logo
ಕನ್ನಡ ಸುದ್ದಿ  /  ಮನರಂಜನೆ  /  Sam Bahadur Twitter Review: ಸ್ಯಾಮ್‌ ಬಹದ್ದೂರ್‌ಗೆ ಪ್ರೇಕ್ಷಕನ ಬಹುಪರಾಕ್‌; ವಿಕ್ಕಿ ನೀವು ನಟಿಸಿಲ್ಲ, ಜೀವಿಸಿದ್ದೀರಿ..

Sam Bahadur Twitter Review: ಸ್ಯಾಮ್‌ ಬಹದ್ದೂರ್‌ಗೆ ಪ್ರೇಕ್ಷಕನ ಬಹುಪರಾಕ್‌; ವಿಕ್ಕಿ ನೀವು ನಟಿಸಿಲ್ಲ, ಜೀವಿಸಿದ್ದೀರಿ..

Dec 01, 2023 11:30 AM IST

google News

Sam Bahadur Twitter Review: ಸ್ಯಾಮ್‌ ಬಹದ್ದೂರ್‌ಗೆ ಪ್ರೇಕ್ಷಕನ ಬಹುಪರಾಕ್‌; ನೀವು ನಟಿಸಿಲ್ಲ, ಜೀವಿಸಿದ್ದೀರಿ.. ವಿಕ್ಕಿ ನಟನೆಗೆ ಮನಸೋತ ನೆಟ್ಟಿಗ

    • ನೈಜ ಘಟನೆ ಆಧರಿತ ಸ್ಯಾಮ್‌ ಬಹದ್ಧೂರ್‌ ಸಿನಿಮಾ ಇಂದು (ಡಿ.1) ಬಿಡುಗಡೆ ಆಗಿದೆ. ಭಾರತೀಯ ಸೇನಾಪಡೆಯ ಮೊದಲ ಏರ್‌ಫೀಲ್ಡ್‌ ಮಾರ್ಷಲ್ ಸ್ಯಾಮ್‌ ಮಾಣಿಕ್ಷಾ ಜೀವನ ಆಧರಿತ ಕಥೆಯೇ ಈ ಸಿನಿಮಾ. ವಿಕ್ಕಿ ಕೌಶಾಲ್‌ ಸ್ಯಾಮ್‌ ಅವರ ಪಾತ್ರದಲ್ಲಿ ನಟಿಸಿ ನೋಡುಗನಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಹೀಗಿದೆ 
Sam Bahadur Twitter Review: ಸ್ಯಾಮ್‌ ಬಹದ್ದೂರ್‌ಗೆ ಪ್ರೇಕ್ಷಕನ ಬಹುಪರಾಕ್‌; ನೀವು ನಟಿಸಿಲ್ಲ, ಜೀವಿಸಿದ್ದೀರಿ.. ವಿಕ್ಕಿ ನಟನೆಗೆ ಮನಸೋತ ನೆಟ್ಟಿಗ
Sam Bahadur Twitter Review: ಸ್ಯಾಮ್‌ ಬಹದ್ದೂರ್‌ಗೆ ಪ್ರೇಕ್ಷಕನ ಬಹುಪರಾಕ್‌; ನೀವು ನಟಿಸಿಲ್ಲ, ಜೀವಿಸಿದ್ದೀರಿ.. ವಿಕ್ಕಿ ನಟನೆಗೆ ಮನಸೋತ ನೆಟ್ಟಿಗ

Sam Bahadur Trailer: ಬಾಲಿವುಡ್‌ ನಟ ವಿಕ್ಕಿ ಕೌಶಾಲ್‌, ನಟನೆ ಜತೆಗೆ ಆಯ್ದುಕೊಳ್ಳುವ ಕಥೆಯ ವಿಚಾರವಾಗಿಯೂ ಅಷ್ಟೇ ಸೂಕ್ಷ್ಮ. ಇದೀಗ ಇದೇ ಕಲಾವಿದ ತಮ್ಮ ಸಿನಿಮಾ ವೃತ್ತಿ ಜೀವನದ ಮತ್ತೊಂದು ಅತ್ಯುತ್ತಮ ಪಾತ್ರವನ್ನು ಆವಾಹಿಸಿಕೊಂಡು ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸ್ಯಾಮ್‌ ಮಾನೆಕ್ ಷಾ, ಭಾರತೀಯ ಸೇನಾಪಡೆಯ ಮೊದಲ ಏರ್‌ಫೀಲ್ಡ್‌ ಮಾರ್ಷಲ್.‌ ಇವರ ಜೀವನ ಆಧರಿತ ಕಥೆಯೇ ಸ್ಯಾಮ್‌ ಬಹದ್ದೂರ್.‌ ಈ ಚಿತ್ರ ಇಂದು (ಡಿ. 1) ರಿಲೀಸ್‌ ಆಗಿದೆ.

ಅಪ್ಪಟ ದೇಶ ಪ್ರೇಮದ ಕಥೆಯೇ ಸ್ಯಾಮ್‌ ಬಹದ್ಧೂರ್‌. ಸುದೀರ್ಘ 40 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದುಡಿದು, ಮೊದಲ ಏರ್‌ ಫೀಲ್ಡ್‌ ಮಾರ್ಷಲ್‌ ಆಗಿದ್ದ ಸ್ಯಾಮ್‌ ಮಾನೆಕ್‌ ಷಾ ಅವರ ಸೇನಾ ದಿನಗಳು ಮತ್ತು ಪ್ರಮುಖ ಯುದ್ಧದ ಕಥಾನಕವನ್ನು ಸ್ಯಾಮ್‌ ಬಹದ್ದೂರ್‌ ಸಿನಿಮಾದಲ್ಲಿ ತೆರೆದಿಟ್ಟಿದ್ದಾರೆ ನಿರ್ದೇಶಕಿ ಮೇಘನಾ ಗುಲ್ಜಾರ್.‌ 1971ರ ಇಂಡೋ- ಪಾಕ್‌ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಇಡೀ ಸಿನಿಮಾ ತೆರೆದುಕೊಳ್ಳಲಿದೆ.

1970ರ ಕಾಲಘಟ್ಟ ಕಣ್ಣಮುಂದೆ ಬಂದತೆ ಅಷ್ಟೇ ರೋಚಕವಾಗಿ ಪ್ರತಿ ದೃಶ್ಯಗಳನ್ನು ನೋಡುಗನ ಮುಂದಿಟ್ಟಿದ್ದಾರೆ ನಿರ್ದೇಶಕಿ ಮೇಘನಾ. ಸ್ಯಾಮ್‌ ಮಾನೆಕ್‌ ಷಾ ಅವರನ್ನೇ ಆವಾಹಿಸಿಕೊಂಡಂತೆ, ವಿಕ್ಕಿ ಕೌಶಾಲ್‌ ಕಡೆಯಿಂದ ನಟನೆ ಸಂದಾಯವಾಗಿದೆ. ಮಾತನಾಡುವ ಶೈಲಿ, ಅವರ ಬಾಡಿ ಲ್ಯಾಂಗ್ವೇಜ್‌ ಎಲ್ಲವೂ ಹದವಾಗಿ ಬೆರೆತಿದೆ. ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಫಾತಿಮಾ ಸನಾ ಶೇಖ್‌, ವಿಕ್ಕಿಗೆ ಜೋಡಿಯಾಗಿ ಸಾನ್ಯಾ ಮಲ್ಹೋತ್ರಾ ಸೇರಿ ಇನ್ನೂ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿದ್ದಾರೆ.

ಸದ್ಯ ಬಿಡುಗಡೆ ಆಗಿರುವ ಈ ಚಿತ್ರಕ್ಕೆ ಪ್ರೇಕ್ಷಕನ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಪಾಸಿಟವ್‌ ಮಾತುಗಳನ್ನೇ ಹಂಚಲಾಗುತ್ತಿದೆ. ಹಾಗಾದರೆ, ಸಿನಿಮಾ ನೋಡಿದ ಪ್ರೇಕ್ಷಕನ ಟ್ವಿಟರ್‌ ವಿಮರ್ಶೆ ಇಲ್ಲಿದೆ.

ಪ್ರೇಕ್ಷಕನ ಟ್ವಿಟರ್‌ ರಿವ್ಯೂವ್ಸ್‌

"ಅಮೇಜಿಂಗ್ ವಿಕ್ಕಿ ಕೌಶಲ್. ಸ್ಯಾಮ್‌ ಬಹದ್ದೂರ್‌ ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾ ಆಗಲಿದೆ. ಸೇನೆ ಮತ್ತು ಸೇನೆಯ ಅಧಿಕಾರಿಗಳ ಕಾರ್ಯವೈಖರಿಯನ್ನು ಅಷ್ಟೇ ಚೆನ್ನಾಗಿಯೇ ಚಿತ್ರಿಸಲಾಗಿದೆ. ವಿಕ್ಕಿ ಕೌಶಾಲ್‌ ಈ ಸಿನಿಮಾದಲ್ಲಿ ನೀವು ನಟಿಸಿಲ್ಲ, ಜೀವಿಸಿದ್ದೀರಿ"

"ಅತ್ಯುತ್ತಮ.. ವಿಕ್ಕಿ ಕೌಶಲ್ ಅವರ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್‌ ಆಗಲಿದೆ. ಆರ್ಮಿ ಆಫೀಸರ್ ಪಾತ್ರದಲ್ಲಿ ವಿಕ್ಕಿ ಅದ್ಭುತ ನಟನೆ ನೀಡಿದ್ದಾರೆ"

"ವಿಕ್ಕಿ ಕೌಶಲ್ ಮತ್ತು ಮೇಘನಾ ಗುಲ್ಜಾರ್ ಜೋಡಿಯ ಬಹು ನಿರೀಕ್ಷಿತ ಸ್ಯಾಮ್ ಬಹದ್ದೂರ್ ಚಿತ್ರ ಅದ್ಭುತ ಚಿತ್ರವಾಗಿದೆ. ಸಿನಿಮಾ ನೋಡಿದ ಬಳಿಕ ನಿಜವಾದ ಭಾರತೀಯನು ತನ್ನ ಸೈನ್ಯ ಮತ್ತು ಅನೇಕ ವೀರರ ಬಗ್ಗೆ ಹೆಮ್ಮೆಪಡುತ್ತಾನೆ. ಸ್ಯಾಮ್ ಮಾನೆಕ್ಷಾ ಅವರು ಅಂತಹ ಮಹಾನ್ ದಂತಕಥೆಯಾಗಿದ್ದರು. ಆದರೆ, ಅವರ ಮೇಲೆ ಚಿತ್ರ ಮಾಡಲು ನಮಗೆ 50 ವರ್ಷಗಳೇ ಬೇಕಾಯಿತು. ಇದು ನನಗೆ ಬೇಸರ ತರಿಸಿದೆ"

'ಬೋಲ್ಡ್ - ಕರೇಜಿಯಸ್ - ಆನ್ ದಿ ಪಾಯಿಂಟ್ ವಿಕ್ಕಿ ಕೌಶಲ್ ಮತ್ತು ಮೇಘನಾ ಗುಲ್ಜಾರ್ ಅವರ ಸ್ಯಾಮ್ ಬಹದ್ದೂರ್ ಅತ್ಯದ್ಭುತ ಚಿತ್ರ. ನಮ್ಮ ಭಾರತೀಯ ಸೇನೆ ಮತ್ತು ಅದರ ಅನೇಕ ವೀರರು ಭಾರತದ ಬಗ್ಗೆ ನಿಜವಾಗಿಯೂ ಹೆಮ್ಮೆಪಡುವ ಕ್ಷಣವಿದು.

"ಎಕ್ಸೈಟಿಂಗ್ ಮತ್ತು ನರ್ವಸ್, ಈ ಚಿತ್ರವು ವಿಕ್ಕಿ ಕೌಶಲ್ ಅವರ ಕೊನೆಯ ಬ್ಲಾಕ್‌ಬಸ್ಟರ್‌ ಚಿತ್ರವನ್ನೇ ಹೋಲುತ್ತದೆ"

"ಸದ್ಯ ನಾನು ಸ್ಯಾಮ್ ಬಹದ್ದೂರ್ ಸಿನಿಮಾ ನೋಡುತ್ತಿದ್ದೇನೆ. ಉತ್ಸಾಹ ಮತ್ತು ಆತಂಕ ಎರಡೂ ನನ್ನಲ್ಲಿದೆ. ವಿಕ್ಕಿ ಕೌಶಲ್ ಅವರ ಈ ಚಿತ್ರವು ಅವರ ಹಿಂದಿನ ಉರಿಯಂತೆಯೇ ಬ್ಲಾಕ್‌ಬಸ್ಟರ್ ಆಗಲಿದೆ"

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ