logo
ಕನ್ನಡ ಸುದ್ದಿ  /  ಚುನಾವಣೆಗಳು  /  Ramanagara News: ಕಸ ಸುರಿಯುವುದನ್ನು ವಿರೋಧಿಸಿ ಚುನಾವಣೆ ಬಹಿಷ್ಕರಿಸಿದ ರಾಮನಗರ ತಾಲ್ಲೂಕಿನ ಈ ಗ್ರಾಮಸ್ಥರು

Ramanagara News: ಕಸ ಸುರಿಯುವುದನ್ನು ವಿರೋಧಿಸಿ ಚುನಾವಣೆ ಬಹಿಷ್ಕರಿಸಿದ ರಾಮನಗರ ತಾಲ್ಲೂಕಿನ ಈ ಗ್ರಾಮಸ್ಥರು

Umesha Bhatta P H HT Kannada

Mar 20, 2024 08:24 PM IST

ಗ್ರಾಮಸ್ಥರು ಹಚ್ಚಿರುವ ಪೋಸ್ಟರ್.

  • ‌ ಹಲವಾರು ಕಾರಣಗಳಿಗೆ ಚುನಾವಣೆ ಬಹಿಷ್ಕಾರ ಮಾಡುವುದಿದೆ. ಆದರೆ ರಾಮನಗರ ತಾಲ್ಲೂಕಿನ ಅಚ್ಚಲು ಗ್ರಾಮದ ಜನತೆ ಮಿತಿ ಮೀರಿರುವ ತ್ಯಾಜದ ಸಮಸ್ಯೆ ಕಾರಣಕ್ಕೆ ಮತದಾನದಿಂದ ದೂರ ಇರಲು ನಿರ್ಧರಿಸಿದ್ದಾರೆ.

    ವರದಿ: ಎಚ್‌.ಮಾರುತಿ. ಬೆಂಗಳೂರು

ಗ್ರಾಮಸ್ಥರು ಹಚ್ಚಿರುವ ಪೋಸ್ಟರ್.
ಗ್ರಾಮಸ್ಥರು ಹಚ್ಚಿರುವ ಪೋಸ್ಟರ್.

ರಾಮನಗರ: ರಾಮನಗರ ತಾಲ್ಲೂಕಿನ ಅಚ್ಚಲು ಗ್ರಾಮದ ನಿವಾಸಿಗಳು ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಗ್ರಾಮದ ಸಮೀಪ ತ್ಯಾಜ್ಯ ವಿಲೇವಾರಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಚುನಾಣೆಯನ್ನು ಬಹಿಷ್ಕರಿಸುತ್ತಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಕಸ ಸುರಿಯುತ್ತಿರುವ ಪ್ರದೇಶ ನದಿಗೆ ಅರ್ಕಾವತಿ ನದಿ ಮತ್ತು ಅಚ್ಚಲು ಗ್ರಾಮಕ್ಕೆ ಹೊಂದಿಕೊಂಡಿದೆ. ಇದರಿಂದ ಗ್ರಾಮ ಮತ್ತು ನದಿ ಎರಡಕ್ಕೂ ಅಪಾಯ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಈ ಊರಿನ ಬಳಿ ರಾಮನಗರ ನಗರಸಭೆ ತ್ಯಾಜ್ಯ ವಿಲೇವಾರಿ ಮಾಡುತ್ತಿದೆ. ಇದನ್ನು ನಿಲ್ಲಿಸುವಂತೆ ಗ್ರಾಮದ ಜನರು ಹಲವು ಬಾರಿ ಮನವಿ ಮಾಡಿಕೊಂಡರೂ.ಯಾವುದೇ ಪ್ರಯೋಜನವಾಗಿಲ್ಲ.

ಟ್ರೆಂಡಿಂಗ್​ ಸುದ್ದಿ

ಆಂಧ್ರ ಪ್ರದೇಶ ಚುನಾವಣೆ 2024; 175 ವಿಧಾನಸಭಾ ಸ್ಥಾನಗಳಿಗೆ ಮೇ 13ಕ್ಕೆ ಮತದಾನ, ಚುನಾವಣಾ ಟ್ರೆಂಡ್ ಅರ್ಥಮಾಡಿಕೊಳ್ಳಲು ಈ 10 ಅಂಶ

ಸಂಪಾದಕೀಯ: ಆರ್ಥಿಕ ಅಸಮಾನತೆಯ ಚರ್ಚೆಯಲ್ಲಿ ಜಾತಿಯ ಸಂಕೀರ್ಣ ಪಾತ್ರ, ಕಾಂಗ್ರೆಸ್‌ ಉರುಳಿಸಿದ ರಾಜಕೀಯ ದಾಳದ ಹಲವು ಒಳಸುಳಿಗಳು

ಲೋಕಸಭಾ ಚುನಾವಣೆ; ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ, ಯಡಿಯೂರಪ್ಪ ಕುಟುಂಬದ ರಾಜಕೀಯ ಭವಿಷ್ಯ ನಿರ್ಧರಿಸುವ ಮತದಾನ

ಲೋಕಸಭಾ ಚುನಾವಣೆ 2024; ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಕಣಕ್ಕೆ ಇಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಯಾರು

ನಮ್ಮ ಗ್ರಾಮದ ಬಳಿ ಕಳೆದ ಆರು ತಿಂಗಳಿನಿಂದ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಇದರಿಂದ ಗಲೀಜು ಹೆಚ್ಚಾಗುತ್ತಿದ್ದು, ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಅಚ್ಚಲು.ಗ್ರಾಮ ಒಳಪಡುವ ಹುಣಸನಹಳ್ಳಿ ಗ್ರಾಮ ಪಂಚಾಯಿತಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಮಾಲಿನ್ಯ ನಿಯಂತ್ರಣ ಮಂಡಲಿ, ನಗರಸಭೆ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೆ ದೂರು ಸಲ್ಲಿಸಿದ್ದರೂ ಯಾರೂ ಸ್ಪಂದಿಸಿಲ್ಲ. ಹಾಗಾಗಿ ಚುನಾವಣೆ ಬಹಿಷ್ಕಾರವೊಂದೇ ನಮಗೆ ಉಳಿದಿರುವ ಮಾರ್ಗ ಎಂದು ಗ್ರಾಮದ ನಿವಾಸಿಗಳು ಹೇಳುತ್ತಾರೆ.

ಈ ತ್ಯಾಜ್ಯದಿಂದ ಕೇವಲ ಅಚ್ಚಲು ಗ್ರಾಮಸ್ಥರಿಗೆ ಮಾತ್ರ ತೊಂದರೆ ಉಂಟಾಗುತ್ತಿಲ್ಲ. ತ್ಯಾಜ್ಯವನ್ನು ಸುರಿಯುತ್ತಿರುವ ಪ್ರದೇಶ ಅರ್ಕಾವತಿ ನದಿಗೆ ಹೊಂದಿಕೊಂಡಿದ್ದು, ನದಿಗೂ ಅಪಾಯ ಉಂಟಾಗಿದೆ. ಆಗೊಮ್ಮೆ ಈಗೊಮ್ಮೆ ಈ ತ್ಯಾಜ್ಯಕ್ಕೆ ಬೆಂಕಿ ಹಚ್ಚಲಾಗುತ್ತದೆ. ಇದರಿಂದ ಹೊಗೆ ಇಡೀ ಗ್ರಾಮವನ್ನು ಆವರಿಸುತ್ತದೆ. ಈ ತ್ಯಾಜ್ಯದ ಪರಿಣಾಮ ಗ್ರಾಮದಲ್ಲಿ ಸೊಳ್ಳೆಗಳು ಹೆಚ್ಚಾಗಿವೆ. ಕೆಮ್ಮು, ಜ್ವರ ಮೊದಲಾದ ರೋಗಳು ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತಿವೆ. ವಿಶೇಷವಾಗಿ ಮಕ್ಕಳು ಮತ್ತು ವೃದ್ದರು ಆರೋಗ್ಯದ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ದೂರುತ್ತಾರೆ.

ಅರ್ಕಾವತಿ ನದಿಯ ಅಕ್ಕಪಕ್ಕದಲ್ಲಿ ರೇಷ್ಮೆ ಮತ್ತಿತರ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಇದರಿಂದ ರೈತರಿಗೂ ತೊಂದರೆ ಉಂಟಾಗಿದೆ. ಸರಕಾರ ಕೂಡಲೇ ಕಸದ ರಾಶಿಯನ್ನು ತೆರವುಗೊಳಿಸಬೇಕು ಇಲ್ಲವೇ ಚುನಾವಣೆ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳುತ್ತಾರೆ.

ಆದರೆ ಪಂಚಾಯಿತಿಯ ಪೌರಾಯುಕ್ತರು ಈಗಾಗಲೇ ಕಸ.ಸುರಿಯುವುದಕ್ಕೆ ತಡೆ ನೀಡಲಾಗಿದೆ. ಕೂಡಲೇ ಕಸವು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಕೆಲವೇ ದಿನಗಳಲ್ಲಿ ಆ ಭೂಮಿಯನ್ನು ಸ್ವಚ್ಚಗೊಳಿಸಲಾಗುವುದು.

ತ್ಯಾಜ್ಯ ವಿಲೇವಾರಿಗೆ ಸ್ಥಳವನ್ನು ಗುರುತಿಸಲಾಗಿದ್ದು, ಕೆಲವೇ ದಿನಗಳಲ್ಲಿ ಟೆಂಡರ್ ಆಹ್ವಾನಿಸಿ ಕಾಮಗಾರಿ ಆರಂಭಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಬಹುಶಃ ಗ್ರಾಮಸ್ಥರ ಬೆದರಿಕೆಯಿಂದ ಅಚ್ಚಲು ಗ್ರಾಮ ಸ್ವಚ್ಚಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ ಎನ್ನುವ ಮಾತುಗಳು ಕೇಳಿ ಬಂದಿವೆ.

ರಾಮನಗರದಲ್ಲಿ 1.20 ಕೋಟಿ ರೂ. ಮೌಲ್ಯದ ಮದ್ಯ ವಶ

ರಾಮನಗರದಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಸುಮಾರು 1.18 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ಲಾರಿಗಳಲ್ಲಿ 29,380 ಲೀಟರ್ ಮದ್ಯವನ್ನು ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಈ ಮದ್ಯವನ್ನು ಸಾಗಿಸಲಾಗುತ್ತಿತ್ತು. ಇದರ ಮೌಲ್ಯ ಅಂದಾಜು 1.18 ಕೋಟಿ ರೂ.ಗಳಷ್ಟಿದ್ದು, ಲಾರಿ ಸಹಿತ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ಹೇಳಿದ್ದಾರೆ.

ರಾಮನಗರದ ಹೊರವಲಯದಲ್ಲಿ ಎರಡು ಲಾರಿಗಳಲ್ಲಿ ಈ ಮದ್ಯವಿರುವ ಬಾಕ್ಸ್ ಗಳನ್ನು ಸಾಗಾಣಿಕೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿಯನ್ನು ಆಧರಿಸಿ ಈ ಲಾರಿಗಳನ್ನು ವಶಕ್ಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಈ ಮದ್ಯವನ್ನು ಚನ್ನಪಟ್ಟಣದ ಎಂಎಸ್ ಐಎಲ್ ಗೋದಾಮಿಗೆ ಸಾಗಾಟ ಮಾಡಲಾಗುತ್ತಿತ್ತು ಎಂದು ಲಾರಿ ಚಾಲಕರು ಹೇಳಿದ್ದಾರೆ. ಆದರೆ ದಾಖಲೆಗಳನ್ನು ಪರಿಶೀಲಿಸಿದಾಗ ಪರವಾನಗಿ ಪತ್ರದಲ್ಲಿ ಸಂಬಂಧಪಟ್ಟ ಮದ್ಯ ಕಂಪನಿಯ ಅಧಿಕಾರಿಯ ಸಹಿ ಇರಲಿಲ್ಲ. ಆದ್ದರಿಂದ ಪರವಾನಗಿ ನಿಯಮ ಉಲ್ಲಂಘನೆ ನಿಯಮದ ಅಡಿಯಲ್ಲಿ ಪ್ರಕರಣವನ್ನು

ದಾಖಲಿಸಿಕೊಳ್ಳಲಾಗಿತ್ತು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ದಂಡವನ್ನು ಪಾವತಿಸಿ ಲಾರಿಗಳನ್ನು ಬಿಡಿಸಿಕೊಂಡು ಹೋಗಿದ್ದಾರೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

ರಾಮನಗರದಲ್ಲೇ ಮತ್ತೊಂದು ಪ್ರಕರಣದಲ್ಲಿ 3 ಸಾವಿರ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

(ವರದಿ: ಎಚ್‌.ಮಾರುತಿ. ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ