logo
ಕನ್ನಡ ಸುದ್ದಿ  /  ಮನರಂಜನೆ  /  Alia-ranbir Baby Girl: ಆಲಿಯಾ- ರಣಬೀರ್‌ ಮಡಿಲಿಗೆ ಮಗು ಆಗಮನ; ಸಂಭ್ರಮದಲ್ಲಿ ಕಪೂರ್‌ ಕುಟುಂಬ

Alia-Ranbir Baby Girl: ಆಲಿಯಾ- ರಣಬೀರ್‌ ಮಡಿಲಿಗೆ ಮಗು ಆಗಮನ; ಸಂಭ್ರಮದಲ್ಲಿ ಕಪೂರ್‌ ಕುಟುಂಬ

HT Kannada Desk HT Kannada

Nov 06, 2022 01:05 PM IST

ಆಲಿಯಾ- ರಣಬೀರ್‌ ಮಡಿಲಿಗೆ ಮಗು ಆಗಮನ; ಸಂಭ್ರಮದಲ್ಲಿ ಕಪೂರ್‌ ಕುಟುಂಬ

    • ಬಾಲಿವುಡ್‌ನ ಸ್ಟಾರ್‌ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮನ- ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.
ಆಲಿಯಾ- ರಣಬೀರ್‌ ಮಡಿಲಿಗೆ ಮಗು ಆಗಮನ; ಸಂಭ್ರಮದಲ್ಲಿ ಕಪೂರ್‌ ಕುಟುಂಬ
ಆಲಿಯಾ- ರಣಬೀರ್‌ ಮಡಿಲಿಗೆ ಮಗು ಆಗಮನ; ಸಂಭ್ರಮದಲ್ಲಿ ಕಪೂರ್‌ ಕುಟುಂಬ

ಮುಂಬೈ: ಬಾಲಿವುಡ್‌ನ ಸ್ಟಾರ್‌ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮನ- ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್ ಸಿನಿಮಾ ನಿರ್ದೇಶಕ ಶ್ರೀನಿಧಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಕ್ರಿಸ್ಟೋಫರ್ ನೋಲನ್, ಸಂಜೀವ್ ಜಾಗೀರ್ದರ್ ಎಡಿಟಿಂಗ್‌ ಸೂಪರ್‌

Dhurva Sarja: ಅಪ್ಪ ಮಗಳ ಬಾಂಧವ್ಯದ C ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿದ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ

ನಟಿ ಪವಿತ್ರಾ ಜಯರಾಮ್‌ಗೆ ನನ್ನ ಗಂಡ ಆರನೇಯವನು; ಅಕ್ರಮ ಸಂಬಂಧದ ಬಗ್ಗೆ ಮೌನ ಮುರಿದ ಮೃತ ಚಂದ್ರಕಾಂತ್‌ ಪತ್ನಿ ಶಿಲ್ಪಾ

Amruthadhaare: ಜೈದೇವ್‌ ಕಿಡ್ನ್ಯಾಪ್‌ ಕಥೆ ಕೇಳಿ ಹೆಸರಘಟ್ಟಕ್ಕೆ ಬಂದಳು ಮಲ್ಲಿ; ಚಿಕ್ಕಮಗಳೂರಿನಲ್ಲಿ ಹನಿಮೂನ್‌ ನಡುವೆಯೇ ಅಲರ್ಟ್‌ ಆದ ಭೂಮಿ

ಭಾನುವಾರ ಮುಂಬೈನ ಕೆಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಆಲಿಯಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಎರಡೂ ಕುಟುಂಬಗಳಲ್ಲಿಯೂ ಇದು ಸಂಭ್ರಮಕ್ಕೆ ಕಾರಣವಾಗಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಜೂನ್‌ 27 ರಂದು ಸಿಹಿ ಸುದ್ತಾದಿ ಹಂಚಿಕೊಂಡಿದ್ದ ಆಲಿಯಾ

ಏಪ್ರಿಲ್‌ 14ರಂದು ಮದುವೆಯಾಗಿದ್ದ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್‌ ತಾವು ಅಪ್ಪ-ಅಮ್ಮನಾಗುತ್ತಿರುವ ವಿಚಾರವನ್ನು ಜೂನ್ 27 ರಂದು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ಆಲಿಯಾ ಭಟ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸುತ್ತಿರುವ ಫೋಟೋವನ್ನು ಇನ್​​ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದು ಶೀಘ್ರದಲ್ಲೇ ಮನೆಗೆ ಮಗು ಬರಲಿದೆ ಎಂದು ಹೇಳಿಕೊಂಡಿದ್ದರು.

ಅಭಿಮಾನಿಗಳು ಸೇರಿದಂತೆ ಬಾಲಿವುಡ್​ ಸೆಲಬ್ರಿಟಿಗಳು ಆಲಿಯಾ ಹಾಗೂ ರಣಬೀರ್​​​ಗೆ ಶುಭ ಕೋರಿದ್ದರು. ಮದುವೆಯಾದ ಎರಡೇ ತಿಂಗಳಿಗೆ ಪ್ರೆಗ್ನೆನ್ಸಿ ಘೋಷಿಸಿದ್ದ ಆಲಿಯಾ ಹಾಗೂ ರಣಬೀರ್ ಬಗ್ಗೆ ಅನೇಕರು ವ್ಯಂಗ್ಯವಾಡಿದ್ದರು.

ನೀವು ಮದುವೆಯಾಗಿದ್ದೇ ಇದಕ್ಕಾ ಎಂದು ಕೆಲವರು ಪ್ರಶ್ನಿಸಿದರೆ, ಇನ್ನೂ ಕೆಲವರು ರಣಬೀರ್‌ಗೆ ಸ್ವಿಗ್ಗಿಯ ಫಾಸ್ಟೆಸ್ಟ್‌ ಡೆಲಿವರಿ ಇದು ಎಂದು ರೇಗಿಸಿದ್ದರು. ಕಾಂಡೋಮ್ ಕಂಪನಿ ಕೂಡಾ ಇವರಿಬ್ಬರಿಗೂ ಫನ್ನಿಯಾಗಿ ಶುಭ ಕೋರಿತ್ತು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ