logo
ಕನ್ನಡ ಸುದ್ದಿ  /  ಮನರಂಜನೆ  /  Raghavendra Stores Update: ‘ರಾಘವೇಂದ್ರ ಸ್ಟೋರ್ಸ್‌’ ಚಿತ್ರ ಒಟಿಟಿಯಲ್ಲಿ ಎಂದವರಿಗೆ ವಿಮರ್ಶೆ ಸಮೇತ ಉತ್ತರಿಸಿದ ನಟ ಜಗ್ಗೇಶ್‌

Raghavendra Stores update: ‘ರಾಘವೇಂದ್ರ ಸ್ಟೋರ್ಸ್‌’ ಚಿತ್ರ ಒಟಿಟಿಯಲ್ಲಿ ಎಂದವರಿಗೆ ವಿಮರ್ಶೆ ಸಮೇತ ಉತ್ತರಿಸಿದ ನಟ ಜಗ್ಗೇಶ್‌

HT Kannada Desk HT Kannada

Mar 02, 2023 06:24 AM IST

‘ರಾಘವೇಂದ್ರ ಸ್ಟೋರ್ಸ್‌’ ಚಿತ್ರ ಒಟಿಟಿಯಲ್ಲಿ ಎಂದವರಿಗೆ ವಿಮರ್ಶೆ ಸಮೇತ ಉತ್ತರಿಸಿದ ನಟ ಜಗ್ಗೇಶ್‌

    • ‘ರಾಘವೇಂದ್ರ ಸ್ಟೋರ್ಸ್‌’ ಬಗ್ಗೆ ಸ್ವತಃ ನಟ ಜಗ್ಗೇಶ್‌ ಅಪ್‌ಡೇಟ್‌ ಮಾಹಿತಿ ನೀಡಿದ್ದಾರೆ. ಸಿನಿಮಾ ವೀಕ್ಷಣೆ ಮಾಡಿ, ವಿಮರ್ಶೆಯನ್ನೂ ನೀಡಿದ್ದಾರೆ.
‘ರಾಘವೇಂದ್ರ ಸ್ಟೋರ್ಸ್‌’ ಚಿತ್ರ ಒಟಿಟಿಯಲ್ಲಿ ಎಂದವರಿಗೆ ವಿಮರ್ಶೆ ಸಮೇತ ಉತ್ತರಿಸಿದ ನಟ ಜಗ್ಗೇಶ್‌
‘ರಾಘವೇಂದ್ರ ಸ್ಟೋರ್ಸ್‌’ ಚಿತ್ರ ಒಟಿಟಿಯಲ್ಲಿ ಎಂದವರಿಗೆ ವಿಮರ್ಶೆ ಸಮೇತ ಉತ್ತರಿಸಿದ ನಟ ಜಗ್ಗೇಶ್‌

Jaggesh Raghavendra Stores update: ನವರಸ ನಾಯಕ ಜಗ್ಗೇಶ್‌ ಅಭಿನಯದ ‘ರಾಘವೇಂದ್ರ ಸ್ಟೋರ್ಸ್‌’ ಸಿನಿಮಾ ಬಗ್ಗೆ ಸಿನಿಪ್ರಿಯರು ಬಹಳ ಆಸಕ್ತಿ ತೋರುತ್ತಿದ್ದಾರೆ. ಆದರೆ ಸಿನಿಮಾ ಚಿತ್ರೀಕರಣ ಮುಗಿದು ಬಹಳ ದಿನಗಳಾದರೂ ಬಿಡುಗಡೆ ಆಗುವ ಸುಳಿವೇ ಇಲ್ಲ. ಕಳೆದ ವರ್ಷದ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ಘೋಷಿಸಿತ್ತು. ಅದಾದ ಬಳಿಕ ಮತ್ತೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಹಬ್ಬ ಕೆಲವು ದಿನಗಳು ಇರುವಾಗ ಮತ್ತೊಂದು ಪೋಸ್ಟ್‌ ಹಂಚಿಕೊಂಡು ಕಾರಣಾಂತರಗಳಿಂದ ನಿಮ್ಮಿಷ್ಟದ ರಸದೌತಣ ಸ್ವಲ್ಪ ವಿಳಂಬವಾಗುತ್ತಿದೆ ಎಂದು ಹೇಳಿತ್ತು. ಅಲ್ಲಿಂದ ಇಂದಿನವರೆಗೂ ಸಿನಿಮಾ ಯಾವಾಗ ರಿಲೀಸ್‌ ಆಗುತ್ತದೆ ಎಂದು ಅಪ್‌ಡೇಟ್‌ ಹೊರಬಿದ್ದಿಲ್ಲ.

ಟ್ರೆಂಡಿಂಗ್​ ಸುದ್ದಿ

ಕೊನೆಗೂ ಮದುವೆ ಮುನ್ಸೂಚನೆ ನೀಡಿ, ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಡಾರ್ಲಿಂಗ್‌ ಪ್ರಭಾಸ್‌; ಅಷ್ಟಕ್ಕೂ ಹುಡುಗಿ ಯಾರಿರಬಹುದು?

ಮೋದಿ ಕೆಲಸ ಹೊಗಳುವಂತೆ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ 10 ಕೋಟಿ ರೂ!? ‘ಇನ್ನೊಬ್ಬಳು ಕಂಗನಾ ಬಂದಳು’ ಎನ್ನುತ್ತ ನಟಿಯನ್ನು ಝಾಡಿಸಿದ ನೆಟ್ಟಿಗರು

Seetha Rama Serial: ಅಶೋಕನ ಮೇಲೆ ಮಾರಣಾಂತಿಕ ಹಲ್ಲೆ, ಇದು ಭಾರ್ಗವಿ ಸಂಚೋ, ರುದ್ರಪ್ರತಾಪನ ಕೈವಾಡವೋ?

Brundavana Serial: ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?

‘ರಾಘವೇಂದ್ರ ಸ್ಟೋರ್ಸ್‌’ ಚಿತ್ರ ಟೀಸರ್‌ ಮೂಲಕವೇ ಕುತೂಹಲ ಕೆರಳಿಸಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಕಾರಣಾಂತರಗಳಿಂದ ಅದು ಆಗಲಿಲ್ಲ. ಹೀಗಿರುವಾಗಲೇ ಇದೇ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಅದು ನಿಜವಾಗಲಿಲ್ಲ. ಇದೀಗ ‘ರಾಘವೇಂದ್ರ ಸ್ಟೋರ್ಸ್‌’ ಬಗ್ಗೆ ಸ್ವತಃ ನಟ ಜಗ್ಗೇಶ್‌ ಅಪ್‌ಡೇಟ್‌ ಮಾಹಿತಿ ನೀಡಿದ್ದಾರೆ. ಸಿನಿಮಾ ವೀಕ್ಷಣೆ ಮಾಡಿ, ವಿಮರ್ಶೆಯನ್ನೂ ನೀಡಿದ್ದಾರೆ.

‘ರಾಘವೇಂದ್ರ ಸ್ಟೋರ್ಸ್‌’ ಬಗ್ಗೆ ಜಗ್ಗೇಶ್‌ ಹೇಳಿದ್ದೇನು?

ಸೋಷಿಯಲ್‌ ಮೀಡಿಯಾದಲ್ಲಿ ‘ರಾಘವೇಂದ್ರ ಸ್ಟೋರ್ಸ್‌’ ಚಿತ್ರದ ಬಗ್ಗೆ ಪೋಸ್ಟ್‌ ಹಾಕಿರುವ ಜಗ್ಗೇಶ್‌, ಅದ್ಭುತ ನಿರ್ದೇಶನ, ಅದ್ಭುತ ಸಂಗೀತ, ಅದ್ಭುತ ಸಂಕಲನ, ಅದ್ಭುತ ಛಾಯಾಗ್ರಹಣ, ಒಟ್ಟಾರೆ ಹೊಂಬಾಳೆ ಫಿಲಂಸ್‌ ಸಂಸ್ಥೆಯ ಅದ್ಭುತ ಚಿತ್ರ.. ಧನ್ಯವಾದ ಇಂಥ ಅದ್ಭುತ ಚಿತ್ರ ಕಟ್ಟಿಕೊಟ್ಟ ಸಂತೋಷ್‌ ಆನಂದ್‌ ರಾಮ್‌ರವರಿಗೆ. ನನ್ನ ಪ್ರಕಾರ ಈ ಚಿತ್ರ ಕನ್ನಡಿಗರ ಮನಗೆಲ್ಲುತ್ತದೆ. ಬಹಳ ವರ್ಷ ನೆನಪಲ್ಲಿ ಉಳಿಯುತ್ತದೆ... ಅತಿ ಶೀಘ್ರ ಚಿತ್ರಮಂದಿರದಲ್ಲಿ" ಎಂದಿದ್ದಾರೆ. ಈ ಮೂಲಕ ಈ ಸಿನಿಮಾ ಚಿತ್ರಮಂದಿರದಲ್ಲಿಯೇ ಬಿಡುಗಡೆ ಆಗಲಿದೆ ಎಂದಿದ್ದಾರೆ.

ಹೊಂಬಾಳೆ ಬತ್ತಳಿಕೆಯಲ್ಲಿನ ಸಿನಿಮಾಗಳಿವು..

ಕಾಂತಾರ ಸಿನಿಮಾದ ಯಶಸ್ಸಿನ ಗುಂಗಿನಲ್ಲಿರುವ ಹೊಂಬಾಳೆ ಫಿಲಂಸ್‌ ಸಂಸ್ಥೆ, ಕನ್ನಡ ಮಾತ್ರವಲ್ಲ ಸಾಲು ಸಾಲು ಪರಭಾಷೆ ಸಿನಿಮಾಗಳನ್ನೂ ನಿರ್ಮಾಣ ಮಾಡುತ್ತಿದೆ. ಸದ್ಯ ಕನ್ನಡದಲ್ಲಿ ಬಘೀರ, ರಿಚರ್ಡ್‌ ಆಂಟನಿ, ಇನ್ನೂ ಶೀರ್ಷಿಕೆ ಅಂತಿಮವಾಗದ ಯುವ ರಾಜ್‌ಕುಮಾರ್‌ ಸಿನಿಮಾ, ಕಾಂತಾರ 2, ಮಲಯಾಳಂನ ಟೈಸನ್‌, ತಮಿಳಿನ ರಘು ತಾತ ಚಿತ್ರದ ಕೆಲಸಗಳು ನಡೆದಿವೆ. ರಾಘವೇಂದ್ರ ಸ್ಟೋರ್ಸ್‌, ಮಲಯಾಳಂನ ಧೂಮಂ ಸಿನಿಮಾ ಶೂಟಿಂಗ್‌ ಮುಕ್ತಾಯವಾದರೆ, ತೆಲುಗಿನ ಸಲಾರ್‌ ಕೊನೇ ಹಂತದ ಕೆಲಸಗಳಲ್ಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ