logo
ಕನ್ನಡ ಸುದ್ದಿ  /  ಮನರಂಜನೆ  /   Kajal Aggarwal Glam Role: ಆ ಚಿತ್ರದಲ್ಲಿ ಸಮಂತಾ ಬದಲಿಗೆ ಕಾಜಲ್‌..ಮತ್ತೆ ಗ್ಲಾಮರ್‌ ರೋಲ್‌ಗೆ ರೆಡಿಯಾದ್ರಾ ಸಂತೂರ್‌ ಮಮ್ಮಿ..?

Kajal Aggarwal glam role: ಆ ಚಿತ್ರದಲ್ಲಿ ಸಮಂತಾ ಬದಲಿಗೆ ಕಾಜಲ್‌..ಮತ್ತೆ ಗ್ಲಾಮರ್‌ ರೋಲ್‌ಗೆ ರೆಡಿಯಾದ್ರಾ ಸಂತೂರ್‌ ಮಮ್ಮಿ..?

HT Kannada Desk HT Kannada

Nov 16, 2022 07:47 PM IST

ಸಮಂತಾ, ಕಾಜಲ್‌ ಅಗರ್‌ವಾಲ್

    • ಸಮಂತಾ ಬದಲಿಗೆ ಸ್ಪೆಷಲ್‌ ಹಾಡಿನಲ್ಲಿ ಕಾಜಲ್‌ ಅಗರ್‌ವಾಲ್‌ ಇರಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ತಿಳಿದಾಗಿನಿಂದ ಕಾಜಲ್‌ ಅಭಿಮಾನಿಗಳು 'ಪುಷ್ಪ-2' ಚಿತ್ರದಲ್ಲಿ ಅವರನ್ನು ಎದುರು ನೋಡುತ್ತಿದ್ದಾರೆ. ನಿರ್ದೇಶಕರೊಬ್ಬರು ಕಾಜಲ್‌ ಅವರನ್ನು ಭೇಟಿ ಮಾಡಿದ್ದು, ಆಗಲೂ ಕೂಡಾ ಕಾಜಲ್‌ ತಾನು ಗ್ಲಾಮರಸ್‌ ರೋಲ್‌ಗಳಿಗೆ ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರಂತೆ. ಇದನ್ನು ಕೇಳಿದರೆ ಕಾಜಲ್‌, ಮತ್ತೆ ಗ್ಲಾಮರಸ್‌ ರೋಲ್‌ನಲ್ಲಿ ನಟಿಸುವುದು, ಹಾಗೇ 'ಪುಷ್ಪ-2' ಚಿತ್ರದ ಸ್ಪೆಷಲ್‌ ಹಾಡಿನಲ್ಲಿ ನಟಿಸೋದು ಪಕ್ಕಾ ಎನ್ನಲಾಗುತ್ತಿದೆ.
ಸಮಂತಾ, ಕಾಜಲ್‌ ಅಗರ್‌ವಾಲ್
ಸಮಂತಾ, ಕಾಜಲ್‌ ಅಗರ್‌ವಾಲ್

ಗರ್ಭಿಣಿ ಆದಾಗಿನಿಂದ ಸಿನಿಮಾಗಳಿಂದ ದೂರ ಉಳಿದಿದ್ದ ಸಂತೂರ್‌ ಮಮ್ಮಿ ಕಾಜಲ್‌ ಅಗರ್‌ವಾಲ್‌, ಈಗ ಮತ್ತೆ ಮೊದಲಿನಂತೆ ಸ್ಲಿಮ್‌ ಆಗಿದ್ದು ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಎಸ್‌. ಶಂಕರ್‌ ನಿರ್ದೇಶನದ ಕಮಲ್‌ ಹಾಸನ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಇಂಡಿಯನ್‌ 2' ಚಿತ್ರದ ಮೂಲಕ ಕಾಜಲ್‌ ಅಗರ್‌ವಾಲ್‌, ಮತ್ತೆ ಚಿತ್ರರಂಗದಲ್ಲಿ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Huu ಅಂತೀಯಾ...Uhuu ಅಂತೀಯಾ; ಸ್ಟಾರ್‌ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ, ಗೆದ್ದವರಿಗೆ ಲಕ್ಷ ಲಕ್ಷ ಬಹುಮಾನ

OTT News: ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್‌ 2 ವೆಬ್‌ಸಿರೀಸ್‌ನ ಟ್ರೈಲರ್ ಬಿಡುಗಡೆ; ಜಿಯೊಸಿನಿಮಾ ಮೂಲಕ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

ಅವ್ರಿಗೊಂದು ದೊಡ್ಡ ನಮಸ್ಕಾರ! ಈಜುಡುಗೆ ಬಗ್ಗೆ ತಮಗಿದ್ದ ಭಯ ಎಷ್ಟು ಎಂಬುದನ್ನು ಮುಚ್ಚುಮರೆಯಿಲ್ಲದೇ ಹೇಳಿದ ಮೀನಾ

10 ವರ್ಷಗಳಲ್ಲಿ ಭಾರತ ಬದಲಾಗಿದೆ ಎಂದಿದ್ದ ರಶ್ಮಿಕಾ ಮಂದಣ್ಣಗೆ ಪರೋಕ್ಷವಾಗಿ ‘ಅಜ್ಞಾನಿ’ ಎಂದು ತಿವಿದ ಚೇತನ್‌ ಅಹಿಂಸಾ

ಕಾಜಲ್‌, 'ಇಂಡಿಯನ್‌ 2' ಸಿನಿಮಾ ಮಾತ್ರವಲ್ಲ, ಮೊದಲು ಒಪ್ಪಿಕೊಂಡಿದ್ದ ಎಲ್ಲಾ ಸಿನಿಮಾಗಳನ್ನು ಶೀಘ್ರದಲ್ಲೇ ಕಂಪ್ಲೀಟ್‌ ಮಾಡಲಿದ್ದಾರೆ. ಜೊತೆಗೆ ಹೊಸ ಸಿನಿಮಾಗಳ ಕಥೆಗಳನ್ನು ಕೂಡಾ ಕೇಳುತ್ತಿದ್ದಾರೆ. ಮದುವೆಯಾದ ನಂತರ ಕಾಜಲ್‌, ಗ್ಲಾಮರ್‌ ರೋಲ್‌ಗಳನ್ನು ಬಿಟ್ಟು ಮಹಿಳಾ ಪ್ರಧಾನ ಸಿನಿಮಾಗಳನ್ನು ಎದುರು ನೋಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಕಾಜಲ್‌, ಮಹಿಳಾ ಪ್ರಧಾನ ಪಾತ್ರಗಳನ್ನು ಬಿಟ್ಟು ಈಗಲೂ ಗ್ಲಾಮರ್‌ ರೋಲ್‌ಗಳಿಗೆ ರೆಡಿ ಇದ್ದಾರಂತೆ. 'ಪುಷ್ಪ 2' ಚಿತ್ರದ ಸ್ಪೆಷಲ್‌ ಹಾಡಿಗೆ ಚಿತ್ರತಂಡ ಕಾಜಲ್‌ ಅಗರ್‌ವಾಲ್‌ ಅವರನ್ನು ಕರೆ ತರುತ್ತಿದೆ ಎನ್ನಲಾಗಿದೆ. ಆದರೆ ಕಾಜಲ್‌ ಆಗಲೀ, ಚಿತ್ರತಂಡವಾಗಲೀ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿಲ್ಲ.

'ಪುಷ್ಪ 1' ಸಿನಿಮಾದಲ್ಲಿ ಸಮಂತಾ, ಊ ಅಂಟಾವಾ..ಹಾಡಿಗೆ ಹೆಜ್ಜೆ ಹಾಕಿ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟಿದ್ದರು. ಇದೀಗ ಸಮಂತಾ ಬದಲಿಗೆ ಸ್ಪೆಷಲ್‌ ಹಾಡಿನಲ್ಲಿ ಕಾಜಲ್‌ ಅಗರ್‌ವಾಲ್‌ ಇರಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ತಿಳಿದಾಗಿನಿಂದ ಕಾಜಲ್‌ ಅಭಿಮಾನಿಗಳು 'ಪುಷ್ಪ-2' ಚಿತ್ರದಲ್ಲಿ ಅವರನ್ನು ಎದುರು ನೋಡುತ್ತಿದ್ದಾರೆ. ನಿರ್ದೇಶಕರೊಬ್ಬರು ಕಾಜಲ್‌ ಅವರನ್ನು ಭೇಟಿ ಮಾಡಿದ್ದು, ಆಗಲೂ ಕೂಡಾ ಕಾಜಲ್‌ ತಾನು ಗ್ಲಾಮರಸ್‌ ರೋಲ್‌ಗಳಿಗೆ ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರಂತೆ. ಇದನ್ನು ಕೇಳಿದರೆ ಕಾಜಲ್‌, ಮತ್ತೆ ಗ್ಲಾಮರಸ್‌ ರೋಲ್‌ನಲ್ಲಿ ನಟಿಸುವುದು, ಹಾಗೇ 'ಪುಷ್ಪ-2' ಚಿತ್ರದ ಸ್ಪೆಷಲ್‌ ಹಾಡಿನಲ್ಲಿ ನಟಿಸೋದು ಪಕ್ಕಾ ಎನ್ನಲಾಗುತ್ತಿದೆ.

2 ತಿಂಗಳ ಹಿಂದೆಯೇ ಕಾಜಲ್‌ ಅಗರ್‌ವಾಲ್‌ ಚಿತ್ರರಂಗಕ್ಕೆ ಕಮ್‌ ಬ್ಯಾಕ್‌ ಮಾಡಿದ್ದರು. ಈ ವಿಚಾರವಾಗಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್‌ ಹಂಚಿಕೊಂಡಿದ್ದರು. ಎಲ್ಲವನ್ನೂ ಮೊದಲಿನಿಂದ ಶುರು ಮಾಡಬೇಕು ಎನ್ನಿಸುತ್ತಿದೆ ಎಂದು ಬರೆದುಕೊಂಡಿದ್ದರು. ಕುದುರೆ ಸವಾರಿ ಅಭ್ಯಾಸ ಮಾಡುತ್ತಿರುವ ವಿಡಿಯೋವೊಂದರನ್ನು ಹಂಚಿಕೊಂಡಿದ್ದ ಕಾಜಲ್‌, ''ಬಹಳ ಎಕ್ಸೈಟ್‌ ಆಗಿದ್ದೇನೆ, ಹೆರಿಗೆಯಾದ ನಾಲ್ಕು ತಿಂಗಳ ನಂತರ ಮತ್ತೆ ಕೆಲಸಕ್ಕೆ ಹಾಜರಾಗಿದ್ದೇನೆ. ಎಲ್ಲವನ್ನೂ ಮೊದಲಿನಿಂದ ಆರಂಭಿಸಬೇಕು ಎನ್ನುವಂತಾಗಿದೆ. ನನ್ನ ದೇಹ ಈಗ ಮೊದಲಿನಂತೆ ಇಲ್ಲ. ಮೊದಲು ಮಾಡುತ್ತಿದ್ದ ಕೆಲಸವನ್ನು ಈಗ ಮಾಡಲಾಗುತ್ತಿಲ್ಲ.''

''ಮೊದಲಿನಂತೆ ಶಕ್ತಿ ಗಳಿಸಲು ಬಹಳ ಶ್ರಮ ಪಡಬೇಕು. ಕುದುರಿ ಸವಾರಿ ಮಾಡುತ್ತಿರುವುದು ದೊಡ್ಡ ಸಾಹಸ ಎನ್ನಿಸುತ್ತಿದೆ. ನಮ್ಮ ದೇಹ ಬದಲಾಗಬಹುದು, ಅದಕ್ಕಾಗಿ ನಮ್ಮೊಳಗಿನ ಸ್ಫೂರ್ತಿ, ಉತ್ಸಾಹವನ್ನು ಮರೆಯುವ ಅವಶ್ಯಕತೆ ಇಲ್ಲ. ನಾವು ನಮಗಾಗಿ ಬದುಕಬೇಕು. 'ಇಂಡಿಯನ್‌ 2' ಚಿತ್ರೀಕರಣಕ್ಕೆ ಮತ್ತೆ ಹಾಜರಾಗಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ಚಿತ್ರರಂಗ ಕೂಡಾ ನನ್ನ ಮನೆ ಇದ್ದಂತೆ. ಸಾಕಷ್ಟು ಕಲಿಯಲು ಅವಕಾಶ ನೀಡಿದ ಚಿತ್ರರಂಗಕ್ಕೆ ನಾನು ಎಂದಿಗೂ ಕೃತಜ್ಞಳಾಗಿರುತ್ತೇನೆ'' ಎಂದು ಕಾಜಲ್‌ ಅಗರ್‌ವಾಲ್‌ ಬರೆದುಕೊಂಡಿದ್ದರು.

2020 ರಲ್ಲಿ ತಮ್ಮ ಧೀರ್ಘಕಾಲದ ಸ್ನೇಹಿತ ಗೌತಮ್ ಕಿಚ್ಲು ಅವರನ್ನು ವಿವಾಹವಾಗಿದ್ದ ಕಾಜಲ್, ಮೊದಲು ಒಪ್ಪಿಕೊಂಡಿದ್ದ ಎಲ್ಲಾ ಪ್ರಾಜೆಕ್ಟ್​​​​ಗಳನ್ನು ಮುಗಿಸಿ ಕುಟುಂಬದ ಕಡೆಗೆ ಗಮನ ನೀಡಿದರು. ಗರ್ಭಿಣಿಯಾದ ನಂತರ ತಾವು ಹೊಸದಾಗಿ ಸಹಿ ಹಾಕಿದ್ದ 3-4 ಸಿನಿಮಾಗಳಿಂದ ಹೊರಬಂದಿದ್ದರು. ಪ್ರೆಗ್ನೆನ್ಸಿ ಸಮಯದಲ್ಲಿ ಕಾಜಲ್‌ ದಪ್ಪ ಆಗಿದ್ದರು. ಬೇಬಿ ಬಂಪ್ ಫೋಟೋಗಳನ್ನು ಕಾಜಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಕೆಲವರು ಅವರ ಫೋಟೋಗಳನ್ನು ಇಷ್ಟಪಟ್ಟರೆ, ಮತ್ತೆ ಕೆಲವರು ಆಕೆ ಗರ್ಭಿಣಿ ಎಂಬುದನ್ನೂ ನೋಡದೆ ಬಾಡಿ ಶೇಮಿಂಗ್ ಮಾಡಿದ್ದರು. ''ಗರ್ಭಾವಸ್ಥೆಯಲ್ಲಿ ಮಗು ಬೆಳವಣಿಗೆಯಾದಂತೆಲ್ಲಾ ನಮ್ಮ ದೇಹದಲ್ಲಿ ಕೆಲವೊಂದು ಬದಲಾವಣೆಗಳಾಗುತ್ತವೆ. ಮಾನಸಿಕವಾಗಿಯೂ ಕೆಲವೊಂದು ಬದಲಾವಣೆಗಳಾಗುತ್ತವೆ. ಮಗು ಜನಿಸದ ಬಳಿಕ ನಾನು ಮೊದಲಿನಂತೆ ಆಗಲೂಬಹುದು, ಆಗದೇ ಕೂಡಾ ಇರಬಹುದು. ದೇಹದಲ್ಲಾಗುವ ಈ ಬದಲಾವಣೆ ನೈಸರ್ಗಿಕ ಪ್ರಕ್ರಿಯೆ'' ಎಂದು ಕಾಜಲ್‌ ಅಗರ್‌ವಾಲ್‌ ಪ್ರತಿಕ್ರಿಯಿಸಿದ್ದರು. ಇದೀಗ ಮತ್ತೆ ಅವರು ಮೊದಲಿನಂತೆ ಸ್ಲಿಮ್‌ ಆಗಿ ನಟನೆಗೆ ವಾಪಸಾಗಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ