logo
ಕನ್ನಡ ಸುದ್ದಿ  /  ಮನರಂಜನೆ  /  ಹಲವು ಬಾರಿ ಗರ್ಭಪಾತ, ಗರ್ಭಿಣಿಯಾಗುವುದು ತುಂಬಾ ಕಷ್ಟ; ತಾಯ್ತನದ ದುಸ್ತರ ಪ್ರಯಾಣ ನೆನಪಿಸಿಕೊಂಡ ಅಮಿರ್‌ ಖಾನ್‌ ಮಾಜಿ ಪತ್ನಿ ಕಿರಣ್‌ ರಾವ್‌

ಹಲವು ಬಾರಿ ಗರ್ಭಪಾತ, ಗರ್ಭಿಣಿಯಾಗುವುದು ತುಂಬಾ ಕಷ್ಟ; ತಾಯ್ತನದ ದುಸ್ತರ ಪ್ರಯಾಣ ನೆನಪಿಸಿಕೊಂಡ ಅಮಿರ್‌ ಖಾನ್‌ ಮಾಜಿ ಪತ್ನಿ ಕಿರಣ್‌ ರಾವ್‌

Praveen Chandra B HT Kannada

Apr 19, 2024 03:26 PM IST

ಅಮಿರ್‌ ಖಾನ್‌, ಕಿರಣ್‌ ರಾವ್‌, ಮಗ ಅಜಾದ್. (File Photo)

    • ಅಮಿರ್‌ ಖಾನ್‌ ಮಾಜಿ ಪತ್ನಿ ಕಿರಣ್‌ ರಾವ್‌ ಅವರು ತಮ್ಮ ತಾಯ್ತನದ ಪ್ರಯಾಣವನ್ನು ನೆನಪಿಸಿಕೊಂಡಿದ್ದಾರೆ. ಅಜಾದ್‌ನನ್ನು ಬಾಡಿಗೆ ತಾಯ್ತನದ ಮೂಲಕ ಪಡೆಯುವ ಮೊದಲು ನಾನು ಹಲವು ಬಾರಿ ಮಿಸ್‌ಕ್ಯಾರೇಜ್‌ಗೆ ಒಳಗಾಗಿದ್ದೆ ಎಂದು ಹೇಳಿದ್ದಾರೆ.
ಅಮಿರ್‌ ಖಾನ್‌, ಕಿರಣ್‌ ರಾವ್‌, ಮಗ ಅಜಾದ್. (File Photo)
ಅಮಿರ್‌ ಖಾನ್‌, ಕಿರಣ್‌ ರಾವ್‌, ಮಗ ಅಜಾದ್. (File Photo)

ಬೆಂಗಳೂರು: ಅಮಿರ್‌ ಖಾನ್‌ ಮಾಜಿ ಪತ್ನಿ ಕಿರಣ್‌ ರಾವ್‌ ಇತ್ತೀಚೆಗೆ ತನ್ನ ಎರಡನೇ ನಿರ್ದೇಶನದ ಸಿನಿಮಾದ ಮೂಲಕ ಕಮ್‌ಬ್ಯಾಕ್‌ ಮಾಡಿದ್ದರು. ಲಪಟಾ ಲೇಡಿಸ್‌ ಸಿನಿಮಾದ ಕುರಿತು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ವಿಶೇಷವಾಗಿ ಈ ಸಿನಿಮಾದಲ್ಲಿ ಹೊಸ ಕಲಾವಿದರು ನಟಿಸಿದ್ದರು. ಮಗ ಅಜಾದ್‌ ಹುಟ್ಟಿದ್ದಕ್ಕೆ ಹತ್ತು ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರವಾಗಿರುವುದರ ಕುರಿತು ಯಾವುದೇ ಬೇಸರವಿಲ್ಲವೇ ಎಂಬ ಪ್ರಶ್ನೆಗೆ ಕಿರಣ್‌ ರಾವ್‌ ಉತ್ತರಿಸಿದ್ದಾರೆ. ಮಗುವನ್ನು ಹೊಂದಲು ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡುವ ಮೊದಲು ಪಟ್ಟ ಕಷ್ಟದ ಕುರಿತು ಅವರು ಮಾತನಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

‘ಪೌಡರ್‌’ ಕೊಟ್ಟು ಪವರ್‌ ಹೆಚ್ಚಿಸಲು ಹೊರಟ ಗುಲ್ಟು ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ; ನಗು ಉಕ್ಕಿಸುವ ಟೀಸರ್‌ ಬಿಡುಗಡೆ

ಶಿಳ್ಳೆ, ಕೇಕೆ, ಚಪ್ಪಾಳೆ.. ಬೆಳ್ಳಿತೆರೆ ಮೇಲೆ ಮತ್ತೆ ಮಿನುಗಿದ ಕಲ್ಟ್‌ ಕ್ಲಾಸಿಕ್‌ A ಚಿತ್ರ; ಥಿಯೇಟರ್‌ ಮುಂದೆ ಹಬ್ಬ ಮಾಡಿದ ಉಪ್ಪಿ ಫ್ಯಾನ್ಸ್

ನಮ್ಮ ಚಿತ್ರದ ಹೆಸರು ದಿ ಜಡ್ಜ್‌ಮೆಂಟ್‌ ಆಗಿರಬಹುದು, ಪ್ರೇಕ್ಷಕರು ಕೊಡುವ ಜಡ್ಜ್‌ಮೆಂಟೇ ನಮಗೆ ಅಂತಿಮ; ರವಿಚಂದ್ರನ್

ಕೊನೆಗೂ ಮದುವೆ ಮುನ್ಸೂಚನೆ ನೀಡಿ, ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಡಾರ್ಲಿಂಗ್‌ ಪ್ರಭಾಸ್‌; ಅಷ್ಟಕ್ಕೂ ಹುಡುಗಿ ಯಾರಿರಬಹುದು?

ತಾಯ್ತನದ ದುಸ್ತರ ಪ್ರಯಾಣ

ಝೂಮ್‌ ಮಾಧ್ಯಮದ ಜತೆ ಕಿರಣ್‌ ರಾವ್‌ ಮುಕ್ತವಾಗಿ ಮಾತನಾಡಿದ್ದಾರೆ. "ಮಗು ಹೊಂದಲು ತುಂಬಾ ಪ್ರಯತ್ನಿಸಿದೆವು. ಆದರೆ, ಹಲವು ಬಾರಿ ಮಿಸ್‌ಕ್ಯಾರೇಜ್‌ ಆಗಿತ್ತು. ಗರ್ಭ ನಿಲ್ಲುತ್ತಿರಲಿಲ್ಲ. ನನಗೆ ತಾಯಿಯಾಗಲು ತುಂಬಾ ಆಸೆಯಿತ್ತು" ಎಂದು ಅವರು ಹೇಳಿದ್ದಾರೆ. "ದೋಬಿ ಘಾಟ್‌ ಸಿನಿಮಾ ಮಾಡಿದ ವರ್ಷ ಮಗ ಅಜಾದ್‌ ಜನಿಸಿದ. ಮಗು ಹೊಂದಲು ತುಂಬಾ ಪ್ರಯತ್ನಿಸಿದೆವು. ಐದು ವರ್ಷಗಳಲ್ಲಿ ಹಲವು ಬಾರಿ ಗರ್ಭಪಾತವಾಯಿತು. ಸಾಕಷ್ಟು ವೈಯಕ್ತಿಕ, ದೈಹಿಕ ಆರೋಗ್ಯ ಸಮಸ್ಯೆಗಳು ಉಂಟಾದವು. ಮಗುವನ್ನು ಹೊಂದಲು ತುಂಬಾ ಕಠಿಣವಾದ ಹಾದಿಯನ್ನು ಹುಡುಕಿದೆ. ಮಗುವನ್ನು ಹೊಂದಲು ತುಂಬಾ ಉತ್ಸುಕಳಾಗಿದ್ದೆ. ಆದ್ದರಿಂದ, ಅಜಾದ್‌ ಜನಿಸಿದಾಗ ನನಗೆ ಬೇರೆ ಆಯ್ಕೆ ಬೇಕಿರಲಿಲ. ಅಜಾದ್‌ನನ್ನು ಬೆಳೆಸುವುದೇ ನನ್ನ ಪ್ರಮುಖ ನಿರ್ಧಾರವಾಗಿತ್ತು" ಎಂದು ಹೇಳಿದ್ದಾರೆ. ಈ ಮೂಲಕ ಹತ್ತು ವರ್ಷಗಳ ಕಾಲ ಚಿತ್ರರಂಗದಿಂದ ದೂರವಾಗಿರುವುದಕ್ಕೆ ಯಾವುದೇ ಬೇಸರವಾಗಿಲ್ಲ ಎಂದು ಹೇಳಿದ್ದಾರೆ.

ಅಮಿರ್‌ ಖಾನ್‌ ಮತ್ತು ಕಿರಣ್‌ ರಾವ್‌ 2021ರಲ್ಲಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದರು. ಈಗ ಇವರಿಬ್ಬರು ವಿವಾಹ ವಿಚ್ಛೇದನ ಪಡೆದಿದ್ದಾರೆ. ಅಜಾದ್‌ನ ಸಹ ಪೋಷಕರಾಗಿದ್ದಾರೆ.

"ಅಜಾದ್‌ನನ್ನು ಮಗನಾಗಿ ಪಡೆದು ನಾನು ತುಂಬಾ ಖುಷಿಪಟ್ಟೆ. ಇದು ನನ್ನ ಜೀವನದ ಅಮೂಲ್ಯ ವರ್ಷಗಳು. ಕಳೆದ ಹತ್ತು ವರ್ಷಗಳಲ್ಲಿ ಯಾವುದೇ ಸಿನಿಮಾ ಮಾಡಿಲ್ಲ ಎಂದು ಬೇಜಾರಿಲ್ಲ. ನಾನು ಈ ಹತ್ತು ವರ್ಷವನ್ನು ಖುಷಿಯಿಂದ ಕಳೆದ. ಯಾವುದೇ ಬೇಸರವಿಲ್ಲ" ಎಂದು ಅವರು ಹೇಳಿದ್ದಾರೆ.

2013ರಲ್ಲಿ ಕಿರಣ್‌ ರಾವ್‌ ಅವರು ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಳ್ಳುವ ಕುರಿತು ಮಾಹಿತಿ ನೀಡಿದ್ದಾರೆ. "ಇದು ನನ್ನ ವೈಯಕ್ತಿಕ ಸುದ್ದಿ. ಸ್ವಾಭಾವಿಕವಾಗಿ ಮಗುವನ್ನು ಪಡೆಯಲು ಸಾಧ್ಯವಿಲ್ಲದೆ ಇರುವವರು ಇನ್ನೊಂದು ವಿಧಾನವನ್ನು ಆಯ್ಕೆ ಮಾಡಿಕೊಳ್ಳುವ ಕುರಿತು ಮಾತನಾಡಲು ಬಯಸುವುದಿಲ್ಲ. ಸಾರ್ವಜನಿಕರ ಗಮನದಲ್ಲಿರುವ ನಾವು ಈ ಸುದ್ದಿಯನ್ನು ಮುಚ್ಚಿಡುವುದಿಲ್ಲ. ನಮ್ಮ ನಿರ್ಧಾರದ ಬಗ್ಗೆ ಯಾವುದೇ ಬೇರೆ ಭಾವನೆ ಹೊಂದಿಲ್ಲ. ಈ ಕುರಿತು ಮುಕ್ತವಾಗಿ ಮಾತನಾಡಲು ನಿರ್ಧರಿಸಿದ್ದೇವೆ. ನಮ್ಮ ಅನುಭವ ತಿಳಿದುಕೊಂಡು ಜನರಿಗೆ ಉಪಯೋಗವೂ ಆಗಬಹುದು" ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಕಿರಣ್‌ ರಾವ್‌ ಹೇಳಿದ್ದರು.

ಲಪಟಾ ಲೇಡಿಸ್‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಈ ಸಿನಿಮಾ ಸಾಧಾರಣ ಕಲೆಕ್ಷನ್‌ ಮಾಡಿದ್ದರೂ ವೀಕ್ಷಕರಿಂದ ಉತ್ತಮ ಅಭಿಪ್ರಾಯ ಪಡೆದುಕೊಂಡಿತ್ತು. ಈ ಸಿನಿಮಾ ಟೊರೊಂಟೊ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡಿತ್ತು,

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ