logo
ಕನ್ನಡ ಸುದ್ದಿ  /  ಮನರಂಜನೆ  /  Adipurush New Release Date: ‘ಆದಿಪುರುಷ್​’ ಟೀಸರ್‌ಗೆ ಕಟು ಟೀಕೆ; ಕೊನೆಗೂ ಎಚ್ಚೆತ್ತ ನಿರ್ದೇಶಕರಿಂದ ಮಹತ್ವದ ಬದಲಾವಣೆ..

Adipurush New Release Date: ‘ಆದಿಪುರುಷ್​’ ಟೀಸರ್‌ಗೆ ಕಟು ಟೀಕೆ; ಕೊನೆಗೂ ಎಚ್ಚೆತ್ತ ನಿರ್ದೇಶಕರಿಂದ ಮಹತ್ವದ ಬದಲಾವಣೆ..

HT Kannada Desk HT Kannada

Nov 07, 2022 10:23 AM IST

‘ಆದಿಪುರುಷ್​’ ಟೀಸರ್‌ಗೆ ಕಟು ಟೀಕೆ; ಕೊನೆಗೂ ಎಚ್ಚೆತ್ತ ನಿರ್ದೇಶಕರಿಂದ ಮಹತ್ವದ ಬದಲಾವಣೆ..

    • ಟೀಸರ್‌ನಿಂದ ಟೀಕೆಗೆ ಗುರಿಯಾಗಿದ್ದ ‘ಆದಿಪುರುಷ್​’‌ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ ಜನವರಿ 12ರಂದು ಬಿಡುಗಡೆ ಆಗಬೇಕಿತ್ತು. ಇದೀಗ ಆ ಬಿಡುಗಡೆ ದಿನಾಂಕದಿಂದ ಚಿತ್ರತಂಡ ಮುಂದೆ ಹೋಗಿದೆ.
‘ಆದಿಪುರುಷ್​’ ಟೀಸರ್‌ಗೆ ಕಟು ಟೀಕೆ; ಕೊನೆಗೂ ಎಚ್ಚೆತ್ತ ನಿರ್ದೇಶಕರಿಂದ ಮಹತ್ವದ ಬದಲಾವಣೆ..
‘ಆದಿಪುರುಷ್​’ ಟೀಸರ್‌ಗೆ ಕಟು ಟೀಕೆ; ಕೊನೆಗೂ ಎಚ್ಚೆತ್ತ ನಿರ್ದೇಶಕರಿಂದ ಮಹತ್ವದ ಬದಲಾವಣೆ..

ಪ್ರಭಾಸ್‌ ನಟನೆಯ ‘ಆದಿಪುರುಷ್​’‌ ಸಿನಿಮಾ ಟೀಸರ್‌ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಸಿನಿಮಾ ಟೀಸರ್‌ ಬಿಡುಗಡೆಯಾಗುವರೆಗೂ ಎಲ್ಲವೂ ಸರಿ ಇತ್ತು. ಆದರೆ ಟೀಸರ್‌ನಲ್ಲಿ ಪಾತ್ರಧಾರಿಗಳನ್ನು ಚಿತ್ರಿಸಿರುವ ರೀತಿ ನೋಡಿ ಮೆಚ್ಚುಗೆಗಿಂತ ನೆಗೆಟಿವ್‌ ಕಮೆಂಟ್‌ಗಳ ಸುರಿಮಳೆಯೇ ಹರಿದುಬಂದಿತ್ತು.

ಟ್ರೆಂಡಿಂಗ್​ ಸುದ್ದಿ

ಶೇಕಡಾ 66 ಅಂಕ ತೆಗೆದು ಎಸ್‌ಎಸ್‌ಎಲ್‌ಸಿ ಪಾಸ್‌ ಆದ ಭಾಗ್ಯಾ, ಸಪ್ಪೆ ಮೋರೆ ಹಾಕಿ ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Kuntebille Movie: ಸೆಟ್ಟೇರಿತು ತರ್ಲೆ ವಿಲೇಜ್‌ ನಿರ್ದೇಶಕರ ಕುಂಟೆಬಿಲ್ಲೆ ಸಿನಿಮಾ; ಇದು ಪ್ರೇಮ ಕಾಮದ ಸುತ್ತ ತಿರುಗುವ ಚಿತ್ರ

Huu ಅಂತೀಯಾ...Uhuu ಅಂತೀಯಾ; ಸ್ಟಾರ್‌ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ, ಗೆದ್ದವರಿಗೆ ಲಕ್ಷ ಲಕ್ಷ ಬಹುಮಾನ

OTT News: ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್‌ 2 ವೆಬ್‌ಸಿರೀಸ್‌ನ ಟ್ರೈಲರ್ ಬಿಡುಗಡೆ; ಜಿಯೊಸಿನಿಮಾ ಮೂಲಕ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

ಟೀಸರ್‌ನಲ್ಲಿ ರಾಮಾಯಣ ಪಾತ್ರಧಾರಿಗಳನ್ನು ತಮಗೆ ತೋಚಿದಂತೆ ಚಿತ್ರತಂಡ ತೋರಿಸಿತ್ತು. ಸೈಫ್‌ ಅಲಿ ಖಾನ್‌ ಮಾಡಿರುವ ರಾವಣ ಪಾತ್ರಧಾರಿಯನ್ನಂತೂ ಮುಸ್ಲಿಂ ದೊರೆಯಂತೆ ಚಿತ್ರಿಸಲಾಗಿರುವುದು ಎಲ್ಲರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರತಂಡದ ವಿರುದ್ಧ ಹಲವೆಡೆ ದೂರು ಸಹ ದಾಖಲಾಗಿದ್ದವು. ಈ ನಡುವೆ ಮಧ್ಯಪ್ರದೇಶ ಗೃಹಸಚಿವ ನರೋತ್ತಮ್‌ ಮಿಶ್ರಾ ಕೂಡಾ ಆದಿಪುರುಷ್‌ ಟೀಸರ್‌ ಬಗ್ಗೆ ಬೇಸರ ವ್ಯಕ್ತಪಡಿಸಿ, ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯುವಂತೆ ಎಚ್ಚರಿಕೆ ನೀಡಿದ್ದರು.

ಟೀಸರ್‌ ಬಗ್ಗೆ ಟೀಕೆ; ಬಿಡುಗಡೆ ಮುಂದಕ್ಕೆ..

ಹೀಗೆ ಟೀಸರ್‌ನಿಂದ ಟೀಕೆಗೆ ಗುರಿಯಾಗಿದ್ದ ‘ಆದಿಪುರುಷ್​’‌ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ ಜನವರಿ 12ರಂದು ಬಿಡುಗಡೆ ಆಗಬೇಕಿತ್ತು. ಇದೀಗ ಆ ಬಿಡುಗಡೆ ದಿನಾಂಕದಿಂದ ಚಿತ್ರತಂಡ ಮುಂದೆ ಹೋಗಿದೆ. ಅದಕ್ಕೆ ಕಾರಣ; ಗ್ರಾಫಿಕ್ಸ್‌ ಕೆಲಸ. ನಿರ್ದೇಶಕ ಓಂ ರಾವತ್‌ ಹೀಗೆ ಹೇಳಿ ಬಿಡುಗಡೆಯನ್ನು ಮುಂದೂಡಿದ್ದಾರೆ. ಜನವರಿಗೆ ಬರಬೇಕಿದ್ದ ಈ ಸಿನಿಮಾ ಜೂನ್‌ಗೆ ಮುಂದೂಡಿಕೆಯಾಗಿದೆ.

ಆದಿಪುರುಷ್‌ ಕೇವಲ ಸಿನಿಮಾ ಅಲ್ಲ.. ಅದೊಂದು ಭಾವನೆ..

ಚಿತ್ರದ ಹೊಸ ಬಿಡುಗಡೆ ದಿನಾಂಕ ಪ್ರಕಟಿಸಿದ ನಿರ್ದೇಶಕ ಓಂ ರಾವುತ್, 'ಆದಿಪುರುಷ ಕೇವಲ ಸಿನಿಮಾ ಅಲ್ಲ. ಶ್ರೀರಾಮ, ಭಕ್ತಿ ಮತ್ತು ಭವ್ಯವಾದ ಇತಿಹಾಸ ಮತ್ತು ಸಂಸ್ಕೃತಿಗೆ ನಮ್ಮ ಬದ್ಧತೆಯ ಸಂಕೇತವಾಗಿದೆ. ಪ್ರೇಕ್ಷಕರನ್ನು ಹಿಡಿದಿಡಲು, ಹೊಸ ಅನುಭವ ನೀಡಲು ಆದಿಪುರುಷನ ಸೃಷ್ಟಿಯಲ್ಲಿ ತೊಡಗಿರುವ ತಾಂತ್ರಿಕ ವರ್ಗ ಸ್ವಲ್ಪ ಹೆಚ್ಚು ಸಮಯ ಬೇಡಿದೆ. ಹಾಗಾಗಿ ಜೂನ್ 16ರಂದು ಚಿತ್ರ ಬಿಡುಗಡೆಯಾಗಲಿದೆ" ಎಂದಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ