logo
ಕನ್ನಡ ಸುದ್ದಿ  /  ಮನರಂಜನೆ  /  Chiranjeevi Sarja: ಚಿರಂಜೀವಿ ಸರ್ಜಾ ನಿಧನರಾಗಿ ಇಂದಿಗೆ 3 ವರ್ಷಗಳು; ಯುವ ಸಾಮ್ರಾಟ್‌ ಕೊನೆಯ ಸಿನಿಮಾ ರಾಜಮಾರ್ತಾಂಡ ರಿಲೀಸ್‌ ಯಾವಾಗ?

Chiranjeevi Sarja: ಚಿರಂಜೀವಿ ಸರ್ಜಾ ನಿಧನರಾಗಿ ಇಂದಿಗೆ 3 ವರ್ಷಗಳು; ಯುವ ಸಾಮ್ರಾಟ್‌ ಕೊನೆಯ ಸಿನಿಮಾ ರಾಜಮಾರ್ತಾಂಡ ರಿಲೀಸ್‌ ಯಾವಾಗ?

Rakshitha Sowmya HT Kannada

Jun 07, 2023 08:16 AM IST

ಚಿರಂಜೀವಿ ಸರ್ಜಾ ಮೂರನೇ ಪುಣ್ಯಸ್ಮರಣೆ

  • ಚಿರಂಜೀವಿ ಸರ್ಜಾ ನಿಧನರಾದ ನಂತರ 'ರಣಂ' ಸಿನಿಮಾ ಬಿಡುಗಡೆ ಆಯ್ತು. ಆದರೆ 'ರಾಜಮಾರ್ತಾಂಡ' ಸಿನಿಮಾ ಮಾತ್ರ ಇನ್ನೂ ರಿಲೀಸ್‌ ಆಗಿಲ್ಲ. ಈ ಸಿನಿಮಾ ಬಗ್ಗೆ ಚಿರಂಜೀವಿ ಸರ್ಜಾಗೆ ಬಹಳ ಕನಸಿತ್ತು. ಶೂಟಿಂಗ್ ಪೂರ್ಣಗೊಳಿಸಿ ಡಬ್ಬಿಂಗ್‌ ಮಾಡಬೇಕು ಎಂದುಕೊಳ್ಳುವಷ್ಟರಲ್ಲಿ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ಹೋದರು.

ಚಿರಂಜೀವಿ ಸರ್ಜಾ ಮೂರನೇ ಪುಣ್ಯಸ್ಮರಣೆ
ಚಿರಂಜೀವಿ ಸರ್ಜಾ ಮೂರನೇ ಪುಣ್ಯಸ್ಮರಣೆ (PC: Facebook)

ಸ್ಯಾಂಡಲ್‌ವುಡ್‌ ಯುವ‌ ಸಾಮ್ರಾಟ್‌ ಚಿರಂಜೀವಿ ಸರ್ಜಾ ಇಲ್ಲದೆ ಇಂದಿಗೆ ಮೂರು ವರ್ಷಗಳು ಪೂರ್ಣಗೊಂಡಿವೆ. ಇಂದು ಚಿರಂಜೀವಿ ಸರ್ಜಾ ಮೂರನೇ ವರ್ಷದ ಪುಣ್ಯಸ್ಮರಣೆ. ಚಿರಂಜೀವಿ ಹಾಗೂ ಮೇಘನಾ ಕುಟುಂಬದವರು ಸಮಾಧಿ ಬಳಿ ತೆರಳಿ ಪೂಜೆ ಮಾಡಲಿದ್ದಾರೆ. ಅಭಿಮಾನಿಗಳು ಕೂಡಾ ಚಿರಂಜೀವಿ ಅವರನ್ನು ನೆನೆಯುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Brundavana Serial: ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?

ಶೇಕಡಾ 66 ಅಂಕ ತೆಗೆದು ಎಸ್‌ಎಸ್‌ಎಲ್‌ಸಿ ಪಾಸ್‌ ಆದ ಭಾಗ್ಯಾ, ಸಪ್ಪೆ ಮೋರೆ ಹಾಕಿ ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Kuntebille Movie: ಸೆಟ್ಟೇರಿತು ತರ್ಲೆ ವಿಲೇಜ್‌ ನಿರ್ದೇಶಕರ ಕುಂಟೆಬಿಲ್ಲೆ ಸಿನಿಮಾ; ಇದು ಪ್ರೇಮ ಕಾಮದ ಸುತ್ತ ತಿರುಗುವ ಚಿತ್ರ

Huu ಅಂತೀಯಾ...Uhuu ಅಂತೀಯಾ; ಸ್ಟಾರ್‌ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ, ಗೆದ್ದವರಿಗೆ ಲಕ್ಷ ಲಕ್ಷ ಬಹುಮಾನ

ಚಿರಂಜೀವಿ ಸರ್ಜಾ ಹುಟ್ಟಿದ್ದು 17 ಅಕ್ಟೋಬರ್‌ 1984. ಖ್ಯಾತ ನಟ ಅರ್ಜುನ್‌ ಸರ್ಜಾ ಸಹೋದರಿ ಅಮ್ಮಾಜಿ ಹಾಗೂ ವಿಜಯ್‌ ಕುಮಾರ್‌ ದಂಪತಿಯ ಮೊದಲ ಮಗನಾಗಿ ಜನಿಸಿದ ಚಿರು, 2009ರಲ್ಲಿ ತೆರೆ ಕಂಡ 'ವಾಯುಪುತ್ರ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ಚಿತ್ರರಂಗದ ಹಿನ್ನೆಲೆ ಇದ್ದರೂ ಚಿರಂಜೀವಿ ಸರ್ಜಾ ಚಿತ್ರರಂಗಕ್ಕೆ ಬರಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಗಂಡೆದೆ, ಚಿರು, ದಂಡಂ ದಶಗುಣಂ, ಕೆಂಪೇಗೌಡ, ವರದ ನಾಯಕ, ವಿಶಲ್‌, ಚಂದ್ರಲೇಖ, ಅಜಿತ್‌, ರುದ್ರ ತಾಂಡವ, ಆಟಗಾರ, ರಾಮ್‌ ಲೀಲಾ, ಸಂಹಾರ, ಸೀಜರ್‌, ಅಮ್ಮ ಐ ಲವ್‌ ಯು, ಸಿಂಗ, ಖಾಕಿ, ಆಧ್ಯ, ಶಿವಾರ್ಜುನ ಸಿನಿಮಾಗಳಲ್ಲಿ ಚಿರಂಜೀವಿ ಸರ್ಜಾ ನಟಿಸಿದ್ದಾರೆ.

7 ಜೂನ್‌ 2020 ರಂದು ನಿಧನರಾದ ಚಿರಂಜೀವಿ ಸರ್ಜಾ

ತಾವು 10 ವರ್ಷಗಳಿಂದ ಪ್ರೀತಿಸುತ್ತಿದ್ದ ಮೇಘನಾ ರಾಜ್‌ ಅವರನ್ನು ಚಿರಂಜೀವಿ ಸರ್ಜಾ ಮನೆಯವರನ್ನು ಒಪ್ಪಿಸಿ 2 ಮೇ 2018 ರಂದು ವಿವಾಹವಾದರು. ಆದರೆ ವಿಧಿ ಇವರಿಬ್ಬರನ್ನೂ 2 ವರ್ಷಗಳಲ್ಲಿ ದೂರ ಮಾಡಿತು. 7 ಜೂನ್‌ 2020 ಮಧ್ಯಾಹ್ನ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದ ಸುದ್ದಿ ಕೇಳಿ ಇಡೀ ರಾಜ್ಯವೇ ಶಾಕ್‌ ಆಯ್ತು. ಆ ದಿನ ಮಧ್ಯಾಹ್ನ ಚಿರಂಜೀವಿ ಸರ್ಜಾಗೆ ಎದೆ ನೋವು ಕಾಣಿಸಿಕೊಂಡು ಮನೆಯಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಚಿರಂಜೀವಿ ಸರ್ಜಾ ಪರೀಕ್ಷಿಸಿದ ವೈದ್ಯರು ಅವರು ನಿಧನರಾಗಿರುವ ಸುದ್ದಿಯನ್ನು ದೃಢಪಡಿಸಿದ್ದಾರೆ. ಚಿರು ನಿಧನರಾದಾಗ ಮೇಘನಾ 5 ತಿಂಗಳ ಗರ್ಭಿಣಿ. ಅದಾದ 4 ತಿಂಗಳ ನಂತರ ನಂತರ 22 ಅಕ್ಟೋಬರ್‌ 2020 ರಂದು ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದರು. ಮಗುವಿಗೆ ರಾಯನ್‌ ರಾಜ್‌ ಸರ್ಜಾ ಎಂದು ನಾಮಕರಣ ಮಾಡಲಾಗಿದೆ.

ಚಿರಂಜೀವಿ ಸರ್ಜಾ ಸಿನಿಮಾಗಳು

ಚಿರಂಜೀವಿ ಸರ್ಜಾ ನಿಧನರಾದ ನಂತರ 'ರಣಂ' ಸಿನಿಮಾ ಬಿಡುಗಡೆ ಆಯ್ತು. ಆದರೆ 'ರಾಜಮಾರ್ತಾಂಡ' ಸಿನಿಮಾ ಮಾತ್ರ ಇನ್ನೂ ರಿಲೀಸ್‌ ಆಗಿಲ್ಲ. ಈ ಸಿನಿಮಾ ಬಗ್ಗೆ ಚಿರಂಜೀವಿ ಸರ್ಜಾಗೆ ಬಹಳ ಕನಸಿತ್ತು. ಶೂಟಿಂಗ್ ಪೂರ್ಣಗೊಳಿಸಿ ಡಬ್ಬಿಂಗ್‌ ಮಾಡಬೇಕು ಎಂದುಕೊಳ್ಳುವಷ್ಟರಲ್ಲಿ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ಹೋದರು. ನಂತರ ಸಹೋದರ ಧ್ರುವ ಸರ್ಜಾ ಈ ಚಿತ್ರದ ಅಣ್ಣನ ಪಾತ್ರಕ್ಕೆ ಡಬ್‌ ಮಾಡಿದರು. ಏಪ್ರಿಲ್‌ನಲ್ಲಿ ಈ ಸಿನಿಮಾ ರಿಲೀಸ್‌ ಆಗಬೇಕಿತ್ತು. ಆದರೆ ಇಂದಿಗೂ ಬಿಡುಗಡೆ ಆಗಿಲ್ಲ. ಸಿನಿಮಾ ರೀಲೀಸ್‌ಗೆ ಸಿದ್ಧವಿದೆ. ಶೀಘ್ರದಲ್ಲೇ ಸಿನಿಮಾ ರಿಲೀಸ್‌ ಮಾಡುವುದಾಗಿ ನಿರ್ದೇಶಕ ರಾಮ್‌ ನಾರಾಯಣ್‌ ಮಾಹಿತಿ ನೀಡಿದ್ದಾರೆ. ಇಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಬಗ್ಗೆ ಅಪ್‌ಡೇಟ್‌ ದೊರೆಯುವ ಸಾಧ್ಯತೆ ಇದೆ.

ಶಿವಕುಮಾರ್‌ 'ರಾಜಮಾರ್ತಾಂಡ' ಚಿತ್ರವನ್ನು ನಿರ್ಮಿಸಿದ್ದು ಕೆ. ರಾಮನಾರಾಯಣ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದೀಪ್ತಿ, ಮೇಘಶ್ರೀ, ದೇವರಾಜ್, ಚಿಕ್ಕಣ್ಣ, ಭಜರಂಗಿ ಲೋಕಿ, ಶಂಕರ್ ಅಶ್ವಥ್‌ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ