logo
ಕನ್ನಡ ಸುದ್ದಿ  /  ಮನರಂಜನೆ  /  2024ರ ಬಹು ನಿರೀಕ್ಷಿತ ಸಿನಿಮಾ; ಬಾಲಿವುಡ್‌ನ ವಾರ್ 2, ಸಿಂಗಂ ಅಗೇನ್ ಚಿತ್ರಗಳನ್ನೇ ಮೀರಿಸಿದ ಅಲ್ಲು ಅರ್ಜುನ್ ಅವರ ಪುಷ್ಪ 2

2024ರ ಬಹು ನಿರೀಕ್ಷಿತ ಸಿನಿಮಾ; ಬಾಲಿವುಡ್‌ನ ವಾರ್ 2, ಸಿಂಗಂ ಅಗೇನ್ ಚಿತ್ರಗಳನ್ನೇ ಮೀರಿಸಿದ ಅಲ್ಲು ಅರ್ಜುನ್ ಅವರ ಪುಷ್ಪ 2

Raghavendra M Y HT Kannada

Dec 21, 2023 10:10 AM IST

ಪುಷ್ಪ 2 ಸಿನಿಮಾದಲ್ಲಿ ಅಲ್ಲು ಅರ್ಜುನ್ ದೇವಿಯ ಅವತಾರದಲ್ಲಿ ಕಾಣಿಸಿಕೊಂಡಿರುವುದು

  • 2024ರ ಬಹು ನಿರೀಕ್ಷಿತ ಹಿಂದಿ ಮತ್ತು ತೆಲುಗು ಸಿನಿಮಾಗಳ ಪಟ್ಟಿಯಲ್ಲಿ ಪುಷ್ಪ 2 ಟಾಪ್‌ನಲ್ಲೇ ಇದೆ. ಕಳೆದ 8 ರಿಂದ 10 ಗಳಿಂದಲೂ ಅಗ್ರ ಸ್ಥಾನದಲ್ಲೇ ಇದೆ.

ಪುಷ್ಪ 2 ಸಿನಿಮಾದಲ್ಲಿ ಅಲ್ಲು ಅರ್ಜುನ್ ದೇವಿಯ ಅವತಾರದಲ್ಲಿ ಕಾಣಿಸಿಕೊಂಡಿರುವುದು
ಪುಷ್ಪ 2 ಸಿನಿಮಾದಲ್ಲಿ ಅಲ್ಲು ಅರ್ಜುನ್ ದೇವಿಯ ಅವತಾರದಲ್ಲಿ ಕಾಣಿಸಿಕೊಂಡಿರುವುದು

ಬೆಂಗಳೂರು: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅಭಿನಯದ ಮಾಸ್ ಎಂಟರ್‌ಟೈನರ್ ಪುಷ್ಪ (Pushpa) ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತಿರುವಂತ ವಿಚಾರ. ಇದೀಗ 'ಪುಷ್ಪ 2: ದಿ ರೂಲ್' (Pushpa 2: The Rule) ತೆರೆಗೆ ಬರಲು ಸಿದ್ಧವಾಗುತ್ತಿದ್ದು, ದಿನಾಂಕ ಫಿಕ್ಸ್ ಕೂಡ ಆಗಿದೆ. ಆದರೆ ರಿಲೀಸ್‌ಗೂ ಮುನ್ನೂ ಬನ್ನಿ ಅವರ ಈ ಮೂವಿ ದೊಡ್ಡ ಯಶಸ್ಸು ಕಂಡಿದೆ.

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

'ಪುಷ್ಪ 2: ದಿ ರೂಲ್' ಎಂಬ ಎರಡನೇ ಭಾಗ ಬರಲಿದೆ ಎಂದು ಘೋಷಣೆಯಾದಾಗಿನಿಂದ ಸಿನಿಮಾದ ಕುರಿತು ಇರುವ ನಿರೀಕ್ಷೆಗಳು ಹೆಚ್ಚಾಗುತ್ತಲೇ ಇವೆ. ಜನಸಾಮಾನ್ಯರಲ್ಲಿ ಹಾಟ್ ಪ್ರಾಪರ್ಟಿಯಾಗಿರುವ ಈ ಸಿನಿಮಾ 2024ರ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕಳೆದ 8 ರಿಂದ 10 ತಿಂಗಳಿಂದಲೂ ಟಾಪ್‌ನಲ್ಲೇ ಇದೆ ಎಂದು ತಿಳಿದು ಬಂದಿದೆ.

ಒರ್‌ಮ್ಯಾಕ್ಸ್ ಮೀಡಿಯಾ ಬಿಡುಗಡೆ ಮಾಡಿರುವ ಹಿಂದಿ ಭಾಷೆಯ 'ದಿ ಮೋಸ್ಟ್ ಅವೇಡೆಟ್ ಫಿಲ್ಮಿ ಆಫ್ 2024' ಸಿನಿಮಾಗಳ ಪಟ್ಟಿಯಲ್ಲಿ 'ಪುಷ್ಪ 2: ದಿ ರೂಲ್' ನಂಬರ್ 1 ಸ್ಥಾನದಲ್ಲಿದೆ. ತೆಲುಗು ಭಾಷೆಯ ಸಿನಿಮಾಗಳ ಪಟ್ಟಿಯಲ್ಲೂ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. 2023ರ ಡಿಸೆಂಬರ್ 15 ವರೆಗಿನ ಲಿಸ್ಟ್‌ನಲ್ಲಿ ಬಾಲಿವುಡ್‌ನ ದೊಡ್ಡ ಸ್ಟಾರ್‌ಗಳಾದ ಹೃತಿಕ್ ರೋಷನ್ ಅವರ ವಾರ್ 2, ಅಜಯ್ ದೇವಗನ್ ಅವರ ಸಿಂಗಂ ಅಗೇನ್ ಚಿತ್ರಗಳನ್ನೇ ಮೀರಿಸಿದೆ.

ಹೃತಿಕ್ ರೋಷನ್‌ ನಟನೆಯ ವಾರ್‌ 2ಗೆ 3ನೇ ಸ್ಥಾನ

ಹೀರಾ ಪೇರಿ 3 ಎರಡನೇ ಸ್ಥಾನದಲ್ಲಿದ್ದರೆ, ವಾರ್ 2 ಮೂರನೇ ಸ್ಥಾನದಲ್ಲಿದೆ. ಪುಷ್ಪ ಭಾಗ 2ರಲ್ಲಿ ಅಲ್ಲು ಅರ್ಜುನ್ ನಟನೆಯನ್ನು ಕಣ್ತುಂಬಿಕೊಳ್ಳಲು ಸಿನಿ ಪ್ರಿಯರಲ್ಲಿರುವ ಕಾತುರವನ್ನು ನೋಡಿದರೆ ಇದು ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸಿನಿಮಾ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪುಷ್ಪ ಸಿನಿಮಾದಲ್ಲಿನ ತೆಲುಗು ನಟ ಅಲ್ಲು ಅರ್ಜುನ್ ಪುಷ್ಪರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದಾರೆ. ಅಪ್ರತಿಮ ಪಾತ್ರ ಹಾಗೂ ಮರೆಯಲಾರದ ಡೈಲಾಗ್ಸ್‌ ಭಾರತೀಯ ಚಿತ್ರರಂಗದಲ್ಲಿ ಬನ್ನಿಗೆ ದೊಡ್ಡ ಹೆಸರು ತಂದುಕೊಟ್ಟಿದೆ. ಸಿನಿಮಾದಲ್ಲಿನ ಹಾಡುಗಳು ಕೂಡ ಸಖತ್ ಹಿಟ್ ಆಗಿದ್ದವು. ಸಂಗೀತ ಸಂಯೋಜಕ ಡಿಎಸ್‌ಪಿ ಈ ಸಿನಿಮಾಗೆ ನೀಡಿದ ಸಂಗೀತಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನ ಪಡೆದಿದ್ದಾರೆ.

'ಪುಷ್ಪ 2: ದಿ ರೂಲ್' ಭಾಗ 2 2024ರ ಆಗಸ್ಟ್ 15 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಸುಕುಮಾರ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದ್ದಾರೆ. ತಾರಾಗಣವನ್ನು ನೋಡುವುದಾದರೆ ಅಲ್ಲು ಅರ್ಜುನ್ ಪುಷ್ಪರಾಜ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ, ಎಸ್ಪಿ ಬನ್ವಾರ್ ಆಗಿ ಫಹದ್ ಫಾಸಿಲ್ ನಟಿಸಿದ್ದಾರೆ. ಉಳಿದಂತೆ ವಿಜಯೇ ಸೇತುಪತಿ, ಸಾಯಿ ಪಲ್ಲವಿ ಹಾಗೂ ಪ್ರಿಯಾಮಣಿ ಕೂಡ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ