logo
ಕನ್ನಡ ಸುದ್ದಿ  /  ಮನರಂಜನೆ  /  Dasara Trailer:ʼದಸರಾʼ ಟ್ರೇಲರ್‌ನಲ್ಲಿದೆ ನಾನಿಯ ಮಾಸ್‌ ಲುಕ್‌; ಮುಖ್ಯಪಾತ್ರದಲ್ಲಿದ್ದಾರೆ ʼದಿಯಾʼ ಖ್ಯಾತಿಯ ದೀಕ್ಷಿತ್‌ ಶೆಟ್ಟಿ

Dasara trailer:ʼದಸರಾʼ ಟ್ರೇಲರ್‌ನಲ್ಲಿದೆ ನಾನಿಯ ಮಾಸ್‌ ಲುಕ್‌; ಮುಖ್ಯಪಾತ್ರದಲ್ಲಿದ್ದಾರೆ ʼದಿಯಾʼ ಖ್ಯಾತಿಯ ದೀಕ್ಷಿತ್‌ ಶೆಟ್ಟಿ

Reshma HT Kannada

Mar 14, 2023 09:01 PM IST

ದಸರಾ ಟ್ರೇಲರ್‌

    • ಟಾಲಿವುಡ್‌ನ ಬಹುನಿರೀಕ್ಷಿತ ದಸರಾ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಇದೊಂದು ಪಕ್ಕಾ ಮಾಸ್‌ ಸಿನಿಮಾವಾಗಿದ್ದು, ರಗಡ್‌ ಲುಕ್‌ನಲ್ಲಿ ಕಾಣಿಸಿದ್ದಾರೆ ನ್ಯಾಚುರಲ್‌ ಸ್ಟಾರ್‌ ನಾನಿ. 
ದಸರಾ ಟ್ರೇಲರ್‌
ದಸರಾ ಟ್ರೇಲರ್‌

ನ್ಯಾಚುರಲ್‌ ಸ್ಟಾರ್‌ ನಾನಿ ಅಭಿನಯದ ಬಹುನಿರೀಕ್ಷಿತ ʼದಸರಾʼ ಚಿತ್ರದ ಟ್ರೇಲರ್‌ ಇಂದು (ಮಾರ್ಚ್‌ 14) ಬಿಡುಗಡೆಯಾಗಿದೆ. ಟ್ರೇಲರ್‌ ನೋಡಿದರೆ ಇದೊಂದು ಪಕ್ಕಾ ಮಾಸ್‌ ಸಿನಿಮಾ ಎನ್ನಿಸುವುದರಲ್ಲಿ ಅನುಮಾನವಿಲ್ಲ. ಕಲ್ಲಿದ್ದಲ್ಲಿನ ರಾಶಿಯಿಂದ ತುಂಬಿರುವ ವೀರ್ಲಪಲ್ಲಿ ಎಂಬ ಸಣ್ಣ ಹಳ್ಳಿಯ ಯುವಕರ ರಕ್ತ-ಸಿಕ್ತ ದಂಗೆಯ ಕತೆಯ ಇದಾಗಿರಬಹುದು ಎಂಬ ಹಿಂಟ್‌ ಟ್ರೇಲರ್‌ನಲ್ಲಿ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಆರಂಭದಲ್ಲೇ ನಾಯಕಿ ಕೀರ್ತಿ ಸುರೇಶ್‌ ಅವರನ್ನು ತೋರಿಸಲಾಗಿದೆ. ಪಕ್ಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ಕೀರ್ತಿ ಮಿಂಚಿದ್ದಾರೆ. ಎರಡನೇ ದೃಶ್ಯದಲ್ಲಿ ಮಧುಮಗಳ ವೇಷದಲ್ಲಿರುವ ಕೀರ್ತಿ ಕನ್ನಡಿ ಮುಂದೆ ನಿಂತು ತನ್ನನ್ನು ತಾನು ನೋಡಿಕೊಂಡು ʼನನ್ನನ್ನು ಮದುವೆಯಾಗುವ ಹುಡುಗ ನಿಜಕ್ಕೂ ಲಕ್ಕಿʼ ಎಂದು ಹೇಳುವ ದೃಶ್ಯವಿದೆ. ಮುಂದಿನ ದೃಶ್ಯದಲ್ಲಿ ನಾನಿ ಅವರನ್ನು ಪರಿಚಯಿಸುವ ದೃಶ್ಯವಿದ್ದು, ಕಲ್ಲಿದ್ದಲು ತುಂಬಿದ ಚಲಿಸುವ ಟ್ರೈನ್‌ನಿಂದ ಹಾರಿ ಹೊಡೆದಾಡುವ ದೃಶ್ಯವಿದೆ. ಈ ಚಿತ್ರದಲ್ಲಿ ಕನ್ನಡಿಗ ದಿಯಾ ಖ್ಯಾತಿಯ ದೀಕ್ಷಿತ್‌ ಶೆಟ್ಟಿ ಕೂಡ ಮುಖ್ಯಪಾತ್ರದಲ್ಲಿ ನಟಿಸಿದ್ದು, ಟ್ರೇಲರ್‌ನಲ್ಲಿ ನೋಡಿದರೆ ಹೀರೊ ಗೆಳೆಯನ ಪಾತ್ರ ಎಂದುಕೊಳ್ಳಬಹುದು.

ಇದರಲ್ಲಿ ನಾಯಕ ಪಾತ್ರದ ಸೂಕ್ಷ್ಮ ಪರಿಚಯವೂ ಇದೆ. ಒಬ್ಬ ಅಜಾಗರೂಕ ಹಾಗೂ ಚಿಕ್ಕ ಚಿಕ್ಕ ವಿಷಯಗಳಿಗೆ ರೊಚ್ಚಿಗೆದ್ದು ಅಪಾಯವನ್ನು ಆಹ್ವಾನಿಸುವ ವ್ಯಕ್ತಿಯ ಪಾತ್ರದಲ್ಲಿ ನಾನಿಯನ್ನು ತೆರೆ ಮೇಲೆ ಕಾಣಬಹುದಾಗಿದೆ.

ದಸರಾ ಟ್ರೇಲರ್‌ ನೋಡಿದವರಿಗೆ ಹಿಂಸಾಚಾರ ಎದ್ದು ಕಾಣುವುದೂ ಸುಳ್ಳಲ್ಲ. ಹೊಡೆದಾಟ, ಬಡಿದಾಟ, ರಕ್ತ, ದಂಗೆ ಇವುಗಳ ಪ್ರಭಾವ ಎದ್ದು ಕಾಣುತ್ತದೆ. ಕೊನೆಯ ದೃಶ್ಯದಲ್ಲಿ ನಾನಿ ಯಾರಿಗೂ ಹೆದರದ ನಿರ್ಭೀತ ವ್ಯಕ್ತಿಯಂತೆ ಕಾಣಿಸುತ್ತಾರೆ.

ಚೊಚ್ಚಲ ನಿರ್ದೇಶನದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ ಶ್ರೀಕಾಂತ ಒಡೆಲ್ಲಾ

ಈ ಚಿತ್ರಕ್ಕೆ ಶ್ರೀಕಾಂತ ಒಡೆಲ್ಲಾ ಎನ್ನುವವರು ಆಕ್ಷನ್‌ ಕಟ್‌ ಹೇಳಿದ್ದು, ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ. ಸುಧಾಕರ ಚೆರುಕುರಿ ಚಿತ್ರ ಬಂಡವಾಳ ಹೂಡಿಕೆ ಮಾಡಿದ್ದಾರೆ.

ನಾನಿ ಜೊತೆ ಕೀರ್ತಿ ಸುರೇಶ್‌, ಸಾಯಿ ಕುಮಾರ್‌, ಸಮುದ್ರಕನಿ, ಶೈನ್ ಟಾಮ್ ಚಾಕೋ, ಶಮ್ನಾ ಕಾಸಿಂ ಮೊದಲಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಕಳೆದ ವರ್ಷ ಸಿನಿಮಾ ಆರಂಭದ ಸಮಯದಲ್ಲಿ ಮಾತನಾಡಿದ್ದ ನಾನಿ ʼಇದು ಶುದ್ಧ ಕಚ್ಚಾ ಹಳ್ಳಿಗಾಡಿನ ಸಿನಿಮಾʼ ಎಂದಿದ್ದರು. ತೆಲಂಗಾಣದ ಗೋದಾವರಿ ಖನಿ ಬಳಿಯ ಸಿಂಗರೇಣಿ ಕಲ್ಲಿದ್ದಲ್ಲು ಗಣಿ ಪ್ರದೇಶದಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ.

ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಾನಿ, ʼಕಳೆದ ವರ್ಷ ತೆಲುಗು ಚಿತ್ರರಂಗದಿಂದ ಆರ್‌ಆರ್‌ಆರ್‌

ಸಿನಿಮಾ ಬಿಡುಗಡೆಯಾಗಿ ಸೂಪರ್‌ ಹಿಟ್‌ ಆಗಿತ್ತು. ಕನ್ನಡ ಚಿತ್ರರಂಗದಿಂದ ಕೆಜಿಎಫ್ ಮತ್ತು ಕಾಂತಾರ ಚಿತ್ರಗಳು ಬಿಡುಗಡೆಯಾಗಿ ಹೆಸರು ಗಳಿಸಿದ್ದವು. 2023ರಲ್ಲಿ ತೆಲುಗು ಚಿತ್ರರಂಗದಿಂದ ದಸರಾ ಬರಲಿದೆ ಎಂದು ನಾನು ಆತ್ಮವಿಶ್ವಾಸದಿಂದ ಮತ್ತು ಹೆಮ್ಮೆಯಿಂದ ಹೇಳಬಲ್ಲೆʼ ಎಂದಿದ್ದರು.

ದೀಕ್ಷಿತ್‌ ಶೆಟ್ಟಿಯ ಪಾತ್ರವೇನು?

ಜೀ ಕನ್ನಡ ವಾಹಿನಿಯ ನಾಗಿಣಿ ಧಾರಾವಾಹಿ ಮೂಲಕ ಪರಿಚಿತರಾಗಿದ್ದ ದೀಕ್ಷಿತ್‌ ಶೆಟ್ಟಿ ಕನ್ನಡದ ʼದಿಯಾʼ ಸಿನಿಮಾದ ಮೂಲಕ ಹೆಸರು ಗಳಿಸಿದವರು. ಈಗಾಗಲೇ ತೆಲುಗಿನಲ್ಲಿ ʼಮುಗ್ಗುರು ಮೊನಗಾಲ್ಲುʼ ಹಾಗೂ ʼದಿ ರೋಸ್‌ ವಿಲ್ಲಾʼ ಸಿನಿಮಾಗಳ ಮೂಲಕ ಟಾಲಿವುಡ್‌ಗೆ ಪರಿಚಿತರಾಗಿರುವ ಇವರು ದಸರಾ ಸಿನಿಮಾದ ಸೂರಿ ಪಾತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ, ಟ್ರೇಲರ್‌ ನೋಡಿದರೆ ಚಿತ್ರದಲ್ಲಿ ದೀಕ್ಷಿತ್‌ ಅವರದ್ದು ನಾನಿಯ ಸ್ನೇಹಿತನ ಪಾತ್ರ, ಮಾತ್ರವಲ್ಲದೆ ಇದೊಂದು ಮುಖ್ಯಪಾತ್ರವೂ ಹೌದು ಅನ್ನುವಂತಿದೆ. ಸದ್ಯ ಕನ್ನಡ ಸಿನಿಮಾಗಳಲ್ಲಿ ಬ್ಯುಸಿ ಇರುವ ದೀಕ್ಷಿತ್‌ ಕೈಯಲ್ಲಿ ಬ್ಲಿಂಕ್‌, ಕೆಟಿಎಮ್‌, ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು, ಸ್ಟ್ರಾಬೆರಿ ಸಿನಿಮಾಗಳಿವೆ.

ಮಾರ್ಚ್‌ 30ಕ್ಕೆ 5 ಭಾಷೆಗಳಲ್ಲಿ ಬಿಡುಗಡೆ

ದಸರಾ ಚಿತ್ರವು ಮಾರ್ಚ್‌ 30ಕ್ಕೆ ಬಿಡುಗಡೆಯಾಗಲಿದೆ. ಸಿನಿಮಾ ತೆಲುಗಿನಲ್ಲಿ ನಿರ್ಮಾಣವಾಗಿದ್ದು, ತೆಲುಗು, ಹಿಂದಿ, ಮಲೆಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ವಿಭಾಗ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ