logo
ಕನ್ನಡ ಸುದ್ದಿ  /  ಮನರಂಜನೆ  /  Vikram Ravichandran: ರವಿಚಂದ್ರನ್‌ ಪುತ್ರ ವಿಕ್ರಮ್‌ ಎರಡನೇ ಚಿತ್ರಕ್ಕೆ ಮುಧೋಳ ಟೈಟಲ್‌ ಫಿಕ್ಸ್‌; ಅದೊಂದು ಅಪರೂಪದ ದೃಶ್ಯಕ್ಕೆ 23 ಟೇಕ್‌ !

Vikram Ravichandran: ರವಿಚಂದ್ರನ್‌ ಪುತ್ರ ವಿಕ್ರಮ್‌ ಎರಡನೇ ಚಿತ್ರಕ್ಕೆ ಮುಧೋಳ ಟೈಟಲ್‌ ಫಿಕ್ಸ್‌; ಅದೊಂದು ಅಪರೂಪದ ದೃಶ್ಯಕ್ಕೆ 23 ಟೇಕ್‌ !

Rakshitha Sowmya HT Kannada

Apr 27, 2023 06:45 AM IST

ವಿಕ್ರಮ್‌ ಎರಡನೇ ಸಿನಿಮಾಗೆ 'ಮುಧೋಳ' ಟೈಟಲ್‌ ಫಿಕ್ಸ್

    • ಚಿತ್ರದಲ್ಲಿ ನಾನು ಮುಧೋಳ್‌ ಶಶಿ ಆಗಿ ನಟಿಸಿದ್ದೇನೆ ಎಂದು ವಿಕ್ರಮ್‌ ಮಾಹಿತಿ ನೀಡಿದರು. ಹಾಗೇ ತಮ್ಮೊಂದಿಗೆ ನಟಿಸಿರುವ ಮುಧೋಳ ಶ್ವಾನವನ್ನು ಹೇಗೆ ಪಳಗಿಸಬೇಕಾಯ್ತು, ಆ ಶ್ವಾನಕ್ಕೆ ತಾವು ಹತ್ತಿರವಾದದ್ದು ಹೇಗೆ ಎಂದು ಮಾಹಿತಿ ನೀಡಿದರು.
ವಿಕ್ರಮ್‌ ಎರಡನೇ ಸಿನಿಮಾಗೆ 'ಮುಧೋಳ'  ಟೈಟಲ್‌ ಫಿಕ್ಸ್
ವಿಕ್ರಮ್‌ ಎರಡನೇ ಸಿನಿಮಾಗೆ 'ಮುಧೋಳ' ಟೈಟಲ್‌ ಫಿಕ್ಸ್

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮುಹೂರ್ತ ಆಚರಿಸಿಕೊಂಡಿದ್ದ ವಿಕ್ರಮ್‌ ರವಿಚಂದ್ರನ್‌ ಎರಡನೇ ಸಿನಿಮಾಗೆ ಟೈಟಲ್‌ ಫಿಕ್ಸ್‌ ಆಗಿದೆ. ಬೆಂಗಳೂರಿನ ಶ್ರೀ ಬಂಡೆ ಮಹಾಕಾಳಿ ಅಮ್ಮನವರ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ ವಿಕ್ರಮ್‌, ಪಂಚೆ ಉಟ್ಟು ಮುಧೋಳ ನಾಯಿ ಜೊತೆಗೆ ಆಗಮಿಸಿದ್ದರು. ಇದೀಗ ಚಿತ್ರಕ್ಕೆ ಶ್ವಾನದ ತಳಿಯ ಹೆಸರನ್ನೇ ಇಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ವಿಕ್ರಮ್‌ ರವಿಚಂದ್ರನ್‌ ಹೊಸ ಸಿನಿಮಾಗೆ 'ಮುಧೋಳ' ಎಂಬ ಕ್ಯಾಚಿ ಟೈಟಲ್‌ ಇಡಲಾಗಿದೆ. ಇತ್ತೀಚೆಗೆ ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಚಿತ್ರದ ಟೈಟಲ್‌ ಅನಾವರಣ ಮಾಡಲಾಯಿತು. ಟೈಟಲ್ ಟೀಸರ್ ಮೂಲಕ ಎಂಟ್ರಿ ಕೊಟ್ಟ ವಿಕ್ರಮ್ ರವಿಚಂದ್ರನ್ ಈ ಸಿನಿಮಾದಲ್ಲಿ ಗ್ಯಾಂಗ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮಗನ ಸಿನಿಮಾಗೆ ಮುಧೋಳ ಎಂಬ ಟೈಟಲ್‌ ಫಿಕ್ಸ್‌ ಮಾಡಿದ್ದೇ ಕ್ರೇಜಿಸ್ಟಾರ್‌ ರವಿಚಂದ್ರನ್‌ ಎಂದು ಚಿತ್ರತಂಡ ಹೇಳಿದೆ. 'ತ್ರಿವಿಕ್ರಮ' ಸಿನಿಮಾ ಮೂಲಕ ಲವರ್‌ ಬಾಯ್‌ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ವಿಕ್ರಮ್‌ ಈ ಬಾರಿ ಗ್ಯಾಂಗ್‌ಸ್ಟರ್‌ ಅವತಾರದಲ್ಲಿ ದರ್ಶನ ನೀಡಲು ಮುಂದಾಗಿದ್ದಾರೆ.

'ಮುಧೋಳ' ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ವಿಕ್ರಮ್ ರವಿಚಂದ್ರನ್, ಇಂದು ( ಏಪ್ರಿಲ್‌ 26) ನನ್ನ ಎರಡನೇ ಸಿನಿಮಾದ ಟೈಟಲ್ ಲಾಂಚ್ ಮಾಡಿದ್ದೇವೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಇನ್ನೂ ಶಿವಮೊಗ್ಗ, ಮುಧೋಳದಲ್ಲಿ ಶೂಟಿಂಗ್‌ ಆಗಬೇಕಿದೆ. ಸದ್ಯಕ್ಕೆ ನಾವೆಲ್ಲಾ ನಟಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕಲಾವಿದರು ಬರಲಿದ್ದಾರೆ. ಚಿತ್ರದಲ್ಲಿ ನಾನು ಮುಧೋಳ್‌ ಶಶಿ ಆಗಿ ನಟಿಸಿದ್ದೇನೆ ಎಂದು ವಿಕ್ರಮ್‌ ಮಾಹಿತಿ ನೀಡಿದರು. ಹಾಗೇ ತಮ್ಮೊಂದಿಗೆ ನಟಿಸಿರುವ ಮುಧೋಳ ಶ್ವಾನವನ್ನು ಹೇಗೆ ಪಳಗಿಸಬೇಕಾಯ್ತು, ಆ ಶ್ವಾನಕ್ಕೆ ತಾವು ಹತ್ತಿರವಾದದ್ದು ಹೇಗೆ ಎಂದು ಮಾಹಿತಿ ನೀಡಿದರು. ನನ್ನ ಎರಡನೇ ಹೆಜ್ಜೆಗೆ ನಿಮ್ಮಲ್ಲರ ಪ್ರೀತಿ ಹಾರೈಕೆ ಹೀಗೆ ಇರಲಿ ಎಂದು ಮನವಿ ಮಾಡಿದರು.

ನಿರ್ದೇಶಕ ಕಾರ್ತಿಕ್ ರಾಜನ್ ಮಾತನಾಡಿ, ಮುಧೋಳ ಶ್ವಾನಕ್ಕಾಗಿ ಬಹಳ ಹುಡುಕಾಡಿದೆವು. ಒಮ್ಮೆ ನಮ್ಮ ಮ್ಯಾನೇಜರ್ ಹತ್ತಿರ ಹೇಳಿದೆ, ಎಲ್ಲಾ ವ್ಯವಸ್ಥೆ ಆಯ್ತು. ತ್ಯಾಗರಾಜ್‌ ಎಂಬುವವರು ಆ ಶ್ವಾನದ ಟ್ರೈನ್ ಮಾಡಿದ್ದಾರೆ. ಟೈಟಲ್ ಟೀಸರ್ ನಲ್ಲಿ ಶ್ವಾನ ಚಾಕು ಕಚ್ಚಿಕೊಂಡು ಬರುವ ದೃಶ್ಯಕ್ಕಾಗಿ 23 ಟೇಕ್ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

'ಮುಧೋಳ'

ಸಂಭಾಷಣೆಗಾರ ಮಾಸ್ತಿ ಮಾತನಾಡಿ, ಈಶ್ವರಿ ಕಂಬೈನ್ಸ್ ಅನ್ನೋದು ಲೆಗೆಸಿ. ನಾಯಕಿಯರು ಮಾತ್ರವಲ್ಲದೆ, ಎಲ್ಲಾ ಕಲಾವಿದರು ರವಿಚಂದ್ರನ್ ಸರ್ ಜೊತೆ ಕೆಲಸ ಮಾಡ್ಬೇಕು ಎಂದುಕೊಳ್ಳುತ್ತಾರೆ. ಅದೇ ರೀತಿ ರೈಟರ್‌ಗಳು ಕೂಡಾ ಆ ಸಂಸ್ಥೆ ಜೊತೆ ಕೆಲಸ ಮಾಡಬೇಕು ಎಂದುಕೊಳ್ಳುತ್ತಿದ್ದರು. ಈಶ್ವರಿ ಕಂಬೈನ್ಸ್ ಅನ್ನೋದು ಪರಂಪರೆ. ಆ ಸಂಸ್ಥೆಯ ಜೊತೆ ವಿಕ್ರಮ್ ಸರ್ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಎಂದರು.

ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್, 'ಮುಧೋಳ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದು ಕಾರ್ತಿಕ್‌ ನಿರ್ದೇಶನದ ಮೊದಲ ಸಿನಿಮಾ. ಎಸ್. ತಮನ್ ಜೊತೆ ಕೆಲಸ ಮಾಡಿ ಅನುಭವ ಇರುವ ಯುವರಾಜ್ ಚಂದ್ರನ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಟಗರು, ಸಲಗ ಸಿನಿಮಾ ಖ್ಯಾತಿ ಮಾಸ್ತಿ ಸಂಭಾಷಣೆ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಡಾ.ಕೆ. ರವಿವರ್ಮಾ ಆಕ್ಷನ್ ಚಿತ್ರಕ್ಕಿದೆ. ತಂಡವ್ ಸ್ಟುಡಿಯೋಸ್ ಬ್ಯಾನರ್ ಅಡಿ, ರಕ್ಷಾ ವಿಜಯಕುಮಾರ್ ಹಾಗೂ ಸಿಲ್ಜು ಕಣ್ಣನ್ ನಿರ್ಮಾಣ ಮಾಡುತ್ತಿರುವ 'ಮಧೋಳ' ಚಿತ್ರದಲ್ಲಿ ಲವ್ ಮಾಕ್‌ಟೇಲ್‌ ಖ್ಯಾತಿಯ ಅಭಿಲಾಶ್, ರಘು ಮ್ಯೂಟಂಟ್ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ಇದುವರೆಗೂ 30 ದಿನಗಳ ಸಿನಿಮಾ ಶೂಟಿಂಗ್‌ ನಡೆದಿದೆ. ಶೀಘ್ರದಲ್ಲೇ ಚಿತ್ರತಂಡ ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಿದೆ.

ಮುಧೋಳ ಚಿತ್ರಕ್ಕೆ ಸಂಜನಾ ಆನಂದ್‌ ನಾಯಕಿ

ಚಿತ್ರದಲ್ಲಿ ವಿಕ್ರಮ್‌ ಜೊತೆ ಸಂಜನಾ ಆನಂದ್‌ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಸ್ಯಾಂಡಲ್‌ವುಡ್‌ ಮೂಲಗಳು ತಿಳಿಸಿವೆ. ದುನಿಯಾ ವಿಜಯ್‌ ಜೊತೆ 'ಸಲಗ' ಚಿತ್ರದಲ್ಲಿ ನಟಿಸಿದ ನಂತರ ಸಂಜನಾಗೆ ತೆಲುಗಿನಲ್ಲಿ ಕೂಡಾ ಆಫರ್‌ ಹೆಚ್ಚಾಗಿದೆ. ಸಂಜನಾ ಚಿತ್ರರಂಗಕ್ಕೆ ಬಂದಿದ್ದು 2019ರಲ್ಲಿ ತೆರೆ ಕಂಡ 'ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಚಿತ್ರದ ಮೂಲಕ. ನಂತರ ಮಳೆಬಿಲ್ಲು, ಖುಷ್ಕ, ಸಲಗ, ಶೋಕಿವಾಲಾ, ವಿಂಡೋಸೀಟ್‌ ಸಿನಿಮಾಗಳಲ್ಲಿ ನಟಿಸಿದರು. ಇದಾದ ನಂತರ ಆಕೆಗೆ ತೆಲುಗು ಚಿತ್ರರಂಗದಿಂದ ಬುಲಾವ್‌ ಬಂತು. ತೆಲುಗಿನ 'ನೇನು ಮೀಕು ಬಾಗಾ ಕಾವಾಲ್ಸಿನವಾಡಿನಿ' ಹಾಗೂ 'ಫುಲ್‌ ಬಾಟಲ್‌' ಸಿನಿಮಾಗಳಲ್ಲಿ ಸಂಜನಾ ನಟಿಸಿದ್ದಾರೆ. ಕನ್ನಡದಲ್ಲಿ ಸದ್ಯಕ್ಕೆ 'ಸೂತ್ರಧಾರಿ' ಹಾಗೂ ರಾಯಲ್‌ ಸಿನಿಮಾಗಳಲ್ಲಿ ಆಕೆ ಬ್ಯುಸಿ ಇದ್ಧಾರೆ. ಇದರ ಜೊತೆಗೆ ಈಗ ವಿಕ್ರಮ್‌ ಜೊತೆ ರೊಮ್ಯಾನ್ಸ್‌ಗೆ ಸಿದ್ಧರಾಗಿದ್ದಾರೆ. ವಿಕ್ರಮ್‌ ಹಾಗೂ ಸಂಜನಾ ಕೆಮಿಸ್ಟ್ರಿ ತೆರೆ ಮೇಲೆ ಹೇಗೆ ವರ್ಕೌಟ್‌ ಆಗಲಿದೆ ಎಂಬುದನ್ನು ಕಾದು ನೋಡಬೇಕು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ