logo
ಕನ್ನಡ ಸುದ್ದಿ  /  ಮನರಂಜನೆ  /  ಯುಐ ಸಿನಿಮಾದ ಟೀಸರ್‌ ಬಿಡುಗಡೆ; ಕಿಕ್‌ ನೀಡುವ ಕಪಾಲಭಾತಿ ಬಿಜಿಎಂ, ಹೊಸದೊಂದು ಯುಐ ಲೋಕ ಸೃಷ್ಟಿಸಿದ ಉಪೇಂದ್ರ

ಯುಐ ಸಿನಿಮಾದ ಟೀಸರ್‌ ಬಿಡುಗಡೆ; ಕಿಕ್‌ ನೀಡುವ ಕಪಾಲಭಾತಿ ಬಿಜಿಎಂ, ಹೊಸದೊಂದು ಯುಐ ಲೋಕ ಸೃಷ್ಟಿಸಿದ ಉಪೇಂದ್ರ

Praveen Chandra B HT Kannada

Jan 08, 2024 11:57 AM IST

ಯುಐ ಸಿನಿಮಾದ ಟೀಸರ್‌ ಬಿಡುಗಡೆ

    • Upendra UI Teaser:ಕನ್ನಡದ ಪ್ರತಿಭಾನ್ವಿತ ನಟ ನಿರ್ದೇಶಕ ಉಪೇಂದ್ರ ಅವರ ಯುಐ ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಯುಐ ಎಂಬ ಹೊಸ ಫ್ಯಾಂಟಸಿ ಜಗತ್ತೇ ಇರುವ ಸೂಚನೆಯಿದೆ. ವಿಭಿನ್ನ ಹಿನ್ನೆಲೆ ಸದ್ದು, ಹೊಸ ಯುಐ ಜಗತ್ತಿನ ಮೂಲಕ ಹೊಸ ಅನುಭವವನ್ನು ಟೀಸರ್‌ ನೀಡುತ್ತದೆ.
ಯುಐ ಸಿನಿಮಾದ ಟೀಸರ್‌ ಬಿಡುಗಡೆ
ಯುಐ ಸಿನಿಮಾದ ಟೀಸರ್‌ ಬಿಡುಗಡೆ

ಬೆಂಗಳೂರು: ಕನ್ನಡದ ಪ್ರತಿಭಾನ್ವಿತ ನಟ ನಿರ್ದೇಶಕ ಉಪೇಂದ್ರ ಅವರ ಬತ್ತಳಿಕೆಯಿಂದ ಹೊಸ ಬಗೆಯ ಸಿನಿಮಾವೊಂದು ಬರುವ ಸೂಚನೆ ದೊರಕಿದೆ. ಇಂದು ಬಿಡುಗಡೆಯಾದ ಯುಐ ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ ನಮ್ಮನ್ನು ಹೊಸ ಫ್ಯಾಂಟಸಿ ಜಗತ್ತಿಗೆ ಕರೆದೊಯ್ಯುತ್ತದೆ. ಇಂದು ಬೆಂಗಳೂರಿನಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌, ಡಾಲಿ ಧನಂಜಯ ಮಾತ್ರವಲ್ಲದೆ ಅಲ್ಲು ಅರವಿಂದ್‌ ಕೂಡ ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು.

ಟ್ರೆಂಡಿಂಗ್​ ಸುದ್ದಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

ಯುಐ ಟೀಸರ್‌ ವಿಮರ್ಶೆ

ಕಿವಿಯೊಳಗೆ ಗುಂಯ್‌ಗುಡುವಂತೆ ಯು.... ಐ... ಯು... ಐ... ಎಂಬ ಹಿನ್ನೆಲೆ ಸದ್ದಿನೊಂದಿಗೆ (ಸಂಗೀತ) ಹೊಸ ಯುಐ ಜಗತ್ತಿಗೆ ಟೀಸರ್‌ ಕರೆದೊಯ್ಯುತ್ತದೆ. ಸಿನಿಮಾದ ಆರಂಭದಲ್ಲಿಯೇ ಯಾವುದೋ ಬಾಲಿವುಡ್‌ ಸಿನಿಮಾ ನೆನಪಾಗುವಂತೆ ಎರಡು ಲಲನೆಯರು ಕಾಣಿಸುತ್ತಾರೆ. ಅವತಾರ್‌ ಸಿನಿಮಾದಲ್ಲಿದ್ದವರೋ ಎನ್ನುವ ಸಂದೇಹ ಬಾರದೆ ಇರದು. ಇದು ಎಐ ಜಗತ್ತು ಅಲ್ಲ, ಇದು ಯುಐ ಜಗತ್ತು ಎಂಬ ಹಿನ್ನೆಲೆ ಧ್ವನಿಯೂ ಕೇಳಿಸುತ್ತದೆ. ಮರದ ಟೊಂಗೆಯಲ್ಲೊಂದು ಹಾವೊಂದು ಸರಿಯುತ್ತದೆ.

ಇದರ ಹಿನ್ನೆಲೆ ಶಬ್ದ ಯುಐ... ಯು... ಐ... ಯೂಊಊಊ ಐ.... ಕಪಾಲಭಾತಿ ಯೋಗದ ಧ್ವನಿಯನ್ನು ನೆನಪಿಸಬಹುದು. ಜತೆಗೆ, ಈ ಸದ್ದಿನೊಂದಿಗೆ ಹೊಸದೊಂದು ಕಾಲ್ಪನಿಕ ಅಥವಾ ಫ್ಯಾಂಟಸಿ ಲೋಕಕ್ಕೆ ನಮ್ಮನ್ನು ಕರೆದೊಯ್ಯಲಾಗುತ್ತದೆ. ಕಾಡುಮೇಡುಗಳನ್ನು ದಾಟಿಕೊಂಡು ಒಂದು ನಗರದೊಳಗೆ ನಮ್ಮನ್ನು ಕರೆದೊಯ್ಯಲಾಗುತ್ತದೆ. ಹಿನ್ನೆಲೆಯಲ್ಲಿ ಯುಗ್ವೆ ಯುಗ್ವೆ ಯುಗ್ವೆ...ಯಂತೆ ಏನೋ ಒಂದು ಧ್ವನಿ ಕೇಳಿಸುತ್ತದೆ. ಬಹುಶಃ ಆ ಫ್ಯಾಂಟಸಿ ಊರಿನ ಹೆಸರೇ ಅದಾಗಿರಬಹುದು.

ಅಲ್ಲಿಂದ ಒಬ್ಬ ರಾಜನಂತಹ ವ್ಯಕ್ತಿ ಇಳಿಯುತ್ತ ಬರುತ್ತಾನೆ. ಯಾವುದೋ ಹಾಸ್ಯ ಜಗತ್ತೋ ಅಥವಾ ಫ್ಯಾಂಟಸಿ ವರ್ಲ್ಡೋ ಎಂಬ ಗೊಂದಲ ಮೂಡಿಸುತ್ತದೆ. ಮುಖಕ್ಕೆ ಜೋಕರ್‌ ಬಣ್ಣ ಹಚ್ಚಿರುವ ಹಲವರು ಕಾಣಿಸುತ್ತಾರೆ. ಸಾಧು ಕೋಕಿಲ ಲಕಲಕ ಎಂದು ನಕ್ಕಾಗ ನಿಮ್ಮ ಮುಖದಲ್ಲೂ ನಗು ಮೂಡಬಹುದು. ಅಲ್ಲಿಂದ ಯುದ್ಧದ ಜಗತ್ತಿಗೆ ಟೀಸರ್‌ ತೆರಳುತ್ತದೆ. ಸಾವಿರಾರು ಕೈದಿಗಳನ್ನು ಬಂಧಿಸಿಟ್ಟ ಜೈಲು ಕಾಣಿಸುತ್ತದೆ. ಕುದುರೆ ಮೇಲೆ ಒಬ್ಬ ಬಂದಾಗ ಜನರು ಹರ್ಷ ವ್ಯಕ್ತಪಡಿಸುತ್ತಾರೆ. ಉಪೇಂದ್ರನ ಯುಐ ಮುಖ ತೋರಿಸಲಾಗುತ್ತದೆ.

ಉಪೇಂದ್ರ ಬಿಡುಗಡೆ ಮಾಡಿದ ಈ ಟೀಸರ್‌ ಇತ್ತೀಚೆಗೆ ಬಿಡುಗಡೆಯಾದ ಬಹುತೇಕ ಟೀಸರ್‌ಗಳಿಂದ ಭಿನ್ನವಾಗಿದೆ. ಸಮ್‌ಥಿಂಗ್‌ ಡಿಫರೆಂಟ್‌ ಇರೋ ಫೀಲ್‌ ನೀಡುತ್ತದೆ. ಪೈರೆಟಸ್‌ ಆಫ್‌ ಕ್ಯಾರೀಬೀನ್‌ನ ಲೋಕವೋ ಎಂಬ ಭ್ರಮೆ ಹುಟ್ಟಿಸುತ್ತದೆ. ಒಟ್ಟಾರೆ ಟೀಸರ್‌ ನಮ್ಮನ್ನು ಒಂದು ಭ್ರಮಾ ಜಗತ್ತಿಗೆ ಕೊಂಡೊಯುತ್ತದೆ. ಈ ಸಿನಿಮಾದಲ್ಲಿ ಉಪೇಂದ್ರ ಮತ್ತು ರೀಷ್ಮಾ ನಾಣಯ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಾಧು ಕೋಕಿಲಾ ಸೇರಿದಂತೆ ಹಾಸ್ಯ ನಟರೂ ಇದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ