logo
ಕನ್ನಡ ಸುದ್ದಿ  /  ಮನರಂಜನೆ  /  Amrutha Prem Birthday: ಪ್ರೇಮ್‌ ಪುತ್ರಿಗೆ ಹುಟ್ಟುಹಬ್ಬದ ಸಂಭ್ರಮ...ಹೊಸ ಪೋಸ್ಟರ್‌ ಮೂಲಕ ಶುಭ ಕೋರಿದ 'ಟಗರು ಪಲ್ಯ' ತಂಡ

Amrutha Prem Birthday: ಪ್ರೇಮ್‌ ಪುತ್ರಿಗೆ ಹುಟ್ಟುಹಬ್ಬದ ಸಂಭ್ರಮ...ಹೊಸ ಪೋಸ್ಟರ್‌ ಮೂಲಕ ಶುಭ ಕೋರಿದ 'ಟಗರು ಪಲ್ಯ' ತಂಡ

HT Kannada Desk HT Kannada

Jan 23, 2023 01:37 PM IST

ಪ್ರೇಮ್‌ ಪುತ್ರಿ ಅಮೃತಾಗೆ ಹುಟ್ಟುಹಬ್ಬದ ಸಂಭ್ರಮ

    • ಸಿನಿಮಾದಲ್ಲಿ ಅವಕಾಶ ದೊರೆಯುತ್ತಿದ್ದಂತೆ ಪ್ರೇಮ್‌, ತಮ್ಮ ಪುತ್ರಿಯೊಂದಿಗೆ ಕೇಕ್‌ ಕತ್ತರಿಸಿ ಸಂಭ್ರಮ ಆಚರಿಸಿದ್ದರು. ಇದೀಗ ಮಗಳ ಹುಟ್ಟುಹಬ್ಬವನ್ನು ಪ್ರೇಮ್‌ ಕೂಡಾ ಮೊದಲಿಗಿಂತ ಹೆಚ್ಚು ಸಂಭ್ರಮಿಸಿದ್ದಾರೆ. ಮಗಳ ವಿಡಿಯೋವೊಂದನ್ನು ಹಂಚಿಕೊಂಡು ಪ್ರೇಮ್‌ ತಮ್ಮ ಪುತ್ರಿಗೆ ಬರ್ತ್‌ಡೇ ಶುಭ ಹಾರೈಸಿದ್ದಾರೆ.
ಪ್ರೇಮ್‌ ಪುತ್ರಿ ಅಮೃತಾಗೆ ಹುಟ್ಟುಹಬ್ಬದ ಸಂಭ್ರಮ
ಪ್ರೇಮ್‌ ಪುತ್ರಿ ಅಮೃತಾಗೆ ಹುಟ್ಟುಹಬ್ಬದ ಸಂಭ್ರಮ (PC: _amrutha_prem_Instagram)

ಸ್ಯಾಂಡಲ್‌ವುಡ್‌ ಸ್ಫುರದ್ರೂಪಿ ನಟ ಪ್ರೇಮ್‌ ಪುತ್ರಿ ಇತ್ತೀಚೆಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವುದು ತಿಳಿದ ವಿಚಾರ. ಟಗರು ಪಲ್ಯ ಚಿತ್ರದ ಮೂಲಕ ಅಮೃತ ಪ್ರೇಮ್‌ ಸ್ಯಾಂಡಲ್‌ವುಡ್‌ಗೆ ಆಗಮಿಸಿದ್ದಾರೆ. ಸದ್ಯಕ್ಕೆ ಚಿತ್ರೀಕರಣದಲ್ಲಿ ಬ್ಯುಸಿ ಇರುವ ಅಮೃತಾ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಮೃತಾಗೆ ಚಿತ್ರತಂಡ , ಸ್ನೇಹಿತರು, ಪ್ರೇಮ್‌ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಈ ಹುಟ್ಟುಹಬ್ಬ ಅಮೃತಾಗೆ ಬಹಳ ವಿಶೇಷ ಎಂದೇ ಹೇಳಬಹುದು. ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಬೇಕು ಎಂದು ಎಷ್ಟೋ ಪ್ರತಿಭೆಗಳು ಹಂಬಲಿಸುತ್ತಾರೆ. ಆದರೆ ಬಯಸದೆ ಬಂದ ಭಾಗ್ಯ ಎನ್ನುವಂತೆ ಅಮೃತಾಗೆ ಅವಕಾಶ ತಾನಾಗೇ ಹುಡುಕಿ ಬಂದಿದೆ. ಸಿನಿಮಾದಲ್ಲಿ ಅವಕಾಶ ದೊರೆಯುತ್ತಿದ್ದಂತೆ ಪ್ರೇಮ್‌, ತಮ್ಮ ಪುತ್ರಿಯೊಂದಿಗೆ ಕೇಕ್‌ ಕತ್ತರಿಸಿ ಸಂಭ್ರಮ ಆಚರಿಸಿದ್ದರು. ಇದೀಗ ಮಗಳ ಹುಟ್ಟುಹಬ್ಬವನ್ನು ಪ್ರೇಮ್‌ ಕೂಡಾ ಮೊದಲಿಗಿಂತ ಹೆಚ್ಚು ಸಂಭ್ರಮಿಸಿದ್ದಾರೆ. ಮಗಳ ವಿಡಿಯೋವೊಂದನ್ನು ಹಂಚಿಕೊಂಡು ಪ್ರೇಮ್‌ ತಮ್ಮ ಪುತ್ರಿಗೆ ಬರ್ತ್‌ಡೇ ಶುಭ ಹಾರೈಸಿದ್ದಾರೆ. ''ಹುಟ್ಟುಹಬ್ಬದ ಶುಭಾಶಯಗಳು ಮಗಳೇ, ಯಶಸ್ಸಿನ ಉತ್ತುಂಗ ನಿನ್ನದಾಗಲಿ, ದೇವರು ನಿನಗೆ ಆರೋಗ್ಯ, ಸುಖ ಸಂತೋಷ ನೀಡಲಿ'' ಎಂದು ಪ್ರೇಮ್‌ ತಮ್ಮ ಪುತ್ರಿಗೆ ಹಾರೈಸಿದ್ದಾರೆ.

'ಟಗರು ಪಲ್ಯ' ಚಿತ್ರತಂಡ ಕೂಡಾ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತಮ್ಮ ಚಿತ್ರದ ನಟಿಗೆ ಶುಭ ಕೋರಿದೆ. 'ಟಗರು ಪಲ್ಯ' ಚಿತ್ರದಲ್ಲಿ ಅಮೃತ ಪ್ರೇಮ್, ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು, ವರ್ಕ್ ಶಾಪ್ ಮೂಲಕ ಸಾಕಷ್ಟು ಕಲಿತು ಹಳ್ಳಿ ಹುಡುಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಂಡ್ಯ ಭಾಗದ ಕಥೆಯನ್ನೊಳ್ಳಗೊಂಡ ಈ ಚಿತ್ರದಲ್ಲಿ ಅಲ್ಲಿನ ಸೊಗಡಿನ ಭಾಷೆ ಕಲಿತು ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಉಮೇಶ್ ಕೆ ಕೃಪ, ''ಹಳ್ಳಿ ಹುಡುಗಿ ಪಾತ್ರ ಅಂದ್ರೆ ಸುಲಭದ ವಿಷಯವಲ್ಲ. ಅದಕ್ಕೆ ಆದಷ್ಟು ಬೇಗ ಒಗ್ಗಿಕೊಂಡು ಆ ನಯ ನಾಜೂಕನ್ನು ಬಹಳ ಬೇಗ ಅರ್ಥಮಾಡಿಕೊಂಡು ಅಮೃತ ನಟಿಸಿದ್ದಾರೆ. ಭಾಷೆ ಮೇಲೆ ಅವರಿಗೆ ಹಿಡಿತ ಇದೆ. ಮಂಡ್ಯ ಸ್ಲ್ಯಾಂಗ್ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಈಗಾಗಲೇ ಎರಡು ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ'' ಎಂದು ಮಾಹಿತಿ ನೀಡಿದ್ದಾರೆ.

ಡಾಲಿ ಧನಂಜಯ್ ಅವರ, ಡಾಲಿ ಪಿಕ್ಚರ್ಸ್ ಬ್ಯಾನರ್‌ ಅಡಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ 'ಟಗರು ಪಲ್ಯ'. ಈ ಬಾರಿ ಡಾಲಿ ಪಿಕ್ಚರ್ಸ್, ಹೊಸ ಪ್ರತಿಭೆಗಳಿಗೆ ತಮ್ಮ ಚಿತ್ರದಲ್ಲಿ ಅವಕಾಶ ಮಾಡಿಕೊಟ್ಟಿದೆ. 'ಇಕ್ಕಟ್' ಖ್ಯಾತಿಯ ನಾಗಭೂಷಣ್, ಅಮೃತ ಜೊತೆ ನಾಯಕನಾಗಿ ನಟಿಸುತ್ತಿದ್ದಾರೆ. ಟಗರು ಪಲ್ಯ ಚಿತ್ರವನ್ನು ಉಮೇಶ್. ಕೆ. ಕೃಪ ನಿರ್ದೇಶಿಸಿದ್ದಾರೆ. ಇದು ಉಮೇಶ್‌ ನಿರ್ದೇಶನದ ಮೊದಲ ಸಿನಿಮಾ. 'ಟಗರು ಪಲ್ಯ' ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್. ಕೆ. ರಾವ್ ಕ್ಯಾಮರಾ ಕೆಲಸ ಇದೆ. ಅಮೃತ, ನಾಗಭೂಷಣ್ ಜೊತೆಗೆ ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಅಮೃತ, ಓದಿನಲ್ಲಿ ಕೂಡಾ ಮುಂದಿದ್ದಾರೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ತಮ್ಮ ಮಗಳು ತೆಗೆದಿರುವ ಅಂಕಗಳನ್ನು ಪ್ರೇಮ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದರು. ಈಗ ಶೂಟಿಂಗ್‌ನಲ್ಲಿ ಬ್ಯುಸಿ ಇರುವ ಅಮೃತ, ವಿದ್ಯಾಭ್ಯಾಸ ಹಾಗೂ ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಮಗಳಿಗೆ ಪ್ರೇಮ್‌ ದಂಪತಿ ಪ್ರೋತ್ಸಾಹ ನೀಡುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ