ಕನ್ನಡ ಸುದ್ದಿ  /  Cricket  /  Toughest Soldiers Get The Toughest Test Hardik Pandya Fiery Speech After Mumbai Indians Defeat Video Goes Viral Prs

Watch: ಬಲಿಷ್ಠ ಯೋಧರು ಕಠಿಣ‌ ಅಗ್ನಿಪರೀಕ್ಷೆ ಎದುರಿಸಲೇಬೇಕು; ಸೋಲಿನ ನಂತರ ಹಾರ್ದಿಕ್ ಪಾಂಡ್ಯ ಖಡಕ್ ಭಾಷಣ ವೈರಲ್

Hardik Pandya: ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಸೋಲಿನ ನಂತರ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ತಂಡದ ಆಟಗಾರರಿಗೆ ನೀಡಿರುವ ಪ್ರೇರಣದಾಯಕ ಭಾಷಣ ವೈರಲ್ ಆಗುತ್ತಿದೆ.

ಸೋಲಿನ ನಂತರ ಹಾರ್ದಿಕ್ ಪಾಂಡ್ಯ ಖಡಕ್ ಭಾಷಣ ವೈರಲ್.
ಸೋಲಿನ ನಂತರ ಹಾರ್ದಿಕ್ ಪಾಂಡ್ಯ ಖಡಕ್ ಭಾಷಣ ವೈರಲ್.

2024ರ ಐಪಿಎಲ್​ನಲ್ಲಿ (IPL 2024) ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ಕೆಟ್ಟ ಆರಂಭ ಪಡೆದಿದೆ. ಆಡಿದ ಎರಡು ಪಂದ್ಯಗಳಲ್ಲೂ ಮುಗ್ಗರಿಸಿದೆ. ಅಲ್ಲದೆ, ನೂತನ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಕಳಪೆ ಕ್ಯಾಪ್ಟನ್ಸಿ ವಿರುದ್ಧ ಟೀಕಾ ಪ್ರಹಾರ ನಡೆಯುತ್ತಿದೆ. ಮಾರ್ಚ್ 27ರ ರಾತ್ರಿ ಹೈದರಾಬಾದ್​ನ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಸನ್​ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧದ ಹೈಸ್ಕೋರಿಂಗ್ ಗೇಮ್​ನಲ್ಲಿ ಮುಂಬೈ 31 ರನ್​ಗಳ ಅಂತರದಿಂದ ಸೋಲೊಪ್ಪಿಕೊಂಡಿತು.

ಟಾಸ್ ಗೆದ್ದ ಹಾರ್ದಿಕ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ತವರಿನ ಮೈದಾನದಲ್ಲಿ ಮುಂಬೈ ಬೌಲರ್​​ಗಳ ಸವಾರಿ ಮಾಡಿದ ಹೈದರಾಬಾದ್ ತಂಡವು ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್ ಅವರ ಆರ್ಭಟದ ಅರ್ಧಶತಕಗಳ ನೆರವಿನಿಂದ 20 ಓವರ್​​ಗಳಲ್ಲಿ 277 ರನ್ ಕಲೆ ಹಾಕಿತು. ಇದು ಐಪಿಎಲ್ ಇತಿಹಾಸದಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಇದಾಗಿದೆ. ಆದರೆ ಈ ಗುರಿ ಬೆನ್ನಟ್ಟಿದ ಮುಂಬೈ ಕೂಡ ಹೋರಾಟ ನಡೆಸಿತು. ಆದರೆ ಕೊನೆಯ ಹಂತದಲ್ಲಿ ಶರಣಾಯಿತು. 20 ಓವರ್​​ಗಳಲ್ಲಿ 246 ರನ್ ಗಳಿಸಿತು.

ಹಾರ್ದಿಕ್ ಪಾಂಡ್ಯ ಖಡಕ್ ಭಾಷಣ

ಮುಂಬೈ ಇಂಡಿಯನ್ಸ್ ತಂಡಕ್ಕೆ ಐದು ಟ್ರೋಫಿ ಗೆದ್ದುಕೊಟ್ಟಿರುವ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿದ ನಂತರ ಹಾರ್ದಿಕ್​ ಪಾಂಡ್ಯ ಅವರಿಗೆ ನಾಯಕತ್ವ ವಹಿಸಲಾಗಿದೆ. ಆದರೆ ಅವರು ಪ್ರತಿಯೊಂದು ವಿಭಾಗದಲ್ಲೂ ಹಿನ್ನಡೆ ಅನುಭವಿಸುತ್ತಿದ್ದಾರೆ. ಹಾರ್ದಿಕ್ ನಾಯಕತ್ವ ವಿಫಲಗೊಂಡ ನಂತರ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಆದಾಗ್ಯೂ, ಮುಂಬೈ ನಾಯಕ ಉತ್ಸಾಹದಿಂದ ಕಾಣಿಸಿಕೊಂಡಿದ್ದಾರೆ. ತಂಡಕ್ಕೆ ಪ್ರೇರಣದಾಯಕ ಪೆಪ್ ಟಾಕ್ ನೀಡುವ ಗಮನ ಸೆಳೆದಿದ್ದು, ಆಟಗಾರರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಬಲಿಷ್ಠ ಯೋಧರು ಯಾವತ್ತಿಗೂ ಕಠಿಣ‌ ಅಗ್ನಿ ಪರೀಕ್ಷೆ ಎದುರಿಸುತ್ತಾರೆ. ಟೂರ್ನಿಯಲ್ಲಿ ನಮ್ಮದು ಅತ್ಯಂತ ಕಠಿಣ ತಂಡ. ನಾವು ತಲುಪಿದ ಹಂತಕ್ಕೆ ಯಾವುದೇ ತಂಡವಾದರೂ ಬರಬಹುದು. ಒಂದು ಬ್ಯಾಟಿಂಗ್ ಬಳಗವಾಗಿ ಅಥವಾ ಒಟ್ಟಾರೆ ಒಂದು ತಂಡವಾಗಿ ಮುಂಬೈ ಇಂಡಿಯನ್ಸ್‌ ಅಂದರೆ ನಾವೇ ಎಂದು ಹಾರ್ದಿಕ್ ಹೇಳಿದರು. ಡ್ರೆಸ್ಸಿಂಗ್ ರೂಮ್​ನಲ್ಲಿ ಹಾರ್ದಿಕ್ ನೀಡಿದ ಖಡಕ್ ಭಾಷಣದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

‘ಯುವ ಬೌಲರ್​​ಗಳನ್ನು ಹೊಂದಿದ್ದೆವು’

ಅವರು (ಎಸ್​ಆರ್​ಹೆಚ್) ಉತ್ತಮ ಪ್ರದರ್ಶನ ನೀಡಿದರು. ಬೌಲರ್​ಗಳಿಂದ ಕಠಿಣವಾದ ಬೌಲಿಂಗ್ ಪ್ರದರ್ಶನ ಮೂಡಿಬಂತು. ಪಿಚ್​, ಬ್ಯಾಟರ್‌ಗಳಿಗೆ ಸಹಾಯ ಮಾಡಿತು. ಹಾಗಾಗಿಯೇ ಎರಡು ತಂಡಗಳಿಂದ ಸುಮಾರು 500 ರನ್ ಹರಿದು ಬಂತು. ನಾವು ಕೆಲವು ವಿಭಿನ್ನ ವಿಷಯಗಳ ಮೂಲಕ ಪ್ರಯತ್ನಿಸಬಹುದಿತ್ತು. ನಾವು ಯುವ ಬೌಲಿಂಗ್ ದಾಳಿಯನ್ನು ಹೊಂದಿದ್ದೆವು. ನಾನದನ್ನು ತುಂಬಾ ಇಷ್ಟಪಟ್ಟೆ. ಸದ್ಯ ಈ ಪಂದ್ಯದಲ್ಲಾಗಿರುವ ತಪ್ಪುಗಳಿಂದ ಕಲಿಯುತ್ತೇವೆ ಎಂದು ಹಾರ್ದಿಕ್ ಪಂದ್ಯದ ನಂತರದ ಸಂವಾದದಲ್ಲಿ ಹೇಳಿದ್ದಾರೆ.

277 ರನ್‌ಗಳ ಬೆನ್ನಟ್ಟುವ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. 10 ಓವರ್‌ಗಳಲ್ಲಿ ಬೋರ್ಡ್‌ನಲ್ಲಿ 140 ರನ್‌ ಕಲೆ ಹಾಕಿತು. 11ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಕ್ರೀಸ್​ಗೆ ಬಂದ ಹಾರ್ದಿಕ್, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. 20 ಎಸೆತಗಳಲ್ಲಿ ಕೇವಲ 24 ರನ್ ಗಳಿಸಿ ನಿರಾಸೆ ಮೂಡಿಸಿದರು. ಕಳಪೆ ನಾಯಕತ್ವದ ಜೊತೆಗೆ ಕಳಪೆ ಬ್ಯಾಟಿಂಗ್​ ವಿರುದ್ಧ ಟೀಕೆ ವ್ಯಕ್ತವಾಯಿತು. ಮುಂಬೈ ತನ್ನ ಮೊದಲ ತವರಿನ ಪಂದ್ಯದಲ್ಲಿ ಸೋಮವಾರ (ಏಪ್ರಿಲ್ 1) ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

IPL_Entry_Point