ಮಹತ್ವದ ಪಂದ್ಯಕ್ಕೆ ಅಕ್ಷರ್ ಪಟೇಲ್ ನಾಯಕ, ರಿಷಭ್ ಪಂತ್ ಔಟ್; ಆರ್ಸಿಬಿ ಕದನಕ್ಕೆ ಡೆಲ್ಲಿ ಸಂಭಾವ್ಯ ಪ್ಲೇಯಿಂಗ್ XI
May 12, 2024 07:00 AM IST
ಮಹತ್ವದ ಪಂದ್ಯಕ್ಕೆ ಅಕ್ಷರ್ ಪಟೇಲ್ ನಾಯಕ, ರಿಷಭ್ ಪಂತ್ ಔಟ್; ಆರ್ಸಿಬಿ ಕದನಕ್ಕೆ ಡೆಲ್ಲಿ ಸಂಭಾವ್ಯ ಪ್ಲೇಯಿಂಗ್ XI
- DC Probable XI vs RCB : 17ನೇ ಆವೃತ್ತಿಯ ಐಪಿಎಲ್ನ 62ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಇಲ್ಲಿದೆ.
17ನೇ ಆವೃತ್ತಿಯ ಐಪಿಎಲ್ನ 62ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು (Royal Challengers Bengaluru vs Delhi Capitals) ಸೆಣಸಾಟ ನಡೆಸಲಿವೆ. ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಕದನಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಲಿದೆ. ಪ್ಲೇಆಫ್ ರೇಸ್ನಲ್ಲಿ ಉಳಿಯಲು ಎರಡು ತಂಡಗಳಿಗೆ ಗೆಲುವು ಅನಿವಾರ್ಯ. ಆದರೆ ನಿರ್ಣಾಯಕ ಪಂದ್ಯಕ್ಕೂ ಮುನ್ನ ರಿಷಭ್ ಪಂತ್ ನಿಷೇಧವಾಗಿರುವುದು ಡೆಲ್ಲಿ ಕ್ಯಾಪಿಟಲ್ಸ್ ಚಿಂತೆ ಹೆಚ್ಚಿಸಿದೆ.
ಸತತ 4 ಗೆಲುವು ಸಾಧಿಸಿ ಭರ್ಜರಿ ಫಾರ್ಮ್ನಲ್ಲಿರುವ ಆರ್ಸಿಬಿ, ಡೆಲ್ಲಿ ತಂಡವನ್ನೂ ಮಣಿಸುವ ವಿಶ್ವಾಸ ಹೊಂದಿದೆ. ಮತ್ತೊಂದೆಡೆ ಡೆಲ್ಲಿ ತನ್ನ ಕೊನೆಯ 5 ಪಂದ್ಯಗಳಲ್ಲಿ 3ಲ್ಲಿ ಗೆದ್ದಿದೆ. ಎರಡೂ ತಂಡಗಳಿಗೆ ಕೊನೆಯ ಘಳಿಗೆಯಲ್ಲಿ ಅದೃಷ್ಟ ಕೈ ಹಿಡಿದಿದ್ದು, ಇನ್ನೂ ಪ್ಲೇಆಫ್‌ಗಾಗಿ ಪೈಪೋಟಿಯಲ್ಲಿವೆ. ಆದರೆ ಅದರ ಭವಿಷ್ಯವನ್ನು ಸಂಪೂರ್ಣವಾಗಿ ತಮ್ಮ ಕೈಯಲ್ಲಿ ಹೊಂದಿಲ್ಲ. ಬೇರೆ ತಂಡಗಳ ಫಲಿತಾಂಶವೂ ತಂಡದ ಪ್ಲೇಆಫ್ ಭವಿಷ್ಯ ನಿರ್ಧರಿಸುತ್ತದೆ.
ಅಕ್ಷರ್ ಪಟೇಲ್ ನಾಯಕ, ರಿಷಭ್ ಪಂತ್ ಔಟ್
ಹೌದು, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಲೋ ಓವರ್ ರೇಟ್ನಿಂದಾಗಿ ಈ ಪಂದ್ಯದಿಂದ ನಿಷೇಧವಾಗಿದ್ದಾರೆ. ಅವರು ಈ ಐಪಿಎಲ್ನಲ್ಲಿ ಮೂರನೇ ಬಾರಿ ಈ ನಿಯಮ ಉಲ್ಲಂಘಿಸಿದ ಕಾರಣ ಒಂದು ಪಂದ್ಯ ನಿಷೇಧ ಮತ್ತು 30 ಲಕ್ಷಕ್ಕೆ ಒಳಗಾಗಿದ್ದಾರೆ. ಹೀಗಾಗಿ ಅಕ್ಷರ್ ಪಟೇಲ್ ತಂಡವನ್ನು ಮುನ್ನಡೆಸಲಿದ್ದಾರೆ. ಅಭಿಷೇಕ್ ಪೊರೆಲ್ ವಿಕೆಟ್ ಕೀಪರ್ ಸ್ಥಾನ ನಿಭಾಯಿಸಲಿದ್ದಾರೆ.
ಆದರೆ ಶಾಯ್ ಹೋಪ್ ಕಳೆದ ಪಂದ್ಯಗಳಲ್ಲಿ ರನ್ ಗಳಿಸಲು ವಿಫಲರಾಗಿದ್ದು ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈಬಿಡಲು ಮ್ಯಾನೇಜ್ಮೆಂಟ್ ಚಿಂತಿಸಿದೆ. ಬದಲಿಗೆ ಡೇವಿಡ್ ವಾರ್ನರ್ ಆಡುವ ನಿರೀಕ್ಷೆ ಇದೆ. ಸದ್ಯ ಡೇವಿಡ್ ವಾರ್ನರ್ ಫಿಟ್ ಆಗಿದ್ದಾರೆ ಎಂಬ ವರದಿಯಾಗಿದೆ. ಏಕೆಂದರೆ ಇಂಜುರಿ ಕಾರಣ ಕಳೆದ ಕೆಲ ಪಂದ್ಯಗಳಿಂದ ವಾರ್ನರ್ ಆಡುತ್ತಿಲ್ಲ. ಆರ್ಸಿಬಿ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಭೇದಿಸಲು ಜೇ ರಿಚರ್ಡ್ಸನ್ ಅವಕಾಶ ಪಡೆಯುವ ಸಾಧ್ಯತೆ ಇದೆ.
ರಿಷಭ್ ಪಂತ್ ಅವರ ಸ್ಥಾನಕ್ಕೆ ಯಾವ ಭಾರತೀಯ ಬ್ಯಾಟರ್ ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಪೃಥ್ವಿ ಶಾ ಆಯ್ಕೆಯಾಗದಿದ್ದರೆ ಅಭಿಷೇಕ್ ಪೊರೆಲ್ ಓಪನಿಂಗ್ನಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಡಿಸಿ ಮಧ್ಯಮ ಕ್ರಮಾಂಕದ ಬ್ಯಾಟರ್‌ಗೆ ಆದ್ಯತೆ ನೀಡಬಹುದು. ಪಂತ್ ಸ್ಥಾನಕ್ಕೆ ಯಶ್ ಧುಲ್ ಅಥವಾ ಕುಮಾರ್ ಕುಶಾಗ್ರಾ ತಂಡವನ್ನು ಸೇರಬಹುದು.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ
ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್/ಶಾಯ್ ಹೋಪ್, ಯಶ್ ಧುಲ್/ಕುಮಾರ್ ಕುಶಾಗ್ರಾ, ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ರಸಿಖ್ ಸಲಾಮ್, ಕುಲ್ದೀಪ್ ಯಾದವ್, ಮುಕೇಶ್ ಕುಮಾರ್, ಜೇ ರಿಚರ್ಡ್ಸನ್, ಖಲೀಲ್ ಅಹ್ಮದ್.
ಆರ್ಸಿಬಿ ಸಂಭಾವ್ಯ ತಂಡ
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, 12 ಯಶ್ ದಯಾಳ್. (ವಿಜಯ್‌ಕುಮಾರ್ ವೈಶಾಕ್ - ಇಂಪ್ಯಾಕ್ಟ್ ಪ್ಲೇಯರ್)