logo
ಕನ್ನಡ ಸುದ್ದಿ  /  ಮನರಂಜನೆ  /  Deepika Padukone: ಹಿಲ್ಟನ್‌ಗೆ ಜಾಗತಿಕ ಬ್ರಾಂಡ್‌ ರಾಯಭಾರಿಯಾದ ದೀಪಿಕಾ ಪಡುಕೋಣೆ, ಬಾಲಿವುಡ್‌ ನಟಿಯ ಖ್ಯಾತಿ ಜಗದಗಲ

Deepika Padukone: ಹಿಲ್ಟನ್‌ಗೆ ಜಾಗತಿಕ ಬ್ರಾಂಡ್‌ ರಾಯಭಾರಿಯಾದ ದೀಪಿಕಾ ಪಡುಕೋಣೆ, ಬಾಲಿವುಡ್‌ ನಟಿಯ ಖ್ಯಾತಿ ಜಗದಗಲ

Praveen Chandra B HT Kannada

Feb 15, 2024 02:43 PM IST

ದೀಪಿಕಾ ಪಡುಕೋಣೆ (File Photo/ AFP)

  • Deepika Padukone: ಕರ್ನಾಟಕ ಮೂಲದ ಬಾಲಿವುಡ್‌ ಚೆಲುವೆ ದೀಪಿಕಾ ಪಡುಕೋಣೆ ಇದೀಗ ಹಿಲ್ಟನ್‌ ಹೋಟೆಲ್‌ನ ಜಾಗತಿಕ ಬ್ರಾಂಡ್‌ ಅಂಬಾಸಡರ್‌ ಆಗಿ ಆಯ್ಕೆಯಾಗಿದ್ದಾರೆ. ಅಮೆರಿಕದ ಆತಿಥ್ಯ ವಲಯದ ಬೃಹತ್‌ ಕಂಪನಿಯ ರಾಯಭಾರಿಯಾಗಿ ಇವರು ಆಯ್ಕೆಯಾಗಿದ್ದಾರೆ.

ದೀಪಿಕಾ ಪಡುಕೋಣೆ (File Photo/ AFP)
ದೀಪಿಕಾ ಪಡುಕೋಣೆ (File Photo/ AFP)

ಕರ್ನಾಟಕ ಕರಾವಳಿ ಮೂಲದ ಜನಪ್ರಿಯ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಇದೀಗ ಹಿಲ್ಟನ್‌ ಹೋಟೆಲ್ಸ್‌ ಕಂಪನಿಯ ಜಾಗತಿಕ ಬ್ರಾಂಡ್‌ ಅಂಬಾಸಡರ್‌ ಆಗಿ ಆಯ್ಕೆಯಾಗಿದ್ದಾರೆ. ಅಮೆರಿಕದ ಬಹುರಾಷ್ಟ್ರೀಯ ಆತಿಥ್ಯ ವಲಯದ ಕಂಪನಿಯನ್ನು ದೀಪಿಕಾ ಪಡುಕೋಣೆ ಪ್ರಮೋಷನ್‌ ಮಾಡಲಿದ್ದಾರೆ ಎಂದು ಹಿಲ್ಟನ್‌ ಕಂಪನಿಯು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿದೆ. "ದೀಪಿಕಾ ಪಡುಕೋಣೆಯು ಆಧುನಿಕ ಭಾರತದ ಸ್ಪೂರ್ತಿ ಮತ್ತು ಭಾರತೀಯ ಪ್ರವಾಸಿಗರ ಆಕಾಂಕ್ಷೆಯನ್ನು ಪ್ರತಿನಿಧಿಸುತ್ತಾರೆ" ಎಂದು ಕಂಪನಿ ತಿಳಿಸಿದೆ ಎಂದು ಮೀಡಿಯಾನ್ಯೂಸ್‌4ಯು ವರದಿಯಲ್ಲಿ ತಿಳಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

Aadujeevitham OTT: ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಆಡುಜೀವಿತಂ ಸಿನಿಮಾವನ್ನು ಮನೆಯಲ್ಲೇ ನೋಡಿ, ಇಲ್ಲಿದೆ ಒಟಿಟಿ ಬಿಡುಗಡೆ ವಿವರ

ಭಾರತದಲ್ಲಿ ಹಿಲ್ಟನ್‌ ಹೋಟೆಲ್‌ಗಳನ್ನು ಪ್ರಚಾರ ಮಾಡುವ ಸಲುವಾಗಿ ದೀಪಿಕಾ ಪಡುಕೋಣೆ ಅವರನ್ನು ಬ್ರಾಂಡ್‌ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಈ ಕುರಿತು ದೀಪಿಕಾ ಪಡುಕೋಣೆ ಖುಷಿಯಾಗಿದ್ದಾರೆ. "ಹಿಲ್ಟನ್‌ನಂತಹ ಜಾಗತಿಕ ಬ್ರಾಂಡ್‌ ಜತೆ ಪಾಲುದಾರಿಕೆ ಪಡೆದಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ನಮ್ಮ ಪೀಳಿಗೆ ತುಂಬಾ ಕಷ್ಟಪಡುತ್ತಿದೆ. ಹಿಲ್ಟನ್‌ನಲ್ಲಿ ನಾನು ಇಷ್ಟಪಡುವ ಪ್ರಮುಖ ಅಂಶ ಅದು ಪ್ರವಾಸಿಗರಿಗೆ ಉಳಿದುಕೊಳ್ಳುವ ವಿಷಯದ ಮಹತ್ವವನ್ನು ಅರಿತಿರುವುದು. ಪ್ರವಾಸಿಗರ ಅಗತ್ಯಗಳನ್ನು ನಿರೀಕ್ಷಿಸಿ ಸೇವೆ ಸಲ್ಲಿಸುತ್ತದೆ. ಇದೀಗ ಹಿಲ್ಟನ್‌ ಜತೆ ಪಾಲುದಾರಿಕೆ ಮಾಡಿಕೊಂಡಿದ್ದು, ಒಳ್ಳೆಯ ನೆನಪುಗಳನ್ನು ನನ್ನದಾಗಿಸಿಕೊಳ್ಳಲು ಮುಂದಾಗಿದ್ದೇನೆ" ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.

ದೀಪಿಕಾ ಪಡುಕೋಣೆ ಅವರ ಇತ್ತೀಚಿನ ಪ್ರಾಜೆಕ್ಟ್‌

ಇತ್ತೀಚೆಗೆ ಬಿಡುಗಡೆಯಾದ ಫೈಟರ್‌ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಫೈಟರ್ ಚಿತ್ರದಲ್ಲಿ ಹೃತಿಕ್‌ ರೋಷನ್‌ ಜತೆಗೆ ದೀಪಿಕಾ ಪಡುಕೋಣೆ ತೆರೆ ಹಂಚಿಕೊಂಡಿದ್ದಾರೆ. ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಮತ್ತು ಅಕ್ಷಯ್ ಒಬೆರಾಯ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ಸ್ಕ್ವಾಡ್ರನ್ ಲೀಡರ್ ಶಂಶೇರ್ ಪಠಾನಿಯಾ ಅಲಿಯಾಸ್ ಪ್ಯಾಟಿಯಾಗಿ, ದೀಪಿಕಾ ಸ್ಕ್ವಾಡ್ರನ್ ಲೀಡರ್ ಮಿನಾಲ್ ರಾಥೋಡ್ ಅಕಾ ಮಿನ್ನಿಯಾಗಿ ಮತ್ತು ಅನಿಲ್ ದೇಶಕ್ಕಾಗಿ ಹೋರಾಡುವ ಗ್ರೂಪ್ ಕ್ಯಾಪ್ಟನ್ ರಾಕೇಶ್ ಜೈ ಸಿಂಗ್ ಅಲಿಯಾಸ್ ರಾಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಹೃತಿಕ್ ಮತ್ತು ದೀಪಿಕಾ ಪಡುಕೋಣೆ ಪರದೆ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಫೈಟರ್‌ ಸಿನಿಮಾವು 150 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿದೆ. ಜಾಗತಿಕವಾಗಿ 300 ಕೋಟಿ ರೂ.ಗಿಂತಲೂ ಹೆಚ್ಚು ಗಳಿಕೆ ಮಾಡಿದೆ.

ದೀಪಿಕಾ ಪಡುಕೋಣೆ ಡಯೆಟ್‌ ಹೇಗಿರುತ್ತದೆ?

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರ ಅಂದದ ಮೈಕಟ್ಟು, ಆರೋಗ್ಯದ ಗುಟ್ಟಿನ ಕುರಿತು ಹೆಚ್ಚಿನವರಿಗೆ ಕುತೂಹಲ ಇರುತ್ತದೆ. ಇವರ ಇಂತಹ ಸೌಂದರ್ಯ ಮತ್ತು ವ್ಯಕ್ತಿತ್ವವು ಹಲವು ಬ್ರಾಂಡ್‌ಗಳನ್ನು ಸೆಳೆಯುತ್ತದೆ. ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರ ಡಯೆಟ್‌ ಪ್ಲ್ಯಾನ್‌ ಏನು? ಅವರು ಪ್ರತಿನಿತ್ಯ ಏನು ಆಹಾರ ಸೇವಿಸ್ತಾರೆ. ಏನು ಆಹಾರ ಸೇವಿಸುವುದಿಲ್ಲ. ತೂಕ ಇಳಿಕೆಗೆ ಅವರು ನಡೆಸುವ ಕ್ರಮಗಳೇನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಈಗಾಗಲೇ ದೊರಕಿದೆ. ಬಾಲಿವುಡ್‌ನ ಜನಪ್ರಿಯ ನಟಿ, ಕರ್ನಾಟಕದ ಕರಾವಳಿ ಮೂಲದ ಬೆಡಗಿ ದೀಪಿಕಾ ಪಡುಕೋಣೆ ಅವರು ಹೊಟ್ಟೆ ತುಂಬಾ ತಿನ್ನೋ ಜಾತಿಗೆ ಸೇರಿಲ್ಲ. ಅಂದರೆ, ಹೊಟ್ಟೆ ಬಿರಿಯುವಷ್ಟು ಊಟ ಮಾಡುವುದಿಲ್ಲ. ಪ್ರತಿ ಎರಡು ಗಂಟೆಗೊಮ್ಮೆ ಏನಾದರೂ ತುಸು ತಿನ್ನುವ ಅಭ್ಯಾಸ ಅವರಿಗಿದೆ. ಅವರ ಡಯೆಟ್‌ ಕುರಿತು ಸಂಪೂರ್ಣ ವಿವರ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ