logo
ಕನ್ನಡ ಸುದ್ದಿ  /  ಮನರಂಜನೆ  /  ಗೂಗಲ್‌ನಲ್ಲಿ ಈ ವರ್ಷ ಅತ್ಯಧಿಕ ಜನರು ಹುಡುಕಾಟ ನಡೆಸಿದ 10 ಸಿನಿಮಾಗಳಿವು; ಪಟ್ಟಿಯಲ್ಲಿದೆಯೇ ಕನ್ನಡ ಸಿನಿಮಾ

ಗೂಗಲ್‌ನಲ್ಲಿ ಈ ವರ್ಷ ಅತ್ಯಧಿಕ ಜನರು ಹುಡುಕಾಟ ನಡೆಸಿದ 10 ಸಿನಿಮಾಗಳಿವು; ಪಟ್ಟಿಯಲ್ಲಿದೆಯೇ ಕನ್ನಡ ಸಿನಿಮಾ

Praveen Chandra B HT Kannada

Dec 12, 2023 03:28 PM IST

ಗೂಗಲ್‌ನಲ್ಲಿ ಈ ವರ್ಷ ಅತ್ಯಧಿಕ ಜನರು ಹುಡುಕಾಟ ನಡೆಸಿದ ಸಿನಿಮಾಗಳಿವು

    • Google Trends 2023: ಈ ವರ್ಷ ಭಾರತದಲ್ಲಿ ಗೂಗಲ್‌ ಸರ್ಚ್‌ನಲ್ಲಿ ಜವಾನ್‌, ಗದರ್‌ 2, ಆದಿಪುರುಷ್‌, ಲಿಯೋ ಸೇರಿದಂತೆ ಹಲವು ಸಿನಿಮಾಗಳನ್ನೂ ಅತ್ಯಧಿಕ ಜನರು ಹುಡುಕಾಟ ನಡೆಸಿದ್ದಾರೆ. ಗೂಗಲ್‌ ಸರ್ಚ್‌ನಲ್ಲಿ ಅಗ್ರ 10 ಸ್ಥಾನ ಪಡೆದ ಸಿನಿಮಾ ಮತ್ತು ಒಟಿಟಿ ಶೋಗಳ ವಿವರ ಇಲ್ಲಿದೆ.
ಗೂಗಲ್‌ನಲ್ಲಿ ಈ ವರ್ಷ ಅತ್ಯಧಿಕ ಜನರು ಹುಡುಕಾಟ ನಡೆಸಿದ ಸಿನಿಮಾಗಳಿವು
ಗೂಗಲ್‌ನಲ್ಲಿ ಈ ವರ್ಷ ಅತ್ಯಧಿಕ ಜನರು ಹುಡುಕಾಟ ನಡೆಸಿದ ಸಿನಿಮಾಗಳಿವು

ಭಾರತದ ಸಿನಿಮಾ ಕ್ಷೇತ್ರಕ್ಕೆ 2023 ವಿಶೇಷ ವರ್ಷ. ಹಲವು ಸಿನಿಮಾಗಳು ಈ ವರ್ಷ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಪಡೆದಿವೆ. ಈ ವರ್ಷ ಗೂಗಲ್‌ನಲ್ಲಿ ಅತ್ಯಧಿಕ ಜನರು ಹುಡುಕಾಟ ನಡೆಸಿದ ಸಿನಿಮಾಗಳಲ್ಲಿ ಜವಾನ್‌, ಗದರ್‌ 2, ಆದಿಪುರುಷ್‌, ಲಿಯೊ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಕಾಂತಾರ ಸೇರಿದಂತೆ ಕನ್ನಡದ ಯಾವುದೇ ಸಿನಿಮಾಗಳು ಅಗ್ರ ಪಟ್ಟಿಯಲ್ಲಿ ಇಲ್ಲ.

ಟ್ರೆಂಡಿಂಗ್​ ಸುದ್ದಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

ಭಾರತದಲ್ಲಿ ಈ ವರ್ಷ ಅತ್ಯಧಿಕ ಜನರು ಹುಡುಕಾಟ ನಡೆಸಿದ ಅಗ್ರ ಹತ್ತು ಸಿನಿಮಾಗಳ ಪಟ್ಟಿಯನ್ನು ಸರ್ಚ್‌ ಎಂಜಿನ್‌ ದೈತ್ಯ ಗೂಗಲ್‌ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಶಾರೂಖ್‌ ಖಾನ್‌ರ ಬ್ಲಾಕ್‌ಬಸ್ಟರ್‌ ಸಿನಿಮಾ ಜವಾನ್‌ ಮತ್ತು ಸನ್ನಿ ಡಿಯೋಲ್‌ ಅವರ ಗದರ್‌ 2 ಅಗ್ರ ಸ್ಥಾನದಲ್ಲಿವೆ. ಜವಾನ್‌, ಪಠಾನ್‌, ಗದಾರ್‌ 2 ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಅತ್ಯಧಿಕ ಗಳಿಕೆ ಮಾಡಿದ್ದವು.

ಶಾರೂಖ್‌ ಖಾನ್‌ರ ಪಠಾಣ್‌ ಸಿನಿಮಾ ಮಾತ್ರವಲ್ಲದೆ ಪ್ರಭಾಸ್‌ ನಟನೆಯ ಆದಿಪುರುಷ್‌, ಸಲ್ಮಾನ್‌ ಖಾನ್‌ ನಟನೆಯ ಟೈಗರ್‌ 3, ರಜನಿಕಾಂತ್‌ ನಟನೆಯ ಮೆಗಾ ಬ್ಲಾಕ್‌ಬಸ್ಟರ್‌ ಸಿನಿಮಾ ಜೈಲರ್‌ ಕೂಡ ಗೂಗಲ್‌ನ ಅಗ್ರ ಹತ್ತರ ಪಟ್ಟಿಯಲ್ಲಿವೆ. ಇದೇ ಸಂದರ್ಭದಲ್ಲಿ ದಳಪತಿ ವಿಜಯ್‌ ನಟನೆಯ ಲಿಯೊ ಮತ್ತು ವಾರೀಸು ಕೂಡ ಅತ್ಯಧಿಕ ಸರ್ಚ್‌ ಪಡೆದಿವೆ. ಹಾಲಿವುಡ್‌ ಸಿನಿಮಾಗಳಲ್ಲಿ ಭಾರತದಲ್ಲಿ ಹೆಚ್ಚು ಸರ್ಚ್‌ ಆದ ಸಿನಿಮಾಗಳಲ್ಲಿ ಕ್ರಿಸ್ಟ್ರೋಪರ್‌ ನೊಲನ್‌ ನಿರ್ದೇಶನದ ಒಪ್ಪೆನ್‌ಹೆಮಿಯರ್‌ ಮತ್ತು ಮಾರ್ಗೊಟ್‌ ರೋಬಿಯ ಬಾರ್ಬಿ ಸಿನಿಮಾ ಅಗ್ರ ಸ್ಥಾನದಲ್ಲಿವೆ.

ದೇಶದಲ್ಲಿ ಜವಾನ್‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ 640.25 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಪಠಾಣ್‌ ಸಿನಿಮಾವು 543.09 ಕೋಟಿ ಗಳಿಕೆ ಮಾಡಿತ್ತು. ಸನ್ನಿ ಡಿಯೋಲ್‌ರ ಗದರ್‌ ಸಿನಿಮಾವು ಭಾರತದ ಬಾಕ್ಸ್‌ ಆಫೀಸ್‌ನಲ್ಲಿ 525.70 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

ವಿವಾದ ಮತ್ತು ಕೆಟ್ಟ ವಿಮರ್ಶೆಗಳ ನಡುವೆಯೂ ಭಾರತದಲ್ಲಿ ಆದಿಪುರುಷ್‌ ಸಿನಿಮಾವು 288.15 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಟೈಗರ್‌ 3 ಸಿನಿಮಾವು ನಿರೀಕ್ಷೆಯಷ್ಟು ಗಳಿಕೆ ಮಾಡಿರಲಿಲ್ಲ. ಆದರೆ, ದೇಶದ ಬಾಕ್ಸ್‌ ಆಫೀಸ್‌ನಲ್ಲಿ 282.61 ಕೋಟಿ ಗಳಿಕೆ ಮಾಡಿತ್ತು.

ಭಾರತದಲ್ಲಿ 2023ರಲ್ಲಿ ಅತ್ಯಧಿಕ ಹುಡುಕಾದ ನಡೆಸಿದ ಸಿನಿಮಾಗಳು

  • ಜವಾನ್‌
  • ಗದರ್‌ 2
  • ಒಪ್ಪೆನ್‌ಹೆಮಿಯರ್‌
  • ಆದಿಪುರುಷ್‌
  • ಪಠಾಣ್‌
  • ದಿ ಕೇರಳ ಸ್ಟೋರಿ
  • ಜೈಲರ್‌
  • ಲಿಯೋ
  • ಟೈಗರ್‌ 3
  • ವಾರೀಸು

ಒಟಿಟಿಯಲ್ಲಿ ಹೆಚ್ಚು ಹುಡುಕಾಟ ನಡಿಸಿದ ಸಿನಿಮಾಗಳು

ಒಟಿಟಿ ಶೋಗಳಲ್ಲಿ ಶಾಹಿದ್‌ ಕಪೂರ್‌ರ ಒಟಿಟಿ ಸಿನಿಮಾ ಫಾರ್ಜಿ ಕುರಿತು ಹೆಚ್ಚು ಹುಡುಕಾಟ ನಡೆದಿದೆ. ಶಾಹಿದ್‌ ಕಪೂರ್‌ ಮತ್ತು ವಿಜಯ್‌ ಸೇತುಪತಿ ನಟನೆಯ ಈ ಸಿನಿಮಾ ಸಾಕಷ್ಟು ಚರ್ಚೆಗೀಡಾಗಿತ್ತು. ಇದರೊಂದಿಗೆ ಹನ್ಸಲ್‌ ಮೆಹ್ತಾರ ಸ್ಕ್ಯಾಮ್‌ 2003, ರಿಯಾಲ್ಟಿ ಶೋ ಬಿಗ್‌ಬಾಸ್‌ 17, ಗುನ್ಸ್‌ ಆಂಡ್‌ ಗುಲಾಬ್ಸ್‌, ಸೆಕ್ಸ್‌ ಲೈಫ್‌, ತಾಝಾ ಖಬರ್‌ ಮುಂತಾದ ಸಿನಿಮಾ/ಶೋಗಳ ಹುಡುಕಾಟ ಹೆಚ್ಚಾಗಿತ್ತು. ಗೂಗಲ್‌ನಲ್ಲಿ ಅತ್ಯಧಿಕ ಹುಡುಕಾಟ ಕಂಡ ಒಟಿಟಿ ಶೋಗಳು, ಸಿನಿಮಾಗಳ ವಿವರ ಇಲ್ಲಿದೆ.

  • ಫಾರ್ಜಿ
  • ವೆಡ್ನೆಸ್‌ಡೇ
  • ಅಸುರ್‌
  • ರಾಣಾ ನಾಯ್ಡು
  • ದಿ ಲಾಸ್ಟ್‌ ಆಫ್‌ ಅಸ್‌
  • ಸ್ಕ್ಯಾಮ್‌ 2003
  • ಬಿಗ್‌ಬಾಸ್‌ 17
  • ಗನ್ಸ್‌ ಆಂಡ್‌ ಗುಲಾಬ್ಸ್‌
  • ಸೆಕ್ಸ್‌/ಲೈಫ್‌
  • ತಾಝಾ ಖಬರ್‌

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ