logo
ಕನ್ನಡ ಸುದ್ದಿ  /  ಮನರಂಜನೆ  /  ವಿಶ್ವ ಮಾನಸಿಕ ಆರೋಗ್ಯ ದಿನದಂದು ಇರಾ ಖಾನ್‌ ಮನದ ಮಾತು; ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ ಅಂದ್ರು ಅಮೀರ್‌ ಖಾನ್‌ ಪುತ್ರಿ

ವಿಶ್ವ ಮಾನಸಿಕ ಆರೋಗ್ಯ ದಿನದಂದು ಇರಾ ಖಾನ್‌ ಮನದ ಮಾತು; ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ ಅಂದ್ರು ಅಮೀರ್‌ ಖಾನ್‌ ಪುತ್ರಿ

Praveen Chandra B HT Kannada

Oct 10, 2023 02:29 PM IST

ವಿಶ್ವ ಮಾನಸಿಕ ಆರೋಗ್ಯ ದಿನದಂದು ಇರಾ ಖಾನ್‌ ಮನದ ಮಾತು

    • World Mental Health Day: ಅಮಿರ್‌ ಖಾನ್‌ ಪುತ್ರಿ ಇರಾ ಖಾನ್‌ ಅವರು ವಿಶ್ವ ಮಾನಸಿಕ ಆರೋಗ್ಯ ದಿನದಂದು ಮಾನಸಿಕ ಕಾಯಿಲೆ ಕುರಿತು ಜನರಲ್ಲಿರುವ ಹಿಂಜರಿಕೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ. ತಾವು ಕೂಡ ಹಲವು ವರ್ಷಗಳಿಂದ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ.
ವಿಶ್ವ ಮಾನಸಿಕ ಆರೋಗ್ಯ ದಿನದಂದು ಇರಾ ಖಾನ್‌ ಮನದ ಮಾತು
ವಿಶ್ವ ಮಾನಸಿಕ ಆರೋಗ್ಯ ದಿನದಂದು ಇರಾ ಖಾನ್‌ ಮನದ ಮಾತು

World Mental Health Day: ಅಮಿರ್‌ ಖಾನ್‌ ಪುತ್ರಿ ಇರಾ ಖಾನ್‌ ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ವಿಶೇಷ ವಿಡಿಯೋವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ. ತನ್ನ ಮಾನಸಿಕ ಆರೋಗ್ಯ ಉತ್ತಮಪಡಿಸಲು ಪಡೆಯುತ್ತಿರುವ ಥೆರಪಿ ಕುರಿತು ಅವರು ಮಾಹಿತಿ ಪಡೆದಿದ್ದಾರೆ. ಅವಶ್ಯಕತೆ ಇರುವವರು ಇಂತಹ ಥೆರಪಿ ಮೂಲಕ ಮಾನಸಿಕ ಆರೋಗ್ಯ ಉತ್ತಮಪಡಿಸಿಕೊಳ್ಳಿ. ಮಾನಸಿಕ ತೊಂದರೆಗಳ ಕುರಿತು ಉದಾಸೀನ ಬೇಡ ಎಂದು ಅವರು ವೀಕ್ಷಕರಿಗೆ ತಿಳಿಸಿದ್ದಾರೆ. ಅಂದಹಾಗೆ, ಇರಾ ಖಾನ್‌ ಮತ್ತು ಅಮೀರ್‌ ಖಾನ್‌ ಜತೆಯಾಗಿ ವಿಡಿಯೋ ಮಾಡಿದ್ದಾರೆ. ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಅವರು ಖಿನ್ನತೆ ವಿರುದ್ಧ ನಿರಂತರವಾಗಿ ಹೋರಾಟ ಮಾಡಿ ಪರಿಹಾರ ಕಂಡುಕೊಂಡಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

‘ಪೌಡರ್‌’ ಕೊಟ್ಟು ಪವರ್‌ ಹೆಚ್ಚಿಸಲು ಹೊರಟ ಗುಲ್ಟು ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ; ನಗು ಉಕ್ಕಿಸುವ ಟೀಸರ್‌ ಬಿಡುಗಡೆ

ಶಿಳ್ಳೆ, ಕೇಕೆ, ಚಪ್ಪಾಳೆ.. ಬೆಳ್ಳಿತೆರೆ ಮೇಲೆ ಮತ್ತೆ ಮಿನುಗಿದ ಕಲ್ಟ್‌ ಕ್ಲಾಸಿಕ್‌ A ಚಿತ್ರ; ಥಿಯೇಟರ್‌ ಮುಂದೆ ಹಬ್ಬ ಮಾಡಿದ ಉಪ್ಪಿ ಫ್ಯಾನ್ಸ್

ನಮ್ಮ ಚಿತ್ರದ ಹೆಸರು ದಿ ಜಡ್ಜ್‌ಮೆಂಟ್‌ ಆಗಿರಬಹುದು, ಪ್ರೇಕ್ಷಕರು ಕೊಡುವ ಜಡ್ಜ್‌ಮೆಂಟೇ ನಮಗೆ ಅಂತಿಮ; ರವಿಚಂದ್ರನ್

ಕೊನೆಗೂ ಮದುವೆ ಮುನ್ಸೂಚನೆ ನೀಡಿ, ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಡಾರ್ಲಿಂಗ್‌ ಪ್ರಭಾಸ್‌; ಅಷ್ಟಕ್ಕೂ ಹುಡುಗಿ ಯಾರಿರಬಹುದು?

ಅಮೀರ್ ಮತ್ತು ಇರಾ ಅವರ ವಿಡಿಯೋದಲ್ಲಿ ಏನಿದೆ?

ಇರಾ ಮತ್ತು ಅಮೀರ್ ಖಾನ್ ಪ್ರೊಡಕ್ಷನ್ಸ್‌ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗಳಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಇವರಿಬ್ಬರು ಮಾನಸಿಕ ತೊಂದರೆಗೆ ಥೆರಪಿಯ ಪ್ರಯೋಜನಗಳ ಕುರಿತು ಮಾತನಾಡಿದ್ದಾರೆ. ವೈದ್ಯರು, ಶಿಕ್ಷಕರ ಮೂಲಕ ನಾವು ಹೇಗೆ ತರಬೇತಿ ಪಡೆಯುತ್ತೇವೆಯೋ ಅದೇ ರೀತಿ ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆ ಪಡೆಯುವುದು ಸಾಮಾನ್ಯವಾದ ವಿಚಾರ ಎಂದು ಅಮೀರ್‌ ಖಾನ್‌ ಈ ವಿಡಿಯೋದಲ್ಲಿ ಹೇಳಿದ್ದಾರೆ. ಮಾನಸಿಕ ಆರೋಗ್ಯದ ಕುರಿತು ಚಿಕಿತ್ಸೆ ಪಡೆಯಲು ಹಿಂಜರಿಯಬೇಡಿ ಎಂದು ಅವರು ಹೇಳಿದ್ದಾರೆ.

"ನಮಗೆ ಎಂದಾದರೂ ನಮ್ಮ ಮಾನಸಿಕ ಅಥವಾ ಭಾವನಾತ್ಮಕ ಆರೋಗ್ಯಕ್ಕೆ ಸಹಾಯ ಬೇಕಿದ್ದರೆ ತರಬೇತಿ ಪಡೆದಿರುವ ಮತ್ತು ವೃತ್ತಿಪರರಾಗಿರುವ ಯಾರಿಂದ ಬೇಕಾದರೂ ಯಾವುದೇ ಹಿಂಜರಿಕೆ ಇಲ್ಲದೆ ಸಹಾಯವನ್ನು ಪಡೆಯಬೇಕು" ಎಂದು ಇರಾ ಹೇಳಿದ್ದಾರೆ.

"ನನ್ನ ಮಗಳು ಇರಾ ಮತ್ತು ನಾನು ಹಲವು ವರ್ಷಗಳಿಂದ ಚಿಕಿತ್ಸೆಯ ಪ್ರಯೋಜನಗಳನ್ನು ಪಡೆಯುತ್ತಿದ್ದೇವೆ. ಮಾನಸಿಕ ಅಥವಾ ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿರುವಿರಿ ಎಂದು ನೀವು ಭಾವಿಸಿದರೆ, ನೀವು ತರಬೇತಿ ಪಡೆದ ವೃತ್ತಿಪರರ ಸಹಾಯವನ್ನು ಪಡೆಯಬಹುದು. ಈ ಕುರಿತು ನಾಚಿಕೆ ಪಡೆಬೇಕಾಗಿಲ್ಲ. ಆಲ್ ದಿ ಬೆಸ್ಟ್” ಎಂದು ಅಮೀರ್ ಖಾನ್‌ ಹೇಳಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ಇವರಿಬ್ಬರು ಹಂಚಿಕೊಂಡ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್‌ಸ್ಟಾಗ್ರಾಮ್ ಶೀರ್ಷಿಕೆಯಲ್ಲಿ ಇರಾ "#imhuman" ಎಂಬ ಹ್ಯಾಷ್‌ಟ್ಯಾಗ್‌ ಹಾಕಿದ್ದಾರೆ. "ನಾವು ಮಾನವರಾಗಿರುವ ಕಾರಣ ಚಿಕಿತ್ಸೆ ಪಡೆದುಕೊಳ್ಳಬೇಕು. ನನ್ನನ್ನು ಫಾಲೋ ಮಾಡುವವರು ಮಾನಸಿಕ ಆರೋಗ್ಯದ ಕುರಿತು ಯಾವುದೇ ಹಿಂಜರಿಕೆ ಹೊಂದಬೇಡಿ. ಮಾನಸಿಕ ತೊಂದರೆ ಕುರಿತು ಇರುವ ಕಳಂಕವನ್ನು ತೊಡೆಯಲು ಚಿಕಿತ್ಸೆ ಪಡೆಯಿರಿ. ನಿಮ್ಮ ಅನುಭವಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ" ಎಂದು ಇರಾ ಹೇಳಿದ್ದಾರೆ.

ಇರಾ ಪೋಸ್ಟ್‌ ಮಾಡಿದ ಬಳಿಕ ಅಲಿ ಫಜಲ್ ಮತ್ತು ವೀರ್ ದಾಸ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮಾನಸಿಕ ಆರೋಗ್ಯದ ಚಿಕಿತ್ಸೆಯ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಮಾನಸಿಕ ಆರೋಗ್ಯದ ಜತೆ ಇರಾ ಹೋರಾಟ

ಈ ವರ್ಷದ ಆರಂಭದಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನದಂದು ತನ್ನ ಮಾನಸಿಕ ಆರೋಗ್ಯದ ಕುರಿತು ಇರಾ ಖಾನ್‌ ಹಿಂದೂಸ್ತಾನ್‌ ಟೈಮ್ಸ್‌ ಜತೆ ಮುಕ್ತವಾಗಿ ಮಾತನಾಡಿದ್ದರು. ಖಿನ್ನತೆಯ ಜತೆ ತನ್ನ ಹೋರಾಟದ ಕುರಿತು ಹೇಳಿದ್ದರು. "ಆತ್ಮಹತ್ಯೆ ಎಂಬ ಪದ ಹೇಳಲು ಎಲ್ಲರೂ ಭಯಪಡುತ್ತಾರೆ. ಸಾವು ತುಂಬಾ ಭಯನಕವಾಗಿದೆ. ಅದು ಅರ್ಥವಾಗುವಂತದ್ದು. ಮಾನಸಿಕ ಆರೋಗ್ಯದ ಕುರಿತು ನಾವು ಮಾತನಾಡಬೇಕು. ನಮ್ಮೊಳಗೆ ಇರಬಾರದು. ಸಾವಿನ ಅರ್ಥವನ್ನು ನಾವು ಅರ್ಥ ಮಾಡಿಕೊಂಡಾಗ ಅಂತಹ ತೊಂದರೆ ಆಗದಂತೆ ಏನನ್ನಾದರೂ ಮಾಡಬಹುದು. ಯಾವುದೇ ಎಚ್ಚರಿಕೆಯ ಚಿಹ್ನೆಗಳು ಇಲ್ಲದೆ ಅದು ಸಂಭವಿಸುವುದಿಲ್ಲ. ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಜನರು ಮುಕ್ತವಾಗಿ ಮಾತನಾಡುವುದಿಲ್ಲ. ಮೆಂಟಲ್‌ ಆರೋಗ್ಯದ ಕುರಿತು ಇರುವ ಕಳಂಕವಿದೆ. ಜ್ಞಾನದ ಕೊರತೆಯಿದೆ. ಅದನ್ನು ಹೋಗಲಾಡಿಸಬೇಕು" ಎಂದು ಅವರು ಹೇಳಿದ್ದಾರೆ.

ಆತ್ಮಹತ್ಯೆ ತಡೆ ಸಹಾಯವಾಣಿ

ನಿಮಗೆ ಅಥವಾ ಯಾರಿಗಾದರೂ ಮಾನಸಿಕ ಆರೋಗ್ಯದ ಬೆಂಬಲ ಬೇಕಿದ್ದರೆ ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಐಕಾಲ್‌ ಸಹಾಯವಾಣಿ: 9152987821 ಅಥವಾ SAHAI: 080 - 25497777

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ