logo
ಕನ್ನಡ ಸುದ್ದಿ  /  ಮನರಂಜನೆ  /  Dhanush: ವಯಸ್ಸು 40 ಆಯ್ತು, ಇನ್ನು ರೊಮ್ಯಾಂಟಿಕ್‌ ಸಿನಿಮಾಗಳಿಗೆ ಫುಲ್‌ ಸ್ಟಾಪ್‌: ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ನಟ ಧನುಷ್‌ ಹೇಳಿಕೆ

Dhanush: ವಯಸ್ಸು 40 ಆಯ್ತು, ಇನ್ನು ರೊಮ್ಯಾಂಟಿಕ್‌ ಸಿನಿಮಾಗಳಿಗೆ ಫುಲ್‌ ಸ್ಟಾಪ್‌: ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ನಟ ಧನುಷ್‌ ಹೇಳಿಕೆ

Rakshitha Sowmya HT Kannada

Jul 23, 2023 06:26 AM IST

ಕಾಲಿವುಡ್‌ ನಟ ಧನುಷ್

  • ನನಗೆ 40 ವರ್ಷ ಆಯ್ತು, ಇನ್ಮುಂದೆ ರೊಮ್ಯಾಂಟಿಕ್‌ ಸಿನಿಮಾಗಳಲ್ಲಿ ಆಕ್ಟ್‌ ಮಾಡುವುದಿಲ್ಲ ಎಂದು ಧನುಷ್‌ ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ಹೇಳಿದ್ದಾರೆ.  ಧನುಷ್‌ ಇದನ್ನು ತಮಾಷೆಯಾಗಿ ಹೇಳಿದ್ದೋ ಅಥವಾ ನಿಜಕ್ಕೂ ಅವರು ರೊಮ್ಯಾಂಟಿಕ್‌ ಸಿನಿಮಾಗಳಲ್ಲಿ ನಟಿಸಬಾರದು ಎಂದು ನಿರ್ಧರಿಸಿದ್ದಾರೋ ಅನ್ನೋದು ಇನ್ಮುಂದೆ ತಿಳಿಯಲಿದೆ.

ಕಾಲಿವುಡ್‌ ನಟ ಧನುಷ್
ಕಾಲಿವುಡ್‌ ನಟ ಧನುಷ್

ತಮಿಳು ನಟ ಧನುಷ್‌ ವೈಯಕ್ತಿಕ ಹಾಗೂ ವೃತ್ತಿ ಜೀವನ ಎರಡರಿಂದಲೂ ಸುದ್ದಿಯಾಗುತ್ತಿದ್ದಾರೆ. ಕಳೆದ ವರ್ಷ ಧನುಷ್‌ ಹಾಗೂ ಸೌಂದರ್ಯ ರಜನಿಕಾಂತ್‌ ಡಿವೋರ್ಸ್‌ ಘೋಷಿಸಿ ಎಲ್ಲರಿಗೂ ಶಾಕ್‌ ನೀಡಿದ್ದರು. 18 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ ಬೈ ಹೇಳಿ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದ್ದರು. ನಂತರ ಏನೂ ಆಗಿಲ್ಲವಂತೆ ಮಾಜಿ ಪತಿ-ಪತ್ನಿ ಇಬ್ಬರೂ ತಮ್ಮ ಪಾಡಿಗೆ ತಾವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಇನ್‌ಸ್ಟಾಗ್ರಾಮ್‌ ಲೈವ್‌ ಬಂದಿದ್ದ ನಟ ಧನುಷ್

ಇತ್ತೀಚೆಗೆ ಧನುಷ್‌ ತಿರುಪತಿಯಲ್ಲಿ ಕಾಣಿಸಿಕೊಂಡಿದ್ದರು. ಇಷ್ಟು ದಿನಗಳ ಕಾಲ ಉದ್ದ ಕೂದಲು ಗಡ್ಡದಲ್ಲಿ ಓಡಾಡುತ್ತಿದ್ದ ಧನುಷ್‌ ಗಡ್ಡ ತೆಗೆಸಿ, ತಲೆ ಕೂದಲು ಮುಡಿಕೊಟ್ಟು ಹೊಸ ಲುಕ್‌ನಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಿದ್ದರು. ಧನುಷ್‌ ಮೂರು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ಅವರು ಅಭಿಮಾನಿಗಳಿಗಾಗಿ ಇನ್‌ಸ್ಟಾಗ್ರಾಮ್‌ ಲೈವ್‌ ಬಂದು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ಧಾರೆ. ಜೊತೆಗೆ ನಾನು ಇನ್ಮುಂದೆ ರೊಮ್ಯಾಂಟಿಕ್‌ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿ ಆಶ್ಚರ್ಯ ಮೂಡಿಸಿದ್ದಾರೆ.‌

ಇನ್ಮುಂದೆ ರೊಮ್ಯಾಂಟಿಕ್‌ ಸಿನಿಮಾಗಳಲ್ಲಿ ಅಭಿನಯಿಸುವುದಿಲ್ಲ

ಧನುಷ್‌ ಅಭಿನಯದ 'ಮರಿಯಾನ್‌' ಸಿನಿಮಾ 2013 ಜುಲೈ 19 ರಂದು ತೆರೆ ಕಂಡಿತ್ತು. ಈ ಸಿನಿಮಾಗೆ 10 ವರ್ಷಗಳು ತುಂಬಿದ ಹಿನ್ನೆಲೆ ಧನುಷ್‌ ಹಾಗೂ ಸಂಗೀತ ನಿರ್ದೇಶಕ ಇಬ್ಬರೂ ಇನ್‌ಸ್ಟಾಗ್ರಾಮ್‌ ಲೈವ್‌ಗೆ ಬಂದಿದ್ದರು. ಈ ವೇಳೆ ಅಭಿಮಾನಿಗಳು ಇಬ್ಬರಿಗೂ ಪ್ರಶ್ನೆಗಳನ್ನು ಕೇಳಿದ್ದಾರೆ. 'ಮರಿಯಾನ್‌'ನಂತೆ ನೀವು ರೊಮ್ಯಾಂಟಿಕ್‌ ಸಿನಿಮಾಗಳಲ್ಲಿ ನಟಿಸಿ ಎಂದು ಫ್ಯಾನ್ಸ್‌ ಒತ್ತಾಯಿಸಿದ್ದಾರೆ. ಇದಕ್ಕೆ ತಮಾಷೆಯಾಗಿ ಉತ್ತರಿಸಿದ ಧನುಷ್‌ ''ನನಗೆ 40 ವರ್ಷ ಆಯ್ತು, ಇನ್ಮುಂದೆ ರೊಮ್ಯಾಂಟಿಕ್‌ ಸಿನಿಮಾಗಳಲ್ಲಿ ಆಕ್ಟ್‌ ಮಾಡುವುದಿಲ್ಲ'' ಎಂದು ಉತ್ತರಿಸಿದ್ದಾರೆ. ಧನುಷ್‌ ಇದನ್ನು ತಮಾಷೆಯಾಗಿ ಹೇಳಿದ್ದೋ ಅಥವಾ ನಿಜಕ್ಕೂ ಅವರು ರೊಮ್ಯಾಂಟಿಕ್‌ ಸಿನಿಮಾಗಳಲ್ಲಿ ನಟಿಸಬಾರದು ಎಂದು ನಿರ್ಧರಿಸಿದ್ದಾರೋ ಅನ್ನೋದು ಇನ್ಮುಂದೆ ತಿಳಿಯಲಿದೆ. ಪೊಲ್ಲಾದವನ್‌, 3, ರಾಂಜಾನ, ಯಾರಡಿ ನೀ ಮೋಹಿನಿ, ತಂಗ ಮಗನ್‌, ಪುದು ಪೆಟ್ಟೈ ಸೇರಿ ಇನ್ನೂ ಅನೇಕ ರೊಮ್ಯಾಂಟಿಕ್‌ ಸಿನಿಮಾಗಳಲ್ಲಿ ಧನುಷ್‌ ನಟಿಸಿದ್ದಾರೆ.

ಧನುಷ್‌ ಮುಂದಿನ ಸಿನಿಮಾಗಳು

ಧನುಷ್‌ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯಕ್ಕೆ 'ಕ್ಯಾಪ್ಟನ್‌ ಮಿಲ್ಲರ್‌' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಈ ಚಿತ್ರಕ್ಕೆ ಅರುಣ್‌ ಮಥೇಶ್ವರನ್‌ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸತ್ಯ ಜ್ಯೋತಿ ಫಿಲ್ಮ್ಸ್‌ ಬ್ಯಾನರ್‌ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಚಿತ್ರದಲ್ಲಿ ಕನ್ನಡ ಸ್ಟಾರ್‌ ನಟ ಶಿವರಾಜ್‌ಕುಮಾರ್‌ ಕೂಡಾ ನಡಿಸಿದ್ದಾರೆ. ಸಿನಿಮಾ ಇದೇ ವರ್ಷ ತೆರೆ ಕಾಣಲಿದೆ. ಇದರ ಜೊತೆಗೆ 'ತೇರಿ ಇಶ್ಕ್‌ ಮೇ' ಎಂಬ ಹಿಂದಿ ಸಿನಿಮಾದಲ್ಲಿ ಧನುಷ್ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ಹೊಸ ಸಿನಿಮಾವೊಂದು ಅನೌನ್ಸ್‌ ಆಗಿದೆ. ಇದು ಧನುಷ್‌ ಅಭಿನಯದ 50ನೇ ಸಿನಿಮಾ ಆಗಿದ್ದು ಈ ಚಿತ್ರಕ್ಕೆ ಸ್ವತ: ಧನುಷ್‌ ಕಥೆ ಬರೆದು ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರವನ್ನು ಸನ್‌ ಪಿಕ್ಚರ್ಸ್‌ ನಿರ್ಮಿಸುತ್ತಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ