logo
ಕನ್ನಡ ಸುದ್ದಿ  /  ಮನರಂಜನೆ  /  Sara Ali Khan: ಕಾಲಿವುಡ್​​ನ ಆ ಜೋಡಿ ಡೈವೋರ್ಸ್​ಗೆ ಬಾಲಿವುಡ್​​​​​ನ ಈ ನಟಿಯೇ ಕಾರಣ ಅಂತೆ ಹೌದಾ..!?

Sara Ali Khan: ಕಾಲಿವುಡ್​​ನ ಆ ಜೋಡಿ ಡೈವೋರ್ಸ್​ಗೆ ಬಾಲಿವುಡ್​​​​​ನ ಈ ನಟಿಯೇ ಕಾರಣ ಅಂತೆ ಹೌದಾ..!?

HT Kannada Desk HT Kannada

Jul 25, 2022 11:04 AM IST

ಸಾರಾ ಅಲಿ ಖಾನ್

    • ಬಾಲಿವುಡ್​​​​ನ 'ಅತ್ರಂಗಿ ರೇ' ಚಿತ್ರದಲ್ಲಿ ಸಾರಾ ಅಲಿ ಖಾನ್ ದ್ವಿಪಾತ್ರದಲ್ಲಿ ನಟಿಸಿದ್ದು ಒಂದು ಪಾತ್ರದಲ್ಲಿ ಧನುಷ್ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಟಿಸಿದ ನಂತರ ಇಬ್ಬರ ನಡುವೆ ಗೆಳೆತನ ಶುರುವಾಗಿ ನಂತರ ಇವರಿಬ್ಬರೂ ಮತ್ತಷ್ಟು ಹತ್ತಿರವಾಗಿದ್ದರು. ಈ ಕಾರಣದಿಂದಲೇ ಧನುಷ್, ಐಶ್ವರ್ಯರಿಂದ ದೂರಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಸಾರಾ ಅಲಿ ಖಾನ್
ಸಾರಾ ಅಲಿ ಖಾನ್

ಇದೇ ವರ್ಷದ ಜನವರಿ 17 ರಂದು ತಮಿಳು ಖ್ಯಾತ ನಟ ಧನುಷ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಮೊದಲ ಪುತ್ರಿ ಐಶ್ವರ್ಯ ಡೈವೋರ್ಸ್ ಘೋಷಿಸಿದ್ದರು. ಇಬ್ಬರೂ ಬೇರೆಯಾಗುತ್ತಿರುವ ವಿಚಾರ ಕೇಳಿ ಅಭಿಮಾನಿಗಳಿಗೆ ಶಾಕ್ ಆಗಿತ್ತು. 18 ವರ್ಷಗಳು ಸಂತೋಷದಿಂದ ಜೀವನ ಸಾಗಿಸುತ್ತಿದ್ದ ನೀವು ಈಗ ಬೇರೆಯಾಗಲು ಕಾರಣ ಏನು ಎಂದು ಇಂದಿಗೂ ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. ಈ ನಡುವೆ ಇವರಿಬ್ಬರ ವಿಚ್ಛೇದನಕ್ಕೆ ಬಾಲಿವುಡ್​​​ ನಟಿಯೊಬ್ಬರು ಕಾರಣ ಎಂಬ ಮಾತು ಕೇಳಿಬಂದಿದೆ.

ಟ್ರೆಂಡಿಂಗ್​ ಸುದ್ದಿ

Brundavana Serial: ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?

ಶೇಕಡಾ 66 ಅಂಕ ತೆಗೆದು ಎಸ್‌ಎಸ್‌ಎಲ್‌ಸಿ ಪಾಸ್‌ ಆದ ಭಾಗ್ಯಾ, ಸಪ್ಪೆ ಮೋರೆ ಹಾಕಿ ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Kuntebille Movie: ಸೆಟ್ಟೇರಿತು ತರ್ಲೆ ವಿಲೇಜ್‌ ನಿರ್ದೇಶಕರ ಕುಂಟೆಬಿಲ್ಲೆ ಸಿನಿಮಾ; ಇದು ಪ್ರೇಮ ಕಾಮದ ಸುತ್ತ ತಿರುಗುವ ಚಿತ್ರ

Huu ಅಂತೀಯಾ...Uhuu ಅಂತೀಯಾ; ಸ್ಟಾರ್‌ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ, ಗೆದ್ದವರಿಗೆ ಲಕ್ಷ ಲಕ್ಷ ಬಹುಮಾನ

ತಮಿಳಿನ ಖ್ಯಾತ ನಿರ್ದೇಶಕ-ನಿರ್ಮಾಪಕ ಕಸ್ತೂರಿ ರಾಜಾ ಪುತ್ರ ಧನುಷ್ 2004 ರಲ್ಲಿ ರಜನಿಕಾಂತ್ ಪುತ್ರ ಐಶ್ವರ್ಯ ಅವರನ್ನು ಪ್ರೀತಿಸಿ ಮದುವೆಯಾದರು. ಇವರು ಮದುವೆಯಾದಾಗ ಧನುಷ್​​​​​​ಗೆ 21 ಹಾಗೂ ಐಶ್ವರ್ಯಾಗೆ 23 ವರ್ಷ ವಯಸ್ಸು. ಈ ದಂಪತಿಗೆ ಯಾತ್ರಾ ಹಾಗೂ ಲಿಂಗ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. ಡೈವೋರ್ಸ್ ಘೋಷಣೆ ಮಾಡುವ ಕೆಲವೇ ದಿನಗಳ ಮುನ್ನ ಇವರಿಬ್ಬರೂ ಜೊತೆಯಲ್ಲಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಯಾವುದೋ ಪಾರ್ಟಿಯೊಂದರಲ್ಲಿ ಧನುಷ್, ಪತ್ನಿ ಐಶ್ವರ್ಯ ಅವರನ್ನು ಕುರಿತು ಹಾಡು ಹೇಳುತ್ತಾರೆ. ಪತಿ ತಮ್ಮನ್ನು ಹೊಗಳುವುದನ್ನು ನೋಡಿ ಐಶ್ವರ್ಯ ನಾಚಿ ನೀರಾಗುತ್ತಾರೆ. ಕೊನೆಗೆ ಧನುಷ್ ತಮ್ಮ ಪತ್ನಿಯನ್ನು ಹಗ್ ಮಾಡುತ್ತಾರೆ.

<p>ಐಶ್ವರ್ಯ ಹಾಗೂ ಧನುಷ್</p>

ಈ ವಿಡಿಯೋ ನೋಡಿದವರು ಜೋಡಿ ಎಂದರೆ ಹೀಗಿರಬೇಕು ಎಂದು ಉದ್ಘರಿಸಿದ್ದರು. ಆದರೆ ಇಬ್ಬರೂ 18 ವರ್ಷಗಳ ನಂತರ ದೂರಾಗುತ್ತಿರುವ ವಿಚಾರ ಕೇಳಿ ಬೇಸರ ವ್ಯಕ್ತಪಡಿಸಿದ್ದರು. ಈ ಮಾತು ಸುಳ್ಳಾಗಿದ್ದರೆ ಸಾಕು, ಇಬ್ಬರೂ ಆದಷ್ಟು ಬೇಗ ತಮ್ಮ ನಿರ್ಧಾರವನ್ನು ಬದಲಿಸಿಕೊಳ್ಳಲಿ ಎಂದು ಇಬ್ಬರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದ್ದರು. ಆದರೆ ಇದೀಗ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರನ್ನು ಇವರ ನಡುವೆ ಎಳೆದು ತರಲಾಗಿದೆ.

ಧನುಷ್, ಸಾರಾ ಅಲಿ ಖಾನ್​​ಗಾಗಿ ಪತ್ನಿ ಐಶ್ವರ್ಯಗೆ ಡೈವೋರ್ಸ್ ನೀಡಿದ್ದು ಎಂಬ ಮಾತು ಕಾಲಿವುಡ್​​ ಅಂಗಳದಲ್ಲಿ ಕೇಳಿಬರುತ್ತಿದೆ. ಧನುಷ್ ತಮಿಳು ಮಾತ್ರವಲ್ಲದೆ ತೆಲುಗು, ಹಿಂದಿ, ಹಾಲಿವುಡ್ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ಬಾಲಿವುಡ್​​​​ನ ಅತ್ರಂಗಿ ರೇ ಚಿತ್ರದಲ್ಲಿ ಸಾರಾ ಅಲಿ ಖಾನ್ ದ್ವಿಪಾತ್ರದಲ್ಲಿ ನಟಿಸಿದ್ದು ಒಂದು ಪಾತ್ರದಲ್ಲಿ ಧನುಷ್ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಟಿಸಿದ ನಂತರ ಇಬ್ಬರ ನಡುವೆ ಗೆಳೆತನ ಶುರುವಾಗಿ ನಂತರ ಇವರಿಬ್ಬರೂ ಮತ್ತಷ್ಟು ಹತ್ತಿರವಾಗಿದ್ದರು. ಈ ಕಾರಣದಿಂದಲೇ ಧನುಷ್, ಐಶ್ವರ್ಯರಿಂದ ದೂರಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದರಲ್ಲಿ ಎಷ್ಟು ನಿಜವಿದೆಯೋ, ಅಥವಾ ಇದು ಬರೀ ಗಾಸಿಪ್ ಮಾತ್ರವೋ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

<p>ಅತ್ರಂಗಿ ರೇ ಚಿತ್ರೀಕರಣದಲ್ಲಿ ಸಾರಾ ಅಲಿಖಾನ್, ಅಕ್ಷಯ್ ಕುಮಾರ್ ಹಾಗೂ ಧನುಷ್</p>

ಡೈವೋರ್ಸ್ ಆದ ನಂತರ ಪತ್ನಿಯನ್ನು ಫ್ರೆಂಡ್ ಎಂದು ಸಂಬೋಧಿಸಿದ್ದ ಧನುಷ್

ಐಶ್ವರ್ಯ ರಜನಿಕಾಂತ್ ತಾವು ನಿರ್ಮಿಸಿದ್ದ ಪಯಣಿ ಎಂಬ ಆಲ್ಬಂ ವಿಡಿಯೋ ಲಿಂಕನ್ನು ಇತ್ತೀಚೆಗೆ ತಮ್ಮ ಟ್ವಿಟ್ಟರ್​​​​​​​​​​​​​​​​​​​​​​​​​​​​​​​​​​​​​​​​ನಲ್ಲಿ ಹಂಚಿಕೊಂಡಿದ್ದರು. ಈ ಟ್ವೀಟ್​​​​ಗೆ ಪ್ರತಿಕ್ರಿಯಿಸಿದ್ದ ಧನುಷ್​​​​, 'ಅಭಿನಂದನೆಗಳು ಡಿಯರ್ ಫ್ರೆಂಡ್',​​ ನಿಮ್ಮ ಮ್ಯೂಸಿಕ್ ವಿಡಿಯೋಗೆ ಶುಭವಾಗಲಿ ಎಂದು ಹಾರೈಸಿದ್ದರು. ಧನುಷ್, ಐಶ್ವರ್ಯಗೆ ಸ್ನೇಹಿತೆ ಎಂದು ಸಂಬೋಧಿಸಿರುವುದನ್ನು ನೋಡಿ ನೆಟಿಜನ್ಸ್ ಆಶ್ಚರ್ಯ ವ್ಯಕ್ತಪಡಿಸಿದ್ದರು. ಡೈವೋರ್ಸ್ ಘೋಷಿಸಿದ ನಂತರ ಪತ್ನಿ ಎಷ್ಟು ಬೇಗ ಫ್ರೆಂಡ್ ಆಗಿ ಬದಲಾಗಿದ್ದಾರೆ ನೋಡಿ ಎಂದು ಟೀಕಿಸಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ