logo
ಕನ್ನಡ ಸುದ್ದಿ  /  ಮನರಂಜನೆ  /  Traffic Rules: ಸಂಚಾರ ನಿಯಮ ಉಲ್ಲಂಘಿಸಿದ ಚಿತ್ರನಟ ಧನುಷ್‌ ಅಪ್ರಾಪ್ತ ಪುತ್ರ ಯಾತ್ರಾ; ಈ ವಯಸ್ಸಿಗೆ ಸೂಪರ್‌ಬೈಕ್‌ ರೈಡ್‌ ಮಾಡುವಂತಿಲ್ಲ

Traffic Rules: ಸಂಚಾರ ನಿಯಮ ಉಲ್ಲಂಘಿಸಿದ ಚಿತ್ರನಟ ಧನುಷ್‌ ಅಪ್ರಾಪ್ತ ಪುತ್ರ ಯಾತ್ರಾ; ಈ ವಯಸ್ಸಿಗೆ ಸೂಪರ್‌ಬೈಕ್‌ ರೈಡ್‌ ಮಾಡುವಂತಿಲ್ಲ

HT Kannada Desk HT Kannada

Nov 20, 2023 10:04 PM IST

ಸಂಚಾರ ನಿಯಮ ಉಲ್ಲಂಘಿಸಿದ ಚಿತ್ರನಟ ಧನುಷ್‌ ಅಪ್ರಾಪ್ತ ಪುತ್ರ

    • Dhanush's son Yatra fined: ತಮಿಳು ಚಿತ್ರ ನಟ ಧನುಷ್‌ ಅವರ ಹಿರಿಯ ಪುತ್ರ ಯಾತ್ರಾ ಅವರು ಬೈಕ್‌ ಚಾಲನೆ ಮಾಡಿರುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತನಿಗೆ ಬೈಕ್‌ ಚಾಲನೆ ಮಾಡುವ ವಯಸ್ಸಾಗಿಲ್ಲ. ಹೀಗಾಗಿ, ಟ್ರಾಫಿಕ್‌ ಪೊಲೀಸರು ಈತನಿಗೆ ದಂಡ ವಿಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಂಚಾರ ನಿಯಮ ಉಲ್ಲಂಘಿಸಿದ ಚಿತ್ರನಟ ಧನುಷ್‌ ಅಪ್ರಾಪ್ತ ಪುತ್ರ
ಸಂಚಾರ ನಿಯಮ ಉಲ್ಲಂಘಿಸಿದ ಚಿತ್ರನಟ ಧನುಷ್‌ ಅಪ್ರಾಪ್ತ ಪುತ್ರ

ತಮಿಳು ಚಿತ್ರ ನಟ ಧನುಷ್‌ ಮತ್ತು ಅವರ ಮಾಜಿ ಪತ್ನಿ ಐಶ್ವರ್ಯ ರಜನಿಕಾಂತ್‌ ಅವರ ಪುತ್ರ ಯಾತ್ರಾನಿಗೆ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಕಾರಣದಿಂದ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ. ಯಾತ್ರಾನು ಸೂಪರ್‌ಬೈಕ್‌ನಲ್ಲಿ ರೈಡ್‌ ಮಾಡುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಚೆನ್ನೈನ ಪೊಯೀಸ್‌ ಗಾರ್ಡನ್‌ನಲ್ಲಿ ವಾಹನ ಚಾಲನಾ ಪರವಾನಿಗೆ ಇಲ್ಲದೆ ಚಾಲನೆ ಮಾಡಿರುವ ಕಾರಣ ತನಿಖೆ ನಡೆಸಿ ಪೊಲೀಸರು ದಂಡ ವಿಧಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಸೂಪರ್‌ಬೈಕ್‌ ಓಡಿಸಿದ ಯಾತ್ರಾ

ವರದಿಗಳ ಪ್ರಕಾರ ಯಾತ್ರಾನು ಸೂಪರ್‌ಬೈಕ್‌ ಓಡಿಸಿರುವ ವಿಡಿಯೋ ನೋಡಿ ಪೊಲೀಸರು ತನಿಖೆ ನಡೆಸಿದ್ದಾರೆ. ಯಾತ್ರನಿಗೆ ಇನ್ನೂ ಹದಿನೇಳು ವರ್ಷ. ಸಂಚಾರ ನಿಯಮದ ಪ್ರಕಾರ ಇದು ವಾಹನ ಚಾಲನೆ ಮಾಡುವ ವಯಸ್ಸಲ್ಲ. ಈತ ಬೈಕ್‌ ಓಡಿಸುವ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆದ ಬಳಿಕ ಪೊಲೀಸರು ತನಿಖೆ ಮಾಡಿದ್ದಾರೆ. ಇದೇ ರೀತಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಈತನಿಗೆ ಸಂಚಾರ ನಿಯಮದ ಕುರಿತು ಮಾಹಿತಿ ನೀಡುವ ವಿವರವೂ ಬೇರೊಂದು ವಿಡಿಯೋದಲ್ಲಿದೆ.

ದಂಡ ಪಾವತಿಸಿದ ಯಾತ್ರಾ

ವಿಡಿಯೋದಲ್ಲಿ ನಂಬರ್‌ಪ್ಲೇಟ್‌ ಕಾಣಿಸುತ್ತಿಲ್ಲ. ಯಾತ್ರಾ ಮಾಸ್ಕ್‌ ಧರಿಸಿದ್ದಾನೆ. ತನಿಖೆಯ ಬಳಿಕ ಪೊಲೀಸರು ಈ ಸವಾರನಿಗೆ ದಂಡ ವಿಧಿಸುವ ದೃಶ್ಯವಿದೆ. ಪರವಾನಿಗೆ ಇಲ್ಲದೆ ಮತ್ತು ಸಂಚಾರ ನಿಯಮ ಪಾಲಿಸದೆ ಬೈಕ್‌ ಚಲಾಯಿಸಿದ್ದಕ್ಕೆ ದಂಡ ವಿಧಿಸಲಾಗಿದೆ ಎನ್ನಲಾಗಿದೆ.

ಯಾತ್ರಾನ ಬಗ್ಗೆ

ಈ ವರ್ಷದ ಜುಲೈ ತಿಂಗಳಿನಲ್ಲಿ ಧನುಷ್‌ ತಿರುಪತಿ ದೇಗುಲಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಯಾತ್ರ ಮತ್ತು ಪುಟ್ಟ ಮಗ ಲಿಂಗ ಕೂಡ ಜತೆಗಿದ್ದ. ಕಳೆದ ವರ್ಷ ಧನುಷ್‌ ಮತ್ತು ಐಶ್ವರ್ಯ ಅವರು ಯಾತ್ರಾ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೀಗೆ, ಹಲವು ಕಾರ್ಯಕ್ರಮದಲ್ಲಿ ಈ ಮಕ್ಕಳು ಕಾಣಿಸಿದ್ದಾರೆ. ಧನುಷ್‌ ಮತ್ತು ಐಶ್ವರ್ಯಾ ಅವರು ಕಳೆದ ವರ್ಷ ಜನವರಿ ತಿಂಗಳಲ್ಲಿ ತಾವಿಬ್ಬರು ಡೈವೋರ್ಸ್‌ ಪಡೆದಿರುವುದನ್ನು ಇನ್‌ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದರು. ಇವರಿಬ್ಬರು 2004ರಲ್ಲಿ ವಿವಾಹವಾಗಿದ್ದರು. ಯಾತ್ರಾ 2006ರಲ್ಲಿ ಜನಿಸಿದನು. 2010ರಲ್ಲಿ ಲಿಂಗ ಜನಿಸಿದ್ದನು.

ಧನುಷ್‌ರ ಮುಂಬರುವ ಸಿನಿಮಾಗಳು

ಧನುಷ್‌ ಅವರು ಸಂಗೀತ ಮಾಂತ್ರಿಕ ಇಳೆಯರಾಜರ ಜೀವನಚರಿತ್ರೆ ಆಧರಿತ ಡ್ರಾಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾಕ್ಕೆ ಇನ್ನೂ ಹೆಸರಿಡಲಾಗಿಲ್ಲ. ಈ ಸಿನಿಮಾ 2025ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸಿನಿಮಾದಲ್ಲಿ ಧನುಷ್‌ ಮಾತ್ರವಲ್ಲದೆ ನಾಗಾರ್ಜುನಾ ಮತ್ತು ರಶ್ಮಿಕಾ ಮಂದಣ್ಣ ಕೂಡ ನಟಿಸುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ