logo
ಕನ್ನಡ ಸುದ್ದಿ  /  ಮನರಂಜನೆ  /  Bigg Boss 17 Winner: ಮುನಾವರ್ ಫಾರೂಕಿಗೆ ಬಿಗ್‌ಬಾಸ್‌ 17 ಟ್ರೋಫಿ; ಹುಟ್ಟುಹಬ್ಬದಂದು ಮರೆಯಲಾಗದ ಉಡುಗೊರೆ ಪಡೆದ ಸ್ಟಾಂಡಪ್‌ ಕಾಮಿಡಿಯನ್‌

Bigg boss 17 Winner: ಮುನಾವರ್ ಫಾರೂಕಿಗೆ ಬಿಗ್‌ಬಾಸ್‌ 17 ಟ್ರೋಫಿ; ಹುಟ್ಟುಹಬ್ಬದಂದು ಮರೆಯಲಾಗದ ಉಡುಗೊರೆ ಪಡೆದ ಸ್ಟಾಂಡಪ್‌ ಕಾಮಿಡಿಯನ್‌

Praveen Chandra B HT Kannada

Jan 29, 2024 10:10 AM IST

Bigg boss 17 Winner: ಮುನಾವರ್ ಫಾರೂಕಿಗೆ ಬಿಗ್‌ಬಾಸ್‌ 17 ಟ್ರೋಫಿ

    • Bigg boss 17 Winner Munawar Faruqui: ಕನ್ನಡ ಬಿಗ್‌ಬಾಸ್‌ನಲ್ಲಿ ಕಾರ್ತಿಕ್‌ ಮಹೇಶ್‌ ವಿನ್ನರ್‌ ಆಗಿ ಹೊರಹೊಮ್ಮಿರುವ ಸಮಯದಲ್ಲಿಯೇ ಹಿಂದಿ ಬಿಗ್‌ಬಾಸ್‌ನಲ್ಲಿ ಮುನಾವರ್‌ ಫಾರೂಕಿ ಬಿಗ್‌ಬಾಸ್‌ ವಿಜೇತರಾಗಿ ಹೊರಹೊಮ್ಮಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸಲ್ಮಾನ್‌ ಖಾನ್‌ ಜತೆಗಿನ ಫೋಟೋವನ್ನು ಇದೀಗ ಹಂಚಿಕೊಂಡಿದ್ದಾರೆ.
Bigg boss 17 Winner: ಮುನಾವರ್ ಫಾರೂಕಿಗೆ ಬಿಗ್‌ಬಾಸ್‌ 17 ಟ್ರೋಫಿ
Bigg boss 17 Winner: ಮುನಾವರ್ ಫಾರೂಕಿಗೆ ಬಿಗ್‌ಬಾಸ್‌ 17 ಟ್ರೋಫಿ

ಬಿಗ್‌ಬಾಸ್‌ 17 ಫಲಿತಾಂಶ ಭಾನುವಾರ ರಾತ್ರಿ ಘೋಷಣೆಯಾಗಿದೆ. ನೂರು ದಿನಗಳಿಗಿಂತಲೂ ಹೆಚ್ಚು ಕಾಲ ಬಿಗ್‌ಬಾಸ್‌ ಮನೆಯಲ್ಲಿ ಆಟವಾಡಿದ ಸ್ಟ್ಯಾಂಡ್-ಅಪ್ ಕಾಮಿಡಿಯನ್‌ ಮುನಾವರ್ ಫಾರೂಕಿ ಬಿಗ್ ಬಾಸ್ 17 ನೇ ಸೀಸನ್‌ನಲ್ಲಿ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ. ನಟ ಅಭಿಷೇಕ್ ಕುಮಾರ್ ಅವರನ್ನು ಸೋಲಿಸಿ ಫಿನಾಲೆಯಲ್ಲಿ ಗೆಲುವಿನ ಟ್ರೋಫಿ ತನ್ನದಾಗಿಸಿಕೊಂಡಿದ್ದಾರೆ. ಗೆಲುವು ಪಡೆದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಟ್ರೋಫಿ ಜತೆ ತಮ್ಮ ಮೊದಲ ಫೋಟೋವನ್ನು ಹಂಚಿಕೊಂಡರು.

ಟ್ರೆಂಡಿಂಗ್​ ಸುದ್ದಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

ಮುನಾವರ್‌ ಫಾರೂಕಿ ಅವರು ಬಿಗ್‌ಬಾಸ್‌ ನಿರೂಪಕ ಸಲ್ಮಾನ್‌ ಖಾನ್‌ ಜತೆಗೆ ಇರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬಹೂತ್‌ ಬಹೂತ್‌ ಶುಕ್ರಿಯಾ, ಜನತಾ ಆಪ್ಕೆ ಪ್ಯಾರ್ ಔರ್ ಸಪೋರ್ಟ್ ಕೆ ಲಿಯೆ ಆಖಿರ್ ಕಾರ್ ಟ್ರೋಫಿ ಡೊಂಗ್ರಿ ಆ ಹಿ ಗಯಿ ಎಂದು ಪೋಸ್ಟ್‌ ಮಾಡಿದ್ದಾರೆ. ಪ್ರೀತಿ ಮತ್ತು ಬೆಂಬಲಕ್ಕಾಗಿ ನನ್ನೆಲ್ಲ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಪೋಸ್ಟ್‌ ಮಾಡಿದ್ದಾರೆ. ಅಂತಿಮವಾಗಿ ಟ್ರೋಫಿ ಇಲ್ಲಿದೆ. ಮಾರ್ಗದರ್ಶನಕ್ಕಾಗಿ ಬಡೇ ಭಾಯ್‌ ಸಲ್ಮಾನ್‌ ಖಾನ್‌ ಅವರಿಗೆ ವಿಶೇಷ ಧನ್ಯವಾದಗಳು" ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹುಟ್ಟುಹಬ್ಬದ ದಿನವೇ ಬಿಗ್‌ಬಾಸ್‌ ಗೆದ್ದ ಮುನಾವರ್‌

ಈ ಬಾರಿಯ ಬಿಗ್‌ಬಾಸ್‌ 17 ಫಿನಾಲೆ ಮುನಾವರ್ ಅವರಿಗೆ ಹೆಚ್ಚುವರಿ ವಿಶೇಷವಾಗಿತ್ತು. ನಿನ್ನೆ ಅವರ ಜನ್ಮದಿನವೂ ಆಗಿತ್ತು. ಹುಟ್ಟುಹಬ್ಬ ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ ಎಂದು ಮುನಾವರ್‌ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಮುನಾವರ್ ಬಿಗ್ ಬಾಸ್ 17 ಮನೆಯಲ್ಲಿ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಆರಂಭದಿಂದಲೂ ಅವರು ಶಾಯರಿಗಳ ಮೂಲಕ ವೀಕ್ಷಕರ ಗಮನ ಸೆಳೆದರು. ಅವರ ಮಾಜಿ ಗೆಳತಿ ಆಯೆಷಾ ಖಾನ್‌ ಮನೆಗೆ ಬಂದ ಬಳಿಕ ಅವರ ಆಟದಲ್ಲಿ ತುಸು ಹಿನ್ನೆಡೆಯಾಯಿತು. ಜನಪ್ರಿಯತೆಯೂ ಕಡಿಮೆ ಆಗಿತ್ತು. ಕಾರ್ಯಕ್ರಮದಲ್ಲಿ ಆಯೇಷಾ ಅವರು ಮುನಾವರ್‌ ವಿರುದ್ಧ ಹಲವು ಆರೋಪ ಮಾಡಿದರು. ನನಗೆ ಮೋಸ ಮಾಡಿ ಇನ್ನೊಬ್ಬ ಹುಡುಗಿಗೆ ಸುಳ್ಳು ಭರವಸೆ ನೀಡಿ ಮದುವೆಯಾಗುವ ಹಂತದಲ್ಲಿದ್ದಾನೆ ಎಂದು ಆರೋಪಿಸಿದ್ದರು. ಇದರ ನಡುವೆಯೂ ಜನರು ಮುನಾವರ್‌ ಪರವಾಗಿ ನಿಂತರು. ಭರ್ಜರಿ ಓಟ್‌ ನೀಡಿ ಮುನಾವರ್‌ ಗೆಲುವಿಗೆ ವೀಕ್ಷಕರು ಕಾರಣರಾದರು.

50 ಲಕ್ಷ ರೂಪಾಯಿ ಗೆದ್ದ ಮುನಾವರ್‌

ಸ್ಟ್ಯಾಂಡಪ್‌ ಕಾಮಿಡಿಯನ್‌ ಮುನಾವರ್‌ ಫಾರುಕಿ ಅವರು ಬಿಗ್‌ಬಾಸ್‌ ಸೀಸನ್‌ 17 ಗೆಲುವು ಪಡೆದು 50 ಲಕ್‌ ರೂಪಾಯಿ ಮತ್ತು ಇತರೆ ಹಲವು ಉಡುಗೊರೆಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಇವರು ಬಿಗ್‌ಬಾಸ್‌ ಮನೆಯಲ್ಲಿ ಇತರರನ್ನು ಟ್ರೋಲ್‌ ಕೂಡ ಮಾಡುತ್ತಿದ್ದರು. ಇವರಿಗೆ ಹ್ಯುಂಡೈ ಕ್ರೇಟಾ ಕಾರು ಉಡುಗೊರೆಯಾಗಿ ಸಿಕ್ಕಿದೆ. ಬಿಗ್‌ಬಾಸ್‌ ಕನ್ನಡದಲ್ಲಿ ವಿಜೇತನಿಗೆ ಮಾರುತಿ ಸುಜುಕಿ ಬ್ರೀಜಾ ಉಡುಗೊರೆ ನೀಡಲಾಗಿತ್ತು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ