logo
ಕನ್ನಡ ಸುದ್ದಿ  /  ಮನರಂಜನೆ  /  Pathaan Worldwide Box Office: ವಿಶ್ವದಾದ್ಯಂತ ಎರಡೇ ದಿನಕ್ಕೆ 219 ಕೋಟಿ ಬಾಚಿದ ‘ಪಠಾಣ್‌’.. ಇದು ಸಾರ್ವಕಾಲಿಕ ದಾಖಲೆ..

Pathaan Worldwide Box office: ವಿಶ್ವದಾದ್ಯಂತ ಎರಡೇ ದಿನಕ್ಕೆ 219 ಕೋಟಿ ಬಾಚಿದ ‘ಪಠಾಣ್‌’.. ಇದು ಸಾರ್ವಕಾಲಿಕ ದಾಖಲೆ..

Jan 27, 2023 04:19 PM IST

ವಿಶ್ವದಾದ್ಯಂತ ಎರಡೇ ದಿನಕ್ಕೆ 219 ಕೋಟಿ ಬಾಚಿದ ‘ಪಠಾಣ್‌’.. ಇದು ಸಾರ್ವಕಾಲಿಕ ದಾಖಲೆ..

    • ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಈ ವರೆಗೂ ಯಾರೂ ಮಾಡದ ದಾಖಲೆಗಳೆಲ್ಲ ಶಾರುಖ್‌ ಅವರ ಪಠಾಣ್‌ ಚಿತ್ರದ ಬತ್ತಳಿಕೆಗೆ ಸೇರ್ಪಡೆಗೊಂಡಿದೆ.
ವಿಶ್ವದಾದ್ಯಂತ ಎರಡೇ ದಿನಕ್ಕೆ 219 ಕೋಟಿ ಬಾಚಿದ ‘ಪಠಾಣ್‌’.. ಇದು ಸಾರ್ವಕಾಲಿಕ ದಾಖಲೆ..
ವಿಶ್ವದಾದ್ಯಂತ ಎರಡೇ ದಿನಕ್ಕೆ 219 ಕೋಟಿ ಬಾಚಿದ ‘ಪಠಾಣ್‌’.. ಇದು ಸಾರ್ವಕಾಲಿಕ ದಾಖಲೆ..

Pathaan Worldwide Box office: ಶಾರುಖ್‌ ಖಾನ್‌ ಸೋಲಿನ ಸುಳಿಯಿಂದ ಆಚೆ ಬಂದಿದ್ದಾರೆ. ಕಳೆದ ನಾಲ್ಕು ವರ್ಷದ ಹಿಂದೆ ಅನುಭವಿಸಿದ ಸೋಲಿಗೆ ಇದೀಗ ಸೇಡು ತೀರಿಸಿಕೊಂಡು ಬಾಕ್ಸ್‌ ಆಫೀಸ್‌ನಲ್ಲಿ ತಾವೇ ಸುಲ್ತಾನ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಈ ವರೆಗೂ ಯಾರೂ ಮಾಡದ ದಾಖಲೆಗಳೆಲ್ಲ ಶಾರುಖ್‌ ಅವರ ಪಠಾಣ್‌ ಚಿತ್ರದ ಬತ್ತಳಿಕೆಗೆ ಸೇರ್ಪಡೆಗೊಂಡಿದೆ. ಆ ಪೈಕಿ ವಿಶ್ವದಾದ್ಯಂತ ಕೇವಲ ಎರಡೇ ದಿನದಲ್ಲಿ 219 ಕೋಟಿ ರೂ. ಬಾಚಿಕೊಂಡಿರುವುದು ಹೈಲೈಟ್!‌

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಈ ಮೊದಲೇ ಹೇಳಿಕೊಂಡಂತೆ ‘ಪಠಾಣ್‌’ ಚಿತ್ರಕ್ಕೆ ದೊಡ್ಡ ಮಟ್ಟದ ಓಪನಿಂಗ್‌ ಸಿಕ್ಕಿತ್ತು. ಬಾಕ್ಸ್‌ಆಫೀಸ್‌ನಲ್ಲಿ ಅಷ್ಟೇ ದೊಡ್ಡ ಮಟ್ಟದ ಕಲೆಕ್ಷನ್‌ ಫಸಲು ತೆಗೆಯಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಇದೀಗ ಅದು ನಿಜವಾಗಿದೆ. ಅಚ್ಚರಿಯ ರೀತಿಯಲ್ಲಿ ‘ಪಠಾಣ್‌’ ಸಿನಿಮಾ ಬಂಗಾರದ ಬೆಳೆಯನ್ನೇ ತೆಗೆದಿದೆ. ಬಿಡುಗಡೆಯಾದ ಮೊದಲ ದಿನ (ಜನವರಿ 25) ಅನಾಯಾಸವಾಗಿ ದೇಶದಾದ್ಯಂತ 55 ಕೋಟಿ ರೂ. ಕಲೆಕ್ಷನ್‌ ಮಾಡಿ ಹೊಸ ದಾಖಲೆ ತನ್ನದಾಗಿಸಿಕೊಂಡಿತ್ತು.‌ ಈ ವಿಚಾರವನ್ನು ವಿಮರ್ಶಕ ತರಣ್‌ ಆದರ್ಶ್‌ ಮಾಹಿತಿ ಹಂಚಿಕೊಂಡಿದ್ದರು. ಇದೀಗ ಇದೇ ಸಿನಿಮಾ ಪ್ರಪಂಚದಾದ್ಯಂತ ಬರೋಬ್ಬರಿ 106 ಕೋಟಿ ಗಳಿಕೆ ಮಾಡಿ ಸಾರ್ವಕಾಲಿಕ ಸಾಧನೆ ಮಾಡಿದೆ.

ಎರಡೇ ದಿನಕ್ಕೆ 219 ಕೋಟಿ ರೂ ಗಳಿಕೆ..

ಪಠಾಣ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಕಮಾಯಿ ಮುಂದುವರಿಸಿದೆ. ಅದ್ಯಾವ ಮಟ್ಟಿಗೆ ಎಂದರೆ ಹಣದ ಸುನಾಮಿಯೇ ಎದ್ದಿದೆ. ಮೊದಲ ದಿನ 106 ಕೋಟಿ ಗಳಿಸಿದರೆ, ಎರಡನೇ ದಿನಕ್ಕೆ 113 ಕೋಟಿ ರೂ ಬಾಚಿಕೊಂಡಿದೆ. ಈ ಮೂಲಕ ಕೇವಲ ಎರಡೇ ದಿನದ ಅವಧಿಯಲ್ಲಿ 219 ಕೋಟಿ ರೂ. ಗಳಿಕೆ ಮಾಡಿ ಹೊಸ ಇತಿಹಾಸ ಸೃಷ್ಟಿಸಿದೆ.

ಕೆಜಿಎಫ್‌ 2 ದಾಖಲೆ ಪುಡಿ ಪುಡಿ...

ಕಳೆದ ವರ್ಷ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ಕನ್ನಡದ ‘ಕೆಜಿಎಫ್‌ 2’ ಸಿನಿಮಾ ದಾಖಲೆಯನ್ನು ‘ಪಠಾಣ್‌’ ಮುರಿದಿದೆ. ‘ಕೆಜಿಎಫ್‌ 2’ ಚಿತ್ರ ಹಿಂದಿ ಅವತರಣಿಕೆ ಮೊದಲ ದಿನ 53.95 ಕೋಟಿ ಗಳಿಕೆ ಕಂಡಿತ್ತು. ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿತ್ತು. ಇದೀಗ 55 ಕೋಟಿ ಕಲೆಕ್ಷನ್‌ ಮಾಡಿ ಮೊದಲ ಸ್ಥಾನ ಅಲಕಂರಿಸಿದೆ ‘ಪಠಾಣ್‌’. ಇನ್ನುಳಿದಂತೆ 51.60 ಕೋಟಿ ಗಳಿಸಿರುವ ವಾರ್‌ ಸಿನಿಮಾ ಮೂರನೇ ಸ್ಥಾನದಲ್ಲಿದ್ದರೆ, ಥಗ್ಸ್‌ ಆಫ್‌ ಹಿಂದೂಸ್ಥಾನ್‌ ಸಿನಿಮಾ 50.75 ಕೋಟಿ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ.

ಪಠಾಣ್‌ ದಾಖಲೆಗಳ ಪಟ್ಟಿ...

1. ಭಾರತದಲ್ಲಿ ಇದುವರೆಗೆ ಗರಿಷ್ಠ ಸಂಖ್ಯೆಯ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾದ ಮೊದಲ ಚಿತ್ರ ಪಠಾಣ್

2. ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರ‌ ಪಠಾಣ್

3. ರಜೆಯಿಲ್ಲದ ದಿನದಂದು ಬಿಡುಗಡೆಯಾಗಿ ಮೊದಲ ದಿನವೇ ಅತಿ ಹೆಚ್ಚು ಗಳಿಸಿದ ಮೊದಲ ಚಿತ್ರ ಪಠಾಣ್

4. ವಾರ್ (53.35 ಕೋಟಿ) ಮತ್ತು ಥಗ್ಸ್ ಆಫ್ ಹಿಂದೂಸ್ತಾನ್ (52.25 ಕೋಟಿ) ನಂತರ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ 50 ಕೋಟಿಗೂ ಹೆಚ್ಚು ಗಳಿಕೆ ಮಾಡಿದ ಯಶ್ ರಾಜ್ ಬ್ಯಾನರ್‌ನ ಮೂರನೇ ಚಿತ್ರ

5. ಏಕ್ ಥಾ ಟೈಗರ್ ಮತ್ತು ವಾರ್ ನಂತರ ದಾಖಲೆಗಳನ್ನು ನಿರ್ಮಿಸಿದ ಮೂರನೇ ಯಶ್ ರಾಜ್ ಸ್ಪೈ ಯೂನಿವರ್ಸ್ ಚಿತ್ರ

6. ಶಾರುಖ್ ಖಾನ್ ಅವರ ವೃತ್ತಿಜೀವನದ ಮೊದಲ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿಯೂ ಪಠಾಣ್‌ಗೆ ಸಲ್ಲಬೇಕು

7. ಜಾನ್ ಅಬ್ರಹಾಂ ಅವರ ವೃತ್ತಿಜೀವನದಲ್ಲಿ ಮೊದಲ ದಿನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮೊದಲ ಚಿತ್ರವೂ ಪಠಾಣ್

8. ದೀಪಿಕಾ ಪಡುಕೋಣೆ ಅವರ ವೃತ್ತಿಜೀವನದಲ್ಲಿ ಮೊದಲ ದಿನವೇ ಅತಿ ಹೆಚ್ಚು ಗಳಿಕೆ ಮಾಡಿದ ಮೊದಲ ಚಿತ್ರವಾಗಿ ಹೊರಹೊಮ್ಮಿದೆ ಪಠಾಣ್‌ ಸಿನಿಮಾ

9. ಮೊದಲ ದಿನದಲ್ಲಿ ಯಶ್ ರಾಜ್ ಫಿಲಂಸ್‌ನ ಅತಿ ಹೆಚ್ಚು ಗಳಿಕೆ ಮಾಡಿದ ಮೊದಲ ಚಿತ್ರ

10. ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಸಿನಿಮಾ ಕೆರಿಯರ್‌ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಮೊದಲ ಚಿತ್ರವೂ ಪಠಾಣ್.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ