logo
ಕನ್ನಡ ಸುದ್ದಿ  /  ಮನರಂಜನೆ  /  Ponniyin Selvan 2: ಕೆಜಿಎಫ್‌ ಭಾರತದ ಗಡಿ ಜಿಗಿದರೆ, ಕಾಂತಾರ ಧಾರ್ಮಿಕ ಗಡಿ ದಾಟಿದೆ; ಕನ್ನಡ ಸಿನಿಮಾ ಕೊಂಡಾಡಿದ ಪೊನ್ನಿಯನ್‌ ಸೇಲ್ವನ್‌ ತಂಡ

Ponniyin Selvan 2: ಕೆಜಿಎಫ್‌ ಭಾರತದ ಗಡಿ ಜಿಗಿದರೆ, ಕಾಂತಾರ ಧಾರ್ಮಿಕ ಗಡಿ ದಾಟಿದೆ; ಕನ್ನಡ ಸಿನಿಮಾ ಕೊಂಡಾಡಿದ ಪೊನ್ನಿಯನ್‌ ಸೇಲ್ವನ್‌ ತಂಡ

Apr 23, 2023 01:21 PM IST

ಕೆಜಿಎಫ್‌ ಭಾರತದ ಗಡಿ ಜಿಗಿದರೆ, ಕಾಂತಾರ ಧಾರ್ಮಿಕ ಗಡಿ ದಾಟಿದೆ; ಕನ್ನಡ ಸಿನಿಮಾ ಕೊಂಡಾಡಿದ ಪೊನ್ನಿಯನ್‌ ಸೇಲ್ವನ್‌ ತಂಡ

    • ಪೊನ್ನಿಯನ್‌ ಸೇಲ್ವನ್‌ ಬಿಡುಗಡೆ ಹಿನ್ನೆಲೆಯಲ್ಲಿ ತಮಿಳಿನ ಸ್ಟಾರ್‌ ನಟರು ಬೆಂಗಳೂರಿಗೆ ಆಗಮಿಸಿ ಸಿನಿಮಾ ಪ್ರಚಾರ ಮಾಡಿದ್ದಾರೆ. ತಮ್ಮ ಸಿನಿಮಾದ ಜತೆಗೆ ಕರುನಾಡ ಹೆಮ್ಮೆಯ ಚಿತ್ರಗಳ ಬಗ್ಗೆಯೂ ಮಾತನಾಡಿದ್ದಾರೆ. 
ಕೆಜಿಎಫ್‌ ಭಾರತದ ಗಡಿ ಜಿಗಿದರೆ, ಕಾಂತಾರ ಧಾರ್ಮಿಕ ಗಡಿ ದಾಟಿದೆ; ಕನ್ನಡ ಸಿನಿಮಾ ಕೊಂಡಾಡಿದ ಪೊನ್ನಿಯನ್‌ ಸೇಲ್ವನ್‌ ತಂಡ
ಕೆಜಿಎಫ್‌ ಭಾರತದ ಗಡಿ ಜಿಗಿದರೆ, ಕಾಂತಾರ ಧಾರ್ಮಿಕ ಗಡಿ ದಾಟಿದೆ; ಕನ್ನಡ ಸಿನಿಮಾ ಕೊಂಡಾಡಿದ ಪೊನ್ನಿಯನ್‌ ಸೇಲ್ವನ್‌ ತಂಡ

Ponniyin Selvan 2 Promotion: ಮಣಿರತ್ನಂ (Manirathnam) ಡ್ರೀಮ್ ಪ್ರಾಜೆಕ್ಟ್ 'ಪೊನ್ನಿಯಿನ್ ಸೆಲ್ವನ್ 2' (Ponniyin Selvan 2) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ ತಿಂಗಳ 28ರಂದು ವಿಶ್ವಾದ್ಯಂತ ಚಿತ್ರ ತೆರೆಗಪ್ಪಳಿಸುತ್ತಿದೆ. ಉತ್ತರ ಭಾರತದಲ್ಲಿ ಪ್ರಚಾರ ಮುಗಿಸಿರುವ ಚಿತ್ರತಂಡ ದಕ್ಷಿಣದಲ್ಲಿ ಭರಪೂರ್‌ ಪ್ರಚಾರ ಕಾರ್ಯ ನಡೆಸುತ್ತಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಮೋಷನ್ ಮಾಡಿರುವ ಪಿಎಸ್-2 ಬಳಗ ಬೆಂಗಳೂರಿನಲ್ಲಿಯೂ ಪ್ರಮೋಷನ್ ಕಹಳೆ ಮೊಳಗಿಸಿದೆ. ನಿನ್ನೆ ಖಾಸಗಿ ಹೋಟೆಲ್‌ನಲ್ಲಿ ನಡೆದ ಇವೆಂಟ್‌ನಲ್ಲಿ ನಟ ವಿಕ್ರಂ, ತ್ರಿಷಾ, ಕಾರ್ತಿ ಹಾಗೂ ಜಯಂ ರವಿ ಭಾಗಿಯಾಗಿದ್ದರು. ಈ ವೇಳೆ ಕನ್ನಡದ ಸಿನಿಮಾ ಹಾಗೂ ಕನ್ನಡ ಕಲಾವಿದರನ್ನು ತಮಿಳು ಸ್ಟಾರ್ಸ್ಸ್ ಬಾಯ್ ತುಂಬಾ ಹೊಗಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

‘ಪೌಡರ್‌’ ಕೊಟ್ಟು ಪವರ್‌ ಹೆಚ್ಚಿಸಲು ಹೊರಟ ಗುಲ್ಟು ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ; ನಗು ಉಕ್ಕಿಸುವ ಟೀಸರ್‌ ಬಿಡುಗಡೆ

ಶಿಳ್ಳೆ, ಕೇಕೆ, ಚಪ್ಪಾಳೆ.. ಬೆಳ್ಳಿತೆರೆ ಮೇಲೆ ಮತ್ತೆ ಮಿನುಗಿದ ಕಲ್ಟ್‌ ಕ್ಲಾಸಿಕ್‌ A ಚಿತ್ರ; ಥಿಯೇಟರ್‌ ಮುಂದೆ ಹಬ್ಬ ಮಾಡಿದ ಉಪ್ಪಿ ಫ್ಯಾನ್ಸ್

ನಮ್ಮ ಚಿತ್ರದ ಹೆಸರು ದಿ ಜಡ್ಜ್‌ಮೆಂಟ್‌ ಆಗಿರಬಹುದು, ಪ್ರೇಕ್ಷಕರು ಕೊಡುವ ಜಡ್ಜ್‌ಮೆಂಟೇ ನಮಗೆ ಅಂತಿಮ; ರವಿಚಂದ್ರನ್

ಕೊನೆಗೂ ಮದುವೆ ಮುನ್ಸೂಚನೆ ನೀಡಿ, ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಡಾರ್ಲಿಂಗ್‌ ಪ್ರಭಾಸ್‌; ಅಷ್ಟಕ್ಕೂ ಹುಡುಗಿ ಯಾರಿರಬಹುದು?

ಕನ್ನಡ ಸಿನಿಮಾಗಳ ಬಗ್ಗೆ ಮೆಚ್ಚುಗೆ

ಮೊದಲಿಗೆ ಕನ್ನಡಿಗರಿಗೆ ವಂದಿಸಿ ಮಾತನಾಡಿದ ಜಯಂ ರವಿ, ಕೆಜಿಎಫ್ ಭಾರತದ ಭಾಷೆ ಗಡಿ ಮುರಿದಿದ್ದರೆ, ಕಾಂತಾರ ಧಾರ್ಮಿಕ ಗಡಿ ಮುರಿದಿದೆ. ಅದರಿಂದ ನಮಗೆ ಧಾರ್ಮಿಕ ನಂಬಿಕೆ ಹೆಚ್ಚಾಗಿದೆ. ಪ್ರಪಂಚದ ಸಿನಿಮಾ ಲೋಕದಲ್ಲಿ ಕನ್ನಡ ಇಂಡಸ್ಟ್ರಿ ಗುರುತರ ಪಾತ್ರ ವಹಿಸಿದೆ ಎಂದರು.

"ನನಗೆ ಎಲ್ಲಾ ತರಹ ಪಾತ್ರಗಳನ್ನು ಮಾಡಲು ಇಷ್ಟ. ಆದಿತ್ಯ ಕರಿಕಾಳನ್ ಪಾತ್ರ ನನಗೆ ತೃಪ್ತಿ ಕೊಟ್ಟಿದೆ. ಪಿಎಸ್ 2 ಒಂದೊಳ್ಳೆ ಐತಿಹಾಸಿಕ ಸಿನಿಮಾ. ಪ್ರತಿಯೊಬ್ಬರು ನೋಡಲೇಬೇಕು ಮೊದಲ ಭಾಗಕ್ಕೆ ನೀವು ತೋರಿಸಿದ ಪ್ರೀತಿ ಪಿಎಸ್2 ಸೀಕ್ವೆಲ್‌ ಮೇಲೆಯೂ ಇರಲಿ. ಹತ್ತನೇ ಶತಮಾನದ ರಾಜರು ಹಿಂದೆ ಹೇಗೆ ಬದುಕುತ್ತಿದ್ದರು ಎಂಬುವುದು ಗೊತ್ತಿಲ್ಲ. ಈ ಚಿತ್ರದಲ್ಲಿ ಅದನ್ನು ದೃಶ್ಯದ ಮೂಲಕ ಕಟ್ಟಿಕೊಡಲಾಗಿದೆ. ಪಿಎಸ್, ಪಿಎಸ್ 2 ಗೆ ತಳಹದಿಯಾಗಿದೆ ಎಂದರು ವಿಕ್ರಂ.

ಚಿತ್ರತಂಡಕ್ಕೆ ಕರ್ನಾಟಕದ ವಿಶೇಷತೆಗಳ ಉಡುಗೊರೆ

ತ್ರಿಷಾ ಕೂಡ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡು. ಮಣಿರತ್ನಂ ಅವರ ಜೊತೆ ಕೆಲಸ ಮಾಡಿರುವುದಕ್ಕೆ ಸಂತಸ ಇದೆ ಎಂದರು. ಇನ್ನೂ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡಕ್ಕೆ ಚನ್ನಪಟ್ಟಣ ಬೊಂಬೆ, ಚಿಕ್ಕಮಗಳೂರು ಕಾಫಿಪುಡಿ, ಧಾರವಾಡ ಪೇಡಾ, ಮೈಸೂರು ಸ್ಯಾಂಡಲ್ ಸೋಪ್ ಗಿಫ್ಟ್ ಬಾಕ್ಸ್ ನೋಡಿ ಚಿತ್ರತಂಡ ಖುಷಿಪಟ್ಟಿತು.

ಕಲ್ಕಿ ಕೃಷ್ಣಮೂರ್ತಿ ಬರೆದಿರೋ ಕಾದಂಬರಿ 'ಪೊನ್ನಿಯಿನ್ ಸೆಲ್ವನ್' ಆಧಾರಿಸಿದ ಸಿನಿಮಾವಿದು. ಸೆಪ್ಟೆಂಬರ್ 30ರಲ್ಲಿ ತೆರೆಕಂಡ ಮೊದಲ ಚಾಪ್ಟರ್ ಮೆಗಾ ಹಿಟ್ ಆಗಿತ್ತು. ಬಾಕ್ಸಾಫೀಸ್‌ನಲ್ಲಿ 500 ಕೋಟಿ ರೂ. ಲೂಟಿ ಮಾಡಿತ್ತು. ಅದೇ ಸಕ್ಸಸ್‌ನಲ್ಲೇ 'ಪೊನ್ನಿಯಿನ್ ಸೆಲ್ವನ್ 2' ಸೀಕ್ವೆಲ್ ತೆರೆಗೆ ಬರ್ತಿದೆ. ಚೋಳ ಸಾಮ್ರಾಜ್ಯದ ದೃಶ್ಯವೈಭೋಗದ ಈ ಸಿನಿಮಾ ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಏಪ್ರಿಲ್ 28ಕ್ಕೆ ತೆರೆಕಾಣಲಿದೆ.

ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ ನಡಿ ಅದ್ದೂರಿಯಾಗಿ ಈ ಸಿನಿಮಾ ನಿರ್ಮಾಣವಾಗಿದೆ. 'ಪೊನ್ನಿಯಿನ್ ಸೆಲ್ವನ್ -2' ಸಿನಿಮಾದಲ್ಲಿ ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ದಿಗ್ಗಜ ಕಲಾವಿದರ ಸಮಾಗಮ ಆಗಿದೆ. ಮಣಿರತ್ನಂ ನಿರ್ದೇಶನ ಹೈಲೈಟ್ ಆದ್ರೆ, ಎ.ಆರ್.ರೆಹಮಾನ್ ಮ್ಯೂಸಿಕ್, ರವಿವರ್ಮನ್ ಕ್ಯಾಮೆರಾ ವರ್ಕ್‌ ಇದೆ. ಇದೇ 28ಕ್ಕೆ ವರ್ಲ್ಡ್ ವೈಡ್ ಈ ಚಿತ್ರ ತೆರೆಗೆ ಬರುತ್ತಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ