logo
ಕನ್ನಡ ಸುದ್ದಿ  /  ಚುನಾವಣೆಗಳು  /  Lok Sabha Elections2024: ಎನ್‌ಡಿಎದೊಂದಿಗೆ ಮುರಿದು ಬಿದ್ದ ಮೈತ್ರಿ, ಕೇಂದ್ರ ಸಚಿವ ರಾಜೀನಾಮೆ

Lok Sabha Elections2024: ಎನ್‌ಡಿಎದೊಂದಿಗೆ ಮುರಿದು ಬಿದ್ದ ಮೈತ್ರಿ, ಕೇಂದ್ರ ಸಚಿವ ರಾಜೀನಾಮೆ

Umesha Bhatta P H HT Kannada

Mar 19, 2024 02:00 PM IST

ರಾಜೀನಾಮೆ ನೀಡಿದ ಪಶುಪತಿ ಕುಮಾರ್‌ ಪಾರಸ್‌.

    • ಕೇಂದ್ರದಲ್ಲಿ ಸಚಿವರಾಗಿದ್ದ ಪಶುಪತಿಕುಮಾರ್‌ ಪಾರಸ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎನ್‌ಡಿಎ ಜತೆಗೆ ಮೈತ್ರಿ ಮುರಿದು ಬಿದ್ದ ಕಾರಣದಿಂದ ಅವರು ಸಚಿವ ಸ್ಥಾನ ತೊರೆದು ಹೊರ ಬಂದಿದ್ದಾರೆ. 
ರಾಜೀನಾಮೆ ನೀಡಿದ ಪಶುಪತಿ ಕುಮಾರ್‌ ಪಾರಸ್‌.
ರಾಜೀನಾಮೆ ನೀಡಿದ ಪಶುಪತಿ ಕುಮಾರ್‌ ಪಾರಸ್‌.

ದೆಹಲಿ: ಆಡಳಿತಾರೂಢ ಎನ್‌ಡಿಎ ಜತೆಗಿನ ಮೈತ್ರಿ ಮುರಿದು ಬಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿಯ ನಾಯಕ ಪಶುಪತಿಕುಮಾರ್‌ ಪಾರಸ್‌ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಸಂಪುಟ ದರ್ಜೆಯ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪಶುಪತಿಪಾರಸ್‌ ಅವರು ಎಲ್‌ಜೆಪಿಯ ನಾಯಕರಾಗಿದ್ದ ದಿವಂಗತ ರಾಮವಿಲಾಸ್‌ ಪಾಸ್ವಾನ್‌ ಸಹೋದರ. ಅವರು ಎರಡು ವರ್ಷದಿಂದಲೂ ಕೇಂದ್ರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಟ್ರೆಂಡಿಂಗ್​ ಸುದ್ದಿ

ಸಂಪಾದಕೀಯ: ಆರ್ಥಿಕ ಅಸಮಾನತೆಯ ಚರ್ಚೆಯಲ್ಲಿ ಜಾತಿಯ ಸಂಕೀರ್ಣ ಪಾತ್ರ, ಕಾಂಗ್ರೆಸ್‌ ಉರುಳಿಸಿದ ರಾಜಕೀಯ ದಾಳದ ಹಲವು ಒಳಸುಳಿಗಳು

ಲೋಕಸಭಾ ಚುನಾವಣೆ; ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ, ಯಡಿಯೂರಪ್ಪ ಕುಟುಂಬದ ರಾಜಕೀಯ ಭವಿಷ್ಯ ನಿರ್ಧರಿಸುವ ಮತದಾನ

ಲೋಕಸಭಾ ಚುನಾವಣೆ 2024; ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಕಣಕ್ಕೆ ಇಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಯಾರು

ಲೋಕಸಭಾ ಚುನಾವಣೆ 2024; ರಾಯ್ ಬರೇಲಿಯಿಂದ ರಾಹುಲ್ ಗಾಂಧಿ, ಅಮೇಥಿಯಿಂದ ಕಿಶೋರಿ ಲಾಲ್ ಶರ್ಮಾ ಕಣಕ್ಕೆ, ಕುತೂಹಲಕ್ಕೆ ತೆರೆ ಎಳೆದ ಕಾಂಗ್ರೆಸ್

ಮುಂಬರುವ ಲೋಕಸಭೆ ಚುನಾವಣೆಗೆ ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. ಇದರಿಂದ ಪಶುಪತಿ ಕುಮಾರ್‌ ಅವರು ಎನ್‌ಡಿಎಯಿಂದ ಹೊರ ಹೋಗುವ ಸನ್ನಿವೇಶ ನಿರ್ಮಾಣವಾಯಿತು. ಈ ಕಾರಣದಿಂದಾಗಿ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಮವಿಲಾಸ್‌ ಪಾಸ್ವಾನ್‌ ಅವರು ತೀರಿಕೊಂಡ ನಂತರ ಲೋಕಜನಶಕ್ತಿ ಇಬ್ಬಾಗವಾಗಿತ್ತು. ಪಾಸ್ವಾನ್‌ ಪುತ್ರ ಚಿರಾಗ್‌ ಪಾಸ್ವಾನ್‌ ಲೋಕಜನಶಕ್ತಿ ಪಕ್ಷ ಉಳಿಸಿಕೊಂಡರ, ಅವರ ಸಹೋದರ ಪಶುಪತಿ ಕುಮಾರ್‌ ಹೊಸ ಪಕ್ಷ ಕಟ್ಟಿ ಎನ್‌ಡಿಎಗೆ ಬೆಂಬಲ ಸೂಚಿಸಿದ್ದರು. ನಂತರ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು.

ಈಗ ಲೋಕಸಭೆ ಚುನಾವಣೆ ಮುನ್ನವೇ ಮೈತ್ರಿ ಮುರಿದು ಬಿದ್ದಿದರಿಂದ ಅವರು ಇಂಡಿಯಾ ಮೈತ್ರಿ ಕೂಟದ ಜತೆಗೆ ಹೋಗುತ್ತಾರೋ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸುತ್ತಾರೋ ಎನ್ನುವ ಕುತೂಹಲವಿದೆ.

ಬಹುತೇಕ ಅವರು ಪ್ರತ್ಯೇಕವಾಗಿ ಸ್ಪರ್ಧಿಸಬಹುದು. ಅದೂ ಅವರು ಪ್ರತಿನಿಧಿಸಿರುವ ಬಿಹಾರದ ಹಾಜಿಪುರ ಕ್ಷೇತ್ರದಿಂದಲೇ ಕಣಕ್ಕಿಳಿಯಬಹುದು ಎನ್ನಲಾಗುತ್ತಿದೆ. ಎನ್‌ಡಿಎ ಈಗಾಗಲೇ ಚಿರಾಗ್‌ ಪಾಸ್ವಾನ್‌ ಅವರ ಪಕ್ಷಕ್ಕೆ ಐದು ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ