸಿ ಔಟಾದರು.

ಅಬ್ಬರ ಮುಂದುವರೆಸಿದ ಮಾರ್ಕಸ್‌ ಸ್ಟೋಯ್ನಿಸ್‌ ಆಕರ್ಷಕ ಶತಕ ಸಿಡಿಸಿದರು. 56 ಎಸೆತಗಳಲ್ಲಿ ಮೂರಂಕಿ ತಲುಪುವ ಮೂಲಕ ಐಪಿಎಲ್‌ನಲ್ಲಿ ಮೊದಲ ಶತಕ ಸಾಧನೆ ಮಾಡಿದರು. ಡೆತ್‌ ಓವರ್‌ಗಳಲ್ಲಿ ಸ್ಟೋಯ್ನಿಸ್‌ ಜೊತೆಗೂಡಿದ ದೀಪಕ್‌ ಹೂಡಾ ಕೂಡಾ ಸ್ಫೋಟಕ ಆಟವಾಡಿದರು. ಅಂತಿಮ ಓವರ್‌ನಲ್ಲಿ ಲಕ್ನೋ ಗೆಲುವಿಗೆ 17 ರನ್‌ಗಳ ಅಗತ್ಯವಿತ್ತು. ಈ ವೇಳೆ ಮುಸ್ತಫಿಜುರ್‌ ಎಸೆತದಲ್ಲಿ ಸ್ಟೋಯ್ನಿಸ್‌ ಒಂದು ಸಿಕ್ಸರ್‌ ಹಾಗೂ ಮೂರು ಬೌಂಡರಿ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.‌

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ