logo
ಕನ್ನಡ ಸುದ್ದಿ  /  ಮನರಂಜನೆ  /  ಓಗಾ ಓಗಾ ಲಿರಿಕಲ್‌ ವಿಡಿಯೋ ಸಾಂಗ್‌ ರಿಲೀಸ್‌; ಬ್ಯಾಡ್‌ ಮ್ಯಾನರ್ಸ್‌ ಹಾಡಿಗೆ ತಲೆದೂಗಿದ ಸಂಗೀತಪ್ರಿಯರು

ಓಗಾ ಓಗಾ ಲಿರಿಕಲ್‌ ವಿಡಿಯೋ ಸಾಂಗ್‌ ರಿಲೀಸ್‌; ಬ್ಯಾಡ್‌ ಮ್ಯಾನರ್ಸ್‌ ಹಾಡಿಗೆ ತಲೆದೂಗಿದ ಸಂಗೀತಪ್ರಿಯರು

Rakshitha Sowmya HT Kannada

Sep 12, 2023 11:39 AM IST

'ಬ್ಯಾಡ್‌ ಮ್ಯಾನರ್ಸ್‌' ಚಿತ್ರದ ಓಗಾ ಓಗಾ ಲಿರಿಕಲ್‌ ವಿಡಿಯೋ ರಿಲೀಸ್‌

  • 'ಬ್ಯಾಡ್‌ ಮ್ಯಾನರ್ಸ್‌' ಚಿತ್ರತಂಡ ಆನಂದ್‌ ಆಡಿಯೋ  ಯೂಟ್ಯೂಬ್‌ ಮೂಲಕ ಚಿತ್ರದ ಹೊಸ ಲಿರಿಕಲ್‌ ವಿಡಿಯೋ ಹಾಡನ್ನು ರಿಲೀಸ್‌ ಮಾಡಿದೆ. ಹಾಡು ರಿಲೀಸ್‌ ಆಗಿ 30 ನಿಮಿಷದಲ್ಲೇ 10 ಸಾವಿರಕ್ಕೂ ಹೆಚ್ಚು ಮಂದಿ ಹಾಡು ನೋಡಿದ್ದಾರೆ. ಹಾಡಿನ ಸಾಹಿತ್ಯ, ಟ್ಯೂನ್‌ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

'ಬ್ಯಾಡ್‌ ಮ್ಯಾನರ್ಸ್‌' ಚಿತ್ರದ ಓಗಾ ಓಗಾ ಲಿರಿಕಲ್‌ ವಿಡಿಯೋ ರಿಲೀಸ್‌
'ಬ್ಯಾಡ್‌ ಮ್ಯಾನರ್ಸ್‌' ಚಿತ್ರದ ಓಗಾ ಓಗಾ ಲಿರಿಕಲ್‌ ವಿಡಿಯೋ ರಿಲೀಸ್‌ (PC: Anand Audio YouTube)

ಅಭಿಷೇಕ್‌ ಅಂಬರೀಶ್‌ ಅಭಿನಯದ 2ನೇ ಸಿನಿಮಾ 'ಬ್ಯಾಡ್‌ ಮ್ಯಾನರ್ಸ್‌' ಶೂಟಿಂಗ್‌ ಬಹುತೇಕ ಮುಕ್ತಾಯಗೊಂಡು ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬ್ಯುಸಿ ಆಗಿದೆ. ಯುಗಾದಿ ಹಬ್ಬಕ್ಕೆ ಮೊದಲ ಹಾಡು ರಿಲೀಸ್‌ ಮಾಡುವ ಮೂಲಕ ಪ್ರಮೋಷನ್‌ ಕೆಲಸ ಶುರು ಮಾಡಿದ್ದ ಚಿತ್ರತಂಡ ಈಗ ಸಿನಿಮಾದ ಮತ್ತೊಂದು ಹಾಡನ್ನು ರಿಲೀಸ್‌ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಓಗಾ ಓಗಾ ಹಾಡನ್ನು ಮೆಚ್ಚಿದ ಸಂಗೀತಪ್ರಿಯರು

ಸೆಪ್ಟೆಂಬರ್‌ 12 ಬೆಳಗ್ಗೆ 11.04 ನಿಮಿಷಕ್ಕೆ 'ಬ್ಯಾಡ್‌ ಮ್ಯಾನರ್ಸ್‌' ಸಿನಿಮಾದ ಓಗಾ ಓಗಾ ಎಲೆ ಟೀ ಅಮೊ..ಹಾಡನ್ನು ಆನಂದ್‌ ಆಡಿಯೋ ಯೂಟ್ಯೂಬ್‌ ವಾಹಿನಿಯಲ್ಲಿ ರಿಲೀಸ್‌ ಮಾಡುವುದಾಗಿ ಚಿತ್ರತಂಡ ಮೊದಲೇ ಮಾಹಿತಿ ನೀಡಿತ್ತು. ಸುಮಲತಾ ಹಾಗೂ ಅಭಿಷೇಕ್‌ ಅಂಬರೀಶ್‌ ಕೂಡಾ ಹಾಡಿನ ಅಪ್‌ಡೇಟ್‌ ನೀಡಿದ್ದರು. ಇದೀಗ ಚಿತ್ರತಂಡ ಆನಂದ್‌ ಆಡಿಯೋ ಯೂಟ್ಯೂಬ್‌ ಮೂಲಕ ಚಿತ್ರದ ಹೊಸ ಲಿರಿಕಲ್‌ ವಿಡಿಯೋ ಸಾಂಗ್‌ ರಿಲೀಸ್‌ ಮಾಡಿದೆ. ಹಾಡು ರಿಲೀಸ್‌ ಆಗಿ 30 ನಿಮಿಷದಲ್ಲೇ 8 ಸಾವಿರಕ್ಕೂ ಹೆಚ್ಚು ಮಂದಿ ಹಾಡು ನೋಡಿದ್ದಾರೆ. ಹಾಡಿನ ಸಾಹಿತ್ಯ, ಟ್ಯೂನ್‌ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಜಯಂತ ಕಾಯ್ಕಿಣಿ ಸಾಹಿತ್ಯ ರಚನೆಯ ಹಾಡು

ಓಗಾ ಓಗಾ ಹಾಡಿಗೆ ಜಯಂತ್‌ ಕಾಯ್ಕಿಣಿ ಸಾಹಿತ್ಯ ಬರೆದಿದ್ದು ಕಪಿಲ್‌ ಕಪಿಲನ್‌, ನಾರಾಯಣ ಶರ್ಮಾ ಹಾಗೂ ಸಂಗಡಿಗರು ಹಾಡಿದ್ದಾರೆ. 'ಬ್ಯಾಡ್‌ ಮ್ಯಾನರ್ಸ್‌' ಸಿನಿಮಾವನ್ನು ಸ್ಟುಡಿಯೋ 18 ಎಫ್‌ ಬ್ಯಾನರ್‌ ಅಡಿ ಸುಧೀರ್‌ ಕೆಎಂ ನಿರ್ಮಾಣ ಮಾಡಿದ್ದಾರೆ. ಸೂರಿ, ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಚರಣ್‌ ರಾಜ್‌ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಅಭಿಷೇಕ್‌ ಅಂಬರೀಶ್‌ಗೆ ರಚಿತಾ ರಾಮ್‌ ಜೋಡಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ತಾರಾ ಅನುರಾಧಾ, ದತ್ತಣ್ಣ, ಶರತ್‌ ಲೋಹಿತಾಶ್ವ, ಕುರಿ ಪ್ರತಾಪ್‌, ಮಿತ್ರ, ಮೋಹನ್‌ ಜುನೇಜಾ ಹಾಗೂ ಇನ್ನಿತರರು ನಟಿಸಿದ್ದಾರೆ.

ಕಾಳಿ ಸಿನಿಮಾದಲ್ಲಿ ಅಭಿಷೇಕ್‌ ಬ್ಯುಸಿ

'ಬ್ಯಾಡ್‌ ಮ್ಯಾನರ್ಸ್‌' ಹೊರತು ಪಡಿಸಿ ಅಭಿಷೇಕ್‌ ಅಂಬರೀಶ್‌, 'ಕಾಳಿ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಅಭಿಷೇಕ್‌ ಜೋಡಿಯಾಗಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಚಿತ್ರಕ್ಕೆ ಗಜಕೇಸರಿ, ಹೆಬ್ಬುಲಿ, ಪೈಲ್ವಾನ್‌ ಸಿನಿಮಾ ನಿರ್ದೇಶಕ ಕೃಷ್ಣ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಪತ್ನಿ ಸ್ವಪ್ನ ಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅಭಿಷೇಕ್‌ ಅಂಬರೀಶ್‌, ಗ್ರಾಮೀಣ ಭಾಗದ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ಸಪ್ತಮಿ ಗೌಡ, ತಮಿಳು ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ