logo
ಕನ್ನಡ ಸುದ್ದಿ  /  ಮನರಂಜನೆ  /  Kollywood News: ಧನುಷ್‌ ಮೀನಾ ಮದುವೆ ಸುದ್ದಿ ಬೆನ್ನಲ್ಲೇ ಐಶ್ವರ್ಯ ರಜನಿಕಾಂತ್‌ ಎರಡನೇ ಮದುವೆ ಸುದ್ದಿ ವೈರಲ್‌, ಯಾರು ಆ ತಮಿಳು ಹೀರೋ?

Kollywood News: ಧನುಷ್‌ ಮೀನಾ ಮದುವೆ ಸುದ್ದಿ ಬೆನ್ನಲ್ಲೇ ಐಶ್ವರ್ಯ ರಜನಿಕಾಂತ್‌ ಎರಡನೇ ಮದುವೆ ಸುದ್ದಿ ವೈರಲ್‌, ಯಾರು ಆ ತಮಿಳು ಹೀರೋ?

Rakshitha Sowmya HT Kannada

Jul 12, 2023 01:58 PM IST

ಎರಡನೇ ಮದುವೆಗೆ ಮುಂದಾದ್ರಾ ಐಶ್ವರ್ಯ ರಜನಿಕಾಂತ್?

  • ಕಳೆದ ವರ್ಷ ಡಿವೋರ್ಸ್‌ ಘೋಷಿಸಿದ್ದ ಕಾಲಿವುಡ್‌ ನಿರ್ದೇಶಕಿ, ಸೂಪರ್‌ ಸ್ಟಾರ್‌ ರಜನಿಕಾಂತ್‌ ಪುತ್ರಿ ಐಶ್ವರ್ಯ ಎರಡನೇ ಮದುವೆ ಆಗುತ್ತಿದ್ದಾರೆ ಎಂದು ಕಾಲಿವುಡ್‌ ಮಾಧ್ಯಮಗಳು ವರದಿ ಮಾಡಿವೆ. 

ಎರಡನೇ ಮದುವೆಗೆ ಮುಂದಾದ್ರಾ ಐಶ್ವರ್ಯ ರಜನಿಕಾಂತ್?
ಎರಡನೇ ಮದುವೆಗೆ ಮುಂದಾದ್ರಾ ಐಶ್ವರ್ಯ ರಜನಿಕಾಂತ್? (PC: Facebook)

ಜನ ಸಾಮಾನ್ಯರ ಜೀವನದಲ್ಲಿ ಮಾತ್ರವಲ್ಲ ಸಿನಿಮಾ ಮಂದಿಯ ಲೈಫ್‌ನಲ್ಲಿ ಕೂಡಾ ಈಗ ಡಿವೋರ್ಸ್‌ ಎನ್ನುವುದು ಸಾಮಾನ್ಯ ಎನಿಸಿಬಿಟ್ಟಿದೆ. ಇಂದು ಅದ್ಧೂರಿಯಾಗಿ ಮದುವೆ ಆದವರು ಎಷ್ಟು ದಿನಗಳು ಜೊತೆಗೆ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಎಷ್ಟೋ ವರ್ಷಗಳ ಕಾಲ ಪ್ರೀತಿಸಿ ಮದುವೆ ಆಗುವವರ ಮಧ್ಯೆ1 ವರ್ಷ ತುಂಬುವುದರೊಳಗೆ ಬಿರುಕು ಉಂಟಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

2022 ಜನವರಿಯಲ್ಲಿ ಡಿವೋರ್ಸ್‌ ಘೋಷಿಸಿದ್ದ ಐಶ್ವರ್ಯ ಧನುಷ್

ಇನ್ನೂ ಕೆಲವು ಸಂದರ್ಭಗಳಲ್ಲಿ ಮದುವೆ ಆಗಿ ಎಷ್ಟೋ ವರ್ಷಗಳ ನಂತರ ಬೇರೆ ಆಗುತ್ತಾರೆ. ನಂತರ ಎರಡನೇ ಮದುವೆಯತ್ತ ಮುಖ ಮಾಡುತ್ತಾರೆ. ಕಾಲಿವುಡ್‌ ನಟ ಧನುಷ್‌ ಹಾಗೂ ಐಶ್ವರ್ಯ ರಜನಿಕಾಂತ್‌ ವಿಚಾರದಲ್ಲಿ ಆಗಿರುವುದು ಕೂಡಾ ಇದೇ. 2022 ಜನವರಿಯಲ್ಲಿ ಧನುಷ್‌ ಹಾಗೂ ಐಶ್ವರ್ಯ ತಾವಿಬ್ಬರೂ 18 ವರ್ಷಗಳ ವೈವಾಹಿಕ ಜೀವನದಿಂದ ಹೊರ ಬರುತ್ತಿರುವುದಾಗಿ ಅನೌನ್ಸ್‌ ಮಾಡಿದ್ದರು. ಇದಕ್ಕಿದ್ದಂತೆ ಈ ಜೋಡಿ ಡಿವೋರ್ಸ್‌ ಘೋಷಣೆ ಮಾಡಿದ್ದು ಅಭಿಮಾನಿಗಳಿಗೆ ಶಾಕ್‌ ಆಗಿತ್ತು. ಇದಾದ ನಂತರ ಧನುಷ್‌ ಹಾಗೂ ಮೀನಾ ಮದುವೆ ಆಗುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈಗ ಐಶ್ವರ್ಯ, ಕಾಲಿವುಡ್‌ನ ಮತ್ತೊಬ್ಬ ಸ್ಟಾರ್‌ ನಟನ ಕೈ ಹಿಡಿಯಲಿದ್ದಾರೆ ಎಂದು ತಮಿಳು ಪತ್ರಿಕೆಗಳು ವರದಿ ಮಾಡಿವೆ.

ಇದನ್ನೂ ಓದಿ: ಅಭಿಮಾನಿಗಳನ್ನು ಆರತಕ್ಷತೆಗೆ ಆಹ್ವಾನಿಸಿದ ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ ಪಲ್ಲವಿ ಬಳ್ಳಾರಿ;ದಿನಾಂಕ,ಸ್ಥಳದ ಮಾಹಿತಿ ಹೀಗಿದೆ

ಕಾಲಿವುಡ್‌ ಯುವನಟರೊಬ್ಬರನ್ನು ಐಶ್ವರ್ಯ ಲವ್‌ ಮಾಡುತ್ತಿದ್ದು ಶೀಘ್ರದಲ್ಲೇ ಇಬ್ಬರೂ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ತಮಿಳು ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಕೆಲವು ದಿನಗಳಿಂದ ಐಶ್ವರ್ಯ ಹಾಗೂ ಆ ಹೀರೋ ಜೊತೆಗೆ ಸುತ್ತಾಡುತ್ತಿದ್ದು ಸೋಮವಾರ ಕೂಡಾ ಚೆನ್ನೈ ರೆಸಾರ್ಟ್‌ವೊಂದರಲ್ಲಿ ಕೂಡಾ ಐಶ್ವರ್ಯ ಆ ಹೀರೋ ಜೊತೆ ಕಾಣಿಸಿಕೊಂಡಿದ್ದರು ಎನ್ನಲಾಗುತ್ತಿದೆ. ಆದರೆ ಆತ ಯಾರು ಎಂಬುದನ್ನು ಮಾತ್ರ ತಮಿಳು ಪತ್ರಿಕೆಗಳು ರಿವೀಲ್‌ ಮಾಡಿಲ್ಲ.‌

ಅಭಿಮಾನಿಗಳಿಗೆ ನಿರಾಸೆ

ಐಶ್ವರ್ಯ ಹಾಗೂ ಧನುಷ್‌ ಮನಸ್ತಾಪ ಮರೆತು ಮತ್ತೆ ಒಂದಾಗುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಸುದ್ದಿ ಶಾಕ್‌ ನೀಡಿದೆ. ಇದಕ್ಕೂ ಮುನ್ನ ಧನುಷ್‌, ಖ್ಯಾತ ಬಹುಭಾಷಾ ನಟಿ ಮೀನಾ ಅವರನ್ನು ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿತ್ತು. ಆಗ ಸ್ವತ: ಮೀನಾ ಈ ರೂಮರ್‌ಗಳಿಗೆ ಪ್ರತಿಕ್ರಿಯಿಸಿ ''ನಾನು ಇಂದಿಗೂ ನನ್ನ ಪತಿ ವಿದ್ಯಾಸಾಗರ್‌ ನಿಧನದ ನೋವಿನಿಂದ ಹೊರ ಬಂದಿಲ್ಲ. ನನಗೆ ಎರಡನೇ ಮದುವೆ ಆಗುವ ಯೋಚನೆ ಇಲ್ಲ. ದಯವಿಟ್ಟು ಇಲ್ಲಸಲ್ಲದ ಸುದ್ದಿ ಹಬ್ಬಿಸಬೇಡಿ'' ಎಂದು ಮನವಿ ಮಾಡಿದ್ದರು. ಇದೀಗ ಐಶ್ವರ್ಯ ಎರಡನೇ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ವೈರಲ್‌ ಆಗುತ್ತಿದೆ. ಇದು ನಿಜವೋ, ಸುಳ್ಳೋ ಶೀಘ್ರದಲ್ಲೇ ತಿಳಿಯಲಿದೆ.

ಧನುಷ್‌ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯಕ್ಕೆ ಅವರು 'ಕ್ಯಾಪ್ಟನ್‌ ಮಿಲ್ಲರ್' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಕೂಡಾ ನಟಿಸುತ್ತಿದ್ದಾರೆ. ಅರುಣ್‌ ಮತೇಶ್ವರನ್‌ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಐಶ್ವರ್ಯ ಕೂಡಾ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಕಾಲಿವುಡ್‌ನಲ್ಲಿ ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ಐಶ್ವರ್ಯ, 'ಲಾಲ್‌ ಸಲಾಮ್‌' ಸಿನಿಮಾ ಡೈರೆಕ್ಷನ್‌ ಮಾಡುತ್ತಿದ್ದಾರೆ. ಈ ಸಿನಿಮಾಗೆ ಲೈಕಾ ಪ್ರೊಡಕ್ಷನ್ಸ್‌ ಬಂಡವಾಳ ಹೂಡುತ್ತಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ