logo
ಕನ್ನಡ ಸುದ್ದಿ  /  ಮನರಂಜನೆ  /  Ponniyin Selvan 2 Box Office: ಬಾಕ್ಸ್‌ ಆಫೀಸ್‌ನಲ್ಲಿ ಮೂರನೇ ದಿನಕ್ಕೆ ಶತ ಕೋಟಿ ಬಾರಿಸಿದ ಪೊನ್ನಿಯನ್ ಸೆಲ್ವನ್-2

Ponniyin Selvan 2 Box office: ಬಾಕ್ಸ್‌ ಆಫೀಸ್‌ನಲ್ಲಿ ಮೂರನೇ ದಿನಕ್ಕೆ ಶತ ಕೋಟಿ ಬಾರಿಸಿದ ಪೊನ್ನಿಯನ್ ಸೆಲ್ವನ್-2

HT Kannada Desk HT Kannada

Apr 30, 2023 04:01 PM IST

ಬಾಕ್ಸ್‌ ಆಫೀಸ್‌ನಲ್ಲಿ ಎರಡೇ ದಿನಕ್ಕೆ ಶತ ಕೋಟಿ ಬಾರಿಸಿದ ಪೊನ್ನಿಯನ್ ಸೆಲ್ವನ್-2

    • ಮಣಿರತ್ನಂ ನಿರ್ದೇಶನದ ಪೊನ್ನಿಯನ್‌ ಸೇಲ್ವನ್‌ 2 ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ ದಾಖಲೆಯೊಂದನ್ನು ಬರೆದಿದೆ. ಕಲೆಕ್ಷನ್‌ ವಿಚಾರದಲ್ಲಿ ಶತಕೋಟಿ ಗಡಿ ದಾಟಿದೆ. 
ಬಾಕ್ಸ್‌ ಆಫೀಸ್‌ನಲ್ಲಿ ಎರಡೇ ದಿನಕ್ಕೆ ಶತ ಕೋಟಿ ಬಾರಿಸಿದ ಪೊನ್ನಿಯನ್ ಸೆಲ್ವನ್-2
ಬಾಕ್ಸ್‌ ಆಫೀಸ್‌ನಲ್ಲಿ ಎರಡೇ ದಿನಕ್ಕೆ ಶತ ಕೋಟಿ ಬಾರಿಸಿದ ಪೊನ್ನಿಯನ್ ಸೆಲ್ವನ್-2

Ponniyin Selvan 2 Box office: ಬಹುತಾರಾಗಣದ ಪೊನ್ನಿಯನ್‌ ಸೇಲ್ವನ್‌ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುವುದರ ಜತೆಗೆ ಬಾಕ್ಸ್‌ ಆಫೀಸ್‌ನಲ್ಲೂ ಕಮಾಯಿ ಮಾಡುತ್ತಿದೆ. ಸಿನಿಮಾ ಬಿಡುಗಡೆಯಾದ ಕೇವಲ ಮೂರೇ ದಿನಕ್ಕೆ ಶತಕೋಟಿ ಕ್ಲಬ್‌ಗೆ ಸೇರಿದೆ. ಖ್ಯಾತ ನಿರ್ದೇಶಕ ಮಣಿರತ್ನಂ (Manirathnam) ಸಾರಥ್ಯದಲ್ಲಿ ಮೂಡಿಬಂದ ಪೊನ್ನಿಯಿನ್ ಸೆಲ್ವನ್-2 (Ponniyin Selvan 2) ಸಿನಿಮಾ ಏ. 28ರಂದು ವಿಶ್ವಾದ್ಯಂತ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಹಾಗೆ ಬಿಡುಗಡೆ ಆದ ಸಿನಿಮಾ ಇದೀಗ, ಕಲೆಕ್ಷನ್‌ ವಿಚಾರದಲ್ಲಿ ಬಂಗಾರದ ಬೆಳೆಯನ್ನೇ ತೆಗೆದಿದೆ.

ಟ್ರೆಂಡಿಂಗ್​ ಸುದ್ದಿ

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

Cannes: ಚಿನ್ನದ ಬಣ್ಣದ ಉಡುಗೆಯಲ್ಲಿ ಆಸ್ಕರ್‌ ಟ್ರೋಫಿ ರೀತಿ ಕಾಣಿಸ್ತಾರಂತೆ ಶೋಭಿತಾ ಧೂಳಿಪಾಲ, ನಿಮಗೂ ಹಾಗೇ ಕಾಣಿಸ್ತಾರ ನೋಡಿ

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅದೃಷ್ಟ ಕಣ್ರೋ, ಅಪಶಕುನ ಅಲ್ಲ; ಐಪಿಎಲ್‌ನಲ್ಲಿ ಆರ್‌ಸಿಬಿ ಹೊಸ ಅಧ್ಯಾಯ, ತುಚ್ಛ ಪದ ಬಳಸಿದವರಿಗೆ ಚಾಟಿಯೇಟು

Bhagyalakshmi Serial: 10ನೇ ತರಗತಿ ಪಾಸ್‌ ಆದ ಖುಷಿಗೆ ಮೊದಲ ದಿನವೇ ಕೆಲಸಕ್ಕೆ ತಡವಾಗಿ ಹೊರಟ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಷಾವಾರು ಗಳಿಕೆ ಲೆಕ್ಕಾಚಾರ ಹಾಕುವುದಾದರೆ, ತಮಿಳಿನಾಡಿನಲ್ಲಿ 38.25 ಕೋಟಿ ಗಳಿಸಿದರೆ, 7.80 ಕೋಟಿ ರೂ ಕರ್ನಾಟಕದಿಂದ ಬಂದಿದೆ. 5.85 ಕೋಟಿ ಆಂಧ್ರ ಮತ್ತು ತೆಲಂಗಾಣದ ಕಲೆಕ್ಷನ್‌ ಆಗಿತ್ತು. ಅದೇ ರೀತಿ 5.10 ಕೋಟಿ ರೂ ಕೇರಳದಿಂದ ಬಂದಿತ್ತು. ಇನ್ನುಳಿದ ರಾಜ್ಯಗಳಿಂದ 6.40 ಕೋಟಿ ಗಳಿಕೆ ಕಂಡಿತ್ತು. ಇದೆಲ್ಲದರ ಜತೆಗೆ ವಿದೇಶದಿಂದಲೂ ಈ ಚಿತ್ರಕ್ಕೆ 51 ಕೋಟಿ ಹರಿದು ಬಂದಿದೆ.

ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಿರುವ ಈ ಸಿನಿಮಾಕ್ಕೆ ಪ್ರೇಕ್ಷಕ ಪ್ರಭು ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಹಾಗಾಗಿ ಸಿನಿಮಾ ಬಿಡುಗಡೆಯಾಗಿ ಕೇವಲ ಮೂರೇ ದಿನಕ್ಕೆ ನೂರು ಪ್ಲಸ್‌ ಕೋಟಿಯ ಬಂಪರ್‌ ಬೆಳೆ ತೆಗೆದಿದೆ. ಈ ಮೂಲಕ ತಮಿಳಿನ ಇಳಯ ದಳಪತಿ ವಿಜಯ್ ನಟನೆಯ ವಾರಿಸು ಸಿನಿಮಾದ ಕಲೆಕ್ಷನ್ ಅನ್ನು ಈ ಸಿನಿಮಾ ಬ್ರೇಕ್ ಮಾಡಿ, ಹೊಸ ದಾಖಲೆ ಬರೆದಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿರುವ ಪೊನ್ನಿಯಿನ್ ಸೆಲ್ವನ್ 2ನಲ್ಲಿ ದೊಡ್ಡ ತಾರಾಬಳಗವೇ ಇದೆ. ಜಯಂರವಿ, ಚಿಯಾನ್ ವಿಕ್ರಮ್, ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ತ್ರಿಶಾ, ಶೋಭಿತಾ ಧುಲಿಪಾಲ್​, ಪ್ರಕಾಶ್ ರಾಜ್​ ಸೇರಿದಂತೆ ಹಲವರು ನಟಿಸಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಬರೆದಿರೋ ಕಾದಂಬರಿ ಪೊನ್ನಿಯಿನ್‌ ಸೆಲ್ವನ್‌ ಆಧರಿಸಿದ ಈ ಕಥೆಗೆ ಮಣಿರತ್ನಂ ಆಕ್ಷನ್ ಕಟ್ ಹೇಳಿದ್ದಾರೆ.

ಚೋಳ ಸಾಮ್ರಾಜ್ಯದ ಗತವೈಭವ ಸಾರುವ ಈ ಸಿನಿಮಾ ಮೇಕಿಂಗ್, ತಾರಾ ಬಳಗ, ಸಂಗೀತ, ನಟನೆ ಎಲ್ಲದರಲ್ಲಿಯೂ ನೋಡುಗರ ಗಮನಸೆಳೆಯುತ್ತಿದೆ. ಲೈಕಾ ಪ್ರೊಡಕ್ಷನ್ಸ್‌ ಮತ್ತು ಮದ್ರಾಸ್‌ ಟಾಕೀಸ್‌ ಬ್ಯಾನರ್‌ನಡಿ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 30ರಂದು ರಿಲೀಸ್ ಆಗಿದ್ದ ಪೊನ್ನಿಯನ್ ಸೆಲ್ವನ್ ಮೊದಲ ಭಾಗ ಬರೋಬ್ಬರಿ 500 ಕೋಟಿ ಲೂಟಿ ಮಾಡಿತ್ತು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ