logo
ಕನ್ನಡ ಸುದ್ದಿ  /  ಮನರಂಜನೆ  /  Kollywood: ಧನುಷ್‌ ಅಮಲಾ ಪೌಲ್‌ ಎಸ್‌ಜೆ ಸೂರ್ಯ ಸೇರಿದಂತೆ 14 ತಮಿಳು ನಟ ನಟಿಯರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಮಾಪಕರ ಸಂಘ ತೀರ್ಮಾನ

Kollywood: ಧನುಷ್‌ ಅಮಲಾ ಪೌಲ್‌ ಎಸ್‌ಜೆ ಸೂರ್ಯ ಸೇರಿದಂತೆ 14 ತಮಿಳು ನಟ ನಟಿಯರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಮಾಪಕರ ಸಂಘ ತೀರ್ಮಾನ

HT Kannada Desk HT Kannada

Jul 02, 2023 01:52 PM IST

google News

ನಟ ನಟಿಯರಿಗೆ ರೆಡ್‌ ಕಾರ್ಡ್‌ ಕೊಡಲು ನಿರ್ಮಾಪಕರ ಸಂಘ ನಿರ್ಧಾರ

  • ಇತ್ತೀಚೆಗೆ ತಮಿಳುನಾಡಿನ ಚೆನ್ನೈನಲ್ಲಿ ತೆನಂಡಾಲ್‌ ಫಿಲ್ಮ್ಸ್‌ ಚಿತ್ರ ನಿರ್ಮಾಣ ಸಂಸ್ಥೆ ಹಾಗೂ ಇನ್ನಿತರ ನಿರ್ಮಾಪಕರು ಸಭೆ ನಡೆಸಿ ನಟ ಧನುಷ್‌ ಸೇರಿ ಇನ್ನಿತರ ನಟ-ನಟಿಯರ ವಿರುದ್ಧ ರೆಡ್‌ ಕಾರ್ಡ್‌ ಜಾರಿ ಮಾಡಲು ನಿರ್ಧರಿಸಿದೆ.

ನಟ ನಟಿಯರಿಗೆ ರೆಡ್‌ ಕಾರ್ಡ್‌ ಕೊಡಲು ನಿರ್ಮಾಪಕರ ಸಂಘ ನಿರ್ಧಾರ
ನಟ ನಟಿಯರಿಗೆ ರೆಡ್‌ ಕಾರ್ಡ್‌ ಕೊಡಲು ನಿರ್ಮಾಪಕರ ಸಂಘ ನಿರ್ಧಾರ

ಭಾರತೀಯ ಚಿತ್ರರಂಗದಲ್ಲಿ ಕನ್ನಡ, ತೆಲುಗು, ಹಿಂದಿಯಷ್ಟೇ ತಮಿಳು ಚಿತ್ರರಂಗ ಕೂಡಾ ಪ್ರಸಿದ್ಧಿ ಪಡೆದಿದೆ. ತಮಿಳು ಸಿನಿಮಾರಂಗದಲ್ಲಿ ಅನೇಕ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಭಿಮಾನಿಗಳ ಮನದಲ್ಲಿ ಕೂಡಾ ಅತ್ಯುನ್ನತ ಸ್ಥಾನ ಪಡೆದಿದ್ದಾರೆ. ಆದರೆ ಇದೀಗ ಕಾಲಿವುಡ್‌ನ ಕೆಲವು ನಟ ನಟಿಯರ ವಿರುದ್ಧ ನಿರ್ಮಾಪಕರ ಸಂಘ ರೆಡ್‌ ಕಾರ್ಡ್‌ ಜಾರಿ ಮಾಡಲು ನಿರ್ಧರಿಸಿದೆ.

ಚಿತ್ರರಂಗದ ನಿಯಮಗಳ ಪ್ರಕಾರ, ಯಾವುದೇ ನಟ ಅಥವಾ ನಟಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅವರನ್ನು ಸಿನಿಮಾಗಳಲ್ಲಿ ನಿರ್ಬಂಧ ವಿಧಿಸುವುದನ್ನು ರೆಡ್‌ ಕಾರ್ಡ್‌ ಎನ್ನಲಾಗುತ್ತದೆ. ಇತ್ತೀಚೆಗೆ ತಮಿಳುನಾಡಿನ ಚೆನ್ನೈನಲ್ಲಿ ತೆನಂಡಾಲ್‌ ಫಿಲ್ಮ್ಸ್‌ ಚಿತ್ರ ನಿರ್ಮಾಣ ಸಂಸ್ಥೆ ಹಾಗೂ ಇನ್ನಿತರ ನಿರ್ಮಾಪಕರು ಸಭೆ ನಡೆಸಿ ನಟ ಧನುಷ್‌ ಸೇರಿ ಇನ್ನಿತರ ನಟ-ನಟಿಯರ ವಿರುದ್ಧ ರೆಡ್‌ ಕಾರ್ಡ್‌ ಜಾರಿ ಮಾಡಲು ನಿರ್ಧರಿಸಿದೆ. ಚಿತ್ರರಂಗದಲ್ಲಿ ಕಲಾವಿದರ ಕಾಲ್‌ ಶೀಟ್‌ ಸಮಸ್ಯೆ ಎದುರಾಗುವುದು ಸಹಜ. ಆದರೆ ಕೆಲವು ನಟ ನಟಿಯರು ನಿರ್ಮಾಪಕರಿಗೆ ಬಹಳ ತೊಂದರೆ ನೀಡುತ್ತಿದ್ದಾರೆ. ಕಾಲ್‌ಶೀಟ್‌ ಕೊಟ್ಟು ಅವರು ನಮ್ಮ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಅನ್ನೋದು ನಿರ್ಮಾಪಕರು ಅಳಲಾಗಿದೆ.

ಸಿಂಬು, ಧನುಷ್, ಎಸ್.ಜೆ.ಸೂರ್ಯ, ಅಮಲಾ ಪಾಲ್ ಸೇರಿದಂತೆ 14 ನಟ-ನಟಿಯರ ವಿರುದ್ಧ ನಿರ್ಮಾಪಕರು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಧನುಷ್‌ ಮಾತ್ರವಲ್ಲದೆ ಸಿಂಬು, ವಿಶಾಲ್‌, ಸೂರ್ಯ, ಯೋಗಿಬಾಬು ನಟಿಯರಾದ ಅಮಲಾ ಪೌಲ್‌, ಲಕ್ಷ್ಮಿ ರೈ ಸೇರಿದಂತೆ ಒಟ್ಟು 14 ನಟ ನಟಿಯರ ವಿರುದ್ಧ ನಿರ್ಮಾಪಕರ ಸಂಘ ರೆಡ್‌ ಕಾರ್ಡ್‌ ಜಾರಿ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ. ಈ ನಟ ನಟಿಯರೆಲ್ಲಾ ನಿರ್ಮಾಪಕರ ಬಳಿ ಹಣ ಪಡೆದು ಅವರಿಗೆ ಕಾಲ್‌ಶೀಟ್‌ ಕೂಡಾ ನೀಡದೆ ಹಣವನ್ನೂ ವಾಪಸ್‌ ನೀಡದೆ ನಿರ್ಮಾಪಕರಿಗೆ ತೊಂದರೆ ನೀಡುತ್ತಿದ್ದಾರೆ. ಜೊತೆಗೆ ತಮ್ಮ ಸಹಾಯಕರು ಹಾಗೂ ಬೌನ್ಸರ್‌ಗಳಿಗೆ ಕೂಡಾ ಸಂಬಂಳ ನೀಡಿಲ್ಲ ಎಂಬ ದೂರು ಕೇಳಿಬಂದಿದೆ. ರೆಡ್‌ ಕಾರ್ಡ್‌ ನೀಡಿ ವಾರದ ಒಳಗೆ ಈ ಕಲಾವಿದರು ಪ್ರತಿಕ್ರಿಯೆ ನೀಡದಿದ್ದಲ್ಲಿ ನಂತರ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನಿರ್ಮಾಪಕರ ಸಂಘ ತಿಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳು

ನಟ ಸೂರಜ್‌ಗೆ ಮೊಣಕಾಲು ತೆಗೆದ ವಿಚಾರವನ್ನು ಅವರಿಗೆ 4 ದಿನಗಳ ನಂತರ ಹೇಳಲಾಯ್ತು; ಮಣಿಪಾಲ್‌ ಆಸ್ಪತ್ರೆ ವೈದ್ಯರು

ಕೆಲವು ದಿನಗಳ ಹಿಂದೆ ಸೂರಜ್‌ ಬುಲೆಟ್‌ನಲ್ಲಿ ಊಟಿಗೆ ಪ್ರವಾಸ ತೆರಳುತ್ತಿದ್ದರು. ಚಾಮರಾಜನಗರ ಜಿಲ್ಲೆಯ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ಟ್ರಾಕ್ಟರನ್ನು ಹಿಂದಿಕ್ಕಿ ಮುಂದೆ ಚಲಿಸುವಾಗ ಎದುರಿನಿಂದ ವೇಗವಾಗಿ ಬಂದ ಟಿಪ್ಪರ್‌ ಸೂರಜ್‌ ಚಲಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಲ್ಲದೆ, ಅವರ ಕಾಲಿನ ಮೇಲೆ ಹರಿದಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ವಿಷಯ ತಿಳಿದ ಪೊಲೀಸರು ಕೂಡಲೇ ಮೈಸೂರಿನ ಕೆಆರ್‌ ಆಸ್ಪತ್ರೆಗೆ ದಾಖಲಿಸಿ ನಂತರ ಮಣಿಪಾಲ್‌ ಆಸ್ಪತ್ರೆಗೆ ರವಾನಿಸಿದ್ದರು. ಸೂರಜ್‌ ಬಗ್ಗೆ ಪೂರ್ತಿ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ಧ್ರುವ ಸರ್ಜಾ ಜೊತೆ ಪೊಗರು ಚಿತ್ರದಲ್ಲಿ ಅಬ್ಬರಿಸಿದ್ದ ಜೋ ಲಿಂಡ್ನರ್‌ ಇನ್ನಿಲ್ಲ;30ನೇ ವಯಸ್ಸಿಗೆ ಸಾವನ್ನಪ್ಪಿದ ಬಾಡಿ ಬಿಲ್ಡರ್

ಜರ್ಮನಿ ಮೂಲದ ಜೋ ಲಿಂಡ್ನರ್ ಥಾಯ್ಲೆಂಡ್‌ನಲ್ಲಿ ನೆಲೆಸಿದ್ದರು. ಬಾಡಿ ಬಿಲ್ಡರ್‌ ಆಗಿದ್ದ ಈತ ಸೋಷಿಯಲ್‌ ಮೀಡಿಯಾ ಸ್ಟಾರ್‌ ಆಗಿ ಕೂಡಾ ಗುರುತಿಸಿಕೊಂಡಿದ್ದರು. ಫ್ಯಾಷನ್‌ಗೆ ಕೂಡಾ ಇವರು ಹೆಸರಾಗಿದ್ದರು. ಆದರೆ ಕೇವಲ 30ನೇ ವಯಸ್ಸಿಗೆ ಅವರು ಸಾವನ್ನಪ್ಪಿರುವುದು ಅವರ ಅಭಿಮಾನಿಗಳಿಗೆ ಶಾಕ್‌ ಆಗಿದೆ. ಪೂರ್ತಿ ಸುದ್ದಿಗೆ ಈ ಲಿಂಕ್‌ ಒತ್ತಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ