logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರ್ವ ಚೌತ್‌: ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ ವ್ರತ; ಕತ್ರಿನಾ ಕೈಫ್‌, ಪರಿಣಿತಿ ಚೋಪ್ರಾ ಸೇರಿದಂತೆ ಬಾಲಿವುಡ್‌ ನಟಿಯರ ಕರಕ ಚತುರ್ಥಿ ಸಂಭ್ರಮ

ಕರ್ವ ಚೌತ್‌: ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ ವ್ರತ; ಕತ್ರಿನಾ ಕೈಫ್‌, ಪರಿಣಿತಿ ಚೋಪ್ರಾ ಸೇರಿದಂತೆ ಬಾಲಿವುಡ್‌ ನಟಿಯರ ಕರಕ ಚತುರ್ಥಿ ಸಂಭ್ರಮ

Nov 02, 2023 09:58 AM IST

Karwa Chauth 2023: ಉತ್ತರ ಭಾರತದ ಮಹಿಳೆಯರು ಹೆಚ್ಚಾಗಿ ಆಚರಿಸುವ ಕರ್ವ ಚೌತ್‌ ಅಥವಾ ಕರಕ ಚತುರ್ಥಿಯನ್ನು ಹಲವು ಬಾಲಿವುಡ್‌ ನಟಿಯರು ಸಂಭ್ರಮದಿಂದ ಆಚರಿಸಿದ್ದಾರೆ. ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ ಕೈಗೊಳ್ಳುವ ಈ ಆಚರಣೆಯಲ್ಲಿ ಪರಿಣಿತಿ ಚೋಪ್ರಾ, ಕತ್ರಿನಾ ಕೈಫ್‌ ಸೇರಿದಂತೆ ಹಲವು ನಟಿಯರು ಶ್ರದ್ಧೆಯಿಂದ ಪಾಲ್ಗೊಂಡಿದ್ದಾರೆ.

  • Karwa Chauth 2023: ಉತ್ತರ ಭಾರತದ ಮಹಿಳೆಯರು ಹೆಚ್ಚಾಗಿ ಆಚರಿಸುವ ಕರ್ವ ಚೌತ್‌ ಅಥವಾ ಕರಕ ಚತುರ್ಥಿಯನ್ನು ಹಲವು ಬಾಲಿವುಡ್‌ ನಟಿಯರು ಸಂಭ್ರಮದಿಂದ ಆಚರಿಸಿದ್ದಾರೆ. ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ ಕೈಗೊಳ್ಳುವ ಈ ಆಚರಣೆಯಲ್ಲಿ ಪರಿಣಿತಿ ಚೋಪ್ರಾ, ಕತ್ರಿನಾ ಕೈಫ್‌ ಸೇರಿದಂತೆ ಹಲವು ನಟಿಯರು ಶ್ರದ್ಧೆಯಿಂದ ಪಾಲ್ಗೊಂಡಿದ್ದಾರೆ.
ಕರ್ವಾ ಚೌತ್ ಭಾರತದಾದ್ಯಂತ (ವಿಶೇಷವಾಗಿ ಉತ್ತರ ಭಾರತೀಯರು) ವಿವಾಹಿತ ಮಹಿಳೆಯರು ಆಚರಿಸುವ ಹಿಂದೂ ಹಬ್ಬ. ಈ ಶುಭ ದಿನದಂದು ವಿವಾಹಿತ ಮಹಿಳೆಯರು ತಮ್ಮ ಗಂಡನ ಆರೋಗ್ಯ, ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿ ಸೂರ್ಯೋದಯದಿಂದ ಚಂದ್ರೋದಯದವರೆಗೆ ಒಂದು ದಿನದ ಉಪವಾಸ ವ್ರತ ಆಚರಿಸುತ್ತಾರೆ. ಹಲವು ಬಾಲಿವುಡ್‌ ನಟಿಯರು ಕರ್ವ ಚೌತ್‌ ಆಚರಣೆ ಮಾಡಿದ್ದು, ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
(1 / 5)
ಕರ್ವಾ ಚೌತ್ ಭಾರತದಾದ್ಯಂತ (ವಿಶೇಷವಾಗಿ ಉತ್ತರ ಭಾರತೀಯರು) ವಿವಾಹಿತ ಮಹಿಳೆಯರು ಆಚರಿಸುವ ಹಿಂದೂ ಹಬ್ಬ. ಈ ಶುಭ ದಿನದಂದು ವಿವಾಹಿತ ಮಹಿಳೆಯರು ತಮ್ಮ ಗಂಡನ ಆರೋಗ್ಯ, ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿ ಸೂರ್ಯೋದಯದಿಂದ ಚಂದ್ರೋದಯದವರೆಗೆ ಒಂದು ದಿನದ ಉಪವಾಸ ವ್ರತ ಆಚರಿಸುತ್ತಾರೆ. ಹಲವು ಬಾಲಿವುಡ್‌ ನಟಿಯರು ಕರ್ವ ಚೌತ್‌ ಆಚರಣೆ ಮಾಡಿದ್ದು, ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.(Instagram)
ಕತ್ರಿನಾ ಕೈಫ್‌ ಅವರು ತಮ್ಮ ಅಭಿಮಾನಿಗಳಿಗೆ ಕರ್ವ ಚೌತ್ ಶುಭಾಶಯ ತಿಳಿಸಿದ್ದಾರೆ. ತಾವು ಆಚರಿಸಿದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ತಮ್ಮ ಪತಿ ವಿಕ್ಕಿ ಕೌಶಲ ಮತ್ತು ಅತ್ತೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
(2 / 5)
ಕತ್ರಿನಾ ಕೈಫ್‌ ಅವರು ತಮ್ಮ ಅಭಿಮಾನಿಗಳಿಗೆ ಕರ್ವ ಚೌತ್ ಶುಭಾಶಯ ತಿಳಿಸಿದ್ದಾರೆ. ತಾವು ಆಚರಿಸಿದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ತಮ್ಮ ಪತಿ ವಿಕ್ಕಿ ಕೌಶಲ ಮತ್ತು ಅತ್ತೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.(Instagram/@katrinakaif)
ಇತ್ತೀಚೆಗೆ ಆಮ್‌ ಆದ್ಮಿ ಮುಖಂಡ ರಾಘವ್‌ ಚಡ್ಡಾ ಅವರನ್ನು ವಿವಾಹವಾಗಿರುವ ಪರಿಣಿತಿ ಚೋಪ್ರಾ ಅವರು ತಮ್ಮ ಮೊದಲ ಕರ್ವ ಚೌತ್‌ ಆಚರಣೆ ಮಾಡಿದ್ದಾರೆ. ಕರಕ ಚತುರ್ಥಿ ಆಚರಣೆಯ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನನ್ನ ಪ್ರೀತಿಗೆ ಕರ್ವ ಚೌತ್‌ನ ಮೊದಲ ಶುಭಾಶಯ ಎಂದು ಬರೆದಿದ್ದಾರೆ. 
(3 / 5)
ಇತ್ತೀಚೆಗೆ ಆಮ್‌ ಆದ್ಮಿ ಮುಖಂಡ ರಾಘವ್‌ ಚಡ್ಡಾ ಅವರನ್ನು ವಿವಾಹವಾಗಿರುವ ಪರಿಣಿತಿ ಚೋಪ್ರಾ ಅವರು ತಮ್ಮ ಮೊದಲ ಕರ್ವ ಚೌತ್‌ ಆಚರಣೆ ಮಾಡಿದ್ದಾರೆ. ಕರಕ ಚತುರ್ಥಿ ಆಚರಣೆಯ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನನ್ನ ಪ್ರೀತಿಗೆ ಕರ್ವ ಚೌತ್‌ನ ಮೊದಲ ಶುಭಾಶಯ ಎಂದು ಬರೆದಿದ್ದಾರೆ. (Instagram/@parineetichopra)
ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಅವರು ಕರ್ವ ಚೌತ್‌ ಅನ್ನು ಸುನಿತಾ ಕಪೂರ್‌ ಮನೆಯಲ್ಲಿ ಆಚರಿಸಿದ್ದಾರೆ. ಈ ಕುರಿತಾದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
(4 / 5)
ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಅವರು ಕರ್ವ ಚೌತ್‌ ಅನ್ನು ಸುನಿತಾ ಕಪೂರ್‌ ಮನೆಯಲ್ಲಿ ಆಚರಿಸಿದ್ದಾರೆ. ಈ ಕುರಿತಾದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.(Instagram/@kapoor.sunita)
ಸುನೀತಾ ಕಪೂರ್ ಅವರು ತಮ್ಮ ಮನೆಯಲ್ಲಿ ಕರ್ವ ಚೌತ್ ಹಬ್ಬ ಮಾಡಿದ್ದರು. ಶಿಲಾ ಶೆಟ್ಟಿ, ರವೀನಾ ಟಂಡನ್ ಮತ್ತು ಮೀರಾ ಕಪೂರ್ ಮುಂತಾದ ಹಲವು ಸೆಲೆಬ್ರಿಟಿಗಳು ಪಾಲ್ಗೊಂಡರು.
(5 / 5)
ಸುನೀತಾ ಕಪೂರ್ ಅವರು ತಮ್ಮ ಮನೆಯಲ್ಲಿ ಕರ್ವ ಚೌತ್ ಹಬ್ಬ ಮಾಡಿದ್ದರು. ಶಿಲಾ ಶೆಟ್ಟಿ, ರವೀನಾ ಟಂಡನ್ ಮತ್ತು ಮೀರಾ ಕಪೂರ್ ಮುಂತಾದ ಹಲವು ಸೆಲೆಬ್ರಿಟಿಗಳು ಪಾಲ್ಗೊಂಡರು.(Instagram/@kapoor.sunita)

    ಹಂಚಿಕೊಳ್ಳಲು ಲೇಖನಗಳು