logo
ಕನ್ನಡ ಸುದ್ದಿ  /  ಮನರಂಜನೆ  /  Sapthami Gowda: 'ದಿ ವ್ಯಾಕ್ಸಿನ್‌ ವಾರ್‌' ತಂಡ ನೀಡಿದ ಗಿಫ್ಟ್‌ ಫೋಟೋ ಹಂಚಿಕೊಂಡು ಧನ್ಯವಾದ ಅರ್ಪಿಸಿದ ಸಪ್ತಮಿ ಗೌಡ

Sapthami Gowda: 'ದಿ ವ್ಯಾಕ್ಸಿನ್‌ ವಾರ್‌' ತಂಡ ನೀಡಿದ ಗಿಫ್ಟ್‌ ಫೋಟೋ ಹಂಚಿಕೊಂಡು ಧನ್ಯವಾದ ಅರ್ಪಿಸಿದ ಸಪ್ತಮಿ ಗೌಡ

HT Kannada Desk HT Kannada

Jan 25, 2023 07:26 AM IST

ವಿವೇಕ್‌ ಅಗ್ನಿಹೋತ್ರಿ ಜೊತೆ ಸಪ್ತಮಿ ಗೌಡ

    • ವಿವೇಕ್‌ ಅಗ್ನಿಹೋತ್ರಿ ಹಾಗೂ ಇಡೀ ದಿ ವ್ಯಾಕ್ಸಿನ್‌ ವಾರ್‌ ತಂಡಕ್ಕೆ ಬಹಳ ಧನ್ಯವಾದಗಳು. ನಿಮ್ಮೊಂದಿಗೆ ಕೆಲಸ ಮಾಡಿದ್ದು ಒಂದೊಳ್ಳೆ ಅನುಭವ ನೀಡಿತು. ನಿಮ್ಮಿಂದ ಸಾಕಷ್ಟು ಕಲಿತಿದ್ದೇನೆ. ಸೆಟ್‌ನಿಂದ ದೊರೆತ ಈ ಸುಂದರ ನೆನಪಿನ ಕಾಣಿಕೆಗೆ ಧನ್ಯವಾದ ಎಂದು ಸಪ್ತಮಿ ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ವಿವೇಕ್‌ ಅಗ್ನಿಹೋತ್ರಿ ಜೊತೆ ಸಪ್ತಮಿ ಗೌಡ
ವಿವೇಕ್‌ ಅಗ್ನಿಹೋತ್ರಿ ಜೊತೆ ಸಪ್ತಮಿ ಗೌಡ (PC: Sapthami Gowda Twitter)

'ಕಾಂತಾರ' ಚಿತ್ರದಲ್ಲಿ ನಟಿಸಿದ ನಂತರ ನಾಯಕಿ ಸಪ್ತಮಿಗೆ ಬಾಲಿವುಡ್‌ಲ್ಲಿ ಕೂಡಾ ಅವಕಾಶ ಒಲಿದು ಬಂದಿದೆ. ಅಭಿಷೇಕ್‌ ಅಂಬರೀಶ್‌ ಜೊತೆ 'ಕಾಳಿ' ಚಿತ್ರದಲ್ಲಿ ನಟಿಸುತ್ತಿರುವ ಈ ಚೆಲುವೆ ಈಗ ಮೊದಲ ಹಿಂದಿ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಹಿಂದಿ ಸಿನಿಮಾ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

OTT Movies: ಗುರುವಾಯೂರ್ ಅಂಬಲನಾಡಾಯಿಲ್ ಒಟಿಟಿಯಲ್ಲಿ ಬಿಡುಗಡೆ ಯಾವಾಗ? ಇದು ಪೃಥ್ವಿರಾಜ್‌ ಸುಕುಮಾರನ್‌ ಸಿನಿಮಾ

ರೇವ್‌ ಪಾರ್ಟಿ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರ ದಾಳಿ; ತೆಲುಗು ನಟಿಯರು, ಮಾಡೆಲ್‌ಗಳು, ಆರ್‌ಜೆಗಳು, ರಾಜಕಾರಣಿಗಳು ಭಾಗಿ? ಇಲ್ಲಿದೆ ವಿವರ

ಕಾಂತಾರದ ಕಂಬಳ ಕೋಣ ಬಳಸೋಣ ಅಲ? ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹೊಸ ಅಧ್ಯಾಯದ ಕುರಿತು ರಿಷಬ್‌ ಶೆಟ್ಟಿ ಪ್ರತಿಕ್ರಿಯೆ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಆ ಚಿತ್ರದ ನಂತರ ದಿ ಡೆಲ್ಲಿ ಫೈಲ್ಸ್‌ ಎಂಬ ಚಿತ್ರವನ್ನು ಅನೌನ್ಸ್‌ ಮಾಡಿದ್ದರು. ಆದರೆ ಆ ಚಿತ್ರ ಶುರುವಾಗುವ ಮುನ್ನವೇ 'ದಿ ವ್ಯಾಕ್ಸಿನ್‌ ವಾರ್‌' ಎಂಬ ಸಿನಿಮಾ ಆರಂಭಿಸಿದ್ದಾರೆ. 'ಕಾಂತಾರ' ಚಿತ್ರ ನೋಡಿ ಮೆಚ್ಚಿಕೊಂಡಿದ್ದ ವಿವೇಕ್‌ ಅಗ್ನಿಹೋತ್ರಿ, ತಮ್ಮ ಚಿತ್ರಕ್ಕೆ ಸಪ್ತಮಿ ಗೌಡ ಅವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದರು. ಕೆಲವು ದಿನಗಳ ಹಿಂದಷ್ಟೇ ಸಪ್ತಮಿ, ತಾವು ಬಾಲಿವುಡ್‌ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಅವರು ಹೈದರಾಬಾದ್‌ನಲ್ಲಿ ತಮ್ಮ ಭಾಗದ ಶೂಟಿಂಗ್‌ ಮುಗಿಸಿದ್ದಾರೆ. ಚಿತ್ರತಂಡದ ಜೊತೆಗಿನ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

''ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ, ಅವರ ಪತ್ನಿ ಪಲ್ಲವಿ ಜೋಶಿ ಹಾಗೂ ಚಿತ್ರತಂಡದ ಇತರರಿಂದ ಸಾಕಷ್ಟು ವಿಚಾರ ತಿಳಿದುಕೊಂಡಿದ್ದೇನೆ. ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ನಿರ್ದೇಶಿಸಿರುವಂತ ಹೆಸರಾಂತ ನಿರ್ದೇಶಕರ ಚಿತ್ರದಲ್ಲಿ ನಟಿಸಿರುವುದು ನಿಜಕ್ಕೂ ಖುಷಿಯಾಗಿದೆ. ಆದರೆ ನಾನು ಯಾವ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದರೂ ಕನ್ನಡವೇ ನನ್ನ ಮೊದಲ ಆದ್ಯತೆ'' ಎದು ಸಪ್ತಮಿ ಹೇಳಿದ್ದಾರೆ. ಜೊತೆಗೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ 'ದಿ ವ್ಯಾಕ್ಸಿನ್‌ ವಾರ್‌' ಚಿತ್ರತಂಡ ನೀಡಿರುವ ಗಿಫ್ಟ್‌ವೊಂದನ್ನು ಸಪ್ತಮಿ ಹಂಚಿಕೊಂಡಿದ್ದಾರೆ. ಜೊತೆಗೆ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಜೊತೆಗೆ ಇರುವ ಫೋಟೋ ಕೂಡಾ ಇದೆ. ''ವಿವೇಕ್‌ ಅಗ್ನಿಹೋತ್ರಿ ಹಾಗೂ ಇಡೀ ದಿ ವ್ಯಾಕ್ಸಿನ್‌ ವಾರ್‌ ತಂಡಕ್ಕೆ ಬಹಳ ಧನ್ಯವಾದಗಳು. ನಿಮ್ಮೊಂದಿಗೆ ಕೆಲಸ ಮಾಡಿದ್ದು ಒಂದೊಳ್ಳೆ ಅನುಭವ ನೀಡಿತು. ನಿಮ್ಮಿಂದ ಸಾಕಷ್ಟು ಕಲಿತಿದ್ದೇನೆ. ಸೆಟ್‌ನಿಂದ ದೊರೆತ ಈ ಸುಂದರ ನೆನಪಿನ ಕಾಣಿಕೆಗೆ ಧನ್ಯವಾದ'' ಎಂದು ಸಪ್ತಮಿ ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಸಪ್ತಮಿಗೌಡ ಚಿತ್ರರಂಗಕ್ಕೆ ಬಂದದ್ದು 'ಪಾಪ್‌ಕಾರ್ನ್‌ ಮಂಕಿ ಟೈಗರ್‌' ಚಿತ್ರದ ಮೂಲಕ. ಡಾಲಿ ಧನಂಜಯ್‌ ಜೊತೆ ಸಪ್ತಮಿ ಗೌಡ ಗಿರಿಜ ಎಂಬ ನಾಯಕಿಯಾಗಿ ನಟಿಸಿದ್ದರು. ಅದಾದ ನಂತರ 5-6 ಕಥೆಗಳನ್ನು ಕೇಳಿದ್ದೆ. ಆದರೆ ಕಾಂತಾರ ಚಿತ್ರದ ಲೀಲಾ ಪಾತ್ರದ ಬಗ್ಗೆ ರಿಷಭ್‌ ಶೆಟ್ಟಿ ವಿವರಿಸಿದಾಗ ನಾನು ಕೂಡಲೇ ಒಪ್ಪಿಕೊಂಡೆ ಎಂದು ಸಪ್ತಮಿ ಹೇಳಿದ್ದರು.

ಸಪ್ತಮಿ ಗೌಡ, ನಿವೃತ್ತ ಪೊಲೀಸ್‌ ಅಧಿಕಾರಿ ಎಸ್‌.ಕೆ. ಉಮೇಶ್‌ ಅವರ ಪುತ್ರಿ. ನಟನೆ ಮಾತ್ರವಲ್ಲದೆ ಸಪ್ತಮಿ ರಾಷ್ಟ್ರೀಯ ಮಟ್ಟದ ಈಜುಗಾರ್ತಿಯಾಗಿ ಕೂಡಾ ಹೆಸರು ಮಾಡಿದ್ದಾರೆ. ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳದೆ ವಿಭಿನ್ನ ಪಾತ್ರಗಳನ್ನು ಮಾಡಬೇಕೆಂಬುದು ಸಪ್ತಮಿ ಗೌಡ ಆಸೆಯಂತೆ. ಆದ್ದರಿಂದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಸ್ಕ್ರಿಪ್ಟ್‌ ವಿಚಾರದಲ್ಲಿ ಅವರು ಬಹಳ ಚೂಸಿಯಾಗಿದ್ದಾರಂತೆ.

'ಕಾಳಿ' ಚಿತ್ರದಲ್ಲಿ ಅಭಿಷೇಕ್‌ ಜೊತೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಕೃಷ್ಣ ನಿರ್ದೇಶಿಸುತ್ತಿದ್ದು, ಸ್ವಪ್ನಕೃಷ್ಣ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಅಭಿಷೇಕ್‌ ಅಂಬರೀಶ್‌, ಗ್ರಾಮೀಣ ಭಾಗದ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ಹಾಗೂ ಸಪ್ತಮಿ, ತಮಿಳು ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ