logo
ಕನ್ನಡ ಸುದ್ದಿ  /  ಮನರಂಜನೆ  /  Ponniyin Selvan Trailer: ಕಾರ್ಯಕ್ರಮಕ್ಕೆ ಆಗಮಿಸಿದ ರಜನಿಕಾಂತ್‌ ಕಾಲು ಮುಟ್ಟಿ ನಮಸ್ಕರಿಸಿದ ಐಶ್ವರ್ಯ ರೈ...ವಿಡಿಯೋ ವೈರಲ್‌

Ponniyin Selvan Trailer: ಕಾರ್ಯಕ್ರಮಕ್ಕೆ ಆಗಮಿಸಿದ ರಜನಿಕಾಂತ್‌ ಕಾಲು ಮುಟ್ಟಿ ನಮಸ್ಕರಿಸಿದ ಐಶ್ವರ್ಯ ರೈ...ವಿಡಿಯೋ ವೈರಲ್‌

HT Kannada Desk HT Kannada

Sep 07, 2022 04:45 PM IST

ಐಶ್ವರ್ಯ ರೈ, ರಜನಿಕಾಂತ್‌ ಕಾಲು ಮುಟ್ಟಿ ನಮಸ್ಕರಿಸಿದ ವಿಡಿಯೋ ವೈರಲ್‌

    • ನಿನ್ನೆ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಮೊದಲು ನಿರ್ದೇಶಕ ಮಣಿರತ್ನಂ ರಜನಿಕಾಂತ್‌ ಅವರನ್ನು ಅಪ್ಪಿಕೊಂಡಿದ್ದಾರೆ. ನಂತರ ಐಶ್ವರ್ಯ ಬಂದು ಅವರ ಕಾಲಿಗೆ ನಮಸ್ಕರಿಸಿದ್ದಾರೆ. ಐಶ್ವರ್ಯ ಅವರನ್ನು ಹಗ್‌ ಮಾಡಿದ ರಜನಿಕಾಂತ್‌ ಬಹಳ ಆತ್ಮೀಯವಾಗಿ ಮಾತನಾಡಿದ್ದಾರೆ. ಇಬ್ಬರೂ ಪರಸ್ಪರ ಕೈ ಮುಗಿದು ನಮಸ್ಕರಿಸಿದ್ದಾರೆ.
ಐಶ್ವರ್ಯ ರೈ, ರಜನಿಕಾಂತ್‌ ಕಾಲು ಮುಟ್ಟಿ ನಮಸ್ಕರಿಸಿದ ವಿಡಿಯೋ ವೈರಲ್‌
ಐಶ್ವರ್ಯ ರೈ, ರಜನಿಕಾಂತ್‌ ಕಾಲು ಮುಟ್ಟಿ ನಮಸ್ಕರಿಸಿದ ವಿಡಿಯೋ ವೈರಲ್‌

ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ 'ಪೊನ್ನಿಯಿನ್‌ ಸೆಲ್ವನ್‌ -1' ಟ್ರೇಲರ್‌ ನಿನ್ನೆ ಬಿಡುಗಡೆಯಾಗಿದೆ. ಚೆನ್ನೈನಲ್ಲಿ ನಡೆದ ಅದ್ಧೂರಿ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಅನೇಕ ಗಣ್ಯರು ಹಾಜರಿದ್ದರು. ಕಾರ್ಯಕ್ರಮದ ಕೆಲವೊಂದು ವಿಡಿಯೋಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಟ್ರೆಂಡಿಂಗ್​ ಸುದ್ದಿ

Cannes: ಚಿನ್ನದ ಬಣ್ಣದ ಉಡುಗೆಯಲ್ಲಿ ಆಸ್ಕರ್‌ ಟ್ರೋಫಿ ರೀತಿ ಕಾಣಿಸ್ತಾರಂತೆ ಶೋಭಿತಾ ಧೂಳಿಪಾಲ, ನಿಮಗೂ ಹಾಗೇ ಕಾಣಿಸ್ತಾರ ನೋಡಿ

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅದೃಷ್ಟ ಕಣ್ರೋ, ಅಪಶಕುನ ಅಲ್ಲ; ಐಪಿಎಲ್‌ನಲ್ಲಿ ಆರ್‌ಸಿಬಿ ಹೊಸ ಅಧ್ಯಾಯ, ತುಚ್ಛ ಪದ ಬಳಸಿದವರಿಗೆ ಚಾಟಿಯೇಟು

Bhagyalakshmi Serial: 10ನೇ ತರಗತಿ ಪಾಸ್‌ ಆದ ಖುಷಿಗೆ ಮೊದಲ ದಿನವೇ ಕೆಲಸಕ್ಕೆ ತಡವಾಗಿ ಹೊರಟ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ; ಡುಮ್ಮ ಸರ್‌ ಟೈಟಾದ್ರು, ಐ ಅಂದ್ರು, ಲವ್‌ ಯು ಹೇಳ್ತಾರ

ಚೆನ್ನೈನಲ್ಲಿ ಮಂಗಳವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಸೂಪರ್‌ ಸ್ಟಾರ್‌ ರಜನಿಕಾಂತ್‌ ಮುಖ್ಯ ಅತಿಥಿಯಾಗಿ ಹಾಜರಿದ್ದರು. ಕಮಲ್‌ ಹಾಸನ್‌, ಐಶ್ವರ್ಯ ರೈ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದರು. 'ಪೊನ್ನಿಯಿನ್‌ ಸೆಲ್ವನ್‌ -1' ಚಿತ್ರದಲ್ಲಿ ಮಾಜಿ ವಿಶ್ವ ಸುಂದರಿ, ಬಾಲಿವುಡ್‌ ನಟಿ ಐಶ್ವರ್ಯ ರೈ ಕೂಡಾ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದ್ದು ಈಗಾಗಲೇ ಬಿಡುಗಡೆ ಆಗಿರುವ ಟೀಸರ್‌ ಸಾಕಷ್ಟು ಕುತೂಹಲ ಕೆರಳಿಸಿದೆ. ಕಾರ್ಯಕ್ರಮದಲ್ಲಿ ನಟಿ ಐಶ್ವರ್ಯ ರೈ, ಹಿರಿಯ ನಟ ರಜನಿಕಾಂತ್‌ ಅವರ ಕಾಲು ಮುಟ್ಟಿ ನಮಸ್ಕರಿಸುತ್ತಿರುವ ವಿಡಿಯೋ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ರಜನಿಕಾಂತ್‌ ತಮಿಳು ಚಿತ್ರರಂಗದ ಹಿರಿಯ ನಟ. ಎಷ್ಟು ದೊಡ್ಡ ಸ್ಟಾರ್‌ ಆದರೂ ನಿಜ ಜೀವನದಲ್ಲಿ ಅವರ ಸರಳತೆ ಅನೇಕ ಜನರಿಗೆ ಮಾದರಿ. ಆ ಕಾರಣದಿಂದಲೇ ಎಲ್ಲರೂ ಅವರನ್ನು ಬಹಳ ಪೂಜ್ಯ ಮನೋಭಾವದಿಂದ ಕಾಣುತ್ತಾರೆ. ನಿನ್ನೆ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಮೊದಲು ನಿರ್ದೇಶಕ ಮಣಿರತ್ನಂ ರಜನಿಕಾಂತ್‌ ಅವರನ್ನು ಅಪ್ಪಿಕೊಂಡಿದ್ದಾರೆ. ನಂತರ ಐಶ್ವರ್ಯ ಬಂದು ಅವರ ಕಾಲಿಗೆ ನಮಸ್ಕರಿಸಿದ್ದಾರೆ. ಐಶ್ವರ್ಯ ಅವರನ್ನು ಹಗ್‌ ಮಾಡಿದ ರಜನಿಕಾಂತ್‌ ಬಹಳ ಆತ್ಮೀಯವಾಗಿ ಮಾತನಾಡಿದ್ದಾರೆ. ಇಬ್ಬರೂ ಪರಸ್ಪರ ಕೈ ಮುಗಿದು ನಮಸ್ಕರಿಸಿದ್ದಾರೆ. ನಂತರ ಚಿಯಾನ್‌ ವಿಕ್ರಮ್‌ ಕೂಡಾ ರಜನಿ ಅವರ ಕಾಲಿಗೆ ನಮಸ್ಕರಿಸಿದ್ದಾರೆ. ಈ ವಿಡಿಯೋ ನೋಡಿದವರು ''ನಿಜಕ್ಕೂ ಇದು ಖುಷಿ ಕೊಡುತ್ತಿದೆ. ಐಶ್ವರ್ಯ ರೈ ವಿಶ್ವ ಸುಂದರಿ ಆದರೂ, ಸ್ಟಾರ್‌ ನಟಿ ಆದರೂ ನಮ್ಮ ಸಂಸೃತಿಯನ್ನು ಎಷ್ಟು ಚೆನ್ನಾಗಿ ಪಾಲಿಸುತ್ತಿದ್ದಾರೆ'' ಎಂದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಐಶ್ವರ್ಯ ರೈ ಹಾಗೂ ರಜನಿಕಾಂತ್‌ 'ರೋಬೋ' ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ.

'ಪೊನ್ನಿಯಿನ್ ಸೆಲ್ವನ್' 500 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗುತ್ತಿರುವ ಸಿನಿಮಾ. ಸ್ಟಾರ್ ನಟರ ದಂಡೇ ಈ ಚಿತ್ರದಲ್ಲಿದೆ. ಚಿತ್ರವನ್ನು ಮದ್ರಾಸ್ ಟಾಕೀಸ್ ಹಾಗೂ ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಜೊತೆ ಸೇರಿ ನಿರ್ಮಿಸುತ್ತಿವೆ. ಖ್ಯಾತ ನಿರ್ದೇಶಕ ಮಣಿರತ್ನಂ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ವಿಕ್ರಮ್, ಐಶ್ವರ್ಯ ರೈ ಬಚ್ಚನ್, ಜಯಂ ರವಿ, ಶರತ್​ ಕುಮಾರ್, ಕಾರ್ತಿ, ತ್ರಿಷಾ, ವಿಕ್ರಮ್ ಪ್ರಭು, ಪ್ರಕಾಶ್ ರಾಜ್, ಶೋಭಿತಾ ಧುಲಿಪಾಲ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ. ಸಿನಿಮಾ ಇದೇ ಸೆಪ್ಟೆಂಬರ್ 30 ರಂದು ತಮಿಳು, ಹಿಂದಿ, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಸಿನಿಮಾ 2 ಭಾಗಗಗಳಲ್ಲಿ ತಯಾರಾಗುತ್ತಿದೆ.

'ಪೊನ್ನಿಯಿನ್‌ ಸೆಲ್ವನ್‌' ಚೋಳ ಸಾಮ್ರಾಜ್ಯದ ಕಥೆಯಾಗಿದ್ದು ಕಲ್ಕಿ ಕೃಷ್ಣಮೂರ್ತಿ ಅವರು ಬರೆದ ಪೊನ್ನಿಯಿನ್‌ ಸೆಲ್ವನ್‌ ಕೃತಿ ಆಧರಿಸಿ ತಯಾರಾದ ಸಿನಿಮಾವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಪೊನ್ನಿ ನದಿ...ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ನೋಡಲು ಅಭಿಮಾನಿಗಳು ಬಹಳ ಎಕ್ಸೈಟ್‌ ಆಗಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ