logo
ಕನ್ನಡ ಸುದ್ದಿ  /  ಮನರಂಜನೆ  /  Alia Bhatt Daughter Name: ಮೂರು ವರ್ಷಗಳ ಹಿಂದೆಯೇ ಮಗಳ ಹೆಸರನ್ನು ಫಿಕ್ಸ್‌ ಮಾಡಿದ್ರಂತೆ ಆಲಿಯಾ ಭಟ್‌...ಆ ಹೆಸರೇನು?

Alia Bhatt Daughter name: ಮೂರು ವರ್ಷಗಳ ಹಿಂದೆಯೇ ಮಗಳ ಹೆಸರನ್ನು ಫಿಕ್ಸ್‌ ಮಾಡಿದ್ರಂತೆ ಆಲಿಯಾ ಭಟ್‌...ಆ ಹೆಸರೇನು?

HT Kannada Desk HT Kannada

Nov 08, 2022 09:00 PM IST

ಆಲಿಯಾ ಭಟ್‌, ರಣಬೀರ್‌ ಕಪೂರ್

    • ಭಾನುವಾರ ಮುಂಬೈನ ಕೆಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಆಲಿಯಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆಶ್ಚರ್ಯದ ವಿಚಾರವೆಂದರೆ ಆಲಿಯಾ ಭಟ್‌, ತಮ್ಮ ಮಗಳಿಗೆ ಏನು ಹೆಸರಿಡಬೇಕು ಎಂಬುದನ್ನು ಮೂರು ವರ್ಷಗಳ ಮೊದಲೇ ನಿರ್ಧರಿಸಿದ್ದರಂತೆ.
ಆಲಿಯಾ ಭಟ್‌, ರಣಬೀರ್‌ ಕಪೂರ್
ಆಲಿಯಾ ಭಟ್‌, ರಣಬೀರ್‌ ಕಪೂರ್

ಬಾಲಿವುಡ್‌ ನಟಿ ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ನವೆಂಬರ್‌ 6 ರಂದು ಆಲಿಯಾ ಭಟ್‌ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸ್ಟಾರ್‌ ದಂಪತಿಗೆ ಹೆಣ್ಣು ಮಗು ಆದ ಸುದ್ದಿ ಕೇಳಿ ಅಭಿಮಾನಿಗಳು, ಸ್ನೇಹಿತರು, ಗಣ್ಯರು ಶುಭಾಶಯ ಕೋರುತ್ತಿದ್ದಾರೆ. ಈ ನಡುವೆ ಆಲಿಯಾ ಭಟ್‌ ಹಾಗೂ ರಣಬೀರ್‌, ತಮ್ಮ ಮಗಳಿಗೆ ಏನು ಹೆಸರು ಇಡಬಹುದು ಎಂಬ ಚರ್ಚೆ ಅಭಿಮಾನಿ ವಲಯದಲ್ಲಿ ಆರಂಭವಾಗಿದೆ.

ಟ್ರೆಂಡಿಂಗ್​ ಸುದ್ದಿ

Aadujeevitham OTT: ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಆಡುಜೀವಿತಂ ಸಿನಿಮಾವನ್ನು ಮನೆಯಲ್ಲೇ ನೋಡಿ, ಇಲ್ಲಿದೆ ಒಟಿಟಿ ಬಿಡುಗಡೆ ವಿವರ

ಬ್ಲಿಂಕ್ ಸಿನಿಮಾ ನಿರ್ದೇಶಕ ಶ್ರೀನಿಧಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಕ್ರಿಸ್ಟೋಫರ್ ನೋಲನ್, ಸಂಜೀವ್ ಜಾಗೀರ್ದರ್ ಎಡಿಟಿಂಗ್‌ ಸೂಪರ್‌

Dhurva Sarja: ಅಪ್ಪ ಮಗಳ ಬಾಂಧವ್ಯದ C ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿದ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ

ನಟಿ ಪವಿತ್ರಾ ಜಯರಾಮ್‌ಗೆ ನನ್ನ ಗಂಡ ಆರನೇಯವನು; ಅಕ್ರಮ ಸಂಬಂಧದ ಬಗ್ಗೆ ಮೌನ ಮುರಿದ ಮೃತ ಚಂದ್ರಕಾಂತ್‌ ಪತ್ನಿ ಶಿಲ್ಪಾ

ಭಾನುವಾರ ಮುಂಬೈನ ಕೆಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಆಲಿಯಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆಶ್ಚರ್ಯದ ವಿಚಾರವೆಂದರೆ ಆಲಿಯಾ ಭಟ್‌, ತಮ್ಮ ಮಗಳಿಗೆ ಏನು ಹೆಸರಿಡಬೇಕು ಎಂಬುದನ್ನು ಮೂರು ವರ್ಷಗಳ ಮೊದಲೇ ನಿರ್ಧರಿಸಿದ್ದರಂತೆ. ಮೂರು ವರ್ಷಗಳ ಹಿಂದೆ ಆಲಿಯಾ ಭಟ್‌ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ವಿಡಿಯೋವೊಂದು ಈಗ ವೈರಲ್‌ ಆಗುತ್ತಿದೆ. 2019 ರಲ್ಲಿ ರಣವೀರ್‌ ಸಿಂಗ್‌ ಹಾಗೂ ಆಲಿಯಾ ಭಟ್‌ ನಟಿಸಿದ್ದ 'ಗಲ್ಲಿ ಬಾಯ್‌' ಸಿನಿಮಾ ತೆರೆ ಕಂಡಿತ್ತು. ಈ ಸಿನಿಮಾದ ಪ್ರಚಾರಕ್ಕಾಗಿ ಆಲಿಯಾ, ರಿಯಾಲಿಟಿ ಶೋವೊಂದಕ್ಕೆ ಗೆಸ್ಟ್‌ ಆಗಿ ಹೋಗಿದ್ದರು. ಆಗ ನಡೆದ ಘಟನೆ ಇದು.

ಡ್ಯಾನ್ಸ್‌ ಕಾರ್ಯಕ್ರಮದಲ್ಲಿ ಬಾಲಕನೊಬ್ಬನ ಜೊತೆ ಆಲಿಯಾ ಭಟ್‌ ತಮ್ಮ ಹೆಸರಿನ ಸ್ಪೆಲ್ಲಿಂಗ್‌ ಹೇಳುವಂತೆ ಕೇಳಿದ್ದಾರೆ. ಆ ಬಾಲಕ Alia ಎಂದು ಹೇಳುವ ಬದಲಿಗೆ Almaa ಎಂದು ಹೇಳುತ್ತಾನೆ. ಇದು ಆಲಿಯಾಗೆ ಮೊದಲು ತಮಾಷೆ ಎನಿಸಿದೆ. ಆದರೆ ನಂತರ, 'ಈ ಹೆಸರು ಬಹಳ ಚೆನ್ನಾಗಿದೆ ನನ್ನ ಮಗಳಿಗೆ ಇದೇ ಹೆಸರು ಇಡುತ್ತೇನೆ' ಎನ್ನುತ್ತಾರೆ. ಆಗ ಆಕಸ್ಮಿಕವಾಗಿ ಹೇಳಿದ್ದ ಮಾತು ಈಗ ನಿಜವಾಗಿದೆ ಆಲಿಯಾಗೆ ಹೆಣ್ಣು ಮಗು ಜನಿಸಿದೆ. ಆಗ ಹೇಳಿದ್ದಂತೆ ತಮ್ಮ ಮಗಳಿಗೆ ಆಲಿಯಾ, 'ಅಲ್ಮಾ' ಎಂದು ಹೆಸರಿಡುತ್ತಾರೋ ಅಥವಾ ಬೇರೆ ಹೆಸರು ಇಡಲಿದ್ದಾರೋ ಕಾದು ನೋಡಬೇಕು.

ಇದೇ ವರ್ಷ ಏಪ್ರಿಲ್‌ನಲ್ಲಿ ಮದುವೆಯಾಗಿದ್ದ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ತಾವು ಅಪ್ಪ-ಅಮ್ಮನಾಗುತ್ತಿರುವ ವಿಚಾರವನ್ನು ಕಳೆದ ಜೂನ್ 27 ರಂದು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಆಲಿಯಾ ಭಟ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸುತ್ತಿರುವ ಫೋಟೋವನ್ನು ಇನ್​​ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದು ಶೀಘ್ರದಲ್ಲೇ ಮನೆಗೆ ಮಗು ಬರಲಿದೆ ಎಂದು ಹೇಳಿಕೊಂಡಿದ್ದರು. ಅಭಿಮಾನಿಗಳು ಸೇರಿದಂತೆ ಬಾಲಿವುಡ್​ ಸೆಲಬ್ರಿಟಿಗಳು ಆಲಿಯಾ ಹಾಗೂ ರಣಬೀರ್​​​ಗೆ ಶುಭ ಕೋರಿದ್ದರು. ಮದುವೆಯಾದ ಎರಡೇ ತಿಂಗಳಿಗೆ ಪ್ರೆಗ್ನೆನ್ಸಿ ಘೋಷಿಸಿದ್ದ ಆಲಿಯಾ ಹಾಗೂ ರಣಬೀರ್ ಬಗ್ಗೆ ಅನೇಕರು ವ್ಯಂಗ್ಯವಾಡಿದ್ದರು. ನೀವು ಮದುವೆಯಾಗಿದ್ದೇ ಇದಕ್ಕಾ ಎಂದು ಕೆಲವರು ಪ್ರಶ್ನಿಸಿದರೆ, ಇನ್ನೂ ಕೆಲವರು ರಣಬೀರ್‌ಗೆ ಸ್ವಿಗ್ಗಿಯ ಫಾಸ್ಟೆಸ್ಟ್‌ ಡೆಲಿವರಿ ಇದು ಎಂದು ರೇಗಿಸಿದ್ದರು. ಕಾಂಡೋಮ್ ಕಂಪನಿ ಕೂಡಾ ಇವರಿಬ್ಬರಿಗೂ ಫನ್ನಿಯಾಗಿ ಶುಭ ಕೋರಿತ್ತು.

ಆಲಿಯಾಗೂ ಮುನ್ನ ರಣಬೀರ್ ಕಪೂರ್ ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್​​ನಲ್ಲಿದ್ದರು. ಆದರೆ ಕಾರಣಾಂತರಗಳಿಂದ ಈ ಸಂಬಂಧ ಅರ್ಧದಲ್ಲೇ ಮುರಿದುಬಿತ್ತು. 'ಬ್ರಹ್ಮಾಸ್ತ್ರ' ಚಿತ್ರೀಕರಣದ ಸಮಯದಲ್ಲಿ ಆಲಿಯಾ ಭಟ್ ಹಾಗೂ ರಣವೀರ್ ಬಹಳ ಹತ್ತಿರವಾದರು ಎನ್ನಲಾಗಿದೆ. ಕೆಲವೊಂದು ಸಂದರ್ಶನಗಳಲ್ಲಿ ಆಲಿಯಾ ಹೇಳಿಕೊಂಡಿರುವ ಪ್ರಕಾರ ಆಕೆ 9 ವರ್ಷದವರಿದ್ದಾಗಲೇ ರಣಬೀರ್ ಕಪೂರ್ ಮೇಲೆ ಕ್ರಷ್ ಆಗಿತ್ತಂತೆ. ಆ ಸಮಯದಲ್ಲಿ ತಂದೆ ಮಹೇಶ್ ಭಟ್ ಜೊತೆ ಶೂಟಿಂಗ್ ಸೆಟ್​​ಗೆ ಹೋಗುತ್ತಿದ್ದ ಆಲಿಯಾ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಿನಿಮಾ ಚಿತ್ರೀಕರಣವೊಂದರಲ್ಲಿ ಮೊದಲ ಬಾರಿಗೆ ರಣಬೀರ್ ಕಪೂರ್​​ ಅವರನ್ನು ಮೊದಲ ಬಾರಿಗೆ ನೇರವಾಗಿ ಭೇಟಿ ಆಗಿದ್ದರಂತೆ. ಆ ಸಿನಿಮಾಗೆ ರಣಬೀರ್ ಕಪೂರ್ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದರಂತೆ. ಆಗ ಇಬ್ಬರಿಗೂ ಪರಿಚಯ ಇದ್ದರೂ, 'ಬ್ರಹ್ಮಾಸ್ತ್ರ' ಸಿನಿಮಾ ಸಮಯದಲ್ಲಿ ಇಬ್ಬರಿಗೂ ಲವ್ ಆಗಿದೆ. 3 ವರ್ಷ ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ಏಪ್ರಿಲ್ 14 ರಂದು ಮುಂಬೈನಲ್ಲಿ ಆಪ್ತರ ಸಮ್ಮುಖದಲ್ಲಿ ಕೈ ಹಿಡಿದಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ