logo
ಕನ್ನಡ ಸುದ್ದಿ  /  ಮನರಂಜನೆ  /  Ganesh In Pushpa Style: ಮಹಾರಾಷ್ಟ್ರದಲ್ಲಿ ಪುಷ್ಪಾ ಸ್ಟೈಲ್ ಗಣೇಶ ಮೂರ್ತಿ ಸಖತ್ ಅಟ್ರ್ಯಾಕ್ಷನ್

Ganesh in Pushpa Style: ಮಹಾರಾಷ್ಟ್ರದಲ್ಲಿ ಪುಷ್ಪಾ ಸ್ಟೈಲ್ ಗಣೇಶ ಮೂರ್ತಿ ಸಖತ್ ಅಟ್ರ್ಯಾಕ್ಷನ್

HT Kannada Desk HT Kannada

Aug 31, 2022 07:53 AM IST

ತೆಲುಗು ಸಿನಿಮಾ ಪುಷ್ಪಾ ಸ್ಟೈಲ್ ನಲ್ಲಿ ಇರುವ ಗಣೇಶ ಮೂರ್ತಿ)

  • Ganesh in Pushpa Style: ಟಾಲಿವುಡ್ ನ ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ತಗ್ಗೆದೇ ಲೇ ಎನ್ನುವ ಮ್ಯಾನರಿಸಂ ಬಹು ಮಂದಿಗೆ ಸಖತ್ ಇಷ್ಟವಾಗಿತ್ತು. ಇದೇ ಶೈಲಿಯಲ್ಲಿ ಮಾಡಿರುವ ವಿಶೇಷ ಗಣಪತಿ ಮೂರ್ತಿ ಮಹಾರಾಷ್ಟ್ರದಲ್ಲಿ ಗಮನ ಸೆಳೆಯುತ್ತಿದೆ.

ತೆಲುಗು ಸಿನಿಮಾ ಪುಷ್ಪಾ ಸ್ಟೈಲ್ ನಲ್ಲಿ ಇರುವ ಗಣೇಶ ಮೂರ್ತಿ)
ತೆಲುಗು ಸಿನಿಮಾ ಪುಷ್ಪಾ ಸ್ಟೈಲ್ ನಲ್ಲಿ ಇರುವ ಗಣೇಶ ಮೂರ್ತಿ)

ಮುಂಬೈ: Ganesh in Pushpa Style: ಗಣೇಶ ಚತುರ್ಥಿ ಬಂದರೆ ಸಾಕು. ವಿಶೇಷ ಹಾಗೂ ವಿವಿಧ ರೂಪದ ಗಣಪತಿ ಮೂರ್ತಿಗಳನ್ನು ಕಾಣ್ತುಂಬಿಕೊಳ್ಳಬಹುದು. ಪ್ರತಿ ಬಾರಿ ಆ ವರ್ಷದಲ್ಲಿ ಆಗಿರುವ ಬೆಳವಣಿಗೆಗಳನ್ನು ಆಧಾರಿಸಿ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ವಿಜ್ಞಾನ, ಸಿನಿಮಾ, ಕ್ರೀಡೆ ಯಾವುದೇ ರಂಗದಲ್ಲಿ ದೊಡ್ಡ ಸುದ್ದಿಯಾದ ವಿಷವನ್ನು ಇಟ್ಟುಕೊಂಡು ಮೂರ್ತಿಗಳನ್ನು ನಿರ್ಮಿಸಿ ಜನರನ್ನು ಆಕರ್ಷಿಸಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

Brundavana Serial: ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?

ಶೇಕಡಾ 66 ಅಂಕ ತೆಗೆದು ಎಸ್‌ಎಸ್‌ಎಲ್‌ಸಿ ಪಾಸ್‌ ಆದ ಭಾಗ್ಯಾ, ಸಪ್ಪೆ ಮೋರೆ ಹಾಕಿ ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Kuntebille Movie: ಸೆಟ್ಟೇರಿತು ತರ್ಲೆ ವಿಲೇಜ್‌ ನಿರ್ದೇಶಕರ ಕುಂಟೆಬಿಲ್ಲೆ ಸಿನಿಮಾ; ಇದು ಪ್ರೇಮ ಕಾಮದ ಸುತ್ತ ತಿರುಗುವ ಚಿತ್ರ

Huu ಅಂತೀಯಾ...Uhuu ಅಂತೀಯಾ; ಸ್ಟಾರ್‌ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ, ಗೆದ್ದವರಿಗೆ ಲಕ್ಷ ಲಕ್ಷ ಬಹುಮಾನ

ಈ ಬಾರಿ ನೆರೆಯ ಟಾಲಿವುಡ್ ನ ಎರಡು ಸೂಪರ್ ಹಿಟ್ ಸಿನಿಮಾಗಳ ಪ್ರೇರಣೆಯಂತೆ ಮಹಾರಾಷ್ಟ್ರದಲ್ಲಿ ಗಣೇಶ ಮೂರ್ತಿಗಳನ್ನು ರಚಿಸಲಾಗಿದೆ. ಇತ್ತೀಚೆಗಷ್ಟೇ ಆರ್‌ಆರ್‌ಆರ್‌ನಲ್ಲಿ ರಾಮ್ ಚರಣ್ ಪಾತ್ರದಂತೆ ಗಣೇಶನ ವಿಗ್ರಹವನ್ನು ತಯಾರಿಸಲಾಗಿತ್ತು. ಇದೀಗ ಪುಷ್ಪಾ ಸ್ಟೈಲ್‌ನಲ್ಲಿರುವ ಮತ್ತೊಂದು ಗಣೇಶ ಮಹಾರಾಷ್ಟ್ರದಲ್ಲಿ ಜನಾಕರ್ಷಣೆಯಾಗಿದೆ.

ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ಸಿಗ್ನೇಚರ್ ಸ್ಟೈಲ್ ಅನ್ನು ಬಿಳಿ ಡ್ರೆಸ್ ಮತ್ತು ಅದೇ ಹೇರ್ ಸ್ಟೈಲ್ ನಲ್ಲಿ ಅನುಕರಿಸಿ ಈ ಗಣೇಶ ಮೂರ್ತಿಯನ್ನು ತಯಾರಿಸಲಾಗಿದೆ. ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ವೈರಲ್ ಮಾಡಿದ್ದಾರೆ. ಮಹಾರಾಷ್ಟ್ರದ ಮಂಟಪವೊಂದರಲ್ಲಿ ಈ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.

ಇಲ್ಲಿ ಮಾತ್ರವಲ್ಲ ಮಹಾರಾಷ್ಟ್ರದ ಹಲವೆಡೆ ಪುಷ್ಪಾ ಸ್ಟೈಲಿನ ಇತರೆ ಲುಕ್ ಗಳು, ನಡೆ-ನುಡಿಗಳಿಂದ ಕೂಡಿದ ಹಲವು ಗಣಪತಿಗಳು ಭಕ್ತರನ್ನು ರಂಜಿಸಲು ಸಿದ್ಧವಾಗಿವೆ.

ಅಭಿಮಾನಿಗಳು ಕೂಡ ಗಣಪತಿ ಮೂರ್ತಿಯೊಂದಿಗೆ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ತೆರೆಕಂಡಿದ್ದ ಪುಷ್ಪಾ ದಿ ರೈಸ್ ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದು ಗೊತ್ತೇ ಇದೆ. ಈ ಸಿನಿಮಾ ಉತ್ತರ ಭಾರತದಲ್ಲೂ ಧೂಳೆಬ್ಬಿಸಿತ್ತು.

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾ ಟಾಲಿವುಡ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ ಒಂದು. ಅಕ್ರಮ ಕೆಂಪು ಚಂದನದ ಹಿನ್ನೆಲೆಯಲ್ಲಿ ರಿಯಲಿಸ್ಟಿಕ್ ಆ್ಯಕ್ಷನ್ ಎಂಟರ್‌ಟೈನರ್ ಆಗಿ ಸಿನಿಮಾವನ್ನು ನಿರ್ದೇಶಕ ಸುಕುಮಾರ್ ಪುಷ್ಪ ತೆರೆಗೆ ತಂದಿದ್ದಾರೆ. ಪುಷ್ಪರಾಜ್ ಪಾತ್ರದಲ್ಲಿ ಬನ್ನಿ ನಟನೆ ಮತ್ತು ಮ್ಯಾನರಿಸಂ ಪ್ರಪಂಚದಾದ್ಯಂತ ಜನರಿಗೆ ಸಾಕಷ್ಟುಇಷ್ಟವಾಗಿತ್ತು. ಹೆಚ್ಚು ಜನಪ್ರಿಯವಾಗಿದೆ.

ಇತ್ತೀಚೆಗಷ್ಟೇ ಪುಷ್ಪ ದಿ ರೂಲ್ ಸೀಕ್ವೆಲ್ ಶೂಟಿಂಗ್ ಕೂಡ ಪೂಜಾ ಕಾರ್ಯಗಳೊಂದಿಗೆ ಆರಂಭವಾಗಿದೆ. ಮುಂದಿನ ವರ್ಷ ತೆರೆಗೆ ಬರಲಿದೆ. ಪುಷ್ಪಾ -2 ನಲ್ಲೂ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್, ಫಹಾದ್ ಫಾಜಿಲ್ ನಡುವಿನ ಜಗಳ ಮತ್ತು ಕೌಟುಂಬಿಕ ಭಾವನೆಗಳಿಗೆ ಪ್ರಾಮುಖ್ಯತೆ ನೀಡುವ ಕಥೆಯನ್ನು ಈ ಸೀಕ್ವೆಲ್ ಕಥೆಯು ಆಧರಿಸಿದೆ ಎಂದು ತಿಳಿದಿದೆ. ಈ ಸೀಕ್ವೆಲ್ ನಲ್ಲಿ ಪ್ರಿಯಾಮಣಿ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಪುಷ್ಪಾ ಹಿಟ್ ನಂತರ ಅದರಲ್ಲಿ ಅಲ್ಲು ಅರ್ಜುನ್ ಸಿಗ್ನೇಚರ್ ಸ್ಟೈಲ್, ಶ್ರೀವಲ್ಲಿ ಹಾಡಿನಲ್ಲಿ ಅವರ ಸ್ಟೆಪ್ ತುಂಬಾ ಜನಪ್ರಿಯವಾಯಿತು. ಗಲ್ಲಿ ಮಕ್ಕಳಿಂದ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್, ಫುಟ್ಬಾಲ್ ಪಂದ್ಯಗಳಲ್ಲೂ ಆಟಗಾರರು ಇವುಗಳನ್ನು ಅನುಕರಿಸಿದರು. ಇದೀಗ ಪುಷ್ಪಾ ಗಣೇಶ ಮೂರ್ತಿಗಳಿಗೂ ಪ್ರೇರಣೆಯಾಗಿದೆ.

ಅಲ್ಲದೆ RRR ಚಿತ್ರದಿಂದ ಸ್ಫೂರ್ತಿ ಪಡೆದು ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅವರ ಪಾತ್ರಗಳಲ್ಲಿ ಗಣೇಶ್ ಮೂರ್ತಿಯನ್ನು ತಯಾರಿಸಲಾಗಿದೆ. ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಇಂತಹ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಟಾಲಿವುಡ್ ತಾರೆಯರು ಪ್ಯಾನ್ ಇಂಡಿಯಾ ಮಟ್ಟಕ್ಕೆ ಮಾತ್ರವಲ್ಲ.. ಗಣೇಶ ಮೂರ್ತಿಯ ರೂಪದಲ್ಲೂ ಇದೀಗ ಭಾರಿ ಸುದ್ದಿಯಾಗುತ್ತಿರುವುದು ಒಂದು ವಿಶೇಷ. ದಕ್ಷಿಣ ಭಾರತ ಸಿನಿಮಾಗಳು ಹಿಂದಿ ಭಾಷಿಕರು ಹೆಚ್ಚಿರುವ ಉತ್ತರ ಭಾರತದಲ್ಲಿ ಸಖತ್ ಸೌಂಡ್ ಮಾಡುತ್ತಿವೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ