logo
ಕನ್ನಡ ಸುದ್ದಿ  /  ಮನರಂಜನೆ  /  Pathaan Trailer: ‘ಪಠಾಣ್‌’ ಟ್ರೇಲರ್‌ನಲ್ಲಿ ಮಾಸ್‌ ಮಸಾಲಾ; ಮತ್ತೆ ದೇಶಭಕ್ತಿಗೆ ‘ಜೈ ಹಿಂದ್‌’ ಎಂದ ಶಾರುಖ್‌ ಖಾನ್...‌

Pathaan Trailer: ‘ಪಠಾಣ್‌’ ಟ್ರೇಲರ್‌ನಲ್ಲಿ ಮಾಸ್‌ ಮಸಾಲಾ; ಮತ್ತೆ ದೇಶಭಕ್ತಿಗೆ ‘ಜೈ ಹಿಂದ್‌’ ಎಂದ ಶಾರುಖ್‌ ಖಾನ್...‌

HT Kannada Desk HT Kannada

Jan 10, 2023 01:05 PM IST

‘ಪಠಾಣ್‌’ ಟ್ರೇಲರ್‌ನಲ್ಲಿ ಮಾಸ್‌ ಮಸಾಲಾ; ಮತ್ತೆ ದೇಶಭಕ್ತಿಗೆ ‘ಜೈ ಹಿಂದ್‌’ ಎಂದ ಶಾರುಖ್‌ ಖಾನ್...‌

    • ಮೈನವಿರೇಳಿಸುವ ಆಕ್ಷನ್‌ ದೃಶ್ಯಗಳಿಂದ ಭರ್ತಿಯಾಗಿರುವ ಪಠಾಣ್ ಟ್ರೇಲರ್‌ನಲ್ಲಿ ಶಾರುಖ್‌ ಖಾನ್‌ ಮತ್ತಷ್ಟು ಮಗದಷ್ಟು ಮಾಸ್‌ ಅವತಾರ ಎತ್ತಿದ್ದಾರೆ. ಏರಿಯಲ್‌ ಆಕ್ಷನ್‌ ಇಡೀ ಟ್ರೇಲರ್‌ನ ಹೈಲೈಟ್‌.
‘ಪಠಾಣ್‌’ ಟ್ರೇಲರ್‌ನಲ್ಲಿ ಮಾಸ್‌ ಮಸಾಲಾ; ಮತ್ತೆ ದೇಶಭಕ್ತಿಗೆ ‘ಜೈ ಹಿಂದ್‌’ ಎಂದ ಶಾರುಖ್‌ ಖಾನ್...‌
‘ಪಠಾಣ್‌’ ಟ್ರೇಲರ್‌ನಲ್ಲಿ ಮಾಸ್‌ ಮಸಾಲಾ; ಮತ್ತೆ ದೇಶಭಕ್ತಿಗೆ ‘ಜೈ ಹಿಂದ್‌’ ಎಂದ ಶಾರುಖ್‌ ಖಾನ್...‌

Pathaan Trailer Release: ಸುದೀರ್ಘ ಕಾಯುವಿಕೆಯ ನಂತರ ಶಾರುಖ್ ಖಾನ್ ಅಭಿನಯದ ‘ಪಠಾಣ್‌’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಶಾರುಖ್ ಖಾನ್ ಸುಮಾರು 4 ವರ್ಷಗಳ ನಂತರ ದೊಡ್ಡ ಪರದೆಯ ಮೇಲೆ ಮರಳುತ್ತಿದ್ದು, ಸಹಜವಾಗಿ ನಿರೀಕ್ಷೆಯೂ ಆಕಾಶದೆತ್ತರಕ್ಕಿದೆ. 2018ರಲ್ಲಿ ಜೀರೋ ಸಿನಿಮಾ ಸೋಲಿನ ಬಳಿಕ ಬರುತ್ತಿರುವ ಶಾರುಖ್‌ ಸಿನಿಮಾ ಇದಾಗಿದೆ.

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಮೈನವಿರೇಳಿಸುವ ಆಕ್ಷನ್‌ ದೃಶ್ಯಗಳಿಂದ ಭರ್ತಿಯಾಗಿರುವ ಟ್ರೇಲರ್‌ನಲ್ಲಿ ಶಾರುಖ್‌ ಖಾನ್‌ ಮತ್ತಷ್ಟು ಮಗದಷ್ಟು ಮಾಸ್‌ ಅವತಾರ ಎತ್ತಿದ್ದಾರೆ. ಏರಿಯಲ್‌ ಆಕ್ಷನ್‌ ಇಡೀ ಸಿನಿಮಾದ ಹೈಲೈಟ್‌ ಎಂಬಂತೆ ಟ್ರೇಲರ್‌ನಲ್ಲಿಯೂ ಅದರ ಝಲಕ್‌ ತೋರಿಸಿದ್ದಾರೆ ನಿರ್ದೇಶಕ ಸಿದ್ಧಾರ್ಥ್‌ ಆನಂದ್.‌

ಇನ್ನು ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್‌ ಕಂಡ ಅಭಿಮಾನಿಗಳು, ಶಾರುಖ್‌ ಅವತಾರಕ್ಕೆ ಫಿದಾ ಆಗಿದ್ದಾರೆ. ಹಿಂದಿಯ ಜತೆಗೆ ತೆಲುಗು ಮತ್ತು ತಮಿಳಿನಲ್ಲಿ ಈ ಸಿನಿಮಾ ಸಿದ್ಧವಾಗಿದ್ದು, ಇನ್ನೇನು ಇದೇ ಜ. 25ರಂದು ಚಿತ್ರಮಂದಿರದ ಕದ ತಟ್ಟಲಿದೆ.

ದೇಶಭಕ್ತಿಯ ‘ಪಠಾಣ್’...

‘ಪಠಾಣ್‌’ ಚಿತ್ರದಲ್ಲಿ ದೇಶವನ್ನು ನಾಶ ಮಾಡಲು ಹೊರಟ ಭಯೋತ್ಪಾದಕರ ವಿರುದ್ಧ ಸೆಣಸಾಡುವ ರಾ ಏಜೆಂಟ್‌ ಪಾತ್ರದಲ್ಲಿ ಶಾರುಖ್‌ ಖಾನ್‌ ಕಾಣಿಸಿಕೊಂಡಿದ್ದಾರೆ. ಅವರ ಬಾಯಿಂದ ದೇಶಭಕ್ತಿಯ ಮಾತುಗಳನ್ನೂ ಆಡಿಸಿದ್ದಾರೆ ನಿರ್ದೇಶಕರು. ಟ್ರೇಲರ್‌ನ ಕೊನೆಗೆ ಜೈ ಹಿಂದ್‌ ಎಂಬ ಡೈಲಾಗ್‌ ಸದ್ಯ ಬಿಡುಗಡೆಯಾದ ಟ್ರೇಲರ್‌ನ ಹೈಲೈಟ್.‌ ಆ ವಿಚಾರವನ್ನೇ ಅವರ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿ ಸಂಭ್ರಮಿಸುತ್ತಿದ್ದಾರೆ.

ದೀಪಿಕಾ ಸಾಹಸ, ಜಾನ್‌ ಪರಾಕ್ರಮ

ಜಾನ್‌ ಅಬ್ರಹಾಂ ಖಳನ ಪಾತ್ರದಲ್ಲಿ ರಗಡ್‌ ಆಗಿ ಮಿಂಚಿದರೆ, ದೀಪಿಕಾ ಪಡುಕೋಣೆ ಯಾವುದರಲ್ಲಿಯೂ ಕಮ್ಮಿ ಇಲ್ಲ ಎಂಬಂತೆ ಸಾಹಸ ದೃಶ್ಯಗಳಲ್ಲಿ ಮೈನವಿರೇಳಿಸುತ್ತಾರೆ. ಮೋಹಕ ಭಾವ ಭಂಗಿಯ ಮೂಲಕ ನೋಡುಗರನ್ನು ತನ್ಮಯಗೊಳಿಸುವ ಲುಕ್‌ನಲ್ಲಿಯೂ ದೀಪಿಕಾ ಎದುರಾಗಿದ್ದಾರೆ.

ಯಶ್ ರಾಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ತಯಾರಾದ ‘ಪಠಾಣ್‌’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ಜಾನ್ ಅಬ್ರಹಾಂ, ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿದ್ದರೆ, ಅಶುತೋಷ್ ರಾಣಾ ಮತ್ತು ಡಿಂಪಲ್ ಕಪಾಡಿಯಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಜೋಡಿಯ ವಾರ್ ಸಿನಿಮಾ ನಿರ್ದೇಶನ ಮಾಡಿದ್ದ ಸಿದ್ಧಾರ್ಥ್ ಆನಂದ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ