logo
ಕನ್ನಡ ಸುದ್ದಿ  /  ಮನರಂಜನೆ  /  Bollywood Couple: ಅನಾಮಿಕ ವ್ಯಕ್ತಿಯಿಂದ ಕತ್ರೀನಾ-ವಿಕ್ಕಿಗೆ ಜೀವ ಬೆದರಿಕೆ...ಪ್ರಕರಣ ದಾಖಲು

Bollywood Couple: ಅನಾಮಿಕ ವ್ಯಕ್ತಿಯಿಂದ ಕತ್ರೀನಾ-ವಿಕ್ಕಿಗೆ ಜೀವ ಬೆದರಿಕೆ...ಪ್ರಕರಣ ದಾಖಲು

HT Kannada Desk HT Kannada

Jul 25, 2022 02:18 PM IST

ಕತ್ರೀನಾ ಕೈಫ್​ ಹಾಗೂ ವಿಕ್ಕಿ ಕೌಶಲ್

    • ಅನಾಮಿಕ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ಕತ್ರೀನಾ ಹಾಗೂ ವಿಕ್ಕಿಗೆ ಜೀವ ಬೆದರಿಕೆ ಒಡ್ಡಿರುವುದಲ್ಲದೆ, ಪ್ರತ್ಯೇಕವಾಗಿ ಕತ್ರೀನಾಗೆ ಕೂಡಾ ಸಂದೇಶ ಮಾಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಕ್ಯಾಟ್ ಹಾಗೂ ವಿಕ್ಕಿ ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು 506 (2), 354 (ಡಿ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕತ್ರೀನಾ ಕೈಫ್​ ಹಾಗೂ ವಿಕ್ಕಿ ಕೌಶಲ್
ಕತ್ರೀನಾ ಕೈಫ್​ ಹಾಗೂ ವಿಕ್ಕಿ ಕೌಶಲ್

ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ನಟಿ ಕತ್ರೀನಾ ಕೈಫ್​ ಹಾಗೂ ವಿಕ್ಕಿ ಕೌಶಲ್​​ಗೆ ಅನಾಮಿಕ ವ್ಯಕ್ತಿಯೊಬ್ಬರಿಂದ ಜೀವ ಬೆದರಿಕೆ ಕರೆ ಬಂದಿದ್ದು ಕತ್ರೀನಾ ಹಾಗೂ ವಿಕ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಟ್ರೆಂಡಿಂಗ್​ ಸುದ್ದಿ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

Cannes: ಚಿನ್ನದ ಬಣ್ಣದ ಉಡುಗೆಯಲ್ಲಿ ಆಸ್ಕರ್‌ ಟ್ರೋಫಿ ರೀತಿ ಕಾಣಿಸ್ತಾರಂತೆ ಶೋಭಿತಾ ಧೂಳಿಪಾಲ, ನಿಮಗೂ ಹಾಗೇ ಕಾಣಿಸ್ತಾರ ನೋಡಿ

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅದೃಷ್ಟ ಕಣ್ರೋ, ಅಪಶಕುನ ಅಲ್ಲ; ಐಪಿಎಲ್‌ನಲ್ಲಿ ಆರ್‌ಸಿಬಿ ಹೊಸ ಅಧ್ಯಾಯ, ತುಚ್ಛ ಪದ ಬಳಸಿದವರಿಗೆ ಚಾಟಿಯೇಟು

ಇತ್ತೀಚೆಗಷ್ಟೇ ಬಾಲಿವುಡ್ ನಟ ಸಲ್ಮಾನ್​ ಖಾನ್​​ಗೆ ಭೂಗತ ಲೋಕದ ವ್ಯಕ್ತಿಗಳಿಂದ ಬೆದರಿಕೆ ಕರೆ ಬಂದಿತ್ತು. ಸದ್ಯಕ್ಕೆ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇದೀಗ ಕತ್ರೀನಾಗೂ ಇದೇ ರೀತಿ ಬೆದರಿಕೆ ಕರೆ ಬಂದಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಅನಾಮಿಕ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ಕತ್ರೀನಾ ಹಾಗೂ ವಿಕ್ಕಿಗೆ ಜೀವ ಬೆದರಿಕೆ ಒಡ್ಡಿರುವುದಲ್ಲದೆ, ಪ್ರತ್ಯೇಕವಾಗಿ ಕತ್ರೀನಾಗೆ ಕೂಡಾ ಸಂದೇಶ ಮಾಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಕ್ಯಾಟ್ ಹಾಗೂ ವಿಕ್ಕಿ ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು 506 (2), 354 (ಡಿ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ 9 ರಂದು ಮದುವೆಯಾಗಿದ್ದ ಜೋಡಿ

ಬಹಳ ವರ್ಷಗಳಿಂದ ಪ್ರೀತಿಯಲ್ಲಿ ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಕಳೆದ ವರ್ಷ ಡಿಸೆಂಬರ್ 9 ರಂದು ಮದುವೆಯಾಗಿದ್ದರು. ಬಹಳ ಗುಟ್ಟಾಗೇ ಈ ಮದುವೆ ನಡೆದಿತ್ತು. ಎಷ್ಟರ ಮಟ್ಟಿಗೆ ಎಂದರೆ ನಿಜಕ್ಕೂ ಕತ್ರೀನಾ ಹಾಗೂ ವಿಕ್ಕಿ ಮದುವೆಯಾಗುತ್ತಿದ್ದಾರಾ...? ಅಥವಾ ಇದೆಲ್ಲಾ ಗಾಸಿಪ್ ಇರಬಹುದಾ ಎನ್ನುವಷ್ಟರ ಮಟ್ಟಿಗೆ ಪ್ರೈವೆಸಿ ಕಾಪಾಡಲಾಗಿತ್ತು. ಜೊತೆಗೆ ಇವರು ತಮ್ಮ ಮದುವೆಗೆ ಬರುವರಿಗೆ ಕೆಲವೊಂದು ಕಂಡಿಷನ್​​​ಗಳನ್ನು ಕೂಡಾ ಹಾಕಿದ್ದರಂತೆ.

ನಮ್ಮ ಮದುವೆಗೆ ಬರುವವರು ಮೊಬೈಲ್ ಫೋನ್ ತರಬಾರದು. ಒಂದು ವೇಳೆ ತೀರಾ ಅವಶ್ಯಕತೆ ಇದ್ದು ಮೊಬೈಲ್ ಬಳಸಿದರೂ ಯಾವುದೇ ಕಾರಣಕ್ಕೂ ಮದುವೆ ನಡೆಯುವ ಸ್ಥಳದಲ್ಲಿ ಒಂದು ಫೋಟೋ ಕೂಡಾ ಕ್ಲಿಕ್ ಮಾಡಬಾರದು. ಮದುವೆಗೆ ಬರುವವರು ತಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಯಾರಿಗೂ ಹೇಳದೆ ರಹಸ್ಯ ಕಾಪಾಡಬೇಕು. ಒಂದು ವೇಳೆ ಯಾರಿಗಾದರೂ ಮದುವೆ ಬಗ್ಗೆ ತಿಳಿದಿದ್ದರೂ ಕೂಡಾ ಮದುವೆ ಎಲ್ಲಿ ನಡೆಯುತ್ತಿದೆ ಎಂಬುದರ ಬಗ್ಗೆ ಬಾಯಿ ಬಿಡಬಾರದು ಎಂದು ಕಂಡಿಷನ್ ವಿಧಿಸಿತ್ತಂತೆ ಈ ಜೋಡಿ. ಅಷ್ಟೇ ಅಲ್ಲ, ತಾವು ಆಹ್ವಾನಿಸಿರುವ ಅತಿಥಿಗಳಿಗೆ ಕತ್ರೀನಾ-ವಿಕ್ಕಿ ಸೀಕ್ರೇಟ್ ಕೋಡ್ ನೀಡುವ ವ್ಯವಸ್ಥೆ ಕೂಡಾ ಮಾಡಿದ್ದರಂತೆ.

ಸಲ್ಮಾನ್ ಖಾನ್​​​ಗೆ ಕೂಡಾ ಬೆದರಿಕೆ ಸಂದೇಶ

ಬಾಲಿವುಡ್ ನಟ ಸಲ್ಮಾನ್​​ ಖಾನ್​ಗೆ ಕೂಡಾ ಇತ್ತೀಚೆಗೆ ಬೆದರಿಕೆ ಪತ್ರವೊಂದು ದೊರೆತಿತ್ತು. ಇತ್ತೀಚೆಗೆ ಸಲ್ಮಾನ್‌ ಖಾನ್‌ ತಂದೆ ಸಲೀಮ್‌ ಖಾನ್‌, ಭದ್ರತಾ ಸಿಬ್ಬಂದಿಗಳೊಂದಿಗೆ ಪ್ರತಿ ದಿನ ಬೆಳಗಿನ ವಾಯುವಿಹಾರಕ್ಕೆ ತೆರಳಿದ್ದರು. ವೇಳೆ ಪ್ರತಿದಿನ ವಿರಾಮ ಪಡೆಯುವ ಜಾಗದಲ್ಲಿ ಅವರಿಗೆ ಪತ್ರವೊಂದು ಸಿಕ್ಕಿತ್ತು. ಪತ್ರ ತೆರೆದು ನೋಡುತ್ತಿದ್ದಂತೆ, "ನಿಮ್ಮನ್ನೂ ಮೂಸಾವಾಲಾ ರೀತಿಯಲ್ಲಿ ಹತ್ಯೆ ಮಾಡುತ್ತೇವೆ" ಎಂದು ಬರೆಯಲಾಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ