logo
ಕನ್ನಡ ಸುದ್ದಿ  /  ಮನರಂಜನೆ  /  Hanuman Vs Adipurush: ‘ಹನುಮಾನ್’ ಬಂದ ಬಳಿಕ ‘ಆದಿಪುರುಷ’ನಿಗೆ ಮತ್ತೆ ಟ್ರೋಲ್‌ ಕಾಟ; ಈಗ 600 ಕೋಟಿ ವರ್ಸಸ್ 12 ಕೋಟಿ!

Hanuman Vs Adipurush: ‘ಹನುಮಾನ್’ ಬಂದ ಬಳಿಕ ‘ಆದಿಪುರುಷ’ನಿಗೆ ಮತ್ತೆ ಟ್ರೋಲ್‌ ಕಾಟ; ಈಗ 600 ಕೋಟಿ ವರ್ಸಸ್ 12 ಕೋಟಿ!

Nov 22, 2022 06:48 AM IST

‘ಹನುಮಾನ್’ ಬಂದ ಬಳಿಕ ‘ಆದಿಪುರುಷ’ನಿಗೆ ಮತ್ತೆ ಟ್ರೋಲ್‌ ಕಾಟ; ಈಗ 600 ಕೋಟಿ ವಸರ್ಸ್‌ 12 ಕೋಟಿ!

    • ಇತ್ತೀಚಿಗೆ ಟೀಕೆಗೆ ಗುರಿಯಾಗಿದ್ದ ಆದಿಪುರುಷ್‌ ಸಿನಿಮಾ ಮತ್ತೆ ಮುನ್ನೆಲೆಗೆ ಬಂದಿದೆ. ಹನುಮಾನ್‌ ಚಿತ್ರದ ವಿಎಫ್‌ಎಕ್ಸ್‌ ಬಳಕೆಯನ್ನು ನೆಟ್ಟಿಗರು ಆದಿಪುರುಷ್‌ ಚಿತ್ರದೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ.
‘ಹನುಮಾನ್’ ಬಂದ ಬಳಿಕ ‘ಆದಿಪುರುಷ’ನಿಗೆ ಮತ್ತೆ ಟ್ರೋಲ್‌ ಕಾಟ; ಈಗ 600 ಕೋಟಿ ವಸರ್ಸ್‌ 12 ಕೋಟಿ!
‘ಹನುಮಾನ್’ ಬಂದ ಬಳಿಕ ‘ಆದಿಪುರುಷ’ನಿಗೆ ಮತ್ತೆ ಟ್ರೋಲ್‌ ಕಾಟ; ಈಗ 600 ಕೋಟಿ ವಸರ್ಸ್‌ 12 ಕೋಟಿ!

Hanuman teaser Vs Adipurush teaser: ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಿರುವ ತೇಜ ಸಜ್ಜ ನಟನೆಯ ಬಹು ನಿರೀಕ್ಷಿತ ತೆಲುಗು ಸಿನಿಮಾ ‘ಹನು-ಮಾನ್’ ಟೀಸರ್ ಬಿಡುಗಡೆಯಾಗಿದೆ. ಪ್ರೈಮ್ ಶೋ ಎಂಟಟೈನ್ಮೆಂಟ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಟೀಸರ್ ಝಲಕ್ ಮೂಲಕ ಪ್ರೇಕ್ಷಕರೆದುರು ಬಂದಿರುವ 'ಹನು - ಮಾನ್' ಎಲ್ಲರ ಗಮನ ಸೆಳೆಯುತ್ತಿದೆ.

ಟ್ರೆಂಡಿಂಗ್​ ಸುದ್ದಿ

Seetha Rama Serial: ಅಶೋಕನ ಮೇಲೆ ಮಾರಣಾಂತಿಕ ಹಲ್ಲೆ, ಇದು ಭಾರ್ಗವಿ ಸಂಚೋ, ರುದ್ರಪ್ರತಾಪನ ಕೈವಾಡವೋ?

Brundavana Serial: ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?

ಶೇಕಡಾ 66 ಅಂಕ ತೆಗೆದು ಎಸ್‌ಎಸ್‌ಎಲ್‌ಸಿ ಪಾಸ್‌ ಆದ ಭಾಗ್ಯಾ, ಸಪ್ಪೆ ಮೋರೆ ಹಾಕಿ ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Kuntebille Movie: ಸೆಟ್ಟೇರಿತು ತರ್ಲೆ ವಿಲೇಜ್‌ ನಿರ್ದೇಶಕರ ಕುಂಟೆಬಿಲ್ಲೆ ಸಿನಿಮಾ; ಇದು ಪ್ರೇಮ ಕಾಮದ ಸುತ್ತ ತಿರುಗುವ ಚಿತ್ರ

ನಿರ್ದೇಶಕ ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೋ ‘ಹನು-ಮಾನ್’ ಬಗ್ಗೆ ಕಥೆ ಹೆಣೆದು ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ಚಿತ್ರದಲ್ಲಿ ನಾಯಕ ನಟನಾಗಿ ತೇಜ ಸಜ್ಜ ನಟಿಸುತ್ತಿದ್ದು, ಚಿತ್ರಕ್ಕಾಗಿ ಭರ್ಜರಿ ತಯಾರಿ ನಡಿಸಿರುವುದು ಟೀಸರ್ ಝಲಕ್ ನೋಡಿದಾಗಲೇ ತಿಳಿದು ಬರುತ್ತೆ. ಇದೀಗ ಇದೇ ಸಿನಿಮಾ ಬಾಲಿವುಡ್‌ನ ಆದಿಪುರುಷ್‌ ಚಿತ್ರಕ್ಕೆ ಟಾಂಗ್‌ ಕೊಟ್ಟಿದೆ. ಟ್ರೋಲ್‌ ಮಳೆ ಮತ್ತೆ ಸುರಿದಿದೆ.

12 ಕೋಟಿಯಲ್ಲಿ ನಿರ್ಮಾಣವಾದ ಹನುಮಾನ್!

‘ಹನು-ಮಾನ್’ ಚಿತ್ರದ ಟೀಸರ್ ಬಿಡುಗಡೆಯಾದ ಕ್ಷಣದಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆರಂಭಿಸಿದೆ. ಈ ಚಿತ್ರದ ನಿರ್ಮಾಣಕ್ಕೆ 12 ಕೋಟಿ ರೂ. ವ್ಯಯಿಸಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ ಬಜೆಟ್‌ ವಿಚಾರ ಹೊರಬೀಳುತ್ತಿದ್ದಂತೆ, ಇತ್ತೀಚಿಗೆ ಟೀಕೆಗೆ ಗುರಿಯಾಗಿದ್ದ ಆದಿಪುರುಷ್‌ ಸಿನಿಮಾ ಮತ್ತೆ ಮುನ್ನೆಲೆಗೆ ಬಂದಿದೆ. ಹನುಮಾನ್‌ ಚಿತ್ರದ ವಿಎಫ್‌ಎಕ್ಸ್‌ ಬಳಕೆಯನ್ನು ಆದಿಪುರುಷ್‌ ಚಿತ್ರದೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ.

600 ಕೋಟಿ ವರ್ಸಸ್‌ 12 ಕೋಟಿ!

ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಇರುವ ‘ಹನು-ಮಾನ್’ ಸಿನಿಮಾದ ಟೀಸರ್‌ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಆದಿಪುರಷನಿಗೆ ಹೋಲಿಕೆ ಮಾಡಿ, ಹೈ ಬಜೆಟ್‌ ಸಿನಿಮಾದ ಕಾಲೆಳೆಯುತ್ತಿದ್ದಾರೆ. ‘ಹನು-ಮಾನ್’ ಚಿತ್ರದ VFX ಆದಿಪುರುಷಕ್ಕಿಂತ 200% ಉತ್ತಮವಾಗಿದೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. 600 ಕೋಟಿಯಲ್ಲಿ ಮಾಡಲಾಗದ ಕೆಲಸವನ್ನು ‘ಹನು-ಮಾನ್’ ತಂಡ ಕೇವಲ 12 ಕೋಟಿಯಲ್ಲಿ ಮಾಡಿದೆ ಎಂದು, ಪ್ರಭಾಸ್‌ ಚಿತ್ರವನ್ನು ಟ್ರೋಲ್‌ ಮಾಡುತ್ತಿದ್ದಾರೆ.

ಪ್ಯಾನ್‌ ಇಂಡಿಯಾ ಹನುಮಾನ್‌!

ಅಂದಹಾಗೆ, ಮೂಲ ತೆಲುಗಿನಲ್ಲಿ ನಿರ್ಮಾಣವಾಗಿರುವ ‘ಹನು-ಮಾನ್’ ಸಿನಿಮಾ, ಸೌತ್‌ನ ಎಲ್ಲ ಭಾಷೆಗಳಲ್ಲಿ ಡಬ್‌ ಆಗಿ ರಿಲೀಸ್‌ ಆಗಲಿದೆ. ಅದರ ಜತೆಗೆ ಹಿಂದಿಯಲ್ಲಿಯೂ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಅಮೃತಾ ಐಯ್ಯರ್ ನಟಿಸಿದ್ದಾರೆ. ಇನ್ನುಳಿದಂತೆ ವರಲಕ್ಷಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೆಟಪ್ ಶ್ರೀನು, ಸತ್ಯ ಒಳಗೊಂಡ ಸ್ಟಾರ್ ಕಲಾವಿದರ ತಾರಾಬಳಗ ಚಿತ್ರದಲ್ಲಿದೆ.

ಯುವ ಹಾಗೂ ಪ್ರತಿಭಾವಂತ ಸಂಗೀತ ನಿರ್ದೇಶಕರಾದ ಗೌರಹರಿ, ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಸಂಗೀತ ನಿರ್ದೇಶನ, ದಶರಧಿ ಶಿವೇಂದ್ರ ಕ್ಯಾಮೆರಾ ವರ್ಕ್, ಎಸ್. ಬಿ ರಾಜು ತಲರಿ ಸಂಕಲನ ಚಿತ್ರಕ್ಕಿದೆ. ಕೆ. ನಿರಂಜನ್ ರೆಡ್ಡಿ ಪ್ರೈಮ್ ಶೋ ಎಂಟರ್‌ಟೈನ್ಮೆಂಟ್ ಬ್ಯಾನರ್ ನಡಿ ಅದ್ದೂರಿಯಾಗಿ, ಬಿಗ್ ಬಜೆಟ್ ನಲ್ಲಿ ‘ಹನು-ಮಾನ್’ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಸಿನಿಮಾ ತಂಡ ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ