ಕನ್ನಡ ಸುದ್ದಿ  /  Cricket  /  Rohit Sharma And Hardik Pandya Split Into Two Groups In The Mumbai Indians Team In Ipl Beginning Bumrah Tilak Surya Prs

ಮುಂಬೈ ಇಂಡಿಯನ್ಸ್ 'One Family' ಇಬ್ಬಾಗ; ರೋಹಿತ್​-ಹಾರ್ದಿಕ್ ಬಣಗಳಾಗಿ ವಿಭಜನೆ, ಯಾವ ಆಟಗಾರರು ಯಾರಿಗೆ ಬೆಂಬಲ?

Rohit Sharma and Hardik Pandya: ಒನ್ ಫ್ಯಾಮಿಲಿ ಎಂದು ಟ್ಯಾಗ್ ಲೈನ್ ಹಾಕಿಕೊಂಡಿರುವ ಮುಂಬೈ ಇಂಡಿಯನ್ಸ್ ಇದೀಗ ಎರಡು ಭಾಗವಾಗಿದೆ. ರೋಹಿತ್​ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಬಣಗಳಾಗಿ ವಿಭಜನೆಯಾಗಿದೆ.

ಮುಂಬೈ ಇಂಡಿಯನ್ಸ್ ರೋಹಿತ್​-ಹಾರ್ದಿಕ್ ಬಣಗಳಾಗಿ ವಿಭಜನೆ
ಮುಂಬೈ ಇಂಡಿಯನ್ಸ್ ರೋಹಿತ್​-ಹಾರ್ದಿಕ್ ಬಣಗಳಾಗಿ ವಿಭಜನೆ (clutchpoints)

ನಾಯಕನನ್ನಾಗಿ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ನೇಮಿಸಿದ ಬಳಿಕ ಮುಂಬೈ ಇಂಡಿಯನ್ಸ್ (Mumbai Indians)​ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಅಚ್ಚರಿ ವಿಷಯ ಬಹಿರಂಗಗೊಂಡಿದೆ. 17ನೇ ಆವೃತ್ತಿಯ ಐಪಿಎಲ್​​ನಲ್ಲಿ ತನ್ನ ಆರಂಭಿಕ ಎರಡು ಪಂದ್ಯಗಳಲ್ಲಿ ಸೋತಿರುವ ಅಂಬಾನಿ ಬ್ರಿಗೇಡ್, ವ್ಯಾಪಕ ಟೀಕೆಗೆ ಗುರಿಯಾಗಿದೆ. ನಾಯಕತ್ವದ ಬದಲಾವಣೆಯ ಬಳಿಕ ತಂಡದಲ್ಲಿ 2 ವಿಭಾಗಗಳಲ್ಲಿ ವಿಭಜನೆಯಾಗಿದ್ದು, ಮುಂಬೈ ಇಂಡಿಯನ್ಸ್ ಮುಳುಗಿದ ಹಡಗಾಗಿದೆ ಎಂದು ವರದಿಯಾಗಿದೆ.

ಪಾಂಡ್ಯ ಕಳಪೆ ನಾಯಕತ್ವಕ್ಕೆ ತಂಡದಲ್ಲೇ ವಿರೋಧ ವ್ಯಕ್ತವಾಗಿದೆ. ಆಟದ ತಂತ್ರಗಳು, ಗೇಮ್ ಪ್ಲಾನ್​​ಗಳು, ಬೌಲರ್​​ಗಳನ್ನು ಬಳಸಿಕೊಳ್ಳುವ ವಿಧಾನ, ಫೀಲ್ಡಿಂಗ್ ತಂತ್ರಗಳು, ಎದುರಾಳಿ ಬ್ಯಾಟರ್​​ಗಳ ತಂತ್ರಗಳನ್ನು ಅರಿಯುವ ವಿಧಾನ, ಬ್ಯಾಟಿಂಗ್ ಕ್ರಮಾಂಕದ ಆಯ್ಕೆ ವಿಚಾರ.. ಹೀಗೆ ಹಲವು ವಿಷಯಗಳಲ್ಲಿ ಹಾರ್ದಿಕ್ ಎಡವಿದ್ದಾರೆ. ಅಲ್ಲದೆ, ಅತಿಯಾದ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿಯೂ ಕೈಸುಟ್ಟುಕೊಳ್ಳುತ್ತಿದ್ದಾರೆ.

ರೋಹಿತ್​ ಮತ್ತು ಹಾರ್ದಿಕ್ ಪ್ರತ್ಯೇಕ ಗುಂಪು

ಮುಂಬೈ ಟ್ಯಾಗ್ ಲೈನ್ ಆಗಿರುವ ಒಂದೇ ಕುಟುಂಬ (ಒನ್​ ಫ್ಯಾಮಿಲಿ) ಈಗ ಎರಡು ಇಬ್ಬಾಗವಾಗಿದೆ. ತಂಡದಲ್ಲಿ ಆಟಗಾರರ ನಡುವೆ ಮುನಿಸು ತೀವ್ರಗೊಂಡಿದೆ ಎಂದು ವರದಿಯಾಗಿದೆ. ತಂಡದೊಳಗೆ ರೋಹಿತ್ ಶರ್ಮಾ ಬೆಂಬಲಿಗರ ಗುಂಪು ಮತ್ತು ಹಾರ್ದಿಕ್ ಪಾಂಡ್ಯ ಬೆಂಬಲಿಗರ ಗುಂಪು ಇದೆ ಎಂದು ಹಿಂದಿಯ ಪ್ರಮುಖ ದಿನಪತ್ರಿಕೆ ದೈನಿಕ್ ಜಾಗರಣ್ ವರದಿ ಮಾಡಿದೆ. ಇದೇ ಕಾರಣದಿಂದ ತಂಡದಿಂದ ಸರಿಯಾದ ಪ್ರದರ್ಶನ ಬರುತ್ತಿಲ್ಲ ಎಂದು ಹೇಳಲಾಗಿದೆ.

ಯಾರಿಗೆ ಯಾರು ಬೆಂಬಲ?

ವರದಿಯ ಪ್ರಕಾರ, ವೇಗಿ ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ಯುವ ಆಟಗಾರ ತಿಲಕ್ ವರ್ಮಾ ಅವರು ರೋಹಿತ್ ಅವರು ಬೆಂಬಲಿಸುತ್ತಿದ್ದರೆ, ಇಶಾನ್ ಕಿಶನ್ ಸೇರಿದಂತೆ ಪ್ರಮುಖ ಆಟಗಾರರು ಹಾರ್ದಿಕ್ ಪಾಂಡ್ಯ ಅವರನ್ನು ಬೆಂಬಲಿಸುತ್ತಿದ್ದಾರೆ. ಆದರೆ ಯುವ ಆಟಗಾರರು ಯಾರಿಗೆ ಬೆಂಬಲ ನೀಡಬೇಕು ಎಂದು ಗೊಂದಲದಲ್ಲಿದ್ದಾರೆ. ರೋಹಿತ್​​ಗೆ ತಂಡದೊಳಗೆ ಬೆಂಬಲವಿದ್ದರೆ, ಪಾಂಡ್ಯಗೆ ಟೀಮ್​ ಮ್ಯಾನೇಜ್​ಮೆಂಟ್​ನಿಂದ ಬಲ ಇದೆ.

ರೋಹಿತ್​ ಮೇಲೆ ಇಶಾನ್ ಮುನಿಸು

ಮುಂಬೈ ನಾಯಕತ್ವದಿಂದ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್‌ಗೆ ನಾಯಕತ್ವ ನೀಡಿರುವುದು ಬುಮ್ರಾ, ಸೂರ್ಯ ಅವರು ವಿರೋಧ ವ್ಯಕ್ತಪಡಿಸಲು ಕಾರಣವಾಗಿದೆ. ರೋಹಿತ್‌ಗೆ ಆಕಾಶ್ ಮಧ್ವಲ್ ಸೇರಿದಂತೆ ಯುವ ತಾರೆಯರ ಬೆಂಬಲವೂ ಇದೆ. ಏಕದಿನ ವಿಶ್ವಕಪ್​ನ ಇಡೀ ಟೂರ್ನಿಯಲ್ಲಿ ತನ್ನನ್ನು ಬೆಂಚ್​ಗೆ ಸೀಮಿತ ಮಾಡಿದ್ದ ಕಾರಣ ಕಾರಣ ಆಪ್ತರಾಗಿದ್ದ ರೋಹಿತ್​ ಮೇಲೆ ಎಡಗೈ ಬ್ಯಾಟರ್​ ಇಶಾನ್​ ಅಸಮಾಧಾನಗೊಂಡಿದ್ದರು.

ಬಳಿಕ 2023ರ ಡಿಸೆಂಬರ್​ನಲ್ಲಿ ಸೌತ್ ಆಫ್ರಿಕಾ ಸರಣಿಯಿಂದ ಹಿಂದೆ ಸರಿದ ಬಳಿಕ ರಣಜಿ ಆಡದ ಇಶಾನ್​ರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ರೋಹಿತ್​ ಮನಸ್ಸು ಮಾಡಲಿಲ್ಲ. ರಣಜಿ ಟ್ರೋಫಿ ಆಡದ ಕಾರಣ ವಾರ್ಷಿಕ ಒಪ್ಪಂದವನ್ನು ಬಿಸಿಸಿಐ ತಿರಸ್ಕರಿಸಿದರ ಹಿಂದೆ ರೋಹಿತ್ ಕೂಡ ಇದ್ದಾರೆ ಎಂದು ಕಿಶನ್ ಭಾವಿಸಿದ್ದಾರೆ. ಐಪಿಎಲ್​ ಆರಂಭಕ್ಕೂ ಮುನ್ನ ರಣಜಿ ಆಡದೆ ಇಶಾನ್ ರಹಸ್ಯವಾಗಿ ಹಾರ್ದಿಕ್ ಜತೆಗೆ ಪ್ರಾಕ್ಟೀಸ್ ನಡೆಸಿದ್ದರು. ಸದ್ಯ ಹಾರ್ದಿಕ್​ಗೆ ಕಿಶನ್ ಬಲಗೈ ಬಂಟನಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ರೋಹಿತ್​ರನ್ನು ಬೆಂಬಲಿಸುವ ಯುವ ಆಟಗಾರರಿಗೆ ಹಾರ್ದಿಕ್ ತನ್ನ ತಂಡದಲ್ಲಿ ಸ್ಥಾನ ನೀಡುತ್ತಿಲ್ಲ. ಕಳೆದ ಸೀಸನ್​ನಲ್ಲಿ ಮಿಂಚಿದ್ದ ಆಕಾಶ್ ಮಧ್ವಲ್​ರಂತಹ ಆಟಗಾರರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗುತ್ತಿಲ್ಲ. ಮುಂಬೈ ಆರಂಭಿಕ ಪಂದ್ಯಕ್ಕೂ ಮುನ್ನ ರೋಹಿತ್ ಅವರನ್ನು ನಮ್ಮ ನಾಯಕ ಎಂದು ಮಧ್ವಲ್ ಇನ್‌ಸ್ಟಾಗ್ರಾಂ ಸ್ಟೋರಿ ಹಾಕಿಕೊಂಡಿದ್ದರು. ಮರುದಿನವೇ ಮಧ್ವಲ್​ಗೆ ತಂಡದಲ್ಲಿ ಅವಕಾಶವೇ ಇಲ್ಲವಾಯಿತು. ಅಭಿಮಾನಿಗಳ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದರೂ ಟೀಮ್ ಮ್ಯಾನೇಜ್ ಮೆಂಟ್​ನ ದೃಢವಾದ ಬೆಂಬಲವು ಹಾರ್ದಿಕ್​ಗೆ ಎಲ್ಲ ಟೀಕೆಗಳನ್ನು ನಗುನಗುತ್ತಲೇ ಎದುರಿಸುವ ಶಕ್ತಿ ನೀಡಿದೆ ಎಂದು ವರದಿ ಹೇಳಿದೆ.

ರೋಹಿತ್-ಬುಮ್ರಾ ಮೇಲೆ ಹಾರ್ದಿಕ್​ಗೆ ಮುನಿಸು

ಹಾರ್ದಿಕ್​ಗೆ ಬುಮ್ರಾ ಮತ್ತು ರೋಹಿತ್​ ಮೇಲೂ ಮುನಿಸಿದೆ. ಹಾಗಾಗಿ ಬುಮ್ರಾಗೆ ಹೊಸ ಚೆಂಡು ನೀಡುತ್ತಿಲ್ಲ. ರೋಹಿತ್​ರನ್ನು ಫೀಲ್ಡಿಂಗ್​ನಲ್ಲಿ ಅಲ್ಲಿಗೆ ಇಲ್ಲಿಗೆ ಹೋಗುವಂತೆ ಆರ್ಡರ ಮಾಡಿದ್ದಾರೆ. ಐಪಿಎಲ್​ನಲ್ಲಿ ಹಾರ್ದಿಕ್ ಮುಂಬೈ ಪರ ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಮುಂಬೈ ಇಂಡಿಯನ್ಸ್, ಎರಡನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧವೂ ಸೋಲಿಗೆ ಶರಣಾಯಿತು.

IPL_Entry_Point