logo
ಕನ್ನಡ ಸುದ್ದಿ  /  ಮನರಂಜನೆ  /  ‘ಬೇರೆ ನಟರ ಜತೆ ಪೈಪೋಟಿಗಿಳಿದಿಲ್ಲ, ಅದಕ್ಕಾಗಿಯೇ ಅಪ್‌ಡೇಟ್‌ ಕೊಡಲು ಆಗಲ್ಲ’ ಮ್ಯಾಕ್ಸ್‌ ಬಗ್ಗೆ ಕೇಳಿದವರಿಗೆ ಕಿಚ್ಚನ ಉತ್ತರ

‘ಬೇರೆ ನಟರ ಜತೆ ಪೈಪೋಟಿಗಿಳಿದಿಲ್ಲ, ಅದಕ್ಕಾಗಿಯೇ ಅಪ್‌ಡೇಟ್‌ ಕೊಡಲು ಆಗಲ್ಲ’ ಮ್ಯಾಕ್ಸ್‌ ಬಗ್ಗೆ ಕೇಳಿದವರಿಗೆ ಕಿಚ್ಚನ ಉತ್ತರ

Feb 08, 2024 02:49 PM IST

‘ಬೇರೆ ನಟರ ಜತೆ ಪೈಪೋಟಿಗಿಳಿದಿಲ್ಲ, ಅದಕ್ಕಾಗಿಯೇ ಅಪ್‌ಡೇಟ್‌ ಕೊಡಲು ಆಗಲ್ಲ’ ಮ್ಯಾಕ್ಸ್‌ ಬಗ್ಗೆ ಕೇಳಿದವರಿಗೆ ಕಿಚ್ಚನ ಉತ್ತರ

    • ಕಿಚ್ಚ ಸುದೀಪ್‌ (Kichcha Sudeep) ಮ್ಯಾಕ್ಸ್‌ (Max The Movie) ಸಿನಿಮಾ ಅಪ್‌ಡೇಟ್‌ ಎಲ್ಲಿ ಎಂದವರಿಗೆ ಟ್ವಿಟರ್‌ ಪೋಸ್ಟ್‌ ಮೂಲಕ ಉತ್ತರ ನೀಡಿದ್ದಾರೆ. ನಾವು ಇನ್ನೊಂದು ಸಿನಿಮಾ ಎದುರು ಪೈಪೋಟಿಗೆ ಬಿದ್ದು, ಅಪ್‌ಡೇಟ್‌ ನೀಡಲು ಬರುವುದಿಲ್ಲ. ಯಾವ ಸಮಯಕ್ಕೆ ಏನು ಬರಬೇಕೋ ಅದು ಬರುತ್ತದೆ. ನಿಮ್ಮ ಈ ಪ್ರೀತಿಗೆ ಧನ್ಯವಾದ ಎಂದಿದ್ದಾರೆ ಸುದೀಪ್.‌  
‘ಬೇರೆ ನಟರ ಜತೆ ಪೈಪೋಟಿಗಿಳಿದಿಲ್ಲ, ಅದಕ್ಕಾಗಿಯೇ ಅಪ್‌ಡೇಟ್‌ ಕೊಡಲು ಆಗಲ್ಲ’ ಮ್ಯಾಕ್ಸ್‌ ಬಗ್ಗೆ ಕೇಳಿದವರಿಗೆ ಕಿಚ್ಚನ ಉತ್ತರ
‘ಬೇರೆ ನಟರ ಜತೆ ಪೈಪೋಟಿಗಿಳಿದಿಲ್ಲ, ಅದಕ್ಕಾಗಿಯೇ ಅಪ್‌ಡೇಟ್‌ ಕೊಡಲು ಆಗಲ್ಲ’ ಮ್ಯಾಕ್ಸ್‌ ಬಗ್ಗೆ ಕೇಳಿದವರಿಗೆ ಕಿಚ್ಚನ ಉತ್ತರ

Kichcha Sudeep: ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌, ಇದೀಗ ತಾನೇ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ನಿರೂಪಣೆ ಮುಗಿಸಿದ್ದಾರೆ. ಜತೆಗೆ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ (CCL) ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ. ಇದರ ನಡುವೆಯೇ ಮ್ಯಾಕ್ಸ್‌ ಸಿನಿಮಾದ ಶೂಟಿಂಗ್‌ನಲ್ಲೂ ಸುದೀಪ್‌ ಭಾಗವಹಿಸಿದ್ದಾರೆ. ಇದೆಲ್ಲದರ ಮಧ್ಯೆ ಫ್ಯಾನ್ಸ್‌ ವಲಯದಲ್ಲಿನ ಪ್ರಶ್ನೆಗಳೇ ಬೇರೆ. ಮ್ಯಾಕ್ಸ್‌ ಸಿನಿಮಾ ಬಗ್ಗೆ ಇಲ್ಲಿಯವರೆಗೂ ಹೆಚ್ಚು ಅಪ್‌ಡೇಟ್‌ಗಳು ಸಿಕ್ಕಿಲ್ಲ. ಅದನ್ನೇ ಮುಂದಿಟ್ಟುಕೊಂಡ ಕಿಚ್ಚನ ಅಭಿಮಾನಿಗಳು, ಮ್ಯಾಕ್ಸ್‌ ಅಪ್‌ಡೇಟ್‌ ಪ್ಲೀಸ್‌ ಎನ್ನುತ್ತಿದ್ದಾರೆ. ಇದಕ್ಕೆ ಸುದೀಪ್‌ ಉತ್ತರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

Cannes: ಚಿನ್ನದ ಬಣ್ಣದ ಉಡುಗೆಯಲ್ಲಿ ಆಸ್ಕರ್‌ ಟ್ರೋಫಿ ರೀತಿ ಕಾಣಿಸ್ತಾರಂತೆ ಶೋಭಿತಾ ಧೂಳಿಪಾಲ, ನಿಮಗೂ ಹಾಗೇ ಕಾಣಿಸ್ತಾರ ನೋಡಿ

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅದೃಷ್ಟ ಕಣ್ರೋ, ಅಪಶಕುನ ಅಲ್ಲ; ಐಪಿಎಲ್‌ನಲ್ಲಿ ಆರ್‌ಸಿಬಿ ಹೊಸ ಅಧ್ಯಾಯ, ತುಚ್ಛ ಪದ ಬಳಸಿದವರಿಗೆ ಚಾಟಿಯೇಟು

ಇಷ್ಟಕ್ಕೆ ಮುಗಿದಿಲ್ಲ, ಇನ್ನು ಕೆಲವರು ಚಿತ್ರತಂಡದ ಕಾಲೆಳೆಯುತ್ತಿದ್ದಾರೆ. ಆಡಿಕೊಳ್ಳುತ್ತಿದ್ದಾರೆ. ಸಿನಿಮಾ ಬಗ್ಗೆ ತಮ್ಮ ಅಸಮಾಧಾನವನ್ನೂ ಹೊರಹಾಕುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿನ ಈ ಬೆಳವಣಿಗೆಯನ್ನು ಗಮನಿಸಿದ ಸುದೀಪ್, ಸ್ವತಃ ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಬಿಡುಗಡೆಯಾದ ಬೇರೆ ಸಿನಿಮಾಗಳು ಮತ್ತು ಬೇರೆ ಹೀರೋಗಳ ಜತೆ ಪೈಪೋಟಿಗಾಗಿ ನಾವು ಸಿನಿಮಾ ಅಪ್‌ಡೇಟ್‌ ಕೊಡಲು ಆಗುವುದಿಲ್ಲ ಎಂದಿದ್ದಾರೆ ಸುದೀಪ್.‌

ಸುದೀಪ್‌ ಹೇಳಿದ್ದೇನು?

"ಮ್ಯಾಕ್ಸ್‌ ಸಿನಿಮಾ ಅಪ್‌ಡೇಟ್‌ ಬೇಕು ಎಂಬುದನ್ನು ನೋಡಿ ನಿಜಕ್ಕೂ ಖುಷಿಯಾಗುತ್ತಿದೆ. ಹಾಗಂತ ಬಿಡುಗಡೆ ಆಗುತ್ತಿರುವ ಬೇರೆ ಸಿನಿಮಾಗಳ ಜತೆಗೆ ಸ್ಪರ್ಧೆ ಮಾಡುವುದಕ್ಕೋ ಅಥವಾ ಬೇರೆ ನಟರ ಜತೆ ಪೈಪೋಟಿ ಮಾಡಲು ನಾವು ಸಿನಿಮಾ ಅಪ್‌ಡೇಟ್‌ಗಳನ್ನು​ ನೀಡುವುದಿಲ್ಲ. ಅದರ ಬದಲಿಗೆ ಚಿತ್ರತಂಡ ಹೊಸದೇನಾದರೂ ನೀಡಲು ಬಯಸಿದಾಗ, ಅದಕ್ಕೆ ತಕ್ಕಂತಹ ಕಟೆಂಟ್‌ ರೆಡಿಯಾದಾಗ ನಾವೇ ನಿಮ್ಮ ಮುಂದೆ ಬರುತ್ತೇವೆ" ಎಂದು ಹೇಳಿದ್ದಾರೆ ಸುದೀಪ್.‌

"ಸಿನಿಮಾ ಬಗ್ಗೆ ನೀವು ತೋರಿಸುತ್ತಿರುವ ಪ್ರೀತಿಗೆ ನಾನು ಆಭಾರಿ. ಆದರೆ, ಬಿಗ್‌ ಬಾಸ್‌ ಮತ್ತು ಸಿಸಿಎಲ್‌ ಬಗ್ಗೆ ವ್ಯಂಗ್ಯದ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಅದು ಒಂದು ಚಿತ್ರಕ್ಕೆ ಸರಿಯಾದ ರೀತಿಯಲ್ಲಿ ಇಂಟರೆಸ್ಟ್​ ತೋರಿಸಿದಂತೆ ಆಗಲ್ಲ. ಮ್ಯಾಕ್ಸ್‌ ಸಿನಿಮಾ ಒಂದೊಳ್ಳೆಯ ಶೇಪ್‌ ಪಡೆದುಕೊಳ್ಳುತ್ತಿದೆ. ಜತೆಗೆ ನಿಮ್ಮೆಲ್ಲರನ್ನು ಮನರಂಜಿಸುವುದು ನಮ್ಮ ಮೊದಲ ಆದ್ಯತೆ. ಅದಕ್ಕೆ ಬೇಕಿರುವ ಎಲ್ಲವನ್ನೂ ನಾವು ಮಾಡುತ್ತೇವೆ" ಎಂದಿದ್ದಾರೆ ಸುದೀಪ್.

ಎಲ್ಲಿಗೆ ಬಂತು ಮ್ಯಾಕ್ಸ್‌ ಶೂಟಿಂಗ್‌

ಸದ್ಯ ಸಿಸಿಎಲ್‌ ನಿಮಿತ್ತ ದುಬೈಗೆ ತೆರಳಿರುವ ಸುದೀಪ್‌, ಆ ಕೆಲಸಗಳ ಜತೆಗೆ ಮ್ಯಾಕ್ಸ್‌ ಸಿನಿಮಾದ ಚಿತ್ರೀಕರಣದಲ್ಲೂ ಭಾಗವಹಿಸಿದ್ದಾರೆ. ಕಳೆದ ವಾರವಷ್ಟೇ ಇನ್ನು 25 ದಿನದ ಶೂಟಿಂಗ್‌ ಮುಗಿದರೆ ಮ್ಯಾಕ್ಸ್‌ ರೆಡಿ ಎಂದು #Askkichcha ಸೆಷನ್‌ನಲ್ಲಿ ಮಾಹಿತಿ ನೀಡಿದ್ದರು. ಅದರಂತೆ, ಇನ್ನೇನು ಶೀಘ್ರದಲ್ಲಿ ಈ ಸಿನಿಮಾದ ಹೊಸ ಅಪ್‌ಡೇಟ್‌ ನೀಡುವುದಾಗಿಯೂ ಹೇಳಿದ್ದರು ಸುದೀಪ್. ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ವಿ ಕ್ರಿಯೇಷನ್ಸ್‌ ಬ್ಯಾನರ್‌ನಡಿಯಲ್ಲಿ ಕಲೈಪುಲಿ ಎಸ್ ಧಾನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ತಮಿಳುನಾಡಿನ ಮಹಾಬಲಿಪುರಂ ಬಳಿ ಅದ್ಧೂರಿ ಸೆಟ್‌ ಹಾಕಿ ಶೂಟಿಂಗ್‌ ಮಾಡಲಾಗುತ್ತಿದೆ. ಅಜನೀಶ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ದರ್ಶನ್‌ ಬಗ್ಗೆಯೂ ಈ ಹಿಂದೆ ಮಾತನಾಡಿದ್ದ ಕಿಚ್ಚ

#AskKichcha ಸೆಷನ್‌ನಲ್ಲಿ ಒಬ್ಬ ಅಭಿಮಾನಿ, "ಸರ್, ನಿಮ್ದು ಮತ್ತೆ ದರ್ಶನ್ ಅವರದ್ದು ಸಮಸ್ಯೆಯನ್ನ ಯಾವಾಗ ಬಗೆಹರಿಸಿಕೊಳ್ಳುತ್ತೀರಾ? ಇನ್ನು ಎಷ್ಟು ಟೈಮ್ ತಗೋತೀರಾ" ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರಿಸಿದ ಸುದೀಪ್, "ಸಮಸ್ಯೆ ಏನೂ ಅಂತ ಇಬ್ಬರೂ ಹುಡುಕ್ತಾ ಇದ್ದೀವಿ" ಎಂದಷ್ಟೇ ಉತ್ತರ ನೀಡಿದ್ದರು. ಇನ್ನೊಬ್ಬ ನೆಟ್ಟಿಗ, ದರ್ಶನ್‌ ಮತ್ತು ಸುದೀಪ್‌ ಜತೆಗಿನ ಫೋಟೋ ಶೇರ್‌ ಮಾಡಿಕೊಂಡು, "ದರ್ಶನ್‌ ಬಗ್ಗೆ ಒಂದು ಮಾತು ಹೇಳಿ" ಎಂದಿದ್ದಾರೆ. ಅದಕ್ಕೆ ಸುದೀಪ್, "ನಾನು ಅವರಿಗೆ ಸದಾ ಒಳ್ಳೆಯದೇ ಆಗಲೆಂದು ಶುಭ ಹಾರೈಸುತ್ತೇನೆ" ಎಂದಿದ್ದರು. ಹೀಗೆ ಅಭಿಮಾನಿಗಳ ಜತೆಗೆ ಒಂದಷ್ಟು ಹೊತ್ತು ಸಮಯ ಕಳೆದಿದ್ದರು ಸುದೀಪ್.‌

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ