logo
ಕನ್ನಡ ಸುದ್ದಿ  /  ಮನರಂಜನೆ  /  ಹುಲಿ ಉಗುರಿನ ಕುರಿತ ಹೇಳಿಕೆ ತಿರುಚಿ ತೇಜೋವಧೆ, ಬೆದರಿಕೆ ಆರೋಪ; ಕಿಡಿಗೇಡಿಗಳ ವಿರುದ್ಧ ನಟ ಜಗ್ಗೇಶ್ Fir ದಾಖಲು

ಹುಲಿ ಉಗುರಿನ ಕುರಿತ ಹೇಳಿಕೆ ತಿರುಚಿ ತೇಜೋವಧೆ, ಬೆದರಿಕೆ ಆರೋಪ; ಕಿಡಿಗೇಡಿಗಳ ವಿರುದ್ಧ ನಟ ಜಗ್ಗೇಶ್ FIR ದಾಖಲು

Raghavendra M Y HT Kannada

Feb 20, 2024 08:14 AM IST

ಬಿಜೆಪಿ ಸಂಸದರೂ ಆಗಿರುವ ನಟ ಜಗ್ಗೇಶ್ ಹುಲಿ ಉಗುರಿನ ಕುರಿತ ಹೇಳಿಕೆ ವಿಚಾರವಾಗಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

    • ಹುಲಿ ಉಗುರಿನ ಬಗ್ಗೆ ಸಂವಾದದಲ್ಲಿ ಹೇಳಿದ ಮಾತನ್ನು ಕಿಡಿಗೇಡಿಗಳು ತಿರುಚಿ ನನ್ನ ತೇಜೋವಧೆ ಮಾಡಿ ಬೆದರಿಕೆ ಹಾಕಿದ್ದಾರೆಂದು ನಟ ಜಗ್ಗೇಶ್ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಬಿಜೆಪಿ ಸಂಸದರೂ ಆಗಿರುವ ನಟ ಜಗ್ಗೇಶ್ ಹುಲಿ ಉಗುರಿನ ಕುರಿತ ಹೇಳಿಕೆ ವಿಚಾರವಾಗಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಬಿಜೆಪಿ ಸಂಸದರೂ ಆಗಿರುವ ನಟ ಜಗ್ಗೇಶ್ ಹುಲಿ ಉಗುರಿನ ಕುರಿತ ಹೇಳಿಕೆ ವಿಚಾರವಾಗಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. (ANI)

ಬೆಂಗಳೂರು: ಹಾಲಿ ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ನಟ ಜಗ್ಗೇಶ್ (Actor Jaggesh) ಅವರು ರಂಗನಾಯಕ ಸಿನಿಮಾ ಕಾರ್ಯಕ್ರಮದಲ್ಲಿ ಹುಲಿ ಉಗುರಿನ (Tiger Claw) ಬಗ್ಗೆ ಮಾತನಾಡುವಾಗ 'ಯಾವನೋ ಕಿತ್ತೋದ್ ನನ್ಮಗ' ಅಂತ ಬಿಗ್‌ ಬಾಸ್ ಖ್ಯಾತಿಯ ವರ್ತೂರು ಸಂತೋಷ್‌ಗೆ (Varthur Santhosh) ಹೇಳಿರುವ ಭಾಷೆ ಪ್ರಯೋಗ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ವರ್ತೂರು ಸಂತೋಷ್ ಅವರ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ. ಜಗ್ಗೇಶ್ ಅವರು ಈ ಕೂಡಲೇ ಕ್ಷಮೆ ಕೇಳಬೇಕು ಇಲ್ಲದಿದ್ದರೆ ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ವಿಡಿಯೊ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅದೃಷ್ಟ ಕಣ್ರೋ, ಅಪಶಕುನ ಅಲ್ಲ; ಐಪಿಎಲ್‌ನಲ್ಲಿ ಆರ್‌ಸಿಬಿ ಹೊಸ ಅಧ್ಯಾಯ, ತುಚ್ಛ ಪದ ಬಳಸಿದವರಿಗೆ ಚಾಟಿಯೇಟು

Bhagyalakshmi Serial: 10ನೇ ತರಗತಿ ಪಾಸ್‌ ಆದ ಖುಷಿಗೆ ಮೊದಲ ದಿನವೇ ಕೆಲಸಕ್ಕೆ ತಡವಾಗಿ ಹೊರಟ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ; ಡುಮ್ಮ ಸರ್‌ ಟೈಟಾದ್ರು, ಐ ಅಂದ್ರು, ಲವ್‌ ಯು ಹೇಳ್ತಾರ

ಬರಲಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಯೋಪಿಕ್‌; ಮೋದಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಬಾಹುಬಲಿಯ ಕಟ್ಟಪ್ಪ

ಆದರೆ ಬೆದರಿಕೆ ಹಾಕಿದವರ ವಿರುದ್ಧ ಕ್ರಮಕ್ಕೆ ನಟ ಜಗ್ಗೇಶ್ ಮುಂದಾಗಿದ್ದಾರೆ. ನನ್ನ ಹೇಳಿಕೆಯನ್ನು ತಿರುಚಿ ತೇಜೋವಧೆ ಮಾಡಲಾಗುತ್ತಿದೆ. ಅಲ್ಲದೆ, ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿರುವ ರಾಜ್ಯಸಭಾ ಸದಸ್ಯ ಜಗ್ಗೇಶ್, ಬೆಂಗಳೂರು ಉತ್ತರ ವಿಭಾಗದ ಡಿಸಿಪಿಗೆ ದೂರ ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಆನೇಕಲ್‌ನ ನಾರಾಯಣಸ್ವಾಮಿ ಎಂಬುವರು ಎ1 ಆರೋಪಿ ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಈತ ಹೆಬ್ಬಗೋಡಿ ನಗರ ಸಭೆಯ ಮಾಜಿ ಸದಸ್ಯ ಅಂತ ತಿಳಿದುಬಂದಿದೆ.

ರಂಗನಾಯಕ ಎಂಬ ಕನ್ನಡ ಚಿತ್ರದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಈ ಹಿಂದೆ ನನ್ನ ಹುಲಿ ಉಗುರಿನ ಬಗ್ಗೆ ಆದ ಘಟನೆಯನ್ನು ಮಾಧ್ಯಮದಲ್ಲಿ ತೋರಿಸಿದ ಬಗ್ಗೆ ಹಾಗೂ ಯಾರೋ ಒಬ್ಬ ಕಿತ್ತೋದವನಿಗೆ (ಇದು ಗ್ರಾಮೀಣ ಭಾಷೆ) ಸಿಕ್ಕಿದ ಪ್ರಯುಕ್ತ ಅಂದರೆ ಈ ಹುಲಿ ಉಗುರಿನ ಘಟನೆಯಲ್ಲಿ ನೂರಾರು ಮಂದಿ ಸಮಸ್ಯೆ ಅನುಭವಿಸಿದ್ದಾರೆ ಎನ್ನುವ ಅರ್ಥದಲ್ಲಿ ಹಾಸ್ಯವಾಗಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ್ದೆ. ಆದರೆ ಒಂದು ಕೆಟ್ಟ ಪ್ರಚಾರದ ಉದ್ದೇಶದಿಂದ ನನ್ನ ಸಂಪೂರ್ಣ ವಿಷಯ ತಿರುಚಿ ಜಾತಿ ನಿಂದನೆ ವ್ಯಕ್ತಿ ನಿಂದನೆ ಎಂದು ಪ್ರಚಾರ ಪಡೆದು ತನ್ನ ತೇಜೋವಧೆಗೆ ಕೆಲ ಕಿಡಿಗೇಡಿಗಳು ಯತ್ನಿಸಿದ್ದಾರೆ.

ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದ ಕೆಲ ಪ್ರಚಾರ ಪ್ರಿಯರು ಇಂಥ ವಿಷಯಕ್ಕಾಗಿ ಕಾಯುತ್ತಿರುತ್ತಾರೆ. ಅಂಥವರಿಗೆ ನನ್ನ ಹೇಳಿಕೆ ಸಿಕ್ಕ ಕೂಡಲೇ ವೈಯಕ್ತಿಕವಾಗಿ ಹಲ್ಲೆ, ಮನೆ ಮುತ್ತಿಗೆ, ಅವಾಚ್ಯ ಶಬ್ಧ ಪ್ರಯೋಗ, ಮುಖಕ್ಕೆ ಮಸಿ ಬಳಿಯುವ ಬೆದರಿಕೆ ಒಡ್ಡಿದ್ದಾರೆ. ಯಾರ ಬಗ್ಗೆ ಅಥವಾ ಜಾತಿಯ ಬಗ್ಗೆ, ಅಥವಾ ವ್ಯಕ್ತಿಯ ಬಗ್ಗೆ ನಾನು ಮಾತಾಡಿರುವುದಿಲ್ಲ. ಬದಲಾಗಿ ನನ್ನ ವೈಯಕ್ತಿಕ ಅನುಭವ ಮಾಧ್ಯಮ ಮುಂದೆ ಹೇಳಿದ್ದೇನೆ ಎಂದು ತಿಳಿಸುತ್ತೇನೆ.

ಸಮಾಜ ಸ್ವಾಸ್ತ್ಯ, ಜಾತಿ ಗಲಭೆ, ತಪ್ಪು ಸಂದೇಶ, ಹಲ್ಲೆಯ ಬೆದರಿಕೆ ಮಾಡಿರುವ ಅನೇಕಲ್ ಹೆಬ್ಬಗೋಡಿ ನಾರಾಯಣಸ್ವಾಮಿ ಹಾಗೂ ಅವನ ಮಾತು ಅನುಸಿರಿಸಿ ವಿಡಿಯೋ ಮಾಡಿದ (ಹೆಸರು ಗೊತ್ತಿಲ್ಲ ವಿಡಿಯೊ ಸಾಕ್ಷಿ ಇದೆ) ಇವರುಗಳ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ ಎಂದು ನಟ ಜಗ್ಗೇಸ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಹುಲಿ ಉಗುರು ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡಿದ ಸುದ್ದಿ. ಕಿರುತೆರೆಯ ಬಿಗ್‌ ಬಾಸ್‌ ಶೋನಲ್ಲಿ ವರ್ತೂರು ಸಂತೋಷ್‌ ಕೊರಳಲ್ಲಿ ಹುಲಿ ಉಗುರು ಕಾಣಿಸಿದ್ದೇ ತಡ, ಅರಣ್ಯ ಇಲಾಖೆ ಅಖಾಡಕ್ಕಿಳಿದು, ಹುಲಿ ಉಗುರು ಧರಿಸಿದ್ದ ವರ್ತೂರು ಅವರನ್ನು ನೇರವಾಗಿ ಬಿಗ್‌ಬಾಸ್‌ ಮನೆಯಿಂದಲೇ ಬಂಧಿಸಿ ಜೈಲಿಗಟ್ಟಿದ್ದರು. ಅದಾದ ಬಳಿಕ ಸೆಲೆಬ್ರಿಟಿ ವಲಯದಲ್ಲೂ ಈ ವಿಚಾರ ಮುನ್ನೆಲೆಗೆ ಬಂದಿತು. ಚಂದನವನದ ಜಗ್ಗೇಶ್‌, ದರ್ಶನ್‌ ಸೇರಿ ಹಲವರ ಬಳಿಯಿದ್ದ ಹುಲಿ ಉಗುರನ್ನೂ ವಶಕ್ಕೆ ಪಡೆಯಲಾಗಿತ್ತು. ಇದೀಗ ಆ ಉಗುರಿನ ಬಗ್ಗೆ ಜಗ್ಗೇಶ್‌ ಮಾತಾಡಿರುವುದು ವಿವಾದಕ್ಕೆ ಕಾರಣವಾಗಿದೆ. (This copy first appeared in Hindustan Times Kannada website. To read more like this please logon to kannada.hindustantimes.com )

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ