logo
ಕನ್ನಡ ಸುದ್ದಿ  /  ಮನರಂಜನೆ  /  Bad Manners: ನಾಳೆಯಿಂದ ಅಭಿಷೇಕ್‌ ಅಂಬರೀಶ್‌ ನಟನೆಯ ಬ್ಯಾಡ್‌ಮ್ಯಾನರ್ಸ್‌ ಅಬ್ಬರ; ರಾಜ್ಯಾದ್ಯಂತ ಈ ಚಿತ್ರಮಂದಿರಗಳಲ್ಲಿ ಬಿಡುಗಡೆ

Bad Manners: ನಾಳೆಯಿಂದ ಅಭಿಷೇಕ್‌ ಅಂಬರೀಶ್‌ ನಟನೆಯ ಬ್ಯಾಡ್‌ಮ್ಯಾನರ್ಸ್‌ ಅಬ್ಬರ; ರಾಜ್ಯಾದ್ಯಂತ ಈ ಚಿತ್ರಮಂದಿರಗಳಲ್ಲಿ ಬಿಡುಗಡೆ

Praveen Chandra B HT Kannada

Nov 23, 2023 09:38 AM IST

Bad Manners: ನಾಳೆಯಿಂದ ಅಭಿಷೇಕ್‌ ಅಂಬರೀಶ್‌ ನಟನೆಯ ಬ್ಯಾಡ್‌ಮ್ಯಾನರ್ಸ್‌ ಅಬ್ಬರ

    • Bad Manners Kannada Movie: ದುನಿಯಾ ಸೂರಿ ನಿರ್ದೇಶನದ ಅಂಬರೀಶ್‌ ಸುಪುತ್ರ ಅಭಿಷೇಕ್‌ ಅಂಬರೀಶ್‌ ನಟನೆಯ ಕನ್ನಡ ಚಲನಚಿತ್ರ ಬ್ಯಾಡ್‌ ಮ್ಯಾನರ್ಸ್‌ ನಾಳೆ (ಶುಕ್ರವಾರ ನವೆಂಬರ್‌ 24)ರಂದು ರಾಜ್ಯಾದ್ಯಂತ 300ಕ್ಕೂ ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 
Bad Manners: ನಾಳೆಯಿಂದ ಅಭಿಷೇಕ್‌ ಅಂಬರೀಶ್‌ ನಟನೆಯ ಬ್ಯಾಡ್‌ಮ್ಯಾನರ್ಸ್‌ ಅಬ್ಬರ
Bad Manners: ನಾಳೆಯಿಂದ ಅಭಿಷೇಕ್‌ ಅಂಬರೀಶ್‌ ನಟನೆಯ ಬ್ಯಾಡ್‌ಮ್ಯಾನರ್ಸ್‌ ಅಬ್ಬರ

ಬೆಂಗಳೂರು: ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಹಲವು ಪ್ರಮುಖ ಚಲನಚಿತ್ರಗಳು ರಿಲೀಸ್‌ ಆಗಲಿವೆ. ಅವುಗಳಲ್ಲಿ ಅಭಿಷೇಕ್‌ ಅಂಬರೀಶ್‌ ನಟನೆಯ ಬ್ಯಾಡ್‌ಮ್ಯಾಟರ್ಸ್‌ ಕೂಡ ಒಂದಾಗಿದೆ. ಈ ಚಿತ್ರವು ರಾಜ್ಯಾದ್ಯಂತ ನಾಳೆ 300 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ದುನಿಯಾ ಸೂರಿ ನಿರ್ದೇಶನದ ಸಾಹಸಭರಿತ ಸಿನಿಮಾ, ಮೈಸೂರು, ಬೆಂಗಳೂರು ಮುಂತಾದ ಕಡೆ ಚಿತ್ರೀಕರಣಗೊಂಡಿದೆ. ಇದನ್ನು ಓದಿ: ಶುಗರ್‌ ಫ್ಯಾಕ್ಟರಿ ನಾಳೆ ಬಿಡುಗಡೆ; ಮೂವರು ಚೆಲುವೆಯರ ಜತೆ ಡಾರ್ಲಿಂಗ್‌ ಕೃಷ್ಣ ಪ್ರೇಮ ಕಹಾನಿ

ಟ್ರೆಂಡಿಂಗ್​ ಸುದ್ದಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

Aadujeevitham OTT: ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಆಡುಜೀವಿತಂ ಸಿನಿಮಾವನ್ನು ಮನೆಯಲ್ಲೇ ನೋಡಿ, ಇಲ್ಲಿದೆ ಒಟಿಟಿ ಬಿಡುಗಡೆ ವಿವರ

ಇದು ಸೂರಿ ಸಿನಿಮಾ

ಈಗಾಗಲೇ ಕನ್ನಡಕ್ಕೆ ಹಲವು ಜನಪ್ರಿಯ ಚಿತ್ರಗಳನ್ನು ನೀಡಿರುವ ಸೂರಿ ಅವರು ಅಭಿಷೇಕ್‌ ಅಂಬರೀಶ್‌ಗಾಗಿ ಈ ಬ್ಯಾಡ್‌ ಮ್ಯಾನರ್ಸ್‌ ಚಿತ್ರ ನಿರ್ಮಿಸಿದ್ದಾರೆ. ಈಗಾಗಲೇ ದುನಿಯಾ, ಜಾಕಿ, ಅಣ್ಣಾಬಾಂಡ್‌, ಕೆಂಡಸಂಪಿಗೆ, ಕಡ್ಡಿಪಡಿ, ಇಂತಿ ನಿನ್ನ ಪ್ರೀತಿಯ ಮುಂತಾದ ಹಲವು ಸೂಪರ್‌ಹಿಟ್‌ ಚಿತ್ರಗಳನ್ನು ಸೂರಿ ನೀಡಿದ್ದಾರೆ. ಈ ಹಿಂದೆ ಅಮರ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿರುವ ಅಭಿಷೇಕ್‌ ಅಂಬರೀಶ್‌ಗೆ ಬ್ಯಾಡ್‌ ಮ್ಯಾನರ್ಸ್‌ ಪ್ರಮುಖ ಹಿಟ್‌ ನೀಡುವ ನಿರೀಕ್ಷೆಯಿದೆ. ಬ್ಯಾಡ್‌ ಮ್ಯಾನರ್ಸ್‌ ಬಳಿಕ ಕಾಳಿ ಮತ್ತು ಮಹೇಶ್‌ ಕುಮಾರ್‌ ನಿರ್ದೇಶನದ ಹೊಸ ಚಿತ್ರದಲ್ಲೂ ಅಭಿಷೇಕ್‌ ಅಂಬರೀಶ್‌ ನಟಿಸಲಿದ್ದಾರೆ. ಇದನ್ನು ಓದಿ: ರೆಬಲ್‌ ಸ್ಟಾರ್‌ ಅಂಬರೀಶ್‌ಗೆ ಜೂನಿಯರ್‌, ಅಭಿಷೇಕ್‌ ಅಂಬರೀಶ್‌ಗೆ ಸೀನಿಯರ್‌, ಯಾರಿವರು

ಯಾವೆಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆ?

ರಾಜ್ಯಾದ್ಯಂತ ನಾಳೆ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬ್ಯಾಡ್‌ ಮ್ಯಾನರ್ಸ್‌ ಬಿಡುಗಡೆಗೊಳ್ಳಲಿದೆ. ಹೀಗಾಗಿ, ಇದು ನಿಮ್ಮೂರಿನ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಬೆಂಗಳೂರಿನಲ್ಲಿ ಯಾವೆಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಪ್ರಶ್ನೆಗೆ ಉತ್ತರ ಈ ಮುಂದೆ ನೀಡಲಾಗಿದೆ.

ಬೆಂಗಳೂರಿನ ಸಂತೋಷ್‌, ವೀರೇಶ್‌ ಸಿನಿಮಾಸ್‌, ಊರ್ವಶಿ, ಮುಕುಂದ, ಸವಿತಾ, ವಿಕ್ಟರಿ ಸಿನಿಮಾ, ಪಿವಿಆರ್‌ ಐನಾಕ್ಸ್‌, ಸಿನಿಪೊಲಿಸ್‌, ಗೋಪಾಲನ್‌, ರಾಕ್‌ಲೈನ್‌ ಸಿನಿಮಾಸ್‌, ಮಿರಾಜ್‌, ಕಿಂಗ್‌, ಸಿನಿಪಿಲಿ ಸೇರಿದಂತೆ ಬಹುತೇಕ ಮಲ್ಟಿಪ್ಲೆಕ್ಸ್‌ ಮತ್ತು ದೊಡ್ಡ ಸಿನಿಮಾ ಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

ಸಂಜಯ್‌ ನಗರದ ವೈಭವ್‌, ಕತ್ರಿಗುಪ್ಪೆಯ ಕಾಮಾಕ್ಯ, ತಾವರೆಕೆರೆಯ ಬಾಲಾಜಿ, ಜೆಪಿ ನಗರದ ಸಿದ್ದೇಶ್ವರ, ಕೆಂಗೇರಿಯ ವೆಂಕಟೇಶ್ವರ, ರಾಜಗೋಪಾನ ನಗರದ ಮಾರುತಿ, ಕಮಲಾನಗರದ ವೀರಭದ್ರೇಶ್ವರ, ಆರ್‌ಟಿ ನಗರದ ರಾಧಾ ಕೃಷ್ಣಾ, ಕೆಆರ್‌ಪುರಂನ ವೆಂಕಟೇಶ್ವರ, ಹೊಂಗಸಂದ್ರದ ಬೃಂದಾ, ಸುಲ್ತಾಣ್‌ಪಾಳ್ಯದ ಪುಷ್ಪಾಂಜಲಿ, ಕೋಣಕುಂಟೆಯ ಮಾನಸ, ಕೊಡಿಗೆಹಳ್ಳಿಯ ರಾಜ್‌ಮುರಳಿ, ಅಗರದ ತಿರುಮಲ, ಕಾಡುಗುಡಿಯ ಶ್ರೀನಿವಾಸ ಚಿತ್ರಮಂದಿರಗಳಲ್ಲಿ ನಾಳೆ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ಬಿಡುಗಡೆಯಾಗಲಿದೆ.

ಬೊಮ್ಮನಹಳ್ಳಿಯ ಕೃಷ್ಣ, ಯಶವಂತಪುರದ ಉಲ್ಲಾಸ್‌, ಚಿಕ್ಕಬಾಣಾವರದ ಅಶೋಕ, ವೆಂಕಟೇಶ್ವರ, ಸಿಂಗಾಪುರ ವೈನಿಧಿ, ಗೊಟ್ಟಿಗೆರೆಯ ಲಕ್ಷ್ಮಿ, ಗರುಡಾಚಾರ್‌ ಪಾಳ್ಯದ ವಿಜಯಲಕ್ಷ್ಮಿ, ಮಲ್ಲತಹಳ್ಳಿಯ ವಿ. ಸಿನಿಮಾಸ್‌, ಬೊಮ್ಮಸಂದ್ರದ ಬಾಲಾಜಿ, ಚಿಕ್ಕಲಸಂದ್ರದ ಬಾಲಾಜಿ, ಯಲಹಂಕದ ಗಣೇಶ್‌ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ರಾಜ್ಯಾದ್ಯಂತ 300 ಚಿತ್ರಮಂದಿರಗಳಲ್ಲಿ ಬಿಡುಗಡೆ

ಬೆಂಗಳೂರು ಮಾತ್ರವಲ್ಲದೆ ಹೊಸಕೋಟೆಯ ಅಲಂಕಾರ್‌, ಹೆಸರಘಟ್ಟದ ಎಸ್‌ಎಲ್‌ಎನ್‌, ತುಮಕೂರಿನ ಮಾರುತಿ, ಪಿವಿಆರ್‌ ಐನಾಕ್ಸ್‌, ದೊಡ್ಡಬಳ್ಳಾಪುರದ ವೈಭವ್‌, ತಿಪಟೂರಿನ ಲಕ್ಷ್ಮಿ, ಚನ್ನಪಟ್ಟಣದ ಶಿವಾನಂದ ಚಿತ್ರಮಂದಿರಗಳಲ್ಲಿ ಬ್ಯಾಡ್‌ ಮ್ಯಾನರ್ಸ್‌ ಬಿಡುಗಡೆಯಾಗಲಿದೆ. ಕನಕಪುರದ ವಾಣಿ, ಮಾಗಡಿಯ ಬಾಲಾಜಿ, ಕುಣಿಗಲ್‌ನ ಪದ್ಮ, ಕೋಲಾರದ ಭವಾನಿ, ಮಧುಗಿರಿಯ ಶಾಂತಲಾ, ವಿಜಯಪುರದ ಸಂಗಮೇಶ್ವರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಆನೇಕಲ್‌ನ ಅನ್ನಪೂರ್ಣೇಶ್ವರಿ, ಚಿಂತಾಮಣಿಯ ಎಸ್‌ಎಲ್‌ಎನ್‌, ಪಾವಗಡದ ಮಾರುತಿ, ಗೌರಿಬಿದನೂರಿನ ಅಭಿಲಾಷ, ಮುಳಬಾಗಿಲಿನ ರಾಧಿಕಾ, ಮಾಲೂರಿನ ಬೆನಕ, ಶಿಡ್ಲಘಟ್ಟದ ವೆಂಕಟೇಶ್ವರ, ಮೈಸೂರಿನ ವುಡ್‌ಲ್ಯಾಂಡ್ಸ್‌, ಪಿವಿಆರ್‌ ಐನಾಕ್ಸ್‌ನ ಗರುಡಾ, ಪೋರಮ್‌, ಸತ್ಯಂ, ಡಿಆರ್‌ಸಿ, ವಿಷನ್‌ ಸಿನಿಮಾಸ್‌ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನೆಲ್ಲಿ ಬಿಡುಗಡೆ

ಮಂಡ್ಯದ ಸಂಜಯ್‌, ಶಿವಮೊಗ್ಗದ ಮಲ್ಲಿಕಾರ್ಜುನಾ, ಭಾರತ್‌ ಸಿನಿಮಾಸ್‌, ಗದಗದ ವೆಂಕಟೇಶ್‌, ಹಾಸನದ ಶ್ರೀಗುರು, ಚಿಕ್ಕಮಳೂರಿನ ನಾಗಲಕ್ಷ್ಮಿ, ರಾಣಿಬೆನ್ನೂರಿನ ಶಂಕರ್‌, ಚಾಮರಾಜನಗರದ ಸಿಂಹ ಮೂವೀ, ಭದ್ರಾವತಿಯ ಸತ್ಯ, ಬಾಗಲಕೋಟೆಯ ವಾಸಿವಿ, ಇಳಕಲ್‌ನ ಶ್ರೀನಿವಾಸ್‌, ಕಡೂರ್‌ನ ವಿಜಯಲಕ್ಷ್ಮಿ, ಕೊಳ್ಳೆಗಾಲದ ಶಾಂತಿ, ಮಳವಳ್ಳಿಯ ಮಹಾಲಕ್ಷ್ಮಿ, ಚನ್ನರಾಯಪಟ್ಟಣದ ಗಾಯತ್ರಿ, ಸಾಗರದ ಶ್ರೀ, ಲಕ್ಷ್ಮೇಶ್ವರದ ಕೃಷ್ಣ, ಸಿಂಧಗಿಯ ವಿನಾಯಕ, ಕೊಪ್ಪದ ಜೆಎಂಜೆ, ನಂಜನಗೂಡಿನ ಭಾರ್ಗವಿ, ಅನವೇರಿಯ ಶ್ರೀದೇವಿ, ಹೊಳೆನರಸಿಂಹಪುರದ ಚೆನ್ನಾಂಬಿಕ, ಗುಂಡ್ಲುಪೇಟೆ, ಕೆಆರ್‌ನಗರದ ವೆಂಕಟೇಶ್ವರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಶಿಕಾರಿಪುರದ ಮಾಲತೇಶ್‌, ಬನಹಟ್ಟಿಯ ವೈಭವ್‌, ಅಥಣಿಯ ದುರ್ಗಾಲಕ್ಷ್ಮಿ, ತರೀಕೆರೆಯ ವಿನಾಯಕ, ಅರಿಸೀಕೆರೆಯ ಸಾಧಾನ, ದಾವಣಗೆರೆಯ ಅಶೋಕ, ಮುಧೋಳದ ಸುಭಾಷಿಣಿ, ಬಾದಾಮಿಯ ಮಹಾಕೂಟೇಶ್ವರ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಗಯಾಗಲಿದೆ. ಸಂಪೂರ್ಣ ಚಿತ್ರಮಂದಿರಗಳ ಪಟ್ಟಿ ಈ ಕೆಳಗಿನ ಟ್ವೀಟ್‌ನಲ್ಲಿದೆ.

 

ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ಟ್ರೈಲರ್‌

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ