ಕನ್ನಡ ಸುದ್ದಿ  /  ಕ್ರಿಕೆಟ್  /  ರಿಷಭ್ ಪಂತ್​ 'ಶತಕ'; ರಾಜಸ್ಥಾನ್ ರಾಯಲ್ ವಿರುದ್ಧ ಕಣಕ್ಕಿಳಿದು ವಿಶ್ವದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ

ರಿಷಭ್ ಪಂತ್​ 'ಶತಕ'; ರಾಜಸ್ಥಾನ್ ರಾಯಲ್ ವಿರುದ್ಧ ಕಣಕ್ಕಿಳಿದು ವಿಶ್ವದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ

Prasanna Kumar P N HT Kannada

Mar 28, 2024 07:57 PM IST

ರಾಜಸ್ಥಾನ್ ರಾಯಲ್ ವಿರುದ್ಧ ಕಣಕ್ಕಿಳಿದು ವಿಶ್ವದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್.

    • Rishabh Pant: ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ನೂತನ ದಾಖಲೆ ಬರೆದಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
ರಾಜಸ್ಥಾನ್ ರಾಯಲ್ ವಿರುದ್ಧ ಕಣಕ್ಕಿಳಿದು ವಿಶ್ವದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್.
ರಾಜಸ್ಥಾನ್ ರಾಯಲ್ ವಿರುದ್ಧ ಕಣಕ್ಕಿಳಿದು ವಿಶ್ವದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್.

17ನೇ ಆವೃತ್ತಿಯ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (Rajasthan Royals vs Delhi Capitals) ತಂಡದ ನಾಯಕ ರಿಷಭ್ ಪಂತ್ ಕಣಕ್ಕಿಳಿಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 26ರ ಹರೆಯದ ಕ್ರಿಕೆಟಿಗ ಪಂತ್ (Rishabh Pant), 2022 ರ ಡಿಸೆಂಬರ್ 30ರಂದು ಭೀಕರ ಕಾರು ಅಪಘಾತಕ್ಕೆ ಒಳಗಾಗಿದ್ದರು. ಪರಿಣಾಮ ಕಳೆದ ವರ್ಷ ಐಪಿಎಲ್ ಮಿಸ್ ಮಾಡಿಕೊಂಡಿದ್ದ ರಿಷಭ್, ಡೆಲ್ಲಿ ಪರ 100 ಐಪಿಎಲ್ ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಕ್ರಿಕೆಟಿಗನಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹೇಗಿದ್ದರೂ ಇದು ನನ್ನ ಕೊನೆಯದು; ಕೆಕೆಆರ್ ಸಹಾಯಕ ಕೋಚ್​ ಜತೆಗಿನ ರೋಹಿತ್​ ಶರ್ಮಾ ಮೊಂಡು ಸಂಭಾಷಣೆ ವೈರಲ್

ನಿರ್ಣಾಯಕ ಪಂದ್ಯಕ್ಕೂ ಮುನ್ನ ರಿಷಭ್ ಪಂತ್​ ಬ್ಯಾನ್; ಆರ್‌ಸಿಬಿ ಎದುರು ಆಡಲ್ಲ ಡಿಸಿ ಕ್ಯಾಪ್ಟನ್!

ಪಾರ್ಟಿ ಬಿಟ್ಟು ಕ್ರಿಕೆಟ್ ಆಡಿ; ಪೃಥ್ವಿ ಶಾಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಮ್ ಕಠಿಣ ಸಂದೇಶ

ಕೆಕೆಆರ್ ಗೆದ್ದರೆ ಪ್ಲೇಆಫ್​ಗೆ, ಮುಂಬೈಗೆ ಔಪಚಾರಿಕ ಪಂದ್ಯ; ಸಂಭಾವ್ಯ ಪ್ಲೇಯಿಂಗ್ XI, ಪಿಚ್ ಹಾಗೂ ಹವಾಮಾನ ವರದಿ

ರಿಷಭ್ ಪಂತ್ ದಾಖಲೆ

ಇಲ್ಲಿಯವರೆಗೆ, ಯಾವುದೇ ಆಟಗಾರ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 100 ಐಪಿಎಲ್ ಪಂದ್ಯಗಳಲ್ಲಿ ಆಡಿಲ್ಲ. ಇದಕ್ಕೂ ಮುನ್ನ ಡೆಲ್ಲಿ ಪರ ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನಾಡಿದ ದಾಖಲೆ ಅಮಿತ್ ಮಿಶ್ರಾ ಹೆಸರಿನಲ್ಲಿತ್ತು. ಅವರು 99 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮಿಶ್ರಾ ದಾಖಲೆ ಮುರಿದ ಪಂತ್ ಮೂರಂಕಿ ದಾಟಿದ್ದಾರೆ. ಶ್ರೇಯಸ್ ಅಯ್ಯರ್ ಭುಜದ ಗಾಯದಿಂದ ಹೊರಗುಳಿದ ನಂತರ 2021ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿ ನೇಮಕಗೊಂಡರು.

ಎಡಗೈ ವಿಕೆಟ್ ಕೀಪರ್-ಬ್ಯಾಟರ್ ಈವರೆಗೂ ಡೆಲ್ಲಿ ಪರ 98 ಇನ್ನಿಂಗ್ಸ್​​ಗಳಲ್ಲಿ ಕಣಕ್ಕಿಳಿದಿದ್ದು, 34.41ರ ಬ್ಯಾಟಿಂಗ್ ಸರಾಸರಿ, 147.9ರ ಸ್ಟ್ರೈಕ್​ರೇಟ್​ನಲ್ಲಿ 2856 ರನ್ ಕಲೆ ಹಾಕಿದ್ದಾರೆ. ಫ್ರಾಂಚೈಸಿ ಅತಿ ಹೆಚ್ಚು ಪಂದ್ಯ ಆಡಿದ ಆಟಗಾರನಲ್ಲದೆ ತಂಡದ ಪರ ಪ್ರಮುಖ ರನ್ ಗಳಿಸಿದ ಕ್ರಿಕೆಟಿಗ ಎಂಬ ದಾಖಲೆ ಕೂಡ ಬರೆದಿದ್ದಾರೆ. ಡೆಲ್ಲಿ ಮೂಲದ ಫ್ರಾಂಚೈಸಿಗೆ 1 ಶತಕ ಮತ್ತು 15 ಅರ್ಧಶತಕ ಗಳಿಸಿದ್ದಾರೆ. ಡೆಲ್ಲಿ ಪರ ರನ್ ಸ್ಕೋರರ್​ಪಟ್ಟಿಯಲ್ಲಿ ಪಂತ್ ನಂತರದ ಸ್ಥಾನದಲ್ಲಿದ್ದಾರೆ ಡೇವಿಡ್ ವಾರ್ನರ್. ಡೇವಿಡ್ ವಾರ್ನರ್​ 82 ಪಂದ್ಯಗಳಲ್ಲಿ 2412 ರನ್ ಗಳಿಸಿದ್ದಾರೆ.

2016ರಲ್ಲಿ ನಗದು ಸಮೃದ್ಧ ಲೀಗ್‌ಗೆ ಪದಾರ್ಪಣೆ ಮಾಡಿದ ಪಂತ್ ಅಂದಿನಿಂದ ಡೆಲ್ಲಿ ಪರವೇ ಆಡುತ್ತಿದ್ದಾರೆ. ಈವರೆಗೆ 129 ಸಿಕ್ಸರ್‌ಗಳಲ್ಲಿ 262 ಬೌಂಡರಿಗಳನ್ನು ಸಿಡಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ 100+ ಸಿಕ್ಸರ್​ ಬಾರಿಸಿ ಏಕೈಕ ಕ್ರಿಕೆಟಿಗ ಎಂಬ ದಾಖಲೆಯನ್ನೂ ಹೊಂದಿದ್ದಾರೆ. ಅಲ್ಲದೆ, ತಂಡದ ಪರ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಮಾಡಿದ ದಾಖಲೆಯನ್ನೂ ಸಹ ಹೊಂದಿದ್ದಾರೆ. ಡೆಲ್ಲಿ ನಾಯಕನಾಗಿ 31 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 17ರಲ್ಲಿ ಗೆಲುವು, 14ರಲ್ಲಿ ಸೋಲು ಕಂಡಿದ್ದಾರೆ.

453 ದಿನಗಳ ನಂತರ ಮೈದಾನಕ್ಕೆ ಮರಳಿದ ಪಂತ್

ರಿಷಭ್ ಪಂತ್ ಅವರು 453 ದಿನಗಳ ನಂತರ ಮೈದಾನಕ್ಕೆ ಮರಳಿದ್ದಾರೆ. 2022ರ ಡಿಸೆಂಬರ್​ 22ರಂದು ಕೊನೆಯದಾಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಈ ಪಂದ್ಯವು ಡಿಸೆಂಬರ್ 26ರಂದು ಮುಕ್ತಾಯಗೊಂಡಿತ್ತು. ಆದರೆ ಇದಾದ ನಾಲ್ಕೇ ದಿನಗಳ ಅಂತರದಲ್ಲಿ ಪಂತ್ ಭೀಕರ ಕಾರು ಅಪಘಾತಕ್ಕೆ ಒಳಗಾಗಿದ್ದರು. ಕಳೆದ ವರ್ಷ ಸಂಪೂರ್ಣ ಕ್ರಿಕೆಟ್​​ಗೆ ದೂರವಾಗಿದ್ದ ಪಂತ್​, ಮಾರ್ಚ್ 23ರಂದು ಐಪಿಎಲ್ ಆಡುವ ಮೂಲಕ 453 ರನ್​ ದಿನಗಳ ನಂತರ ಕ್ರಿಕೆಟ್ ಸೇವೆಗೆ ಮರಳಿದರು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ