logo
ಕನ್ನಡ ಸುದ್ದಿ  /  ಮನರಂಜನೆ  /   Pushpa 2 Movie New Update: 'ಪುಷ್ಪ 2' ಶ್ರೀವಲ್ಲಿ ಪಾತ್ರದಲ್ಲಿ ಸಾಯಿಪಲ್ಲವಿ? ಫರ್ಹಾದ್‌ ಫಾಸಿಲ್‌ ಕೂಡಾ ಇರೋದಿಲ್ವಂತೆ, ಏನಿದು ಸುದ್ದಿ?

Pushpa 2 Movie New Update: 'ಪುಷ್ಪ 2' ಶ್ರೀವಲ್ಲಿ ಪಾತ್ರದಲ್ಲಿ ಸಾಯಿಪಲ್ಲವಿ? ಫರ್ಹಾದ್‌ ಫಾಸಿಲ್‌ ಕೂಡಾ ಇರೋದಿಲ್ವಂತೆ, ಏನಿದು ಸುದ್ದಿ?

HT Kannada Desk HT Kannada

Dec 29, 2022 11:11 AM IST

ಸಾಯಿ ಪಲ್ಲವಿ, ರಶ್ಮಿಕಾ ಮಂದಣ್ಣ

    • ಸೀಕ್ವೆಲ್‌ನಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ( Rashmika) ಬದಲಿಗೆ  ನ್ಯಾಚುರಲ್‌ ಬ್ಯೂಟಿ, ಸಾಯಿ ಪಲ್ಲವಿ (Sai Pallavi) ನಟಿಸುತ್ತಿದ್ದು ಫರ್ಹಾದ್‌ ಫಾಸಿಲ್‌ (Fahadh Faasil) ಜಾಗಕ್ಕೆ ಕೂಡಾ ಬೇರೆ ನಟನನ್ನು ಕರೆ ತರಲು ಚಿತ್ರತಂಡ ಹುಡುಕಾಡುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. 'ಪುಷ್ಪ 2' ಚಿತ್ರಕ್ಕೆ ಆಗಸ್ಟ್‌ನಲ್ಲೇ ಮುಹೂರ್ತ ನೆರವೇರಿದ್ದು ಚಿತ್ರೀಕರಣ ಈಗಾಗಲೇ ಶುರುವಾಗಿದೆ ಎನ್ನಲಾಗಿತ್ತು. ಆದರೆ ಶೂಟಿಂಗ್‌ ಸ್ಟಾರ್ಟ್‌ ಆಗಿರುವುದು ಇತ್ತೀಚೆಗಂತೆ.
ಸಾಯಿ ಪಲ್ಲವಿ, ರಶ್ಮಿಕಾ ಮಂದಣ್ಣ
ಸಾಯಿ ಪಲ್ಲವಿ, ರಶ್ಮಿಕಾ ಮಂದಣ್ಣ

ಕಳೆದ ವರ್ಷ ಡಿಸೆಂಬರ್‌ 17 ರಂದು ತೆರೆ ಕಂಡಿದ್ದ 'ಪುಷ್ಪ' (Pushpa) ಸಿನಿಮಾ ಸಿನಿ ಪ್ರಿಯರನ್ನು ಎಷ್ಟು ಮೋಡಿ ಮಾಡಿತ್ತು ಅನ್ನೋದು ತಿಳಿದ ವಿಚಾರ. 200 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಸಿನಿಮಾ 370 ಕೋಟಿ ರೂಪಾಯಿ ಲಾಭ ಮಾಡಿ ಬಾಕ್ಸ್‌ ಆಫೀಸಲ್ಲಿ ಕೂಡಾ ಸದ್ದು ಮಾಡಿತ್ತು. ಚಿತ್ರದ ಡೈಲಾಗ್‌ ಹಾಡುಗಳು ಇಂದಿಗೂ ಬಹಳ ಫೇಮಸ್.‌

ಟ್ರೆಂಡಿಂಗ್​ ಸುದ್ದಿ

Kuntebille Movie: ಸೆಟ್ಟೇರಿತು ತರ್ಲೆ ವಿಲೇಜ್‌ ನಿರ್ದೇಶಕರ ಕುಂಟೆಬಿಲ್ಲೆ ಸಿನಿಮಾ; ಇದು ಪ್ರೇಮ ಕಾಮದ ಸುತ್ತ ತಿರುಗುವ ಚಿತ್ರ

Huu ಅಂತೀಯಾ...Uhuu ಅಂತೀಯಾ; ಸ್ಟಾರ್‌ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ, ಗೆದ್ದವರಿಗೆ ಲಕ್ಷ ಲಕ್ಷ ಬಹುಮಾನ

OTT News: ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್‌ 2 ವೆಬ್‌ಸಿರೀಸ್‌ನ ಟ್ರೈಲರ್ ಬಿಡುಗಡೆ; ಜಿಯೊಸಿನಿಮಾ ಮೂಲಕ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

ಅವ್ರಿಗೊಂದು ದೊಡ್ಡ ನಮಸ್ಕಾರ! ಈಜುಡುಗೆ ಬಗ್ಗೆ ತಮಗಿದ್ದ ಭಯ ಎಷ್ಟು ಎಂಬುದನ್ನು ಮುಚ್ಚುಮರೆಯಿಲ್ಲದೇ ಹೇಳಿದ ಮೀನಾ

ಪುಷ್ಪ ಚಿತ್ರದ ಹಾಡುಗಳು ಪುಟ್ಟ ಮಕ್ಕಳನ್ನೂ ಬಹಳ ಇಂಪ್ರೆಸ್‌ ಮಾಡಿದೆ. ಉತ್ತರ ಭಾರತದ ಮಂದಿ ಕೂಡಾ ಹಾಡುಗಳನ್ನು ಬಹಳ ಇಷ್ಟಪಟ್ಟಿದ್ದರು. ದೇವಿಶ್ರೀ ಪ್ರಸಾದ್‌ ಸಂಗೀತ ಎಲ್ಲರನ್ನೂ ಮೋಡಿ ಮಾಡಿದ್ದು ಸುಳ್ಳಲ್ಲ. ಇನ್ನು ಈ ಚಿತ್ರದ ಡೈಲಾಗ್‌ ಬಗ್ಗೆ ಹೇಳುವುದೇ ಬೇಕಿಲ್ಲ. ಮೈತ್ರಿ ಮೂವಿ ಮೇಕರ್ಸ್‌ ಹಾಗೂ ಮುತ್ತಮ್‌ ಶೆಟ್ಟಿ ಮೀಡಿಯಾ ಬ್ಯಾನರ್ ಅಡಿಯಲ್ಲಿ ನವೀನ್‌ ಯರನೇನಿ, ವೈ ರವಿ ಶಂಕರ್‌ ಜೊತೆ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದು ಸುಕುಮಾರ್‌ ಕಥೆ ಬರೆದು ನಿರ್ದೇಶನ ಮಾಡಿದ್ದರು. ಚಿತ್ರದ ವಿಶೇಷ ಹಾಡಿಗೆ ಸಮಂತಾ ಹೆಜ್ಜೆ ಹಾಕಿದ್ದರು. ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ, ಫರ್ಹಾದ್‌ ಫಾಸಿಲ್‌, ಸುನಿಲ್‌, ರಾವ್‌ ರಮೇಶ್‌, ಡಾಲಿ ಧನಂಜಯ್‌, ಅನಸೂಯಾ ಭಾರಧ್ವಾಜ್‌, ಅಜಯ್‌ ಘೋಷ್‌ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದರು.

'ಪುಷ್ಪ' ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗಲಿದೆ ಎಂದು ಚಿತ್ರತಂಡ ಮೊದಲೇ ಹೇಳಿತ್ತು. ಮೊದಲ ಭಾಗ ನೋಡಿದ ಅಭಿಮಾನಿಗಳು ಇದೀಗ ಎರಡನೇ ಭಾಗಕ್ಕೆ ಕಾಯುತ್ತಿದ್ದಾರೆ. ಪುಷ್ಪ ಸೀಕ್ವೆಲ್‌ ಬಗ್ಗೆ ಕೆಲವು ದಿನಗಳಿಂದ ಸಾಕಷ್ಟು ರೂಮರ್ಸ್‌ ಹರಿದಾಡುತ್ತಿದೆ. ಸೀಕ್ವೆಲ್‌ ಆರಂಭದಲ್ಲೇ ರಶ್ಮಿಕಾ ಮಂದಣ್ಣ ನಟಿಸಿರುವ ಶ್ರೀವಲ್ಲಿ ಪಾತ್ರ ಸಾವಿನ ಮೂಲಕ ಕೊನೆಯಾಗುತ್ತದೆ ಎಂದರೆ, ಇಲ್ಲ ಕೊನೆಯವರೆಗೂ ಶ್ರೀವಲ್ಲಿ ಪಾತ್ರ ಇರುತ್ತದೆ ಎಂಬ ಮಾತು ಮತ್ತೊಂದೆಡೆ. ಮೊದಲ ಭಾಗದಲ್ಲಿ ಸಮಂತಾ ವಿಶೇಷ ಸಾಂಗ್‌ಗೆ ಹೆಜ್ಜೆ ಹಾಕಿದ್ದರು, ಸೀಕ್ವೆಲ್‌ನಲ್ಲಿ ಕೂಡಾ ಈ ರೀತಿ ಒಂದು ಹಾಡು ಇರಲಿದ್ದು ಕೆಲವು ನಟಿಯರ ಹೆಸರು ಕೇಳಿಬಂದಿತ್ತು. ಆದರೆ ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು ಭಾಗ 2ರಲ್ಲಿ ರಶ್ಮಿಕಾ ಹಾಗೂ ಫರ್ಹಾದ್‌ ಫಾಸಿಲ್‌ ಇಬ್ಬರೂ ಇರುವುದಿಲ್ಲ ಎನ್ನಲಾಗುತ್ತಿದೆ.

ಸೀಕ್ವೆಲ್‌ನಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ನ್ಯಾಚುರಲ್‌ ಬ್ಯೂಟಿ, ಸಾಯಿ ಪಲ್ಲವಿ ನಟಿಸುತ್ತಿದ್ದು ಫರ್ಹಾದ್‌ ಫಾಸಿಲ್‌ ಜಾಗಕ್ಕೆ ಕೂಡಾ ಬೇರೆ ನಟನನ್ನು ಕರೆ ತರಲು ಚಿತ್ರತಂಡ ಹುಡುಕಾಡುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. 'ಪುಷ್ಪ 2' ಚಿತ್ರಕ್ಕೆ ಆಗಸ್ಟ್‌ನಲ್ಲೇ ಮುಹೂರ್ತ ನೆರವೇರಿದ್ದು ಚಿತ್ರೀಕರಣ ಈಗಾಗಲೇ ಶುರುವಾಗಿದೆ ಎನ್ನಲಾಗಿತ್ತು. ಆದರೆ ಶೂಟಿಂಗ್‌ ಸ್ಟಾರ್ಟ್‌ ಆಗಿರುವುದು ಇತ್ತೀಚೆಗಂತೆ. ನಿರ್ದೇಶಕ ಸುಕುಮಾರ್‌, ಸ್ಕ್ರಿಪ್ಟ್‌ನಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಲು ಇಷ್ಟು ಸಮಯ ತೆಗೆದುಕೊಂಡ ಕಾರಣ ಫರ್ಹಾದ್‌ ನೀಡಿದ್ದ ಡೇಟ್ಸ್‌ ಮುಗಿದಿದೆ. ಆದ್ದರಿಂದ ಅವರು ಡೇಟ್ಸ್‌ ತೊಂದರೆಯಿಂದ ಚಿತ್ರದಲ್ಲಿ ನಟಿಸುವುದು ಅನುಮಾನ ಎನ್ನಲಾಗಿದೆ. ಇನ್ನು ಸಾಯಿ ಪಲ್ಲವಿ ಈ ಚಿತ್ರದಲ್ಲಿ ನಟಿಸುತ್ತಿರುವುದು ಶ್ರೀವಲ್ಲಿ ಪಾತ್ರದಲ್ಲಿ ಅಲ್ಲ, ಬೇರೆ ಪಾತ್ರದಲ್ಲಿ ಎಂಬ ಮಾತುಗಳು ಕೂಡಾ ಕೇಳಿಬರುತ್ತಿದೆ. ಯಾವುದು ನಿಜ? ಯಾವುದು ಸುಳ್ಳು ಎಂದು ತಿಳಿಯಲು ಸಿನಿಮಾ ಬಿಡುಗಡೆ ಆಗುವವರೆಗೂ ಕಾದು ನೋಡಬೇಕು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ