logo
ಕನ್ನಡ ಸುದ್ದಿ  /  ಮನರಂಜನೆ  /  Rashmika Mandanna: ಸಾರಾಗೂ ಗೊತ್ತಂತೆ ರಶ್ಮಿಕಾ, ಆ ನಟನ ಜೊತೆ ಡೇಟಿಂಗ್​​​​​​​​​ನಲ್ಲಿರುವ ವಿಚಾರ...ಯಾರದು..?

Rashmika Mandanna: ಸಾರಾಗೂ ಗೊತ್ತಂತೆ ರಶ್ಮಿಕಾ, ಆ ನಟನ ಜೊತೆ ಡೇಟಿಂಗ್​​​​​​​​​ನಲ್ಲಿರುವ ವಿಚಾರ...ಯಾರದು..?

HT Kannada Desk HT Kannada

Jul 17, 2022 03:21 PM IST

ಸಾರಾ ಅಲಿ ಖಾನ್, ರಶ್ಮಿಕಾ ಮಂದಣ್ಣ

    • ಇತ್ತೀಚೆಗೆ ಸಾರಾ ಅಲಿ ಖಾನ್ , ಜಾನ್ವಿ ಕಪೂರ್ ಜೊತೆ ಕಾಫಿ ವಿತ್ ಕರಣ್ ಸೀಸನ್ 7 ರಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಅವರು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಬಗ್ಗೆ ಕೂಡಾ ಮಾತನಾಡಿದ್ದರು.
ಸಾರಾ ಅಲಿ ಖಾನ್, ರಶ್ಮಿಕಾ ಮಂದಣ್ಣ
ಸಾರಾ ಅಲಿ ಖಾನ್, ರಶ್ಮಿಕಾ ಮಂದಣ್ಣ

ರಶ್ಮಿಕಾ ಹೆಸರಿನ ಜೊತೆಗೆ ವಿಜಯ್ ದೇವರಕೊಂಡ ಹೆಸರು ತಳುಕು ಹಾಕಿಕೊಂಡು ಬಹಳ ದಿನಗಳಾಗಿವೆ. ಇಬ್ಬರೂ ಗೀತಗೋವಿಂದಂ ಚಿತ್ರದಲ್ಲಿ ಲಿಪ್ ಲಾಕ್ ಮಾಡಿದ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಮತ್ತೆ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಚುಂಬನದ ದೃಶ್ಯಗಳನ್ನು ನೋಡುತ್ತಿದ್ದಂತೆ ಇವರಿಬ್ಬರ ಮಧ್ಯೆ ಏನೂ ಇರದಿದ್ದರೆ ಇವರ ಕೆಮಿಸ್ಟ್ರಿ ಇಷ್ಟು ಚೆನ್ನಾಗಿ ವರ್ಕೌಟ್ ಆಗ್ತಿತ್ತಾ ಎಂದು ಎಲ್ಲರೂ ಅನುಮಾನ ವ್ಯಕ್ತಪಡಿಸಲು ಆರಂಭಿಸಿದರು.

ಟ್ರೆಂಡಿಂಗ್​ ಸುದ್ದಿ

ಮೋದಿ ಕೆಲಸ ಹೊಗಳುವಂತೆ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ 10 ಕೋಟಿ ರೂ!? ‘ಇನ್ನೊಬ್ಬಳು ಕಂಗನಾ ಬಂದಳು’ ಎನ್ನುತ್ತ ನಟಿಯನ್ನು ಝಾಡಿಸಿದ ನೆಟ್ಟಿಗರು

Seetha Rama Serial: ಅಶೋಕನ ಮೇಲೆ ಮಾರಣಾಂತಿಕ ಹಲ್ಲೆ, ಇದು ಭಾರ್ಗವಿ ಸಂಚೋ, ರುದ್ರಪ್ರತಾಪನ ಕೈವಾಡವೋ?

Brundavana Serial: ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?

ಶೇಕಡಾ 66 ಅಂಕ ತೆಗೆದು ಎಸ್‌ಎಸ್‌ಎಲ್‌ಸಿ ಪಾಸ್‌ ಆದ ಭಾಗ್ಯಾ, ಸಪ್ಪೆ ಮೋರೆ ಹಾಕಿ ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಕೆಲವು ದಿನಗಳ ಹಿಂದೆ,ಬಹುತೇಕ ಎಲ್ಲಾ ಮಾಧ್ಯಮಗಳಲ್ಲೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇದೇ ವರ್ಷ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ನಾವಿಬ್ಬರೂ ಫ್ರೆಂಡ್ಸ್ ಎಂದು ಅವರು ಹೇಳಿಕೊಂಡರೂ ಯಾರೂ ಒಪ್ಪಲು ಕೂಡಾ ಸಿದ್ಧರಿಲ್ಲ. ಇದೀಗ ಬಾಲಿವುಡ್​ ನಟಿಯೊಬ್ಬರು ಇವರಿಬ್ಬರ ಬಗ್ಗೆ ಮಾತನಾಡಿ ಮತ್ತೆ ಈ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಅವರು ಮತ್ತಾರೂ ಅಲ್ಲ, ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡಬೇಕು ಎಂದುಕೊಂಡಿದ್ದ ಸಾರಾ ಅಲಿಖಾನ್

ಇತ್ತೀಚೆಗೆ ಸಾರಾ ಅಲಿ ಖಾನ್ , ಜಾನ್ವಿ ಕಪೂರ್ ಜೊತೆ ಕಾಫಿ ವಿತ್ ಕರಣ್ ಸೀಸನ್ 7 ರಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಅವರು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಬಗ್ಗೆ ಕೂಡಾ ಮಾತನಾಡಿದ್ದರು. ರಾಪಿಡ್ ಫೈರ್ ಸುತ್ತಿನಲ್ಲಿ ನೀವು ಯಾರ ಇನ್​​​​ಸ್ಟಾಗ್ರಾಮ್ ಖಾತೆಯನ್ನು ಹೆಚ್ಚಾಗಿ ನೋಡುತ್ತೀರಿ ಎಂದು ಕರಣ್ ಜೋಹರ್ ಜಾನ್ವಿ ಕಪೂರ್​​​ಗೆ ಕೇಳಿದ್ದಾರೆ. ಇತ್ತೀಚೆಗೆ ನಾನು ಗಮನಿಸಿದ ಪ್ರಕಾರ ರಶ್ಮಿಕಾ ಮಂದಣ್ಣ ಅವರ ಇನ್​​ಸ್ಟಾಗ್ರಾಮ್​​​​​​ನಲ್ಲಿ ದಿನೇ ದಿನೆ ಫಾಲೋವರ್​​​ಗಳು ಹೆಚ್ಚಾಗುತ್ತಿದ್ದಾರೆ ಎಂದು ಹೇಳಿದರು. ಆಗ ಸಾರಾ , ಹೌ ಚೀಸ್ ಎಂದಿದ್ದಾರೆ, ಏಕೆಂದರೆ ಆ ಶೋನಲ್ಲಿ ಸಾರಾ ಅಲಿ ಖಾನ್ ವಿಜಯ್ ದೇವರಕೊಂಡಗೆ ಚೀಸ್ ಎಂದು ಹೆಸರಿಟ್ಟಿದ್ದರು. ಆದ್ದರಿಂದ ಜಾನ್ವಿ ಕಪೂರ್​, ರಶ್ಮಿಕಾ ಹೆಸರು ಹೇಳುತ್ತಿದ್ದಂತೆ ಸಾರಾ ಅಲಿ ಖಾನ್ ವಿಜಯ್ ದೇವರಕೊಂಡ ಹೆಸರನ್ನು ಮಧ್ಯೆ ತಂದಿದ್ದಾರೆ. ಈ ಮೂಲಕ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸಾರಾ ಅಲಿ ಖಾನ್ ಪರೋಕ್ಷವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಹಿಂದೂಸ್ತಾನ್‌ ಟೈಮ್ಸ್‌ ಮೋಸ್ಟ್‌ ಸ್ಟೈಲಿಷ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ಮಿಂಚಿದ್ದ ರಶ್ಮಿಕಾ

ರಶ್ಮಿಕಾ ಈಗ ಬಾಲಿವುಡ್​​ ಚಿತ್ರರಂಗವನ್ನೂ ಆಕ್ರಮಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಡೆದ ಹಿಂದೂಸ್ತಾನ್‌ ಟೈಮ್ಸ್‌ ಮೋಸ್ಟ್‌ ಸ್ಟೈಲಿಷ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯೂಟಿ ರಶ್ಮಿಕಾ ಮಂದಣ್ಣ ಕೆಂಪು ಡ್ರೆಸ್ ಧರಿಸಿ ಎಲ್ಲರ ಗಮನ ಕೇಂದ್ರೀಕರಿಸಿದ್ದರು. ಬಾಲಿವುಡ್​​​ನಲ್ಲಿ ರಶ್ಮಿಕಾ ಮಂದಣ್ಣ ಮಿಷನ್ ಮಜ್ನು, ಅನಿಮಲ್ , ಗುಡ್ ಬೈ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರು ಟೈಗರ್ ಶ್ರಾಫ್ ಜೊತೆ ಕೂಡಾ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ನಾವು ನಟಿಸುತ್ತಿರುವುದು ಸಿನಿಮಾದಲ್ಲಿ ಅಲ್ಲ, ಜಾಹೀರಾತಿನಲ್ಲಿ ಎಂದು ರಶ್ಮಿಕಾ ಸ್ಪಷ್ಟಪಡಿಸಿದ್ದರು. ರಶ್ಮಿಕಾ ಉಳಿದ ಸಿನಿಮಾಗಳ ಬಗ್ಗೆ ಹೇಳುವುದಾದರೆ ಸದ್ಯಕ್ಕೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಸೀತಾರಾಮಂ ಹಾಗೂ ಪುಷ್ಪ 2, ತಮಿಳಿನಲ್ಲಿ ವಿಜಯ್ ಜೊತೆ ವರಿಸು, ಹಿಂದಿಯಲ್ಲಿ ರಣಬೀರ್ ಕಪೂರ್ ಜೊತೆ ಅನಿಮಲ್, ಅಮಿತಾಬ್ ಬಚ್ಚನ್ ಪುತ್ರಿಯಾಗಿ ಗುಡ್ ಬೈ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಲಯಾಳಂನ ಸೀತಾರಾಮಂ ಬಿಡುಗಡೆಗೆ ಸಿದ್ಧವಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ