logo
ಕನ್ನಡ ಸುದ್ದಿ  /  ಮನರಂಜನೆ  /  Chiyaan Vikram: ‘ಲೂಸಿಯಾ ಪವನ್‌ ಕುಮಾರ್‌ ಜತೆ ಸಿನಿಮಾ ಮಾಡ್ತಿನಿ’; ‘ಕೋಬ್ರಾ’ ಸುದ್ದಿಗೋಷ್ಠಿಯಲ್ಲಿ ಚಿಯಾನ್‌ ವಿಕ್ರಂ ಕೊಟ್ರು ಸರ್ಪ್ರೈಸ್‌!

Chiyaan Vikram: ‘ಲೂಸಿಯಾ ಪವನ್‌ ಕುಮಾರ್‌ ಜತೆ ಸಿನಿಮಾ ಮಾಡ್ತಿನಿ’; ‘ಕೋಬ್ರಾ’ ಸುದ್ದಿಗೋಷ್ಠಿಯಲ್ಲಿ ಚಿಯಾನ್‌ ವಿಕ್ರಂ ಕೊಟ್ರು ಸರ್ಪ್ರೈಸ್‌!

Aug 28, 2022 07:37 AM IST

‘ಲೂಸಿಯಾ ಪವನ್‌ ಕುಮಾರ್‌ ಜತೆ ಸಿನಿಮಾ ಮಾಡ್ತಿನಿ’; ‘ಕೋಬ್ರಾ’ ಸುದ್ದಿಗೋಷ್ಠಿಯಲ್ಲಿ ಚಿಯಾನ್‌ ವಿಕ್ರಂ ಕೊಟ್ರು ಸರ್ಪ್ರೈಸ್‌!

    • ಪತ್ರಿಕಾಗೋಷ್ಠಿ ವೇಳೆ ಖುಷಿಯ ವಿಚಾರವೊಂದನ್ನು ವಿಕ್ರಂ ಹೇಳಿಕೊಂಡಿದ್ದಾರೆ. ಲೂಸಿಯಾ, ಯೂಟರ್ನ್‌ ಸಿನಿಮಾ ಖ್ಯಾತಿಯ ಪವನ್‌ ಜತೆಗೆ ಸಿನಿಮಾ ಮಾಡುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.
‘ಲೂಸಿಯಾ ಪವನ್‌ ಕುಮಾರ್‌ ಜತೆ ಸಿನಿಮಾ ಮಾಡ್ತಿನಿ’; ‘ಕೋಬ್ರಾ’ ಸುದ್ದಿಗೋಷ್ಠಿಯಲ್ಲಿ ಚಿಯಾನ್‌ ವಿಕ್ರಂ ಕೊಟ್ರು ಸರ್ಪ್ರೈಸ್‌!
‘ಲೂಸಿಯಾ ಪವನ್‌ ಕುಮಾರ್‌ ಜತೆ ಸಿನಿಮಾ ಮಾಡ್ತಿನಿ’; ‘ಕೋಬ್ರಾ’ ಸುದ್ದಿಗೋಷ್ಠಿಯಲ್ಲಿ ಚಿಯಾನ್‌ ವಿಕ್ರಂ ಕೊಟ್ರು ಸರ್ಪ್ರೈಸ್‌!

ಬೆಂಗಳೂರು: ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಕೋಬ್ರಾ’ ರಿಲೀಸ್ ಗೆ ಸಜ್ಜಾಗಿದೆ. ಇದೇ 31ರಂದು ವಿಶ್ವಾದ್ಯಂತ ಚಿತ್ರ ತೆರೆಗಪ್ಪಳಿಸ್ತಿದ್ದು, ಈ ಹಿನ್ನೆಲೆ ಚಿತ್ರತಂಡ ಭರ್ಜರಿ ಪ್ರಮೋಷನ್ ನಡೆಸುತ್ತಿದೆ. ಕೇರಳದಲ್ಲಿ ಪ್ರಚಾರದ ಭರಾಟೆ ಮುಗಿಸಿದ ‘ಕೋಬ್ರಾ’ ಬಳಗ ಇವತ್ತು ಬೆಂಗಳೂರಿಗೆ ಆಗಮಿಸಿತ್ತು. ಚಿತ್ರದ ನಾಯಕ ಚಿಯಾನ್ ವಿಕ್ರಮ್ ಸೇರಿದಂತೆ ಮೂವರು ನಾಯಕರು ಮಾಧ್ಯಮದ ಮುಂದೆ ಹಾಜರಾಗಿ ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ಈ ವೇಳೆ ವಿಕ್ರಮ್ ನೋಡಲು ಅಭಿಮಾನಿಗಳ ದಂಡೇ ಸೇರಿತ್ತು.

ಟ್ರೆಂಡಿಂಗ್​ ಸುದ್ದಿ

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

ಅಪ್ಪು ಕಳೆದುಕೊಂಡಿರೋದು ಸಿನಿಮಾ ಇಂಡಸ್ಟ್ರೀಗೆ ಬಹಳ ನಷ್ಟವಾಗಿದೆ ಎಂದೇ ಮಾತು ಆರಂಭಿಸಿದ ಚಿಯಾನ್ ವಿಕ್ರಮ್, ‘ಕೋಬ್ರಾ’ ಆಕ್ಷನ್ ಥ್ರಿಲ್ಲರ್, ಸೈನ್ಸ್ ಫಿಕ್ಷನ್ಸ್ ಸಿನಿಮಾ. ಈ ಸಿನಿಮಾದಲ್ಲಿ ನಾನು 8 ರಿಂದ 9 ಗೆಟಪ್ ಹಾಕಿದ್ದೇನೆ. ನನ್ನ ಹಳೆ ಸಿನಿಮಾಗಳಿಗೆ ಹೋಲಿಕೆ ಮಾಡಿದ್ರೆ ಈ ಚಿತ್ರವೇ ಬೇರೆ. ಕನ್ನಡದಲ್ಲಿ ಈ ಸಿನಿಮಾಗೆ ನಾನೇ ಡಬ್ಬ್ ಮಾಡಿದ್ದೇನೆ. ಆದ್ರೆ ಮಣಿರತ್ನಂ ಅವರ ಪೊನ್ನಿಯನ್ ಸೆಲ್ವಂ ಸಿನಿಮಾಗೆ ಕನ್ನಡದಲ್ಲಿ ಡಬ್ ಮಾಡಲು ಆಗಲಿಲ್ಲ. ಕೆಜಿಎಫ್ ಸೂಪರ್ ಹಿಟ್ ಆಗಿದೆ" ಎಂದರು.

ಲೂಸಿಯಾ ಪವನ್‌ ಜತೆ ವಿಕ್ರಂ ಸಿನಿಮಾ..

ಇನ್ನು ಇದೇ ಪತ್ರಿಕಾಗೋಷ್ಠಿ ವೇಳೆ ಖುಷಿಯ ವಿಚಾರವೊಂದನ್ನು ವಿಕ್ರಂ ಹೇಳಿಕೊಂಡಿದ್ದಾರೆ. ಲೂಸಿಯಾ, ಯೂಟರ್ನ್‌ ಸಿನಿಮಾ ಖ್ಯಾತಿಯ ಪವನ್‌ ಜತೆಗೆ ಸಿನಿಮಾ ಮಾಡುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. "ನಾನು ಯಶ್ ಒಳ್ಳೆ ಫ್ರೆಂಡ್ಸ್" ಎಂದ ವಿಕ್ರಮ್, ಕನ್ನಡದಲ್ಲಿ ಲೂಸಿಯಾ ಪವನ್ ಹೇಳಿದ ಕಥೆ ಇಷ್ಟವಾಗಿದ್ದು ಅವರ ಜೊತೆ ಸಿನಿಮಾ ಮಾಡುತ್ತೇನೆ" ಎಂದು ತಿಳಿಸಿದರು. ಈ ಮೂಲಕ ಚಿಯಾನ್‌ ವಿಕ್ರಂ ಕನ್ನಡಕ್ಕೆ ಆಗಮಿಸಲಿದ್ದಾರೆ. ಬಹುಭಾಷೆಗಳಲ್ಲಿ ಮೂಡಿಬರಲಿದೆ ಈ ಸಿನಿಮಾ ಬಗ್ಗೆ ನಿರ್ಮಾಪಕರು ಶೀಘ್ರದಲ್ಲಿ ಅಧಿಕೃತ ಘೋಷಣೆ ಮಾಡಬೇಕಿದೆ.

‘ಕೋಬ್ರಾ’ ಸಿನಿಮಾದಲ್ಲಿ ಚಿಯಾನ್ ವಿಕ್ರಮ್ ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದು, ಕೆಜಿಎಫ್ ಬಳಿಕ ಶ್ರೀನಿಧಿ ನಟಿಸಿರುವ ಪರಭಾಷೆಯ ಮೊದಲ ಸಿನಿಮಾ ಇದಾಗಿದೆ. ಈ ಸಿನಿಮಾ ಬಗ್ಗೆ ಶ್ರೀನಿಧಿ ಶೆಟ್ಟಿ ಸಹ ಖುಷಿಯನ್ನು ಹೇಳಿಕೊಂಡಿದ್ದಾರೆ. "ನಾನು ಕೋಬ್ರಾ ಸಿನಿಮಾಗೆ ಕನ್ನಡದಲ್ಲಿ ಡಬ್ ಮಾಡಿದ್ದೇನೆ. ಅದು ಒಂದೇ ದಿನದಲ್ಲಿಯೇ. ಇದು ನಮ್ಮ ಮನೆ. ಇಲ್ಲಿಗೆ ಬಂದಾಗ ಖುಷಿಯಾಗುತ್ತದೆ. ಕನ್ನಡದ ಒಳ್ಳೆ ಕಥೆಗಳು ಬಂದ್ರೆ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುತ್ತೇನೆ" ಎಂದರು.

ಖ್ಯಾತ ಕ್ರಿಕೆಟರ್ ಇರ್ಫಾನ್ ಪಠಾಣ್ ಕೂಡ ಮುಖ್ಯಭೂಮಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್ ಜ್ಞಾನಮುತ್ತು ನಿರ್ದೇಶನದ ಈ ಚಿತ್ರವನ್ನು ಲಲಿತ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಎಆರ್ ರೆಹಮಾನ್ ಸಂಗೀತ ಸಂಯೋಜನೆಯ ಈ ಚಿತ್ರ ಇದೇ ಆಗಸ್ಟ್ 31ಕ್ಕೆ ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ. ಕರ್ನಾಟಕದಲ್ಲಿ ಹಾರಿಜೋನ್ ಸ್ಟುಡಿಯೊಸ್ ಈ ಚಿತ್ರವನ್ನು ಬಿಡುಗಡೆ ಮಾಡಲಿದೆ.

<p>ಬೆಂಗಳೂರಿನಲ್ಲಿ ಕೋಬ್ರಾ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ಚಿತ್ರತಂಡ</p>
ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ