logo
ಕನ್ನಡ ಸುದ್ದಿ  /  ಮನರಂಜನೆ  /  Sara Shubhman Dating; ಸೈಫ್‌ ಪುತ್ರಿ ಸಾರಾ ಜತೆ ಕ್ರಿಕೆಟಿಗ ಶುಭಮಾನ್‌ ಗಿಲ್‌ ಲವ್ವಿ ಡವ್ವಿ!?; ಸಿಕ್ತು ವಿಡಿಯೋ ಪುರಾವೆ..

Sara Shubhman Dating; ಸೈಫ್‌ ಪುತ್ರಿ ಸಾರಾ ಜತೆ ಕ್ರಿಕೆಟಿಗ ಶುಭಮಾನ್‌ ಗಿಲ್‌ ಲವ್ವಿ ಡವ್ವಿ!?; ಸಿಕ್ತು ವಿಡಿಯೋ ಪುರಾವೆ..

HT Kannada Desk HT Kannada

Oct 14, 2022 03:56 PM IST

ಸೈಫ್‌ ಪುತ್ರಿ ಸಾರಾ ಜತೆ ಕ್ರಿಕೆಟಿಗ ಶುಭಮಾನ್‌ ಗಿಲ್‌ ಲವ್ವಿ ಡವ್ವಿ!?; ಸಿಕ್ತು ವಿಡಿಯೋ ಪುರಾವೆ...

    • ಕರ್ವಾ ಚೌತ್ ದಿನವಾದ ಗುರುವಾರ, ಮುಂಬೈನ ವಿಮಾನ ನಿಲ್ದಾಣದಲ್ಲಿ ಶುಭಮನ್ ಗಿಲ್ ಮತ್ತು ಸಾರಾ ಅಲಿ ಖಾನ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಸೈಫ್‌ ಪುತ್ರಿ ಸಾರಾ ಜತೆ ಕ್ರಿಕೆಟಿಗ ಶುಭಮಾನ್‌ ಗಿಲ್‌ ಲವ್ವಿ ಡವ್ವಿ!?; ಸಿಕ್ತು ವಿಡಿಯೋ ಪುರಾವೆ...
ಸೈಫ್‌ ಪುತ್ರಿ ಸಾರಾ ಜತೆ ಕ್ರಿಕೆಟಿಗ ಶುಭಮಾನ್‌ ಗಿಲ್‌ ಲವ್ವಿ ಡವ್ವಿ!?; ಸಿಕ್ತು ವಿಡಿಯೋ ಪುರಾವೆ...

ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭಮನ್ ಗಿಲ್ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಟೆಸ್ಟ್‌ ಬಳಿಕ ಏಕದಿನ ಕ್ರಿಕೆಟ್‌ನಲ್ಲಿಯೂ ತಮ್ಮ ಅದ್ಬುತ ಆಟವನ್ನು ಮುಂದುವರಿಸಿದ್ದಾರೆ. ಇತ್ತೀಚೆಗೆ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಗಿಲ್‌ ತಮ್ಮದಾಗಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಉತ್ತಮ ಬ್ಯಾಟಿಂಗ್ ಮಾಡಿ ಮಿಂಚಿದ್ದಾರೆ. ಹೀಗೆ ಕೇವಲ ಕ್ರೀಡಾಂಗಣದಲ್ಲಿ ಅಷ್ಟೇ ಅಲ್ಲದೆ, ಅದರ ಆಚೆಗೂ ಅವರು ಸದ್ದು ಮಾಡುತ್ತಿದ್ದಾರೆ. ಬಾಲಿವುಡ್‌ ನಟಿ ಸಾರಾ ಅಲಿ ಖಾನ್‌ ಜತೆಗೆ ಶುಭ್‌ಮಾನ್‌ ಗಿಲ್‌, ಕಾಣಿಸಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Seetha Rama Serial: ಅಶೋಕನ ಮೇಲೆ ಮಾರಣಾಂತಿಕ ಹಲ್ಲೆ, ಇದು ಭಾರ್ಗವಿ ಸಂಚೋ, ರುದ್ರಪ್ರತಾಪನ ಕೈವಾಡವೋ?

Brundavana Serial: ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?

ಶೇಕಡಾ 66 ಅಂಕ ತೆಗೆದು ಎಸ್‌ಎಸ್‌ಎಲ್‌ಸಿ ಪಾಸ್‌ ಆದ ಭಾಗ್ಯಾ, ಸಪ್ಪೆ ಮೋರೆ ಹಾಕಿ ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Kuntebille Movie: ಸೆಟ್ಟೇರಿತು ತರ್ಲೆ ವಿಲೇಜ್‌ ನಿರ್ದೇಶಕರ ಕುಂಟೆಬಿಲ್ಲೆ ಸಿನಿಮಾ; ಇದು ಪ್ರೇಮ ಕಾಮದ ಸುತ್ತ ತಿರುಗುವ ಚಿತ್ರ

ವಿಮಾನ ನಿಲ್ದಾಣದಲ್ಲಿ ಹಾಜರ್..

ಕರ್ವಾ ಚೌತ್ ದಿನವಾದ ಗುರುವಾರ, ಮುಂಬೈನ ವಿಮಾನ ನಿಲ್ದಾಣದಲ್ಲಿ ಶುಭಮನ್ ಗಿಲ್ ಮತ್ತು ಸಾರಾ ಅಲಿ ಖಾನ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಈ ಜೋಡಿಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿಯೂ ಸಖತ್‌ ವೈರಲ್‌ ಆಗುತ್ತಿದೆ. ಅಷ್ಟೇ ಅಲ್ಲ ಒಂದೇ ವಿಮಾನದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅಲ್ಲಿನ ಕ್ಯಾಬಿನ್‌ ಸಿಬ್ಬಂದಿ ಜತೆಗೆ ಸಾರಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಅಕ್ಕಪಕ್ಕದ ಸೀಟ್‌ನಲ್ಲಿಯೇ ಕುಳಿತು ಪ್ರಯಾಣ ಮಾಡಿದ್ದಾರೆ. ಈ ಹಿಂದೆಯೂ ಈ ಜೋಡಿ ಡೇಟಿಂಗ್‌ನಲ್ಲಿದೆ ಎಂದೇ ಹೇಳಲಾಗಿತ್ತು. ಆದರೆ, ಎಲ್ಲಿಯೂ ಈ ಬಗ್ಗೆ ಈ ಜೋಡಿ ತುಟಿ ಬಿಚ್ಚಿಲ್ಲ. ಹೀಗೆ ಆಗೊಮ್ಮೆ ಈಗೊಮ್ಮೆ ಈ ರೀತಿ ಕಾಣಿಸಿಕೊಂಡು ಮುನ್ನೆಲೆಗೆ ಬರುತ್ತಿರುತ್ತಾರೆ.

ಲಂಡನ್‌ನಲ್ಲಿ ಒಟ್ಟಿಗೆ ಪ್ರತ್ಯಕ್ಷ..

ಇದಕ್ಕೂ ಮೊದಲು ಲಂಡನ್‌ನ ರೆಸ್ಟೋರಂಟ್‌ವೊಂದರಲ್ಲಿ ಸಾರಾ ಅಲಿಖಾನ್‌ ಮತ್ತು ಶುಭ್‌ಮಾನ್‌ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆಗಸ್ಟ್‌ನಲ್ಲಿ ಶುಭ್‌ಮಾನ್‌ ಕೌಂಟಿ ಕ್ರಿಕೆಟ್ ಆಡಲು ಇಂಗ್ಲೆಂಡ್‌ಗೆ ತೆರಳಿದ್ದರು. ಆ ವೇಳೆ ಈ ಜೋಡಿ ಮತ್ತೆ ಒಂದಾಗಿತ್ತು. ಈ ಜೋಡಿಯ ನಡುವೆ ಏನೋ ನಡೆಯುತ್ತಿದೆ ಎಂದೇ ಹೇಳಲಾಗಿತ್ತು.

ಕ್ರಿಕೆಟ್‌ಗೂ ಬಾಲಿವುಡ್‌ಗೂ ಇದೇ ಸಂಬಂಧ..

ಕ್ರಿಕೆಟಿಗನೊಬ್ಬ ಬಾಲಿವುಡ್ ನಟಿಯೊಂದಿಗೆ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಪ್ರಸ್ತುತ ತಂಡದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಸ್ವತಃ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ವಿವಾಹವಾಗಿದ್ದಾರೆ. ಕೆಎಲ್ ರಾಹುಲ್ ಕೂಡ ನಟಿ ಅಥಿಯಾ ಶೆಟ್ಟಿ ಜೊತೆ ಪ್ರೀತಿಯಲ್ಲಿದ್ದಾರೆ. ಇನ್ನೇನು ಶೀಘ್ರದಲ್ಲೇ ಈ ಜೋಡಿ ಮದುವೆಯಾಗಲಿದೆ ಎಂಬ ಸುದ್ದಿ ಇದೆ. ಇತ್ತ ಹಾರ್ದಿಕ್ ಪಾಂಡ್ಯ, ನತಾಶಾ ಸ್ಟಾಂಕೋವಿಕ್ ಅವರನ್ನು ಮದುವೆಯಾಗಿದ್ದಾರೆ. ಯುವರಾಜ್ ಸಿಂಗ್- ಹೇಜಲ್ ಕೀಚ್ ಅವರನ್ನು ವರಿಸಿದ್ದಾರೆ. ಹರ್ಭಜನ್ ಸಿಂಗ್ ನಟಿ ಗೀತಾ ಬಸ್ರಾ, ವೇಗದ ಬೌಲರ್‌ ಜಹೀರ್ ಖಾನ್- ಸಾಗರಿಕಾ ಘಾಟ್ಗೆ ವಿವಾಹವಾಗಿದ್ದಾರೆ. ಇದೀಗ ಇದೇ ಸಾಲಿಗೆ ಶುಭ್‌ಮಾನ್‌ ಮತ್ತು ಸಾರಾ ಸೇರಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ