logo
ಕನ್ನಡ ಸುದ್ದಿ  /  ಮನರಂಜನೆ  /  Dr Bro: ಚಿರತೆಗೆ ಶಾಲು ಹೊದಿಸಿ, ಕಿರೀಟವಿಟ್ಟು ಸನ್ಮಾನ ಮಾಡಿದ ಡಾ. ಬ್ರೋ! Video

Dr Bro: ಚಿರತೆಗೆ ಶಾಲು ಹೊದಿಸಿ, ಕಿರೀಟವಿಟ್ಟು ಸನ್ಮಾನ ಮಾಡಿದ ಡಾ. ಬ್ರೋ! VIDEO

Sep 02, 2023 09:55 AM IST

Dr Bro: ಚಿರತೆಗೆ ಶಾಲು ಹೊದಿಸಿ, ಕಿರೀಟವಿಟ್ಟು ಸನ್ಮಾನ ಮಾಡಿದ ಡಾ. ಬ್ರೋ! VIDEO

    • ಸೋಮಾಲಿಯಾ ದೇಶ ಸುತ್ತಾಡುತ್ತಿರುವ ಡಾ. ಬ್ರೋಗೆ ಚರತೆ ಎದುರಾಗಿದೆ. ಆ ಚಿರತೆಗೆ ನೀನೇ ಕಾಡಿನ ರಾಜ ಎನ್ನುವುದರ ಜತೆಗೆ ಶಾಲು ಹೊದಿಸಿ, ಕಿರೀಟ ಹಾಕಿ ಸನ್ಮಾನಿಸಿದ್ದಾರೆ. ಇಲ್ಲಿದೆ ವಿಡಿಯೋ. 
Dr Bro: ಚಿರತೆಗೆ ಶಾಲು ಹೊದಿಸಿ, ಕಿರೀಟವಿಟ್ಟು ಸನ್ಮಾನ ಮಾಡಿದ ಡಾ. ಬ್ರೋ! VIDEO
Dr Bro: ಚಿರತೆಗೆ ಶಾಲು ಹೊದಿಸಿ, ಕಿರೀಟವಿಟ್ಟು ಸನ್ಮಾನ ಮಾಡಿದ ಡಾ. ಬ್ರೋ! VIDEO

Dr Bro: ಯೂಟ್ಯೂಬ್‌ನಲ್ಲಿ ಎರಡು ಮಿಲಿಯನ್‌ ಸನಿಹ ಸಬ್‌ಸ್ಕ್ರೈಬರ್ಸ್‌ ಹೊಂದಿರುವ ಕನ್ನಡದ ಯೂಟ್ಯೂಬರ್‌ ಡಾ. ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್ ತಮ್ಮ ವಿಡಿಯೋಗಳ ಮೂಲಕವೇ ಫೇಮಸ್‌. ವಯಸ್ಸು ಈಗಿನ್ನೂ 24. ಇಷ್ಟು ಚಿಕ್ಕವಯಸ್ಸಿನಲ್ಲಿಯೇ ಹತ್ತಾರು ದೇಶ ಸುತ್ತಿ, ಕರುನಾಡಿನ ಮಂದಿಗೆ ಕುಳಿತಲ್ಲೇ ಪ್ರಪಂಚ ತೋರಿಸುತ್ತಿದ್ದಾರೆ ಗಗನ್.

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಹೋದ ದೇಶದಲ್ಲಿನ ಆಚರಣೆ, ಆಹಾರ ಪದ್ಧತಿ, ಅಲ್ಲಿನ ಕೌತುಕಗಳನ್ನೂ ತಮ್ಮ ವಿಡಿಯೋ ಮೂಲಕ ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದಾರೆ ಡಾ. ಬ್ರೋ. ಡೇಂಜರಸ್‌ ಜಾಗಗಳಿಗೂ ಹೋಗಿ ಅಲ್ಲಿನ ಅಸಲಿ ವಿಚಾರವನ್ನು ವಿಡಿಯೋ ಮೂಲಕ ತಮ್ಮ ನೋಡುಗರಿಗೆ ಅರ್ಪಿಸುತ್ತಿರುತ್ತಾರೆ.

ಇದೀಗ ಆಫ್ರಿಕಾ ಖಂಡದ ಮತ್ತೊಂದು ದೇಶ ಸೋಮಾಲಿಯಾಕ್ಕೆ ಡಾ. ಬ್ರೋ ಭೇಟಿ ನೀಡಿದ್ದಾರೆ. ಸೋಮಾಲಿಯಾದಲ್ಲಿನ ಸ್ಥಿತಿಗತಿಗಳನ್ನೂ ವಿವರಿಸಿದ್ದಾರೆ. ಬೀದಿ ಬದಿಯಲ್ಲಿ ಹಣ ಮಾರುವವರನ್ನೂ ಪರಿಚಯಿಸಿಕೊಟ್ಟಿದ್ದಾರೆ. ಭಾರತದಲ್ಲಿ ಹಣದ ನಿರ್ವಹಣೆಯ ಹೊಣೆ ರಿಸರ್ವ್‌ ಬ್ಯಾಂಕ್‌ನದ್ದು. ಅದೇ ರೀತಿ ಸೋಮಾಲಿಯಾದಲ್ಲಿ ಅಲ್ಲಿನ ಜನಗಳೇ ಹಣವನ್ನು ಬೀದಿ ಬದಿಯಲ್ಲಿ ಮಾರಾಟ ಮಾಡುತ್ತಾರೆ.

ಇದರ ಜತೆಗೆ ಪಕ್ಕದಲ್ಲಿನ ಪ್ರಾಣಿ ಸಂಗ್ರಹಾಲಯಕ್ಕೂ ಗಗನ್ ಭೇಟಿ ನೀಡಿದ್ದಾರೆ. ಭೇಟಿ ಶುರುವಾಗುತ್ತಿದ್ದಂತೆ, ಸಿಂಹದ ಕಡೆಯಿಂದ ಮೂತ್ರದ ಅಭಿಷೇಕವನ್ನೂ ಮಾಡಿಸಿಕೊಂಡಿದ್ದಾರೆ ಡಾ. ಬ್ರೋ. ಇದೆಲ್ಲದರ ಜತೆಗೆ ಮತ್ತೊಂದು ಅಚ್ಚರಿಯ ವಿಚಾರ ಏನೆಂದರೆ, ಸೋಮಾಲಿಯಾದ ಚಿರತೆಗೆ ಸನ್ಮಾನವನ್ನೂ ಮಾಡಿದ್ದಾರೆ.

ನೀನೇ ಕಾಡಿನ ರಾಜ..

ಚಿರತೆ ನೀನೇ ಕಾಡಿನ ರಾಜ್‌ ಇನ್ಮೇಲೆ. ಕಾಡಿಗೆ ನೀನೇ ಅಧಿಪತಿ. ಎಲ್ಲ ಪ್ರಾಣಿಗಳಿಗೂ ನೀನೇ ರಾಜ. ನೀನೇ ಇನ್ನುಂದೆ ಕಾಡನ್ನ ಆಳಬೇಕು ಎಂದು ಹರಸಿ. ಶತಮಾನಂ ಭವತಿ ಸ್ತೋತ್ರ ಪಠಿಸಿ ಚಿರತೆಗೆ ಶಾಲು ಹೊದಿಸಿ, ತಲೆಗೆ ಕಿರು ಪೇಟವನ್ನೇ ಹೋಲುವ ಟೋಪಿ ಹಾಕಿ, ಕಾಡಿ ರಾಜ ಚಿರತೆಗೆ ಜೈ ಎಂದು ಜೈಕಾರ ಹಾಕಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ತುಣುಕು ಸದ್ಯ ವೈರಲ್‌ ಆಗಿದೆ. ಗಗನನ ಸಾಹಸಕ್ಕೆ ನೋಡುಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ