logo
ಕನ್ನಡ ಸುದ್ದಿ  /  ಮನರಂಜನೆ  /  ಮೊದಲ ಪತ್ನಿ ಜತೆ ಆಮೀರ್‌ ಖಾನ್‌ ಪ್ರತ್ಯಕ್ಷ; ಅಮ್ಮ ಮಗ ಎಂದು ಟ್ರೋಲ್‌ ಮಾಡಿದ ನೆಟ್ಟಿಗರು Video

ಮೊದಲ ಪತ್ನಿ ಜತೆ ಆಮೀರ್‌ ಖಾನ್‌ ಪ್ರತ್ಯಕ್ಷ; ಅಮ್ಮ ಮಗ ಎಂದು ಟ್ರೋಲ್‌ ಮಾಡಿದ ನೆಟ್ಟಿಗರು VIDEO

Sep 14, 2023 03:30 PM IST

ಮೊದಲ ಪತ್ನಿ ಜತೆ ಆಮೀರ್‌ ಖಾನ್‌ ಪ್ರತ್ಯಕ್ಷ; ಅಮ್ಮ ಮಗ ಎಂದು ಟ್ರೋಲ್‌ ಮಾಡಿದ ನೆಟ್ಟಿಗರು

    • ಆಮೀರ್‌ ಖಾನ್‌ ಮತ್ತು ಮೊದಲ ಪತ್ನಿ ರೀನಾ ದತ್ತ ಒಟ್ಟಿಗಿರುವ ಫೋಟೋ ಮತ್ತು ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಜೋಡಿಯನ್ನು ನೋಡಿದ ನೆಟ್ಟಿಗರು, ಅಮ್ಮ ಮಗ ಎಂದು ಟ್ರೋಲ್‌ ಮಾಡುತ್ತಿದ್ದಾರೆ.  
ಮೊದಲ ಪತ್ನಿ ಜತೆ ಆಮೀರ್‌ ಖಾನ್‌ ಪ್ರತ್ಯಕ್ಷ; ಅಮ್ಮ ಮಗ ಎಂದು ಟ್ರೋಲ್‌ ಮಾಡಿದ ನೆಟ್ಟಿಗರು
ಮೊದಲ ಪತ್ನಿ ಜತೆ ಆಮೀರ್‌ ಖಾನ್‌ ಪ್ರತ್ಯಕ್ಷ; ಅಮ್ಮ ಮಗ ಎಂದು ಟ್ರೋಲ್‌ ಮಾಡಿದ ನೆಟ್ಟಿಗರು

Aamir Khan: ಸಿನಿಮಾ ಮಂದಿಯ ಸಿನಿಮಾ ವಿಚಾರದ ಜತೆಗೆ ಅವರ ವೈಯಕ್ತಿಕ ವಿಚಾರಗಳೇ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಮುನ್ನೆಲೆಗೆ ಬರುತ್ತಿರುತ್ತದೆ. ಟ್ರೋಲ್‌ ರೀತಿಯಲ್ಲಾಗಲಿ, ಮೆಚ್ಚುಗೆಯ ರೀತಿಯಲ್ಲಾಗಲೀ ಒಟ್ಟಿನಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಬಾಲಿವುಡ್‌ನ ಮಿಸ್ಟರ್‌ ಫರ್ಫೆಕ್ಷನಿಸ್ಟ್‌ ಎಂದೇ ಕರೆಸಿಕೊಳ್ಳುವ ಆಮೀರ್‌ ಖಾನ್‌, ಇದೀಗ ಪತ್ನಿ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಕ್ಕೆ ಟ್ರೋಲ್‌ ಆಗಿದ್ದಾರೆ. ಜಾಲತಾಣದಲ್ಲಿ ಈ ಜೋಡಿಯ ಫೋಟೋ ವೈರಲ್‌ ಆಗುತ್ತಿದ್ದಂತೆಮ ಬಗೆಬಗೆ ಕಾಮೆಂಟ್‌ಗಳು ಹರಿದು ಬಂದಿವೆ.

ಟ್ರೆಂಡಿಂಗ್​ ಸುದ್ದಿ

ಶಿಳ್ಳೆ, ಕೇಕೆ, ಚಪ್ಪಾಳೆ.. ಬೆಳ್ಳಿತೆರೆ ಮೇಲೆ ಮತ್ತೆ ಮಿನುಗಿದ ಕಲ್ಟ್‌ ಕ್ಲಾಸಿಕ್‌ A ಚಿತ್ರ; ಥಿಯೇಟರ್‌ ಮುಂದೆ ಹಬ್ಬ ಮಾಡಿದ ಉಪ್ಪಿ ಫ್ಯಾನ್ಸ್

ನಮ್ಮ ಚಿತ್ರದ ಹೆಸರು ದಿ ಜಡ್ಜ್‌ಮೆಂಟ್‌ ಆಗಿರಬಹುದು, ಪ್ರೇಕ್ಷಕರು ಕೊಡುವ ಜಡ್ಜ್‌ಮೆಂಟೇ ನಮಗೆ ಅಂತಿಮ; ರವಿಚಂದ್ರನ್

ಕೊನೆಗೂ ಮದುವೆ ಮುನ್ಸೂಚನೆ ನೀಡಿ, ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಡಾರ್ಲಿಂಗ್‌ ಪ್ರಭಾಸ್‌; ಅಷ್ಟಕ್ಕೂ ಹುಡುಗಿ ಯಾರಿರಬಹುದು?

ಮೋದಿ ಕೆಲಸ ಹೊಗಳುವಂತೆ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ 10 ಕೋಟಿ ರೂ!? ‘ಇನ್ನೊಬ್ಬಳು ಕಂಗನಾ ಬಂದಳು’ ಎನ್ನುತ್ತ ನಟಿಯನ್ನು ಝಾಡಿಸಿದ ನೆಟ್ಟಿಗರು

ನಟ ಆಮೀರ್‌ ಖಾನ್‌ಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿ ರೀನಾ ದತ್ತ ಜತೆಗೆ ಇದೀಗ ಆಮೀರ್‌ ಫೋಟೋಕ್ಕೆ ಪೋಸ್‌ ನೀಡಿದ್ದಾರೆ. ಹೀಗೆ ನಗು ನಗುತ್ತ ಫೋಟೋಗ್ರಾಫರ್ಸ್‌ಗೆ ಪೋಸ್‌ ನೀಡಿದ್ದೇ, ನೆಟ್ಟಿಗ ವಲಯದಲ್ಲಿ ಎಲ್ಲರೂ ಈ ಜೋಡಿಯ ಕಾಲೆಳೆಯುತ್ತಿದ್ದಾರೆ. ಅಂದಹಾಗೆ, ರೀನಾ ದತ್ತ ಮತ್ತು ಆಮೀರ್‌ ಖಾನ್‌ ಜೋಡಿ 1986ರಲ್ಲಿ ಮದುವೆಯಾಗಿದ್ದಾರೆ. ಈ ಜೋಡಿಗೆ ಮಗ ಜುನೈದ್‌ ಖಾನ್‌ ಮತ್ತು ಇರಾ ಖಾನ್‌ ಎಂಬಿಬ್ಬರು ಮಕ್ಕಳಿದ್ದಾರೆ. 16 ವರ್ಷಗಳ ಸುಖ ಜೀವನ ನಡೆಸಿದ ಈ ಜೋಡಿ 2002ರಲ್ಲಿ ವಿಚ್ಛೇದನ ಪಡೆದು ದೂರವಾಗಿದ್ದರು.

ಅದಾದ ಬಳಿಕ ಅಂದರೆ 2005ರಲ್ಲಿ ಕಿರಣ್‌ ರಾವ್‌ ಜತೆಗೆ ಆಮೀರ್‌ ಖಾನ್‌ ಮತ್ತೊಂದು ಮದುವೆಯಾದರು. ಈ ಜೋಡಿಗೆ ಆಜಾದ್‌ ಖಾನ್‌ ಎಂಬ ಓರ್ವ ಪುತ್ರನಿದ್ದಾನೆ. ಕಿರಣ್‌ ಅವರ ಜತೆಗೂ ಒಂದಷ್ಟು ವರ್ಷ ಸಂಸಾರ ನಡೆಸಿದ ಆಮೀರ್‌ ಖಾನ್‌, 2021ರಲ್ಲಿ ಇಬ್ಬರೂ ಸಹಮತಿಯ ಮೇರೆಗೆ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಹಾಗಂತ ಇಬ್ಬರ ಪತ್ನಿಯರ ಜತೆಗೆ ಆಮೀರ್‌ಗೆ ಮುನಿಸಿಲ್ಲ. ಪತ್ನಿಯರು ಎದುರಿಗೆ ಸಿಕ್ಕರೆ ಅಷ್ಟೇ ಖುಷಿಯಿಂದಲೇ ಅವರನ್ನು ಮಾತನಾಡಿಸುತ್ತಾರೆ.

ಅದಕ್ಕೆ ಉದಾಹರಣೆ ಎಂಬಂತೆ ಇದೀಗ ಕಾರ್ಯಕ್ರಮವೊಂದರಲ್ಲಿ ಮೊದಲ ಪತ್ನಿ ರೀನಾ ದತ್ತ ಜತೆಗೆ ಆಮೀರ್‌ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಒಂದಷ್ಟು ಹೊತ್ತು ಮಾತನಾಡಿದ್ದಾರೆ. ಉಭಯಕುಶಲೋಪರಿ ವಿಚಾರಿಸಿದ್ದಾರೆ. ಬಳಿಕ ಫೋಟೋಗ್ರಾಫರ್‌ಗೂ ಪೋಸ್‌ ಕೊಟ್ಟಿದ್ದಾರೆ. ಆ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಇವರು ಪತಿ ಪತ್ನಿ ರೀತಿ ಕಾಣುತ್ತಿಲ್ಲವಲ್ಲ ಎಂದು ಕೆಲವರು ಕಾಮೆಂಟ್‌ ಮಾಡಿದರೆ, ಇನ್ನು ಕೆಲವರು ಅಮ್ಮ ಮಗನ ರೀತಿ ಕಾಣುತ್ತಿದ್ದಾರೆ ಎಂದಿದ್ದಾರೆ.

ಅಮೀರ್ ನೀಲಿ ಕುರ್ತಾ ಮತ್ತು ಜೀನ್ಸ್ ಧರಿಸಿದ್ದರೆ, ರೀನಾ ನೇರಳೆ ಕುರ್ತಾ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದರು. ಫೋಟೋಗ್ರಾಫರ್‌ಗೆ ಪೋಸ್ ಕೊಟ್ಟ ನಂತರ ಇಬ್ಬರೂ ಒಂದೇ ಕಾರಿನಲ್ಲಿ ಅಲ್ಲಿಂದ ಹೊರಟಿದ್ದಾರೆ. ಇನ್ನು ಕಳೆದ ತಿಂಗಳಷ್ಟೇ ನಿರ್ಮಾಪಕ ಮನ್ಸೂರ್ ಖಾನ್ ಅವರ 'ಬುಕ್ ಒನ್: ದಿ ಸ್ಟೋರಿ ಆಫ್ ಅಲ್ಟಿಮೇಟ್ ಮಿಥ್' ಬಿಡುಗಡೆ ಆಗಿತ್ತು. ಆ ಕಾರ್ಯಕ್ರಮದಲ್ಲಿ ಅಮೀರ್ ಮತ್ತವರ ಮಾಜಿ ಪತ್ನಿಯರಾದ ರೀನಾ ಮತ್ತು ಕಿರಣ್ ರಾವ್‌ ಸಹ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಮಗ ಜುನೈದ್ ಕೂಡ ಉಪಸ್ಥಿತರಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ